ಟೋಕಿಯೋ: ಇಡೀ ಜಗತ್ತು ಒಂದು ಕಡೆ ಕೊರೊನಾವೈರಸ್ ಸೋಂಕಿನೊಂದಿಗೆ ಹೋರಾಡುತ್ತಿದ್ದರೆ. ಜಪಾನ್ ನಲ್ಲಿ ಅಲ್ಲಿನ ಸರ್ಕಾರ ತೆಗೆದುಕೊಂಡ ಕಠಿಣ ಕ್ರಮಗಳಿಂದಾಗಿ, ಸಾಂಕ್ರಾಮಿಕ ರೋಗದ ಅಪಾರ ಹಾನಿಯಿಂದ ಬಚಾವಾಗಿದೆ. ಆದರೆ, ಇನ್ನೊಂದೆಡೆ ಜಪಾನ್ ಜನರು ಆತ್ಮಹತ್ಯೆ ಮಾಡಿಕೊಂಡು ಸಾಯುತ್ತಿದ್ದಾರೆ.
ಸುಸೈಡ್ ದತ್ತಾಂಶಗಳನ್ನು ಜಾರಿಗೊಳಿಸಿದ ಜಪಾನ್
ಜಪಾನ್‌ನ ರಾಷ್ಟ್ರೀಯ ಪೊಲೀಸ್ ಸಂಸ್ಥೆ ಬಿಡುಗಡೆ ಮಾಡಿರುವ ಮಾಹಿತಿ ಪ್ರಕಾರ, ಅಕ್ಟೋಬರ್‌ನಲ್ಲಿ ಅಲ್ಲಿ ಹೆಚ್ಚಿನ ಜನರು ಕರೋನವೈರಸ್‌ನಿಂದ ಸಾವನ್ನಪ್ಪಿಲ್ಲ. ಜನರ ಆತ್ಮಹತ್ಯೆಯಿಂದ ಹೆಚ್ಚಿನ ಸಾವುಗಳು ಸಂಭವಿಸಿವೆ. ಅಕ್ಟೋಬರ್‌ನಲ್ಲಿ ಜಪಾನ್‌ನಲ್ಲಿ 2153 ಜನರು ಜೀವನದಿಂದ ನಿರಾಶೆಗೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದೆ ಅವಧಿಯಲ್ಲಿ ಜಪಾನ್‌ನಲ್ಲಿ ಕರೋನಾ ಸಾಂಕ್ರಾಮಿಕ ರೋಗದಿಂದ 2087 ಜನರು ಸಾವನ್ನಪ್ಪಿದ್ದಾರೆ.
ಇದನ್ನು ಓದಿ- ಕರೋನಾ ಹರಡುವುದನ್ನು ತಡೆಯಲು ಜಪಾನ್‌ನ 'ಮಾಸ್ಟರ್‌ಪ್ಲಾನ್'
ಜನರಲ್ಲಿ ಹೆಚ್ಚಾಗುತ್ತಿರುವ Lockdown Effect
ಕರೋನಾ ಸಾಂಕ್ರಾಮಿಕ ರೋಗದಿಂದಾಗಿ ಜನರಲ್ಲಿ ಹೆಚ್ಚುತ್ತಿರುವ ಹತಾಶೆ ಮತ್ತು ನಿರಾಶೆಯೇ ಈ ಸಾವುಗಳಿಗೆ ಕಾರಣ ಎನ್ನಲಾಗಿದೆ. ಜನರು ಕರೋನಾ ವೈರಸ್ ಸೋಂಕಿನಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಲಾಕ್‌ಡೌನ್ ಪರಿಣಾಮದಿಂದಾಗಿ, ಅವರು ಮಾನಸಿಕ ಒತ್ತಡಕ್ಕೆ ಒಳಗಾಗದಂತೆ ಇರಲು ಅವರಿಗೆ ಸಾಧ್ಯವಾಗುತ್ತಿಲ್ಲ.
ಕೇವಲ ಎರಡೇ ಬಾರಿ ಅಲ್ಲಿ ಲಘು ಪ್ರಮಾಣದ ಲಾಕ್ ಡೌನ್ ಘೋಷಿಸಲಾಗಿತ್ತು
ಕೊರೊನಾ ನಿಯಂತ್ರಣಕ್ಕಾಗಿ ಅಲ್ಲಿನ ಸರ್ಕಾರ ಇದುವರೆಗೆ ಎರಡು ಬಾರಿ ಲಾಕ್ ಡೌನ್ ಘೋಷಿಸಿದೆ. ಮಾನಶಾಸ್ತ್ರಜ್ಞರ ಪ್ರಕಾರ ಭಾರತ, ಇಟಲಿ, ಪಾಕಿಸ್ತಾನ, ಆಸ್ಟ್ರೇಲಿಯಾಗಳಂತಹ ದೇಶಗಳ ಹೋಲಿಕೆಯಲ್ಲಿ ಜಪಾನ್ ನಲ್ಲಿ ಘೋಷಿಸಲಾಗಿದ್ದ ಲಾಕ್ ಡೌನ್ ಅಷ್ಟೊಂದು ಕಠಿಣವಾಗಿರಲಿಲ್ಲ.
ಇದನ್ನು ಓದಿ- ಯಾವುದೇ ರೀತಿಯ Lockdown ಇಲ್ಲದೆ Coronavirus ವಿರುದ್ಧ ಹೋರಾಟ ಗೆದ್ದ ಜಪಾನ್
ದೀರ್ಘಾವಧಿ ಕೆಲಸದ ಕಾರಣ ಜನರಲ್ಲಿ ಟೆನ್ಶನ್ ಹೆಚ್ಚಾಗುತ್ತಿದೆ
ಕೇವಲ ಕೊರೊನಾ ವೈರಸ್ ಒಂದೇ ಈ ಹೆಚ್ಚಾಗುತ್ತಿರುವ ಆತ್ಮಹತ್ಯೆ ಪ್ರಕರಣಗಳಿಗೆ ಕಾರಣ ಅಲ್ಲ ಎನ್ನುವ ಮನೋವಿಜ್ಞಾನಿಗಳು, ಹೆಚ್ಚುತ್ತಿರುವ ಕೆಲಸದ ಗಂಟೆಗಳ ಕಾರಣ ಕೆಲಸ ಹಾಗೂ ಕುಟುಂಬ ಜವಾಬ್ದಾರಿಯ ಮಧ್ಯೆ ಸಮತೋಲನ ಕಾಯ್ದುಕೊಳ್ಳಲು ವಿಫಲರಾಗಿ ಒತ್ತಡ ಮತ್ತು ನಿರಾಶೆಗೆ ಒಳಗಾಗಿ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ ಎಂದಿದ್ದಾರೆ.
ಮಹಿಳೆಯರಲ್ಲಿ ಹೆಚ್ಚಾಗುತ್ತಿದೆ ಆತ್ಮಹತ್ಯೆಯ ಪ್ರವೃತ್ತಿ
ಕಳೆದ ವರ್ಷ ಜಪಾನ್ ನಲ್ಲಿ ಆತ್ಮಹತ್ಯೆ ಪ್ರಕರಣಗಳಲ್ಲಿ ಇಳಿಕೆಯನ್ನು ಗಮನಿಸಲಾಗಿತ್ತು. ಆದರೆ, ಕೊರೊನಾ ಕಾರಣ ಈ ವರ್ಷ ಈ ಸಂಖ್ಯೆಯಲ್ಲಿ ಮತ್ತೆ ಏರಿಕೆಯಾಗಿದೆ ಎನ್ನಲಾಗಿದೆ. ದತ್ತಾಂಶಗಳ ಪ್ರಕಾರ ಸುಸೈಡ್ ಮಾಡಿಕೊಂಡವರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರಾಗಿದ್ದಾರೆ. ಮಹಿಳೆಯರಿಗೆ ಸಂಬಂಧಿಸಿದ ವಿಷಯಗಳು ಜಪಾನ್ ನಲ್ಲಿ ದೀರ್ಘಕಾಲದಿಂದ ನೆನೆಗುದಿಗೆ ಬಿದ್ದಿದ್ದು, ಇದರಿಂದ ಮಹಿಳೆಯರಲ್ಲಿ ನಿರಾಶೆಯ ಭಾವನೆ ಹೆಚ್ಚಾಗುತ್ತಿದೆ ಎಂದೂ ಕೂಡ ಶಾಸ್ತ್ರಜ್ಞರು ಹೇಳಿದ್ದಾರೆ.