US: ತಂದೆಯ ಬಂದೂಕಿನಿಂದ ಆಟವಾಡುತ್ತಾ ಶೂಟ್ ಮಾಡಿದ 8 ವರ್ಷದ ಬಾಲಕ

ಅಮೆರಿಕದ ಫ್ಲೋರಿಡಾದ 8 ವರ್ಷದ ಹುಡುಗ ತನ್ನ ತಂದೆಯ ಗನ್‌ನೊಂದಿಗೆ ಆಟವಾಡುತ್ತಿದ್ದಾಗ ಆಕಸ್ಮಿಕವಾಗಿ ಶೂಟ್‌ ಮಾಡಿದ್ದಾನೆ. ಈ ಘಟನೆಯಲ್ಲಿ 1 ವರ್ಷದ ಮಗು ಸಾವನ್ನಪ್ಪಿದ್ದು, 2 ವರ್ಷದ ಬಾಲಕಿ ಸಹ ಗಾಯಗೊಂಡಿದ್ದಾಳೆ.

Written by - Chetana Devarmani | Last Updated : Jun 29, 2022, 11:21 AM IST
  • ತಂದೆಯ ಬಂದೂಕಿನಿಂದ ಆಟವಾಡುತ್ತಾ ಶೂಟ್ ಮಾಡಿದ ಬಾಲಕ
  • ಎಸ್ಕಾಂಬಿಯಾ ಕೌಂಟಿಯ ಲಯನ್ಸ್ ಮೋಟೆಲ್‌ನಲ್ಲಿ ನಡೆದ ಘಟನೆ
  • ಪಾಲಕರ ನಿರ್ಲಕ್ಷ್ಯವೇ ಈ ಘಟನೆಗೆ ಕಾರಣ ಎನ್ನಲಾಗಿದೆ
US: ತಂದೆಯ ಬಂದೂಕಿನಿಂದ ಆಟವಾಡುತ್ತಾ ಶೂಟ್ ಮಾಡಿದ 8 ವರ್ಷದ ಬಾಲಕ  title=
ಗನ್

ಫ್ಲೋರಿಡಾ (ಯುಎಸ್): ಅಮೆರಿಕದ ಫ್ಲೋರಿಡಾದ 8 ವರ್ಷದ ಹುಡುಗ ತನ್ನ ತಂದೆಯ ಗನ್‌ನೊಂದಿಗೆ ಆಟವಾಡುತ್ತಿದ್ದಾಗ ಆಕಸ್ಮಿಕವಾಗಿ ಶೂಟ್‌ ಮಾಡಿದ್ದಾನೆ. ಈ ಘಟನೆಯಲ್ಲಿ 1 ವರ್ಷದ ಮಗು ಸಾವನ್ನಪ್ಪಿದ್ದು, 2 ವರ್ಷದ ಬಾಲಕಿ ಸಹ ಗಾಯಗೊಂಡಿದ್ದಾಳೆ.

ಇದನ್ನೂ ಓದಿ: ವಿಷಕಾರಿ ಅನಿಲ ಸೋರಿಕೆ: 13 ಮಂದಿ ದುರ್ಮರಣ.. ನೂರಾರು ಜನರಿಗೆ ಗಾಯ

ಎಸ್ಕಾಂಬಿಯಾ ಕೌಂಟಿಯ ಲಯನ್ಸ್ ಮೋಟೆಲ್‌ನಲ್ಲಿ ಶನಿವಾರ ರಾತ್ರಿ ಈ ಘಟನೆ ನಡೆದಿದ್ದು, ಬಾಲಕನ ತಂದೆ ರೊಡೆರಿಕ್ ರಾಂಡಾಲ್‌ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಪಾಲಕರ ನಿರ್ಲಕ್ಷ್ಯವೇ ಈ ಘಟನೆಗೆ ಕಾರಣವಾಗಿದ್ದು, ಕಾನೂನುಬಾಹಿರವಾಗಿ ಬಂದೂಕು ಹೊಂದಿರುವ ಮತ್ತು ಸಾಕ್ಷ್ಯವನ್ನು ಮರೆಮಾಚುವ ಆರೋಪವನ್ನು ರಾಂಡಾಲ್ ಅವರ ಮೇಲೆ ಹೊರಿಸಲಾಗಿದೆ ಎಂದು ಎಸ್ಕಾಂಬಿಯಾ ಕೌಂಟಿ ಶೆರಿಫ್ ಚಿಪ್ ಸಿಮನ್ಸ್ ಹೇಳಿದ್ದಾರೆ ಎಂದು AFP ವರದಿಗಳು ತಿಳಿಸಿವೆ.

ಪೊಲೀಸರ ಪ್ರಕಾರ, 45 ವರ್ಷ ವಯಸ್ಸಿನ ಈ ಬಂಧಿತ ವ್ಯಕ್ತಿ 14 ಬಾರಿ ಶಿಕ್ಷೆಗೊಳಗಾದ ಅಪರಾಧಿಯಾಗಿದ್ದು, ಡ್ರಗ್ಸ್ ಆರೋಪಗಳು, ಪೊಲೀಸರಿಂದ ತಪ್ಪಿಸಿಕೊಳ್ಳುವ ಶಿಕ್ಷೆಗೆ ಗುರಿಯಾಗಿದ್ದಾರೆ.

$41,000 ಬಾಂಡ್ ನಂತರ ಸಿಮನ್ಸ್ ಅವರನ್ನು ಭಾನುವಾರ ರಾತ್ರಿ ಕೌಂಟಿ ಜೈಲಿನಿಂದ ಬಿಡುಗಡೆ ಮಾಡಲಾಯಿತು.

ಎವೆರಿಟೌನ್ ಫಾರ್ ಗನ್ ಸೇಫ್ಟಿಯ ಇತ್ತೀಚಿನ ವರದಿಯ ಪ್ರಕಾರ, "ಪ್ರತಿ ವರ್ಷ, ಯುನೈಟೆಡ್ ಸ್ಟೇಟ್ಸ್‌ನಲ್ಲಿ ನೂರಾರು ಮಕ್ಕಳು ಕ್ಲೋಸೆಟ್‌ಗಳು ಮತ್ತು ನೈಟ್‌ಸ್ಟ್ಯಾಂಡ್ ಡ್ರಾಯರ್‌ಗಳಲ್ಲಿ, ಬ್ಯಾಕ್‌ಪ್ಯಾಕ್‌ಗಳು ಮತ್ತು ಪರ್ಸ್‌ಗಳಲ್ಲಿ ಅಸುರಕ್ಷಿತ, ಲೋಡ್ ಮಾಡಲಾದ ಗನ್‌ಗಳನ್ನು ಪಡೆಯುತ್ತಾರೆ"

ಇತ್ತೀಚೆಗೆ ಅಮೆರಿಕದಲ್ಲಿ ಗನ್‌ನಿಂದ ಶೂಟ್‌ ಮಾಡುವ ಪ್ರಕರಣಗಳು ಹೆಚ್ಚಾಗಿವೆ. ಈ ಹಿನ್ನೆಲೆ ಇತ್ತೀಚೆಗೆ ಯುಎಸ್‌ ಅಧ್ಯಕ್ಷ ಜೋ ಬೈಡನ್‌ ಗನ್ ನಿಯಂತ್ರಣ ಮಸೂದೆಗೆ ಸಹಿ ಹಾಕಿದರು. 

ಇದನ್ನೂ ಓದಿ: ಹಸುಗಳಿಗಾಗಿ ಬಾಲ್ಯ ವಿವಾಹ! ಇಲ್ಲಿ ವಧು ದಕ್ಷಿಣೆ ರೂಪದಲ್ಲಿ ಸಿಗುತ್ತೆ ಹಸುಗಳು

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News