ನವದೆಹಲಿ: ನಿರಂತರವಾಗಿ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿರುವ ಪಾಕಿಸ್ತಾನಕ್ಕೆ ನೆರೆಯ ರಾಷ್ಟ್ರ ಅಫ್ಘಾನಿಸ್ತಾನ ದೊಡ್ಡ ಹೊಡೆತ ನೀಡಿದೆ. ಪಾಕಿಸ್ತಾನಕ್ಕೆ ಕಾಲೋಚಿತ ಆಮದು ಮೇಲಿನ ಸುಂಕ ಹೆಚ್ಚಿಸಲು ಅನೇಕ ಅಫಘಾನ್ ವ್ಯಾಪಾರಿಗಳು ತಮ್ಮ ಸರ್ಕಾರಕ್ಕೆ ಮನವಿ ಮಾಡಿರುವುದಾಗಿ ಅಲ್ಲಿನ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಟೊಲೊ ನ್ಯೂಸ್ ಪ್ರಕಾರ, ಹಣ್ಣು ಮತ್ತು ತರಕಾರಿಗಳ ಮೇಲಿನ ಸುಂಕವನ್ನು ಪಾಕಿಸ್ತಾನಕ್ಕೆ ಮಾತ್ರವಲ್ಲದೆ ಇರಾನ್ ದೇಶದ ಆಮದು ಸುಂಕವನ್ನು ಹೆಚ್ಚಿಸಬೇಕು ಎಂದು ವ್ಯಾಪಾರಿಗಳು ಸರ್ಕಾರಕ್ಕೆ ಒತ್ತಡ ಹೇರಿದ್ದಾರೆ ಎನ್ನಲಾಗಿದೆ.
ದೇಶೀಯ ಮಾರುಕಟ್ಟೆಗಳು ಪ್ರಸ್ತುತ ಇರಾನ್ ಮತ್ತು ಪಾಕಿಸ್ತಾನದ ಹಣ್ಣುಗಳು ಮತ್ತು ತರಕಾರಿಗಳಿಂದ ತುಂಬಿವೆ. ಇವೆಲ್ಲವೂ ಅಫ್ಘಾನಿಸ್ತಾನದಲ್ಲಿಯೂ ದೊರೆಯುತ್ತವೆ. ದೇಶೀಯ ಉತ್ಪಾದಕರನ್ನು ಉತ್ತೇಜಿಸಲು ಸರ್ಕಾರ ಏನನ್ನೂ ಮಾಡುತ್ತಿಲ್ಲ ಎಂದು ವ್ಯಾಪಾರಿಗಳು ದೂರಿದ್ದಾರೆ. "ನಮ್ಮ ಹಣ್ಣಿನ ಋತುಮಾನ ಬಂದಾಗ, ಪಾಕಿಸ್ತಾನವು ಭಾರೀ ಸುಂಕವನ್ನು ವಿಧಿಸುತ್ತದೆ ಮತ್ತು ನಾವು ನಮ್ಮ ಉತ್ಪನ್ನಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡಬೇಕು" ಎಂದು ಉದ್ಯಮಿ ಅಶ್ರಫ್ ಆರೋಪಿಸಿದ್ದಾರೆ.
ಇನ್ನೊಬ್ಬ ಉದ್ಯಮಿ ಕೊಡ್ರಾತುಲ್ಲಾ ಮಾತನಾಡಿ, "ಇರಾನ್ ಮತ್ತು ಪಾಕಿಸ್ತಾನದ ಉತ್ಪನ್ನಗಳ ಮೇಲೆ ಆಮದು ಸುಂಕವನ್ನು ಹೆಚ್ಚಿಸಬೇಕು. ಇದು ಸ್ವ-ಸರ್ಕಾರದ ಪರವಾಗಿದೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳದಿದ್ದರೆ, ದೇಶೀಯ ಕೃಷಿ ಮಾರುಕಟ್ಟೆಯು ಕಷ್ಟಕ್ಕೆ ಸಿಲುಕಲಿದೆ" ಎಂದು ಹೇಳಿದರು.
ಆಲೂಗೆಡ್ಡೆ ರೈತರಿಗೆ ಸುಗ್ಗಿಯ ಕಾಲ ಬಂದಿದೆ, ಆದರೆ ಮಾರುಕಟ್ಟೆಯ ಕೊರತೆಯಿಂದಾಗಿ ಅವರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಆಲೂಗಡ್ಡೆಯನ್ನು ಪ್ರತಿ ಕಿಲೋಗ್ರಾಂಗೆ 12 ಅಫ್ಘಾನಿ(0.15 ಡಾಲರ್)ಗೆ ಮಾರಾಟ ಮಾಡಲಾಗುತ್ತಿದೆ.