ಪ್ಯೊಂಗ್ಯಾಂಗ್: ಕರೋನಾವೈರಸ್ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾಸ್ಕ್ ಧರಿಸಿ ಕಾಣಿಸಿಕೊಂಡರೆ, ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜೊಂಗ್ ಉನ್ ಕೂಡ ಭಯಭೀತರಾಗಿದ್ದು ಮಾಸ್ಕ್ ಧರಿಸದವರ ವಿರುದ್ಧ ಕಠಿಣ ಶಿಕ್ಷೆ ನೀಡುವ ನಿರ್ಧಾರ ಕೈಗೊಂಡಿದ್ದಾರೆ.
ಅಮೆರಿಕದ ಸುದ್ದಿ ತಾಣ ರೇಡಿಯೊ ಫ್ರೀ ಏಷ್ಯಾ (ಆರ್‌ಎಫ್‌ಎ) ಪ್ರಕಾರ ಉತ್ತರ ಕೊರಿಯನ್ನರು ಕರೋನ ಹರಡುವಿಕೆಯನ್ನು ನಿಯಂತ್ರಿಸಲು ಕಠಿಣ ಕ್ರಮಗಳನ್ನು ಕೈಗೊಂಡಿದ್ದಾರೆ. ಈಗ ಮಾಸ್ಕ್ (Mask) ಧರಿಸದವರು 3 ತಿಂಗಳು ಕಷ್ಟಪಟ್ಟು ದುಡಿಯಬೇಕಾಗುತ್ತದೆ. ಸರ್ಕಾರದ ಈ ಆದೇಶ ಜನರಲ್ಲಿ ಭೀತಿ ಹುಟ್ಟಿಸಿದೆ. ಆದಾಗ್ಯೂ ಕಿಮ್ ಜೊಂಗ್ ಉನ್ ಅವರ ನಿರ್ಧಾರಕ್ಕೆ ವಿರುದ್ಧವಾಗಿ ಮಾತನಾಡುವ ಶಕ್ತಿ ಯಾರಿಗೂ ಇಲ್ಲ.
ನೀವೂ ಸಹ N-95 ಮಾಸ್ಕ್ ಧರಿಸುತ್ತಿದ್ದರೆ ಈ ಸುದ್ದಿಯನ್ನು ತಪ್ಪದೇ ಓದಿ
ಈ ಆದೇಶದ ಅನುಷ್ಠಾನವನ್ನು ಖಚಿತಪಡಿಸಿಕೊಳ್ಳಲು ಉತ್ತರ ಕೊರಿಯಾ ಆಡಳಿತದಿಂದ ಕಾಲೇಜು ಮತ್ತು ಪ್ರೌಢ ಶಾಲಾ ವಿದ್ಯಾರ್ಥಿಗಳ ತಂಡಗಳನ್ನು ರಚಿಸಲಾಗಿದೆ. ಈ ತಂಡಗಳು ಜನರ ಮೇಲೆ ನಿಗಾ ಇಡುತ್ತವೆ ಮತ್ತು ಮಾಸ್ಕ್ ಧರಿಸದೇ ಇರುವವರನ್ನು ಕಂಡರೆ ಕೂಡಲೇ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ.
ಹೆಚ್ಚುತ್ತಿರುವ ಕರೋನಾ ಪ್ರಕರಣಗಳನ್ನು ಗಮನದಲ್ಲಿಟ್ಟುಕೊಂಡು ಕಠಿಣ ಕ್ರಮ ಕೈಗೊಳ್ಳುವ ನಿರ್ಧಾರಕ್ಕೆ ಬರಲಾಗಿದೆ ಎಂದು ಉತ್ತರ ಕೊರಿಯಾದ (North Korea) ಅಧಿಕಾರಿಯೊಬ್ಬರನ್ನು ಉಲ್ಲೇಖಿಸಿ ರೇಡಿಯೋ ಫ್ರೀ ಏಷ್ಯಾ ವರದಿ ಮಾಡಿದೆ.
ಉತ್ತರ ಕೊರಿಯಾದಲ್ಲಿನ ಕರೋನಾವೈರಸ್ ಪ್ರಕರಣಗಳಿಗೆ ಸಂಬಂಧಿಸಿದಂತೆ ಯಾವುದೇ ನಿರ್ದಿಷ್ಟ ಮಾಹಿತಿಯಿಲ್ಲದಿದ್ದರೂ ಕಳೆದ ತಿಂಗಳು ಉತ್ತರ ಕೊರಿಯಾವನ್ನು ಹೊಂದಿದ ಚೀನೀ ಪ್ರಾಂತ್ಯಗಳಲ್ಲಿ ಸೋಂಕಿನ ವರದಿಗಳು ಸರ್ಕಾರದ ಚಡಪಡಿಕೆಗಳನ್ನು ಹೆಚ್ಚಿಸಿವೆ.
ಕರೋನಾ: ನೀವೂ ಸಹ N-95 ಮಾಸ್ಕ್ ಮೇಲೆ ನಂಬಿಕೆ ಇಟ್ಟಿರುವಿರಾ... ಹಾಗಿದ್ದರೆ ಎಚ್ಚರ
ಆರ್‌ಎಫ್‌ಎ ಪ್ರಕಾರ ಜುಲೈ 2 ರಂದು ಕಿಮ್ ಜೊಂಗ್ ಉನ್ (Kim Jong Un) ಅವರ ಅಧ್ಯಕ್ಷತೆಯಲ್ಲಿ ಕೊರಿಯನ್ ವರ್ಕರ್ಸ್ ಪಾರ್ಟಿಯ ಸಭೆ ನಡೆಯಿತು. ಈ ಸಭೆಯಲ್ಲಿ ಕರೋನಾವನ್ನು ಎದುರಿಸಲು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲಾಯಿತು. ಅಲ್ಲದೆ ಕಿಮ್ ಜೊಂಗ್ ವೈರಸ್ ಅನ್ನು ನಿಯಂತ್ರಿಸಲು ಅವರು ವಿಫಲರಾಗಿದ್ದರಿಂದ ಹಲವಾರು ಹಿರಿಯ ಆರೋಗ್ಯ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲು ಆದೇಶ ಹೊರಡಿಸಿದ್ದಾರೆ ಎಂದು ತಿಳಿದುಬಂದಿದೆ.