ಜೆಜಿಯಾಂಗ್ : ಚೀನಾದಲ್ಲಿ ನಿರ್ಮಿಸಲಾಗಿರುವ ವಿಶಿಷ್ಟವಾದ ಬೆಂಡಿಂಗ್ ಗ್ಲಾಸ್ ಬ್ರಿಡ್ಜ್ (Bending Glass Bridge) ವಿಶ್ವಾದ್ಯಂತ ಚರ್ಚೆಯ ವಿಷಯವಾಗಿದೆ. ಇತ್ತೀಚೆಗೆ ಸಾರ್ವಜನಿಕರಿಗೆ ತೆರೆದುಕೊಂಡಿರುವ ಈ ಸೇತುವೆಯ (Bridge) ಉದ್ದ 100 ಮೀಟರ್. ಇದರ ಫೋಟೋಗಳು ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.
ಚೀನಾದ Zhejiang Provinceನಲ್ಲಿರುವ ಈ Ruyi glass bridge ನೆಲದಿಂದ 140 ಮೀಟರ್ ಎತ್ತರದಲ್ಲಿದೆ. ಅದರ ವಿಶೇಷ ವಿನ್ಯಾಸದಿಂದಾಗಿ, ಇದನ್ನು Bending Glass Bridge ಎಂದು ಹೆಸರಿಸಲಾಗಿದೆ. ಇದರ ವಿಶಿಷ್ಟ ವಿನ್ಯಾಸವು ಜನರನ್ನು ಬೆರಗುಗೊಳಿಸುತ್ತಿದೆ. ಕೆಲವರು ಇದೊಂದು ಭ್ರಮೆ ಎಂದರೆ ಇನ್ನು ಕೆಲವರು ಇಂಥಹ ಸೇತುವೆ ಇರಲು ಸಾಧ್ಯವೇ ಇಲ್ಲ ಎನ್ನುತ್ತಾರೆ.
ಇದನ್ನೂ ಓದಿ : UK School: ವಿಚಿತ್ರ ವಾರ್ನಿಂಗ್! 'ಮಕ್ಕಳ ತಾಯಂದಿರರು ಶಾಲೆಯಲ್ಲಿ ತುಂಡುಡುಗೆ ಧರಿಸುವಂತಿಲ್ಲ'
ಪ್ರವಾಸಿಗರ ಆಕರ್ಷಣೆಯ ಕೇಂದ್ರ :
ಈ Bending Glass Bridge ಮೂಲಕ ಇಲ್ಲಿವರೆಗೆ ಸುಮಾರು 2,00,000 ಕ್ಕೂ ಹೆಚ್ಚು ಜನರು ಹಾದುಹೋಗಿದ್ದಾರೆ. ವಿಶೇಷ ವಿನ್ಯಾಸದಿಂದಾಗಿ, ಈ ಸೇತುವೆ ಪ್ರವಾಸಿಗರನ್ನು (Tourist) ಆಕರ್ಷಿಸುವ ಕೇಂದ್ರವಾಗಿ ಮಾರ್ಪಟ್ಟಿದೆ. ಎರಡು ಪರ್ವತಗಳ ನಡುವೆ ಈ ಸೇತುವೆಯನ್ನು ನಿರ್ಮಿಸಲಾಗಿದೆ.
ಅತಿ ಎತ್ತರದ ಮತ್ತು ಉದ್ದವಾದ ಸೇತುವೆ:
ಈ ಸೇತುವೆಯು ವಕ್ರಾಕಾರದಲ್ಲಿದೆ. ಇದನ್ನು ಚೀನಾದಲ್ಲಿ (China) ಅದೃಷ್ಟದ ಸಂಕೇತವೆಂದು ಪರಿಗಣಿಸಲಾಗುತ್ತದೆ. ಮೂರು ಬಾಗುವ ಸೇತುವೆಗಳನ್ನು ಸಂಪರ್ಕಿಸುವ ಮೂಲಕ ಇದನ್ನು ನಿರ್ಮಿಸಲಾಗಿದೆ. ಇಲ್ಲಿಗೆ ಭೇಟಿ ನೀಡಿದ ಪ್ರವಾಸಿಗರಂತೂ ಇದನ್ನು ನೋಡಿ ದಿಗ್ಭ್ರಮೆಗೊಳ್ಳುತ್ತಿದ್ದಾರೆ. ಇನ್ನು ಕೆಲವರಂತೂ ಕಣ್ಣ ಮುಂದ್ರುವ ಸೇತುವೆ ನೋಡಿದ ಮೇಲು ನಂಬಲು ಸಾಧ್ಯವೇ ಇಲ್ಲ ಎನ್ನುತ್ತಾರೆ. ಚೀನಾದ ಈ ಸೇತುವೆ (Bridge) ವಿಶ್ವದ ಅತಿ ಉದ್ದದ ಮತ್ತು ಅತಿ ಎತ್ತರದ ಸೇತುವೆಯಾಗಿದೆ.
ಇದನ್ನೂ ಓದಿ : ಈ ದೇಶದಲ್ಲಿ 'Mr, Mrs, Miss' ಬದಲು ಬಳಕೆಯಾಗಲಿದೆ ಹೊಸ ಪದ
ಇಸ್ರೇಲ್ ವಿನ್ಯಾಸಗಾರರಿಂದ ವಿನ್ಯಾಸಗೊಳಿಸಲಾಗಿದೆ :
ಈ ಸೇತುವೆಯನ್ನು ಇಸ್ರೇಲ್ ವಾಸ್ತುಶಿಲ್ಪಕಾರ ಹ್ಯಾಮ್ ದೋಥಾನ್ ವಿನ್ಯಾಸಗೊಳಿಸಿದ್ದಾರೆ. ಬಂಗೀ ಜಂಪ್ (bungee jump) ಅಥವಾ ರೈಡ್ ಜಿಪ್ ಲೈನ್ ಗಾಗಿ ಜನರು ಇಲ್ಲಿಗೆ ಭೇಟಿ ನೀಡುತ್ತಾರೆ. ಮಾಡಲು ಜನರು ಇಲ್ಲಿಗೆ ಬರುತ್ತಾರೆ. ಕಳೆದ ವರ್ಷ ಇದೇ ರೀತಿಯ ಸೇತುವೆಯನ್ನು ಪೋರ್ಚುಗಲ್ನಲ್ಲಿ ಓಪನ್ ಮಾಡಲಾಗಿತ್ತು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.