ಈ ದೇಶದಲ್ಲಿ 'Mr, Mrs, Miss' ಬದಲು ಬಳಕೆಯಾಗಲಿದೆ ಹೊಸ ಪದ

 Metro.co ನ ಡಾಟ್ ಯುಕೆ ಸುದ್ದಿಯ ಪ್ರಕಾರ, Mr, Mrs, Chairman ಮೇಡಮ್ ಮುಂತಾದ ಪದಗಳು ಹಳೆಯ ಕಾಲದ್ದಾಗಿವೆ. ಇದರಲ್ಲಿ ಲಿಂಗ ಭೇದ ಸ್ಪಷ್ಟವಾಗಿ ಕಂಡು ಬರುತ್ತದೆ.

Written by - Ranjitha R K | Last Updated : Mar 21, 2021, 12:47 PM IST
  • ಕೌನ್ಸಿಲ್ ಆಫ್ ಬ್ರಿಟನ್‌ನ ಉತ್ತಮ ನಿರ್ಧಾರ
  • ಮಿಸ್ ಅಥವಾ ಮಿಸೆಸ್ ಬದಲಿಗೆ Mx ಪದದ ಬಳಕೆ.
  • ಪುರುಷವಾಡಿ ದೃಷ್ಟಿಕೋನಕ್ಕೆ ಸವಾಲು ಹಾಕುವ ಯತ್ನ
ಈ ದೇಶದಲ್ಲಿ 'Mr, Mrs, Miss' ಬದಲು ಬಳಕೆಯಾಗಲಿದೆ  ಹೊಸ ಪದ  title=
ಮಿಸ್ ಅಥವಾ ಮಿಸೆಸ್ ಬದಲಿಗೆ Mx ಪದದ ಬಳಕೆ.( file photo)

ಲಂಡನ್: ಇಂಗ್ಲೆಂಡ್ ನ ಮಾರ್ನ್ ಮೌತ್  ಕ್ರೈಸ್ಟ್‌ ಚರ್ಚ್ ಮತ್ತು ಡಿಚ್ ನ  ಪೂಲ್ ಕೌನ್ಸಿಲ್‌ಗಳು ಪ್ರತಿ ಹೆಸರಿನ ಮುಂದೆ  'Mr, Mrs, Miss' ನಂತಹ ಪದಗಳನ್ನು ಬಳಸದಿರಲು  ನಿರ್ಧರಿಸಿದೆ. ಇದರ ಬದಲಾಗಿ, 'Mx' ಎಂಬ ಪದವನ್ನು ಬಳಸಲು ತೀರ್ಮಾನಿಸಿದೆ.   ಈ ನಿರ್ಧಾರದ ಕುರಿತು ಮತದಾನ ಮಾಡಲಾಗುವುದು. ಮತದಾನದ ನಂತರ ಈ ನಿರ್ಧಾರವನ್ನು ಜಾರಿಗೆ ತರಲಾಗುವುದು.

'ಮಿಸ್ಟರ್, ಮಿಸ್, ಚೇರ್ಮನ್, ಮೇಡಂ ಪದಗಳು outdated' : 
 Metro.co ನ ಡಾಟ್ ಯುಕೆ ಸುದ್ದಿಯ ಪ್ರಕಾರ, Mr, Mrs, Chairman ಮೇಡಮ್ ಮುಂತಾದ ಪದಗಳು ಹಳೆಯ ಕಾಲದ್ದಾಗಿವೆ. ಇದರಲ್ಲಿ ಲಿಂಗ ಭೇದ ಸ್ಪಷ್ಟವಾಗಿ ಕಂಡು ಬರುತ್ತದೆ. ಈ ಹಿನ್ನೆಲೆಯಲ್ಲಿ 'Mx' ಎಂಬ ಕಾಮನ್ ಟರ್ಮ್ ಅನ್ನು ಬಳಸುವ ಬಗ್ಗೆ ಯೋಚಿಸಲಾಗುತ್ತಿದೆ. ಈ ಹೊಸ ನಿಯಮವನ್ನು (Rules) ಶೀಘ್ರವೇ ಕೌನ್ಸಿಲ್ (Council) ಸಭೆಯಲ್ಲಿ ಜಾರಿಗೆ ತರಲಾಗುವುದು. ಇದಾದ ನಂತರ ಅಧಿಕೃತವಾಗಿ  ಹೆಸರಿನ ಮುಂದೆ 'Mx' ಎಂಬ ಪದವನ್ನು ಬಳಸಲು ಪ್ರಾರಂಭಿಸಲಾಗುವುದು.

ಇದನ್ನೂ  ಓದಿ : ಭಾರತದ ಜೊತೆ ಮಾನವ ಹಕ್ಕುಗಳ ವಿಚಾರವಾಗಿ ಚರ್ಚಿಸಿದ ಅಮೆರಿಕಾದ ರಕ್ಷಣಾ ಕಾರ್ಯದರ್ಶಿ

ಪುರುಷವಾದಿ ಮನಸ್ಥಿತಿಯ ಬದಲಾವಣೆಗಾಗಿ ಈ ಹೊಸ ನಿಯಮ : 
ನಮ್ಮ ಸಮಾಜದಲ್ಲಿ ಪುರುಷರ ಬಗ್ಗೆ ನಿರಂಕುಶ ಮನೋಭಾವ ಇರುವುದರಿಂದ ಈ ಬದಲಾವಣೆಯ ಅಗತ್ಯ ಇದೆ ಎಂದು ಕೌನ್ಸಿಲ್ ಹೇಳಿದೆ. ಹಾಗಾಗಿ ವ್ಯಕ್ತಿಯ ಲಿಂಗ (Gender) ತಿಳಿಯದ ರೀತಿಯಲ್ಲಿ ಹೆಸರಿನ ಮುಂದೆ ' Mx'  ಎಂಬ ಕಾಮನ್ ಟರ್ಮ್ ಅನ್ನು ಬಳಸಲಾಗುವುದು. ಅಲ್ಲದೆ, ಮೇಡಂ , ಚೇರ್ ಮೆನ್ ಪದಗಳ ಬದಲು They' ಮತ್ತು 'Chair' ಪದಗಳನ್ನು ಬಳಸಲು ತೀರ್ಮಾನಿಸಲಾಗಿದೆ. ಈ ಪ್ರಸ್ತಾವನೆಯನ್ನು  ಸ್ವತಂತ್ರ ಕೌನ್ಸಿಲರ್ ಎಲ್.ಜೆ. ಇವಾನ್ಸ್ ಮುಂದಿಟ್ಟಿದ್ದಾರೆ. ವ್ಯಕ್ತಿಯ ಲಿಂಗವನ್ನು ಲಿಖಿತವಾಗಿ ಪ್ರಸ್ತಾಪಿಸುವ ಕ್ರಮ ಸರಿಯಲ್ಲ. ಹಳೆಯ ಪದ್ಧತಿಯನ್ನು ಬದಲಾಯಿಸುವ ಅಗತ್ಯವಿದೆ ಎಂದು ಅವರು ಹೇಳಿದ್ದಾರೆ. 

ಇದನ್ನೂ  ಓದಿ : China ವ್ಯಾಕ್ಸಿನ್ ಹಾಕಿಸಿಕೊಂಡ ಪಾಕ್ ಪ್ರಧಾನಿ Imran Khan ವರದಿ Corona Positive

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News