ಲಂಡನ್: ಬ್ರಿಟನ್ನ ಟ್ರೇಸಿ ಬ್ರಿಟಾನಿ 50 ರ ವಯಸ್ಸಿನಲ್ಲಿ ಮತ್ತೊಮ್ಮೆ ತಾಯಿಯಾಗಲಿದ್ದಾರೆ. ಈ ಬಾರಿ ಅವರು ನಾಲ್ಕು ಮಕ್ಕಳಿಗೆ ಜನ್ಮ ನೀಡುತ್ತಾರೆ. ಈ ವಯಸ್ಸಿನಲ್ಲಿ ತಾಯಿ ಆಗುತ್ತಿರುವವರಲ್ಲಿ ಇವರು ಮೊದಲಿಗರೇನೂ ಅಲ್ಲ. ಇವರಿಗೆ ಈಗಾಗಲೇ ಮಕ್ಕಳು, ಮೊಮ್ಮಕ್ಕಳೂ ಇದ್ದಾರೆ. ಆದರೂ ಆಕೆಗೆ ಮತ್ತೆ ತಾಯಿ ಆಗುವ ಹಂಬಲ ಹೊಂದಿದ್ದರು. ಹಾಗಾಗಿ IVF ತಂತ್ರಜ್ಞಾನದೊಂದಿಗೆ ಮತ್ತೊಮ್ಮೆ ತಾಯಿಯಾಗಬೇಕೆಂದು ಅವರು ಯೋಚಿಸಿದರು, ಈಗ ಟ್ರೇಸಿ ಬ್ರಿಟಾನಿ ನಾಲ್ಕು ಮಕ್ಕಳಿಗೆ ಜನ್ಮ ನೀಡಲಿದ್ದಾರೆ. ಪ್ರಸ್ತುತ 25 ವಾರಗಳ ಗರ್ಭಿಣಿಯಾಗಿರುವ ಅವರು 32 ವಾರಗಳ ನಂತರ ತನ್ನ ಮಕ್ಕಳಿಗೆ ಜನ್ಮ ನೀಡುತ್ತಾರೆ.
ಈಗ ಟ್ರೇಸಿ ಬ್ರಿಟಾನಿ 3 ಹೆಣ್ಣು ಮತ್ತು ಒಂದು ಗಂಡು ಮಗುವನ್ನು ಹಡೆಯಲಿದ್ದಾರೆ. ಇದರಲ್ಲಿ ಎರಡು ಅವಳಿ ಹೆಣ್ಣು ಮಕ್ಕಳು. 32 ವಾರಗಳ ನಂತರ, ಶಸ್ತ್ರಚಿಕಿತ್ಸೆಯ ಮೂಲಕ ತನ್ನ ಮಕ್ಕಳಿಗೆ ಜನ್ಮ ನೀಡುತ್ತಾರೆ. ಇದರೊಂದಿಗೆ, ಯುಕೆಯಲ್ಲಿ ಟ್ರೇಸಿ ಈ ವಯಸ್ಸಿನಲ್ಲಿ ಮಕ್ಕಳನ್ನು ಹಡೆದ ತಾಯಿ ಎಂಬ ದಾಖಲೆ ನಿರ್ಮಿಸಲಿದ್ದಾರೆ. ಟ್ರೆಸಿ ತನ್ನ ಚಿಕಿತ್ಸೆಗಾಗಿ ಸೈಪ್ರಸ್ನಲ್ಲಿ ಸುಮಾರು 6.56 ಲಕ್ಷ (7,000 ಪೌಂಡ್) ಖರ್ಚು ಮಾಡಿದರು. ನನಗೆ ಮೊದಲೇ ಮೂರು ಮಕ್ಕಳಿದ್ದಾರೆ. ಆದರೂ ನನಗೆ ವಯಸ್ಸು ಜಾಸ್ತಿಯಾಗುತ್ತಿದ್ದಂತೆ ಮತ್ತೆ ತಾಯಾಗುವ ಇಚ್ಛೆ ಇತ್ತು. ನಾನು ಪ್ರತಿ ವರ್ಷವೂ ಅದರ ಬಗ್ಗೆ ಯೋಚಿಸುತ್ತಿದ್ದೆ. ಈಗ ನನಗೆ 50 ವರ್ಷ ಮತ್ತು ಈ ವಯಸ್ಸಿನಲ್ಲಿ ಮತ್ತೆ ತಾಯಾಗಲು ಹೊರಟಿದ್ದೇನೆ ಇದು ನನಗೆ ಸಂತಸ ತಂದಿದೆ ಎಂದು ಟ್ರೇಸಿ ಹೇಳಿದ್ದಾರೆ. ಈಗ ಪತಿ ಸ್ಟೀಫನ್ ಮತ್ತು ಆಕೆ ಮತ್ತೆ ನಾಲ್ಕು ಮಕ್ಕಳ ಪೋಷಕರಾಗಲಿದ್ದಾರೆ.
ಟ್ರೇಸಿಗೆ ಈಗಾಗಲೇ ಮೂರು ಮಕ್ಕಳು ಮತ್ತು ಎಂಟು ಮೊಮ್ಮಕ್ಕಳು ಇದ್ದಾರೆ. ಜನರು ನನ್ನ ಬಗ್ಗೆ ಏನು ಮಾತನಾಡುತ್ತಾರೆ ಎಂಬುದರ ಬಗ್ಗೆ ನಾನು ಯೋಚಿಸುವುದಿಲ್ಲ ಎಂದು ಅವರು ಹೇಳುತ್ತಾರೆ. ಈ ವಯಸ್ಸಿನಲ್ಲಿ ಮಕ್ಕಳನ್ನು ಹಡೆಯುತ್ತಿರುವವರಲ್ಲಿ ನಾನು ಮೊದಲಿಗಳಲ್ಲ, ಅಂತೆಯೇ ನಾನು ಕೊನೆಯವಳೂ ಅಲ್ಲ. ನಾನು 50 ವರ್ಷದವಳಂತೆ ಕಾಣುವುದಿಲ್ಲ. ಜೊತೆಗೆ ನನಗೆ 50 ವರ್ಷ ಆಗಿದೆ ಎಂಬ ಭಾವನೆಯೂ ನನ್ನಲ್ಲಿಲ್ಲ. ಜನರು ಏನು ಬೇಕಾದರೂ ಹೇಳಲಿ, ನನ್ನ ನಾಲ್ಕು ಸುಂದರ ಮಕ್ಕಳನ್ನು ನೋಡಿದರೆ ಅವರಿಗೂ ಸಂತೋಷವಾಗುತ್ತದೆ ಎನ್ನುತ್ತಾರೆ ಟ್ರೇಸಿ.
ಮಗಳೊಂದಿಗೆ ಟ್ರೇಸಿ. Pic: Facebook
ಟ್ರೇಸಿ ಅವರ ಮೊದಲ ಮೂರು ಮಕ್ಕಳು 32, 31 ಮತ್ತು 22 ವರ್ಷ ವಯಸ್ಸಿನವರು. ಅವರು 2003 ರಲ್ಲಿ ತನ್ನ ಮೊದಲ ಪತಿಯಿಂದ ಬೇರ್ಪಟ್ಟಳು. ಎರಡು ವರ್ಷಗಳ ನಂತರ ಅವರು ಸ್ಟೀಫನ್ರನ್ನು ಭೇಟಿಯಾದರು. ಸ್ಟೀಫನ್ ಭೇಟಿಯಾಗಿ ವರ್ಷದ ನಂತರ ಅವಳು ಗರ್ಭಿಣಿಯಾಗಿದ್ದಳು, ಆದರೆ ನಂತರ ಅವಳು ಗರ್ಭಪಾತ ಮಾಡಿಸಿದಳು. ಆದರೆ ನಂತರ ಆತ ಮತ್ತೆ ಮಕ್ಕಳ ಬಗ್ಗೆ ಯೋಚಿಸಿದನು. ಈಗ 50 ನೇ ವಯಸ್ಸಿನಲ್ಲಿ, ಅವರು ನಾಲ್ಕು ಮಕ್ಕಳಿಗೆ ಜನ್ಮ ನೀಡಲಿದ್ದಾರೆ. ಈ ಕಾರಣಕ್ಕಾಗಿ, ಅವರು ತಮ್ಮ ತಾಯಿಯಿಂದ ಹಣವನ್ನು ಪಡೆದು, ಸೈಪ್ರಸ್ನಲ್ಲಿ ಐವಿಎಫ್ ತಂತ್ರಜ್ಞಾನದೊಂದಿಗೆ ಗರ್ಭದಾರಣೆ ಚಿಕಿತ್ಸೆ ಮಾಡಿಸಿದರು.