ನಕಲಿ ವರದಿ ಪ್ರಸಾರ ಮಾಡುವ ಮಾಧ್ಯಮಗಳ ಪರವಾನಗಿ ರದ್ದುಗೊಳಿಸುವುದಾಗಿ ಬೆದರಿಕೆ ಹಾಕಿದ ಟ್ರಂಪ್

ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತನ್ನ ಪರಮಾಣು ನೀತಿಯ ಬಗ್ಗೆ ಅಪಪ್ರಚಾರ ಮಾಡುವ ಸುದ್ಧಿ ಮಾಧ್ಯಮಗಳ ಪರವಾನಗಿಯನ್ನು ರದ್ದುಗೊಳಿಸುವುದಾಗಿ ಬೆದರಿಕೆ ಹಾಕಿದ್ದಾರೆ.

Last Updated : Oct 12, 2017, 03:36 PM IST
ನಕಲಿ ವರದಿ ಪ್ರಸಾರ ಮಾಡುವ ಮಾಧ್ಯಮಗಳ ಪರವಾನಗಿ ರದ್ದುಗೊಳಿಸುವುದಾಗಿ ಬೆದರಿಕೆ   ಹಾಕಿದ ಟ್ರಂಪ್ title=

ವಾಷಿಂಗ್ಟನ್: ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತನ್ನ ಪರಮಾಣು ನೀತಿಯ ಮೇಲೆ ಸುದ್ದಿ ಮಾಡುವ ಮಾಧ್ಯಮಗಳ ಪರವಾನಗಿಯನ್ನು ರದ್ದುಗೊಳಿಸುವುದಾಗಿ ಬೆದರಿಕೆ ಹಾಕಿದ್ದಾರೆ. ವಾಸ್ತವವಾಗಿ, ಟ್ರಂಪ್ ಮತ್ತು ಅವರ ಸಹೋದ್ಯೋಗಿಗಳು ಪುನರಾವರ್ತಿಸುತ್ತಿರುವ ಸಂವೇದನಾಶೀಲ ವರದಿಗಳು ಮಾಧ್ಯಮಗಳು ನಕಲಿ ಪ್ರಸಾರದಲ್ಲಿ ತೊಡಗಿವೆ ಎಂಬ ಆರೋಪಕ್ಕೆ ಯಾವುದೇ ಪುರಾವೆಗಳಿಲ್ಲ. 

ಅಮೇರಿಕಾ ಅಧ್ಯಕ್ಷ ಟ್ರಂಪ್, NCB ಸುದ್ದಿವಾಹಿನಿಯಲ್ಲಿ, ಟ್ರಂಪ್ ತನ್ನ ಪರಮಾಣು ನೀತಿಯ ಬಗ್ಗೆ ಹತ್ತು ಬಾರಿ ಯೋಚಿಸಬೇಕೆಂದು ವರದಿಯಾಗಿದ್ದರ ಬಗ್ಗೆ ಅಸಮಧಾನಗೊಂಡಿದ್ದರು. ಟ್ರಂಪ್ ಈ ಸುದ್ದಿ 'ಕೃತಕ' ಎಂದು ತಿಳಿಸಿದ್ದರು. NCB ಮತ್ತು ಇತರ ಮಾಧ್ಯಮಗಳಲ್ಲಿ ಈ ರೀತಿಯ ನಕಲಿ ಸುದ್ದಿಗಳು ಪ್ರಸಾರವಾಗುವುದರಿಂದ ಅವು ಸವಾಲನ್ನು ಎದುರಿಸ ಬೇಕಾಗುತ್ತದೆ. ಇದೇ ರೀತಿಯ ಸುದ್ದಿ ಪ್ರಸಾರದಲ್ಲಿ ತೊಡಗಿದ್ದೆ ಆದರೆ ಅವುಗಳ ಪರವಾನಗಿಯನ್ನು ರದ್ಧುಗೊಳಿಸಲಾಗುವುದು ಎಂದು ತಿಳಿಸಿದ್ದಾರೆ. 

ಕಳೆದ ರಾತ್ರಿ ಟ್ರಂಪ್ ತನ್ನ ಟ್ವೀಟ್ನಲ್ಲಿ ನ್ಯೂಸ್ ನೆಟ್ವರ್ಕ್ ತನ್ನ ವಾಹಿನಿಯಲ್ಲಿ ಈ ರೀತಿಯ ಪಕ್ಷಪಾತ, ವಿಕೃತಿ ಮತ್ತು ನಕಲಿ ಸುದ್ದಿ ಪ್ರಸಾರವಾದರೆ ಅದರ ಪರವಾನಗಿಯನ್ನು ರದ್ಧುಗೊಳಿಸಲಾಗುವುದು ಎಂದು ತಿಳಿಸಿದ್ದಾರೆ.

Trending News