Viral Video: “ನಾನೇ ನೋಡಿ ಈ ಕಾರಿನ ಯಜಮಾನ..” ಎನ್ನುತ್ತಾ ಟಾಪ್ ಮೇಲೆ ಕುಳಿತು ಊರು ಸುತ್ತಿದ ನಾಯಿ

Dog sits on the top of Moving Car: ಫಾರೆವರ್ ಬೆಂಗಳೂರು ಎಂಬ ಪೇಜ್ ಶೇರ್ ಮಾಡಿರುವ ಈ ವಿಡಿಯೋವನ್ನು ಪ್ರಯಾಣಿಕರೊಬ್ಬರು ಆ ಕಾರಿನ ಹಿಂಭಾಗದಿಂದ ರೆಕಾರ್ಡ್ ಮಾಡಿದ್ದಾರೆ. ಆದರೆ ವಿಚಿತ್ರವೆಂದರೆ, ನಾಯಿಯೊಂದು ಕಾರಿನ ಮೇಲೆ ಕುಳಿತು ವಾಹನ ಚಲಿಸುವಾಗಲೂ ಚಡಪಡಿಸುವುದಿಲ್ಲ. ಇದು ಉದ್ದೇಶಪೂರ್ವಕವಾಗಿಯೇ ಮಾಡಿರುವುದೋ ಅಥವಾ ಕಾರಿನ ಚಾಲಕನಿಗೆ ಅಲ್ಲಿ ಕಾರು ಇದೆ ಎಂಬುದೇ ಗೊತ್ತಿಲ್ಲವೋ ಎಂಬುದು ಖಚಿತವಾಗಿಲ್ಲ.

Written by - Bhavishya Shetty | Last Updated : Feb 6, 2023, 04:57 PM IST
    • ಟೆಕ್ ಸಿಟಿ ಕೆಲವು ವಿಲಕ್ಷಣ ದೃಶ್ಯಗಳಿಗೂ ಸಾಕ್ಷಿಯಾಗುತ್ತವೆ ಎಂಬುದು ಮಾತ್ರ ಸುಳ್ಳಲ್ಲ
    • ಚಲಿಸುತ್ತಿರುವ ಕಾರಿನ ಮೇಲೆ ನಾಯಿಯೊಂದು ಆರಾಮವಾಗಿ ಕುಳಿತಿರುವುದನ್ನು ತೋರಿಸುತ್ತದೆ
    • ಇದು ಟ್ವಿಟರ್‌ನಲ್ಲಿ ಜನರಲ್ಲಿ ವಿಧ ವಿಧವಾದ ಚರ್ಚೆಯನ್ನು ಹುಟ್ಟುಹಾಕಿದೆ
Viral Video: “ನಾನೇ ನೋಡಿ ಈ ಕಾರಿನ ಯಜಮಾನ..” ಎನ್ನುತ್ತಾ ಟಾಪ್ ಮೇಲೆ ಕುಳಿತು ಊರು ಸುತ್ತಿದ ನಾಯಿ title=
viral video

Dog sits on the top of Moving Car: ಬೆಂಗಳೂರು ಅನೇಕ ವಿಷಯಗಳಿಗೆ ಹೆಸರುವಾಸಿಯಾಗಿದೆ. ಸ್ಟಾರ್ಟ್‌ಅಪ್‌ಗಳು, ಟೆಕ್ ಸಾಮ್ರಾಜ್ಯ, ಆಟೋವಾಲಾಗಳು ಮತ್ತು ಕ್ಯಾಬ್ ಡ್ರೈವರ್‌ಗಳು. ಹೀಗೆ ಪ್ರತೀ ದಿನ ಒಂದಿಲ್ಲೊಂದು ವಿಶೇಷತೆಗಳು ಬೆಂಗಳೂರಿನಲ್ಲಿ ಕಾಣಸಿಗುತ್ತವೆ. ಆದರೆ ಟೆಕ್ ಸಿಟಿ ಕೆಲವು ವಿಲಕ್ಷಣ ದೃಶ್ಯಗಳಿಗೂ ಸಾಕ್ಷಿಯಾಗುತ್ತವೆ ಎಂಬುದು ಮಾತ್ರ ಸುಳ್ಳಲ್ಲ. ಅದಕ್ಕೆ ಬೆಸ್ಟ್ ಉದಾಹರಣೆ ಎಂದರೆ ನಾವಿಂದು ಹೇಳಹೊರಟಿರುವ ಸುದ್ದಿ. ಈಗ ವೈರಲ್ ಆಗುತ್ತಿರುವ ವೀಡಿಯೊದಲ್ಲಿ,  ಚಲಿಸುತ್ತಿರುವ ಕಾರಿನ ಮೇಲೆ ನಾಯಿಯೊಂದು ಆರಾಮವಾಗಿ ಕುಳಿತಿರುವುದನ್ನು ತೋರಿಸುತ್ತದೆ. ಇದು ಟ್ವಿಟರ್‌ನಲ್ಲಿ ಜನರಲ್ಲಿ ವಿಧ ವಿಧವಾದ ಚರ್ಚೆಯನ್ನು ಹುಟ್ಟುಹಾಕಿದೆ.

ಇದನ್ನೂ ಓದಿ: Valentine's Day 2023: ಒಂಟಿಯಾಗಿರುವವರು ಈ ರೀತಿ ಪ್ರೇಮಿಗಳ ದಿನವನ್ನಾಚರಿಸಿ, ಸಂಗಾತಿ ಅವಶ್ಯಕತೆ ಬೀಳಲ್ಲ

ಫಾರೆವರ್ ಬೆಂಗಳೂರು ಎಂಬ ಪೇಜ್ ಶೇರ್ ಮಾಡಿರುವ ಈ ವಿಡಿಯೋವನ್ನು ಪ್ರಯಾಣಿಕರೊಬ್ಬರು ಆ ಕಾರಿನ ಹಿಂಭಾಗದಿಂದ ರೆಕಾರ್ಡ್ ಮಾಡಿದ್ದಾರೆ. ಆದರೆ ವಿಚಿತ್ರವೆಂದರೆ, ನಾಯಿಯೊಂದು ಕಾರಿನ ಮೇಲೆ ಕುಳಿತು ವಾಹನ ಚಲಿಸುವಾಗಲೂ ಚಡಪಡಿಸುವುದಿಲ್ಲ. ಇದು ಉದ್ದೇಶಪೂರ್ವಕವಾಗಿಯೇ ಮಾಡಿರುವುದೋ ಅಥವಾ ಕಾರಿನ ಚಾಲಕನಿಗೆ ಅಲ್ಲಿ ಕಾರು ಇದೆ ಎಂಬುದೇ ಗೊತ್ತಿಲ್ಲವೋ ಎಂಬುದು ಖಚಿತವಾಗಿಲ್ಲ. ಆದರೆ ಇದು ಖಚಿತವಾಗಿ ಮೈಕ್ರೋ-ಬ್ಲಾಗಿಂಗ್ ಸೈಟ್‌ನಲ್ಲಿ ಭರ್ಜರಿ ಚರ್ಚೆಯ ವಿಷಯವಾಗಿದೆ.

ಇದನ್ನೂ ಓದಿ: ದೈಹಿಕ ಸಂಬಂಧ ಬೆಳೆಸಿ ಮದುವೆಯಾಗಲು ನಿರಾಕರಿಸಿದ ಯುವಕ: ಅನ್ಯಾಯ ಹೇಳಿದರೂ ಥಳಿಸಿದ ಕುಟುಂಬ!!

ವೀಡಿಯೋ ಈಗಾಗಲೇ 156k ವೀಕ್ಷಣೆಗಳನ್ನು ಮತ್ತು ಟನ್‌ಗಳಷ್ಟು ಪ್ರತಿಕ್ರಿಯೆಗಳನ್ನು ಗಳಿಸಿದೆ. ಮುಗ್ಧ ಪ್ರಾಣಿಯ ಜೊತೆ ಇಂತಹ ಅಪಾಯಕಾರಿ ಸಾಹಸವನ್ನು ಮಾಡಿದ್ದಾರೆ ಎಂದು ಇಂಟರ್ನೆಟ್‌ನ ಪ್ರಮುಖ ವಿಭಾಗವು ಕಾರಿನ ಚಾಲಕನನ್ನು ದೂಷಿಸಿದೆ. ಇನ್ನೊಂದು ಗುಂಪು ಮಾತ್ರ ಇದು ಸಖತ್ ತಮಾಷೆಯಾಗಿದೆ. ಬೆಂಗಳೂರಿನಲ್ಲಿ ಎಲ್ಲವೂ ಸಾಧ್ಯ ಎಂಬಂತೆ ಹೇಳಿಕೊಂಡಿದ್ದಾರೆ.  

ವಿಡಿಯೋ ನೋಡಿ:

 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News