ಹಾಂಕಾಂಗ್: ಕುತಂತ್ರಿ ಚೀನಾದ ವಿರುದ್ಧ ದೊಡ್ಡಣ ಅಮೆರಿಕದ ವಾಣಿಜ್ಯ ಸಮರ ಮುಂದುವರಿದಿದ್ದು, ಸ್ಮಾರ್ಟ್ಫೋನ್ ತಯಾರಿಕಾ ಕಂಪನಿ ಶವೊಮಿ ಸೇರಿದಂತೆ ಚೀನಾದ ಕೆಲವು ಸಂಸ್ಥೆಗಳನ್ನ ಕಪ್ಪುಪಟ್ಟಿಗೆ ಸೇರಿಸಿದೆ.
ಟ್ರಂಪ್ ಅಧಿಕಾರ ಅವಧಿ ಮುಗಿಯಲು ಆರು ದಿನಗಳು ಬಾಕಿ ಇರುವಂತೆ ಈ ನಿರ್ಧಾರ ತೆಗೆದುಕೊಂಡಿದ್ದು, ಅಮೆರಿಕದ ಅಧಿಕಾರಿಗಳು ಸರಣಿ ಪ್ರಕಟಣೆಗಳನ್ನ ಹೊರಡಿಸಿದ್ದಾರೆ. ಅದ್ರಂತೆ, ಚೀನಾ(China)ದ ಸರ್ಕಾರಿ ಸ್ವಾಮ್ಯದ ತೈಲ ಉತ್ಪಾದನಾ ಸಂಸ್ಥೆ 'ಸಿಎನ್ಒಒಸಿ', ವಿಮಾನಯಾನ ಸಂಸ್ಥೆ ಸ್ಕೈರಿಜೋನ್ (Skyrizon) ಹಾಗೂ ಟೆಕ್ ಕಂಪನಿ ಶವೊಮಿಯನ್ನ ಅಮೆರಿಕ ಕಪ್ಪುಪಟ್ಟಿಗೆ ಸೇರಿಸಿದೆ.
ಗಗನ ಯಾತ್ರೆಗೆ ಹೊರಟ ‘ಸಮೋಸಾ’ ..! ಹೇಗಿತ್ತುಅದರ ಬಾಹ್ಯಾಕಾಶ ಅಭಿಯಾನ.?
ಅಂದ್ಹಾಗೆ, ಕಳೆದ ವರ್ಷ ಆಯಪಲ್ ಕಂಪನಿಯನ್ನು ಹಿಂದಿಟ್ಟು ಜಗತ್ತಿನ 3ನೇ ಅತಿ ದೊಡ್ಡ ಸ್ಮಾರ್ಟ್ಫೋನ್ ತಯಾರಿಕಾ ಕಂಪನಿಯಾಗಿ ಹೊರಹೊಮ್ಮಿದ್ದ ಶವೊಮಿಯನ್ನ, ಇದೀಗ ಅಮೆರಿಕದ ರಾಷ್ಟ್ರೀಯ ಭದ್ರತೆಯ ವಿಚಾರವಾಗಿ ಒಂಬತ್ತು 'ಕಮ್ಯುನಿಸ್ಟ್ ಚೀನಾದ ಮಿಲಿಟರಿ ಕಂಪನಿಗಳ' ಪಟ್ಟಿಗೆ ಸೇರಿಸಲಾಗಿದೆ. ಈ ಪ್ರಕಟಣೆ ಹೊರ ಬೀಳುತ್ತಿದ್ದಂತೆ ಶವೊಮಿ ಕಂಪನಿ ಷೇರು ಬೆಲೆ ದಿಢೀರ್ ಕುಸಿದಿದೆ.
Indonesia Earthquake 2021: ಇಂಡೊನೆಷ್ಯಾದಲ್ಲಿ ಪ್ರಬಲ ಭೂಕಂಪ, 7 ಸಾವು 100 ಕ್ಕೂ ಅಧಿಕ ಜನರಿಗೆ ಗಾಯ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.