VIDEO: ಕುದುರೆಯಂತೆ ನೆಗೆಯುವ ಮಹಿಳೆ ನೋಡಿದ್ದೀರಾ..!

ಮಹಿಳೆಯ ವಿಶೇಷತೆ ಆಕೆ ಕುದುರೆಯಂತೆ ಚಲಿಸಬಲ್ಲರು ಎಂಬುದು. ಮಹಿಳೆಯೊಬ್ಬರ ಈ ವಿಶೇಷ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಈಗ ವೈರಲ್ ಆಗಿದೆ.  

Updated: May 19, 2019 , 11:12 AM IST
VIDEO: ಕುದುರೆಯಂತೆ ನೆಗೆಯುವ ಮಹಿಳೆ ನೋಡಿದ್ದೀರಾ..!
Pic Courtesy: Instagram/_jump_to_the_stars_and_back_

ಪ್ರಪಂಚದಲ್ಲಿ ಜೀವಿಸುವ ಪ್ರತಿಯೊಬ್ಬರಿಗೂ ತಮ್ಮದೇ ಆದ ಅದ್ಭುತ ಕಲೆ ಹೊಂದಿರುತ್ತಾರೆ. ಕೆಲವರು ನಾಚಿಕೆಯಿಂದಲೋ, ಹಿಂಜರಿಕೆಯಿಂದಲೋ ತಮ್ಮ ಕಲೆಯನ್ನು ಬೆಳಕಿಗೆ ತರುವುದೇ ಇಲ್ಲ. ಆದರೆ ಮತ್ತೆ ಕೆಲವರು ಯಾವುದೇ ಹಿಂಜರಿಕೆಯಿಲ್ಲದೆ ತಮ್ಮ ಕಲೆಯನ್ನು ಪ್ರದರ್ಶಿಸುತ್ತಾರೆ. ಇತ್ತೀಚಿನ ದಿನಗಳಲ್ಲಿ ಅಂತಹ ಕೆಲವು ಅನನ್ಯ ವೀಡಿಯೊಗಳು ಸಾಮಾಜಿಕ ಜಾಲತಾಣದಲ್ಲಿ ಬಹಳ ಬೇಗ ವೈರಲ್ ಆಗುತ್ತವೆ.

ಮೇ 14 ರಿಂದ ಸಾಮಾಜಿಕ ಜಾಲತಾಣದಲ್ಲಿ ಅಂತಹದ್ದೇ ಒಂದು ವಿಡಿಯೋ ವೈರಲ್ ಆಗಿದ್ದು, ಸಾಕಷ್ಟು ಚರ್ಚೆಯಾಗುತ್ತಿದೆ.

ಕಿರ್ಸ್ಟನ್ ನಾರ್ವೆಯ ಮಹಿಳೆ ಅಯಲ ಎಂಬ ಮಹಿಳೆ ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಮಹಿಳೆಯ ವಿಶೇಷತೆ ಆಕೆ ಕುದುರೆಯಂತೆ ಚಲಿಸಬಲ್ಲರು ಎಂಬುದು. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಈ ವಿಡಿಯೋದಲ್ಲಿ ಮಹಿಳೆಯು ಕುದುರೆಯಂತೆ ನೆಗೆದಾಡುತ್ತಿರುವ ದೃಶ್ಯ ಸೆರೆಯಾಗಿದೆ. 

ವೀಡಿಯೊ ವೀಕ್ಷಿಸಿ ....

 
 
 
 

 
 
 
 
 
 
 
 
 

OMG, I love the little mistake I did.😂

A post shared by Ayla (@_jump_to_the_stars_and_back_) on