US Green Card: ಭಾರತ, ಚೀನಾ, ಮೆಕ್ಸಿಕೊ ಮತ್ತು ಫಿಲಿಪೈನ್ಸ್‌ನ ಜನರು ಗ್ರೀನ್ ಕಾರ್ಡ್‌ಗಾಗಿ ದೀರ್ಘ ಮತ್ತು ಕಷ್ಟಕರ ಕಾಯುವಿಕೆಗೆ ಕಾರಣವೆಂದರೆ ಪ್ರತಿ ದೇಶಕ್ಕೆ ಅದರ ಹಂಚಿಕೆಯಲ್ಲಿ ನಿಗದಿಪಡಿಸಿದ ಕೋಟಾ ವ್ಯವಸ್ಥೆ, ಇದನ್ನು ಸಂಸತ್ತಿನಿಂದ ಮಾತ್ರ ಬದಲಾಯಿಸಬಹುದು ಎಂದು ಹಿರಿಯ ಯುಎಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಗ್ರೀನ್ ಕಾರ್ಡ್ ಅನ್ನು ಅಧಿಕೃತವಾಗಿ ಪರ್ಮನೆಂಟ್ ರೆಸಿಡೆಂಟ್ ಕಾರ್ಡ್ ಎಂದು ಕರೆಯಲಾಗುತ್ತದೆ. ಗ್ರೀನ್ ಕಾರ್ಡ್ ಎನ್ನುವುದು ಯುನೈಟೆಡ್ ಸ್ಟೇಟ್ಸ್‌ಗೆ ವಲಸೆ ಬಂದವರಿಗೆ ನೀಡಲಾಗುವ ದಾಖಲೆಯಾಗಿದ್ದು, ಗ್ರೀನ್ ಕಾರ್ಡ್ ಹೊಂದಿರುವವರು ಶಾಶ್ವತವಾಗಿ ದೇಶದಲ್ಲಿ ವಾಸಿಸಲು ಅನುಮತಿಸುವ ಒಂದು ಪುರಾವೆಯಾಗಿದೆ. ವಲಸೆ ಕಾನೂನಿನ ಅಡಿಯಲ್ಲಿ ಪ್ರತಿ ವರ್ಷ ಸುಮಾರು 1,40,000 ಉದ್ಯೋಗ ಆಧಾರಿತ ಗ್ರೀನ್ ಕಾರ್ಡ್‌ಗಳನ್ನು ನೀಡಲಾಗುತ್ತದೆ. ಆದರೂ ಕೂಡ, ಪ್ರತಿ ವರ್ಷ ಈ ದೇಶಗಳಲ್ಲಿ ಕೇವಲ ಏಳು ಪ್ರತಿಶತದಷ್ಟು ಗ್ರೀನ್ ಕಾರ್ಡ್‌ಗಳನ್ನು ಮಾತ್ರ ಪಡೆಯಬಹುದು.
ಭಾರತ ಸೇರಿದಂತೆ ಈ ದೇಶಗಳ ನಾಗರಿಕರು ದೀರ್ಘಕಾಲದಿಂದ ಕಾಯುತ್ತಿದ್ದಾರೆ
ಈ ಕುರಿತು ಮಾತನಾಡಿರುವ US ಪೌರತ್ವ ಮತ್ತು ವಲಸೆ ಸೇವೆಗಳ ನಿರ್ದೇಶಕರ ಹಿರಿಯ ಸಲಹೆಗಾರ ಡೌಗ್ಲಾಸ್ ರಾಂಡ್, US ನಲ್ಲಿ ಖಾಯಂ ನಿವಾಸಿಗಳ ಕುಟುಂಬ ಸದಸ್ಯರಿಗೆ ನೀಡಲಾದ ಹಸಿರು ಕಾರ್ಡ್‌ಗಳ ವಾರ್ಷಿಕ ಮಿತಿಯು ಇಡೀ ವಿಶ್ವಕ್ಕೆ 2,26,000 ಆಗಿದೆ, ಇನ್ನೊಂದೆಡೆ ಉದ್ಯೋಗ ಆಧಾರಿತ ಹಸಿರು ಕಾರ್ಡ್‌ಗಳ ಈ ವಾರ್ಷಿಕ ಮಿತಿ 1,40,000 ಆಗಿದೆ ಎಂದಿದ್ದಾರೆ.
ಇದಕ್ಕೆ ಸಂಬಂಧಿಸಿದಂತೆ ವೀಸಾ ಮತ್ತು ಕಾನ್ಸುಲರ್ ಸಮಸ್ಯೆಗಳ ಕುರಿತ ಆನ್‌ಲೈನ್ ಈವೆಂಟ್‌ನಲ್ಲಿ ಭಾರತೀಯ-ಅಮೆರಿಕನ್ನರನ್ನು ಉದ್ದೇಶಿಸಿ ಮಾತನಾಡಿರುವ ರಾಂಡ್ , ಕುಟುಂಬ ಸದಸ್ಯರಿಗೆ ಮತ್ತು ಉದ್ಯೋಗ ಆಧಾರಿತ ಗ್ರೀನ್ ಕಾರ್ಡ್‌ಗಳಲ್ಲಿ ಪ್ರತಿ ದೇಶಕ್ಕೆ ಶೇ. 7 ರಷ್ಟು ವಾರ್ಷಿಕ ಕೋಟಾ ನಿಗದಿಪಡಿಸಲಾಗಿದೆ ಎಂದಿದ್ದಾರೆ.
ಹೀಗಾಗಿ ಭಾರತ, ಚೀನಾ, ಮೆಕ್ಸಿಕೊ ಮತ್ತು ಫಿಲಿಪೈನ್ಸ್‌ನಲ್ಲಿರುವ ಜನರು ಇತರ ದೇಶಗಳ ಜನರಿಗಿಂತ ಹೆಚ್ಚು ಸಮಯ ಕಾಯಬೇಕಾಗಿದೆ ಎಂದು ರಾಂಡ್ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ್ದಾರೆ.
'ಯುಎಸ್ ಸಂಸತ್ತು ಮಾತ್ರ ಬದಲಾವಣೆಗಳನ್ನು ಮಾಡಬಹುದು'
'ದುರದೃಷ್ಟವಶಾತ್ US ಸಂಸತ್ತು ಮಾತ್ರ ಈ ವಾರ್ಷಿಕ ಮಿತಿಯನ್ನು ಬದಲಾಯಿಸಬಹುದು. ಈ ಗ್ರೀನ್ ಕಾರ್ಡ್‌ಗಳು ಲಭ್ಯವಿದ್ದಾಗ, ಅವುಗಳನ್ನು ಪ್ರತಿ ವರ್ಷವೂ ಬಳಸಲಾಗುತ್ತಿದೆ ಎಂಬುದನ್ನು ಖಚಿತಪಡಿಸುವುದು ಮಾತ್ರ ನಮ್ಮ ಕೆಲಸವಾಗಿದೆ' ಎಂದು ರಾಂಡ್ ಹೇಳಿದ್ದಾರೆ.
ಸಾವಿರಾರು ಭಾರತೀಯ ವೃತ್ತಿಪರರು ಗ್ರೀನ್ ಕಾರ್ಡ್‌ಗಾಗಿ ಕಾಯುತ್ತಿದ್ದಾರೆ
ಗಮನಾರ್ಹವಾಗಿ, ಸಾವಿರಾರು ಭಾರತೀಯ ವೃತ್ತಿಪರರು ಒಂದು ದಶಕಕ್ಕೂ ಹೆಚ್ಚು ಕಾಲ ಗ್ರೀನ್ ಕಾರ್ಡ್‌ಗಾಗಿ ಕಾಯುತ್ತಿದ್ದಾರೆ ಮತ್ತು ಕೆಲವೊಮ್ಮೆ ವೀಸಾಗಳಿಗಾಗಿ ಕಾಯುವಿಕೆ ಕೂಡ ವರ್ಷಗಳವರೆಗೆ ಇರುತ್ತದೆ.
ಇದನ್ನೂ ಓದಿ-Pakistan Crisis : 'ನನಗೆ ಭಯ ಉಂಟು ಮಾಡುವ ಕನಸುಗಳು ಬೀಳುತ್ತಿವೆ'
ಪ್ರತಿ ವರ್ಷ ಸುಮಾರು 7,000-8,000 ಉದ್ಯೋಗ ಆಧಾರಿತ ಹಸಿರು ಕಾರ್ಡ್‌ಗಳನ್ನು ಭಾರತದ ಜನರಿಗೆ ನೀಡಲಾಗುತ್ತದೆ. ಇದರಲ್ಲಿ, ಪ್ರಾಥಮಿಕ ಅರ್ಜಿದಾರರ ಕುಟುಂಬವನ್ನು ಅವಲಂಬಿಸಿರುವ ಜನರು ಸಹ ಸೇರಿದ್ದಾರೆ. ಭಾರತದಿಂದ ಸುಮಾರು 2,000 H-1B ವೀಸಾ ಅರ್ಜಿದಾರರು ಪ್ರತಿ ವರ್ಷ ಗ್ರೀನ್ ಕಾರ್ಡ್‌ಗಳನ್ನು ಪಡೆಯುತ್ತಾರೆ.
ಇದನ್ನೂ ಓದಿ-Ukraine Crisis: ರಷ್ಯಾಗೆ ಶಶ್ತ್ರಾಸ್ತ್ರ ಪೂರೈಕೆ ನಿಲ್ಲಿಸಲು ಚೀನಾ ಜೊತೆಗೆ ಮಾತುಕತೆ : ಪೆಂಟಾಗನ್
H-1B ವೀಸಾವು ವಲಸೆರಹಿತ ವೀಸಾ ಆಗಿದ್ದು ಅದು US ಕಂಪನಿಗಳಿಗೆ ಸೈದ್ಧಾಂತಿಕ ಅಥವಾ ತಾಂತ್ರಿಕ ಪರಿಣತಿಯ ಅಗತ್ಯವಿರುವ ಉದ್ಯೋಗಗಳಲ್ಲಿ ವಿದೇಶಿ ಉದ್ಯೋಗಿಗಳನ್ನು ನೇಮಿಸಿಕೊಳ್ಳಲು ಅನುವು ಮಾಡಿಕೊಡುತ್ತದೆ. ಭಾರತ ಮತ್ತು ಚೀನಾದಂತಹ ದೇಶಗಳಿಂದ ಪ್ರತಿ ವರ್ಷ ಸಾವಿರಾರು ಉದ್ಯೋಗಿಗಳನ್ನು ನೇಮಿಸಿಕೊಳ್ಳಲು ತಂತ್ರಜ್ಞಾನ ಕಂಪನಿಗಳು H-1B ವೀಸಾಗಳನ್ನು ಅವಲಂಬಿಸಿವೆ.
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ