World First Bitcoin City: ಇಲ್ಲಿ ನಿರ್ಮಾಣಗೊಳ್ಳಲಿದೆ ವಿಶ್ವದ ಮೊಟ್ಟಮೊದಲ Bitcoin City! ಈ ನಗರದಲ್ಲಿ ಆದಾಯ ತೆರಿಗೆ ಇಲ್ಲ

World First Bitcoin City: ಪ್ರಪಂಚದಾದ್ಯಂತ ಎಲ್ಲಿ ನೋಡಿದರಲೆಲ್ಲಾ ಬಿಟ್‌ಕಾಯಿನ್‌ ಝಣ-ಝಣ ಸದ್ದು ಕೇಳಿಸುತ್ತಿದೆ. ಏತನ್ಮಧ್ಯೆ, ಎಲ್ ಸಾಲ್ವಡಾರ್ ವಿಶ್ವದ ಮೊದಲ ಬಿಟ್‌ಕಾಯಿನ್ ನಗರವನ್ನು ನಿರ್ಮಿಸುವುದಾಗಿ ಘೋಷಿಸಿದೆ. ಈ ನಗರ ಜ್ವಾಲಾಮುಖಿಯ ಊರ್ಜೆಯಿಂದ ಚಾಲಿತವಾಗಿರಲಿದೆ. ಈ ನಗರದ ವಿಶೇಷತೆ ಕುರಿತು ತಿಳಿದುಕೊಳ್ಳೋಣ ಬನ್ನಿ.

Written by - Nitin Tabib | Last Updated : Nov 22, 2021, 09:43 PM IST
  • ಎಲ್ ಸಾಲ್ವಡಾರ್‌ನಲ್ಲಿ ನಿರ್ಮಾಣಗೊಳ್ಳುತ್ತಿದೆ ವಿಶ್ವದ ಮೊದಲ ಬಿಟ್‌ಕಾಯಿನ್ ನಗರ.

    ಎಲ್ ಸಾಲ್ವಡಾರ್ ಅಧ್ಯಕ್ಷ ನಯೀಬ್ ಬುಕೆಲೆ ಈ ಕುರಿತು ಘೋಷಿಸಿದ್ದಾರೆ.
  • ಈ ನಗರವು ಜ್ವಾಲಾಮುಖಿಗಳಿಂದ ಊರ್ಜೆಯನ್ನು ಪಡೆಯಲಿದೆ.
World First Bitcoin City: ಇಲ್ಲಿ ನಿರ್ಮಾಣಗೊಳ್ಳಲಿದೆ ವಿಶ್ವದ ಮೊಟ್ಟಮೊದಲ Bitcoin City! ಈ ನಗರದಲ್ಲಿ ಆದಾಯ ತೆರಿಗೆ ಇಲ್ಲ title=
World First Bitcoin City (File Photo)

ನವದೆಹಲಿ: World First Bitcoin City - ಬಿಟ್‌ಕಾಯಿನ್ ಸೇರಿದಂತೆ ಇತರ ಕ್ರಿಪ್ಟೋ ಕರೆನ್ಸಿಗಳಿಗೆ ಜಗತ್ತು ಹುಚ್ಚೆದ್ದು ಕುಣಿಯುತ್ತಿದೆ. ನೀವು ಬಿಟ್‌ಕಾಯಿನ್ (Bitcoin City el Salvador) ನ ಅಭಿಮಾನಿಯಾಗಿದ್ದರೆ, ನಿಮಗಾಗಿ ಇಲ್ಲಿದೆ ಒಂದು ಸಂದಸದ ಸುದ್ದಿ.  ದಕ್ಷಿಣ ಅಮೆರಿಕಾದ (South America) ಎಲ್ ಸಾಲ್ವಡಾರ್  (El-Salvador) ರಾಷ್ಟ್ರದ ಅಧ್ಯಕ್ಷ ನಯೀಬ್ ಬುಕೆಲೆ (Nayib Bukele) ಅವರು ವಿಶ್ವದ ಮೊದಲ 'ಬಿಟ್‌ಕಾಯಿನ್ ಸಿಟಿ' (World First Bitcoin City) ಅನ್ನು ದೇಶದಲ್ಲಿ ಸ್ಥಾಪಿಸಲಾಗುವುದು ಎಂದು ಘೋಷಿಸಿದ್ದಾರೆ.

ಈ ನಗರದಲ್ಲಿ (Bitcoin City) ಹಲವು ವಿಶೇಷತೆಗಳಿರಲಿವೆ. ಈ ನಗರದಲ್ಲಿ ಯಾರೂ ಆದಾಯ ತೆರಿಗೆ ಪಾವತಿಸಬೇಕಾಗಿಲ್ಲ. ನಗರವು ಜ್ವಾಲಾಮುಖಿಯಿಂದ ಶಕ್ತಿಯನ್ನು ಪಡೆಯಲಿದೆ ಮತ್ತು ಕ್ರಿಪ್ಟೋ ಕರೆನ್ಸಿ ಬಾಂಡ್‌ಗಳು (Cryptocurrency Bonds) ಇಲ್ಲಿ 'ಆದಾಯದ ಮೂಲ' ಆಗಿರಲಿವೆ. ಈ 'ಬಿಟ್‌ಕಾಯಿನ್ ಸಿಟಿ' ವಸತಿ ಮತ್ತು ವಾಣಿಜ್ಯ ಪ್ರದೇಶಗಳು, ಸೇವೆಗಳು, ಮ್ಯೂಸಿಯಂ, ವಿಮಾನ ನಿಲ್ದಾಣ, ಬಂದರು, ರೈಲು ಮತ್ತು ಮನರಂಜನೆಯಂತಹ ಪ್ರತಿಯೊಂದು ಸೌಲಭ್ಯವನ್ನು ಹೊಂದಿರಲಿದೆ

ರಾಷ್ಟ್ರಾಧ್ಯಕ್ಷರಿಂದ ಘೋಷಣೆ
ಅಧ್ಯಕ್ಷ ನಯೀಬ್ ಬುಕೆಲೆ ಬಿಟ್‌ಕಾಯಿನ್ ಮತ್ತು ಬ್ಲಾಕ್‌ಚೈನ್ ಸಮ್ಮೇಳನದಲ್ಲಿ ಈ ಘೋಷಣೆ ಮಾಡಿದ್ದಾರೆ. ಬಿಟ್‌ಕಾಯಿನ್ ಅನ್ನು ಕರೆನ್ಸಿಯಾಗಿ ಕಾನೂನುಬದ್ಧಗೊಳಿಸಿದ ಕಳೆದ ಎರಡು ದಶಕಗಳಿಂದ ಯುಎಸ್ ಡಾಲರ್ ಅನ್ನು ತನ್ನ ಕರೆನ್ಸಿಯಾಗಿ ಪರಿಗಣಿಸಿದ ವಿಶ್ವದ ಮೊದಲ ದೇಶ ಎಲ್ ಸಾಲ್ವಡಾರ್ ಆಗಿದೆ. ಅಂದರೆ, ಇಲ್ಲಿ ಕಾನೂನುಬದ್ಧವಾಗಿ ಬಿಟ್‌ಕಾಯಿನ್ ಕರೆನ್ಸಿಯಾಗಿದೆ. ಈ ಬಿಟ್‌ಕಾಯಿನ್ ನಗರ ಮತ್ತು ಬಿಟ್‌ಕಾಯಿನ್ ಗಣಿಗಾರಿಕೆಯು ಕೊಚಾಗುವಾ ಜ್ವಾಲಾಮುಖಿಯಿಂದ ಶಕ್ತಿಯನ್ನು ಪಡೆಯಲಿದೆ ಎಂದು ಬುಕೆಲೆ ಹೇಳಿದ್ದಾರೆ.

ಶೂನ್ಯ ಇಂಗಾಲದ ಹೊರಸೂಸುವಿಕೆ
ವಾಸ್ತವವಾಗಿ, ಬಿಟ್‌ಕಾಯಿನ್ ಗಣಿಗಾರಿಕೆಯ ಅಡಿಯಲ್ಲಿ, ಕಂಪ್ಯೂಟರ್‌ಗಳ ಸಹಾಯದಿಂದ ಗಣಿತದ ಸವಾಲುಗಳನ್ನು ಪರಿಹರಿಸುವ ಮೂಲಕ ಹೊಸ ಬಿಟ್‌ಕಾಯಿನ್‌ಗಳನ್ನು ರಚಿಸಲಾಗುತ್ತದೆ. ಈ ಸಂಪೂರ್ಣ ಪ್ರಕ್ರಿಯೆಗೆ ಹೆಚ್ಚಿನ ಶಕ್ತಿಯ ಅಗತ್ಯವಿರುತ್ತದೆ. ಎಲ್ ಸಾಲ್ವಡಾರ್‌ನಲ್ಲಿನ ಕೆಲವು ಶಕ್ತಿಯು ಭೂಶಾಖದ ಸಸ್ಯಗಳಿಂದ ಬರುತ್ತದೆ. ಇದು ಟೆಕಪಾ ಜ್ವಾಲಾಮುಖಿಯ ಸಹಾಯದಿಂದ ಶಕ್ತಿಯನ್ನು ಉತ್ಪಾದಿಸುತ್ತದೆ. ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಅಧ್ಯಕ್ಷರು, ಈ ನಗರದಲ್ಲಿ ಶೂನ್ಯ ಇಂಗಾಲದ ಹೊರಸೂಸುವಿಕೆ ಇರುತ್ತದೆ. ಅಂದರೆ, ಇಲ್ಲಿ ಯಾವುದೇ ಮಾಲಿನ್ಯ ಇರುವುದಿಲ್ಲ. ಇದು ಸಂಪೂರ್ಣ ಪರಿಸರ ಸ್ನೇಹಿ ನಗರವಾಗಲಿದೆ.

ಇದನ್ನೂ ಓದಿ-OMG..! ಮಾನವನ ಮೀಸೆಯಿಂದ ಈ ಸೂಟ್ ಸಿದ್ಧಗೊಂಡಿದೆಯಂತೆ! ಇಲ್ಲಿದೆ Mustache Suit Viral Video

ಬಿಟ್‌ಕಾಯಿನ್ ನಗರವು ಅದ್ಭುತವಾಗಿರುತ್ತದೆ
ಮೊದಲಿಗೆ ಟೆಕಾಪಾ ಸ್ಥಾವರದಿಂದ ನಗರಕ್ಕೆ ಚಾಲನೆ ನೀಡಲಾಗುವುದು, ನಂತರ ಕೊಂಚಗುವಾ ಸ್ಥಾವರವನ್ನು ಪ್ರಾರಂಭಿಸಲಾಗುವುದು ಎಂದು ಅಧ್ಯಕ್ಷರು ಹೇಳಿದ್ದಾರೆ. ಈ ಯೋಜನೆಗೆ ಹಣ ನೀಡಲು, ಎಲ್ ಸಾಲ್ವಡಾರ್ 2022 ರಲ್ಲಿ $1 ಬಿಲಿಯನ್ ಮೌಲ್ಯದ ಬಿಟ್‌ಕಾಯಿನ್ ಬಾಂಡ್‌ಗಳನ್ನು ವಿತರಿಸಲಿದೆ. ಅಂದರೆ, ಈ ನಗರದ ಆರಂಭವು ಬಿಟ್‌ಕಾಯಿನ್‌ನೊಂದಿಗೆ ಇರಲಿದೆ. ಬ್ಲಾಕ್‌ಸ್ಟ್ರೀಮ್ ಮುಖ್ಯ ಸ್ಟ್ರಾಟೆಜಿಸ್ಟ್ ಸ್ಯಾಮ್ಸನ್ ಮೌ ಅಧ್ಯಕ್ಷರೊಂದಿಗೆ ವೇದಿಕೆಯಲ್ಲಿ ಅರ್ಧದಷ್ಟು 'ಜ್ವಾಲಾಮುಖಿ ಬಾಂಡ್‌ಗಳನ್ನು' ಬಿಟ್‌ಕಾಯಿನ್‌ನಲ್ಲಿ ಬಳಸಲಾಗುವುದು ಎಂದು ಘೋಷಿಸಿದ್ದಾರೆ. 

ಇದನ್ನೂ ಓದಿ-Viral Video: ಗಡ್ಡದಿಂದ 63 ಕೆಜಿ ಮಹಿಳೆ ಎತ್ತಿ ಗಿನ್ನಿಸ್ ರೆಕಾರ್ಡ್ ಮಾಡಿದ ಭೂಪ..!

ಆದಾಯ ತೆರಿಗೆ ಇಲ್ಲ
ಉಳಿದ ಅರ್ಧದಷ್ಟು ಹಣವನ್ನು ಮೂಲಸೌಕರ್ಯ ಅಭಿವೃದ್ಧಿಗೆ ವಿನಿಯೋಗಿಸಲಾಗುವುದು ಎಂದು ಮೌ ವೇದಿಕೆಗೆ ತಿಳಿಸಿದ್ದಾರೆ. ಈ ಕುರಿತು ಮಾಹಿತಿ ನೀಡಿರುವ ಅವರು 'ಎಲ್ ಸಾಲ್ವಡಾರ್ ವಿಶ್ವದ ಆರ್ಥಿಕ ಕೇಂದ್ರವಾಗಲಿದೆ.' ಈ ಬಿಟ್‌ಕಾಯಿನ್ ನಗರದಲ್ಲಿ ವಾಸಿಸುವ ಜನರು ವ್ಯಾಟ್ ಅನ್ನು ಮಾತ್ರ ಪಾವತಿಸಬೇಕಾಗುತ್ತದೆ ಎಂದು ಅಧ್ಯಕ್ಷರು ಹೇಳಿದ್ದಾರೆ. ಅಂದರೆ, ಇಲ್ಲಿಯೂ ಯಾವುದೇ ಆದಾಯ ತೆರಿಗೆ ವಿಧಿಸಲಾಗುವುದಿಲ್ಲ. ಇಲ್ಲಿ ಕ್ಯಾಪಿಟಲ್ ಗೇನ್ಸ್ ತೆರಿಗೆ, ಆಸ್ತಿ ತೆರಿಗೆ, ವೇತನದಾರರ ತೆರಿಗೆ ಶೂನ್ಯವಾಗಿರುತ್ತದೆ. ಆದರೆ, ಇದರ ನಿರ್ಮಾಣ ಯಾವಾಗ ಆರಂಭವಾಗುತ್ತದೆ ಮತ್ತು ಯಾವಾಗ ಸಿದ್ಧವಾಗಲಿದೆ ಎಂಬುದು ಇನ್ನೂ ನಿರ್ಧಾರವಾಗಿಲ್ಲ.

ಇದನ್ನೂ ಓದಿ-Cow Dung Electricity: ಹಸುವಿನ ಸಗಣಿಯಿಂದ ವಿದ್ಯುತ್ ಶಕ್ತಿ ಉತ್ಪಾದನೆ! ಆಕಳ ಸಗಣಿಯಿಂದ ವರ್ಷವಿಡಿ 3 ಮನೆಗಳಿಗೆ ಬೆಳಕು

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News