Covid-19&Flu: Corona ಆತಂಕದ ನಡುವೆಯೇ ಎದುರಾದ ಹೊಸ ಅಪಾಯ, Twindemic ನಿಂದ ಪಾರಾಗುವುದು ಕಷ್ಟ!

Twindemic - ಇಡೀ ವಿಶ್ವ ಕೊರೊನಾ ವಿರುದ್ಧ ಹೋರಾಡುತ್ತಿದೆ. ಈ ಮಧ್ಯೆ ಫ್ಲೂವೊಂದು ಚಿಂತೆ ಹೆಚ್ಚಿಸುವ ಕೆಲಸ ಮಾಡುತ್ತಿದೆ. ತಜ್ಞರು ಹೇಳುವ ಪ್ರಕಾರ ಈ ಬಾರಿ ಸಾವಿನ ರಿಸ್ಕ್ ಡಬಲ್ ಇರಲಿದೆ ಎನ್ನಲಾಗಿದೆ.

Written by - Nitin Tabib | Last Updated : Oct 11, 2021, 07:32 PM IST
  • ಕೊರೊನಾ ಸಾಂಕ್ರಾಮಿಕದ ನಡುವೆಯೇ ಚಿಂತೆ ಹೆಚ್ಚಿಸಿದ ಫ್ಲೂ
  • ದುರ್ಬಲ ರೋಗನಿರೋಧಕ ಶಕ್ತಿ ಹಿನ್ನೆಲೆ ಸಾವಿನ ಅಪಾಯ ದ್ವಿಗುಣ
  • ಇದು ಇದುವರೆಗಿನ ಅತ್ಯಂತ ಕೆಟ್ಟ ಪರಿಸ್ಥಿತಿ ಎಂದ ಆರೋಗ್ಯ ತಜ್ಞರು.
Covid-19&Flu: Corona ಆತಂಕದ ನಡುವೆಯೇ ಎದುರಾದ ಹೊಸ ಅಪಾಯ, Twindemic ನಿಂದ ಪಾರಾಗುವುದು ಕಷ್ಟ! title=
Covid-19 & Flu Twindemic (Representational Image)

ಲಂಡನ್: Twindemic - ಕರೋನವೈರಸ್ (Coronavirus) ಮಹಾಮಾರಿಯ (Pandemic) ನಡುವೆಯೇ ಇದೀಗ  ತಜ್ಞರು 'Twindemic' ಬಗ್ಗೆ ಎಚ್ಚರಿಕೆ ನೀಡಿದ್ದಾರೆ. ಕರೋನಾದಿಂದಾಗಿ (Covid-19), ಜನರ ನೈಸರ್ಗಿಕ ರೋಗನಿರೋಧಕ ಶಕ್ತಿ ಕಡಿಮೆಯಾಗಿದೆ ಎಂದು ತಜ್ಞರು ಹೇಳಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಹರಡುವ ಫ್ಲೂ (Flu) ಅಪಾಯವನ್ನು ಹೆಚ್ಚಿಸಿದೆ. ತಜ್ಞರು ಫ್ಲೂ ಮತ್ತು ಕರೋನಗಳೆರಡನ್ನೂ ಒಟ್ಟಿಗೆ ಸೇರಿಸಿ 'ಟ್ವಿಂಡೆಮಿಕ್'  ಎಂದು ನಾಮಕರಣ ಮಾಡಿದ್ದಾರೆ.

ಸಾವಿನ ಅಪಾಯ ದುಪ್ಪಟ್ಟಾಗಿದೆ
ಫ್ಲೂ ಮತ್ತು ಕೋವಿಡ್ -19 ಎರಡರಿಂದಲೂ ಸಾವಿನ ಅಪಾಯ ಎರಡು ಪಟ್ಟು ಹೆಚ್ಚುತ್ತಿದೆ ಎಂದು ಆರೋಗ್ಯ ತಜ್ಞರು 'ಟ್ವಿಂಡೆಮಿಕ್' ಬಗ್ಗೆ ಎಚ್ಚರಿಕೆ ನೀಡಿದ್ದಾರೆ. 'ದಿ ಸನ್' ವರದಿ ಪ್ರಕಾರ, ಇಂಗ್ಲೆಂಡಿನಲ್ಲಿ ಪ್ರತಿ ಬಾರಿ ಸರಾಸರಿ 11,000 ಜನರು ಜ್ವರದಿಂದ ಸಾವನ್ನಪ್ಪುತ್ತಾರೆ. 2017-18ರಲ್ಲಿ ಫ್ಲೂ ಸಮಯದಲ್ಲಿ, ಈ ಅಂಕಿ ಅಂಶವು ದ್ವಿಗುಣಗೊಂಡಿದೆ, ಆ ಸಮಯದಲ್ಲಿ ನಿತ್ಯ ಸುಮಾರು 300 ಜನರ ಸಾವಿನ ಸಂಖ್ಯೆ ವರದಿಯಾಗಿತ್ತು. ಆದರೆ, ಈ ಬಾರಿ ಅಪಾಯ ಹೆಚ್ಚಾಗಿದೆ ಎಂದು ತಜ್ಞರು ಹೇಳಿದ್ದಾರೆ. 

ಇದನ್ನೂ ಓದಿ-Nobel Prize 2021: ಅಮೆರಿಕ ಮೂಲದ 3 ಆರ್ಥಿಕ ತಜ್ಞರಿಗೆ ಅರ್ಥಶಾಸ್ತ್ರಜ್ಞದ ನೊಬೆಲ್ ಪುರಸ್ಕಾರ

ಕಳೆದ 50 ವರ್ಷಗಳಲ್ಲೇ ಅತ್ಯಂತ ಕೆಟ್ಟ ಕಾಲ
ಈ ಬಾರಿ ಬ್ರಿಟನ್‌ನಲ್ಲಿ (Flu) ಫ್ಲೂನಿಂದ ಸಾವನ್ನಪ್ಪುವವರ ಸಂಖ್ಯೆ 60,000 ತಲುಪಬಹುದು ಎನ್ನಲಾಗಿದೆ. 50 ವರ್ಷಗಳಲ್ಲಿ ಬ್ರಿಟನ್ ಅತ್ಯಂತ ಕೆಟ್ಟ ಸಾವಿನ ಪ್ರಮಾಣವನ್ನು ಎದುರಿಸುತ್ತಿದೆ ಎನ್ನಲಾಗಿದೆ ಯುಕೆಯಲ್ಲಿ ಪ್ರಸ್ತುತ ದಿನಕ್ಕೆ 1,000 ಕ್ಕೂ ಹೆಚ್ಚು ಜನರು ಆಸ್ಪತ್ರೆಗೆ ದಾಖಲಾಗುತ್ತಿದ್ದು, ಅವರೆಲ್ಲರಿಗೂ ಫ್ಲೂ ಅಥವಾ ಇತರ ವೈರಸ್‌ ಸೋಂಕು ತಗುಲಿದೆ. ಪ್ರಸ್ತುತ, ಕರೋನವೈರಸ್ ಸೋಂಕಿನಿಂದಾಗಿ ಬ್ರಿಟನ್‌ನಲ್ಲಿ ದಿನಕ್ಕೆ 600 ಕ್ಕೂ ಹೆಚ್ಚು ಜನರು ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ, ಪ್ರತಿದಿನ ಸರಾಸರಿ 122 ಸಾವುಗಳು ವರದಿಯಾಗುತ್ತಿವೆ.

ಇದನ್ನೂ ಓದಿ-G20 Extraordinary Leaders' Summit: G20 ನಾಯಕತ್ವದ ಶೃಂಗಸಭೆಯಲ್ಲಿ ಭಾಗವಹಿಸಲಿರುವ ಪ್ರಧಾನಿ ಮೋದಿ

ಇದರಿಂದ ಪಾರಾಗುವ ಉಪಾಯ ಏನು?
ಬ್ರಿಟಿಷ್ ಸರ್ಕಾರವು ಕರೋನಾದ ಮಧ್ಯೆಯೇ ಫ್ಲೂ ವಿರುದ್ಧ ಇದುವರೆಗಿನ ದೊಡ್ಡ ಅಭಿಯಾನವನ್ನು ಆರಂಭಿಸಿದೆ. ಬ್ರಿಟಿಷ್ ಮೆಡಿಕಲ್ ಜರ್ನಲ್ (ಬಿಎಂಜೆ) ನಲ್ಲಿ ಪ್ರಕಟವಾದ ವರದಿಯು ಕೋವಿಡ್ ಮತ್ತು ಫ್ಲೂ ಎರಡರ ಏಕಕಾಲಿಕ ದಾಳಿಯಿಂದಾಗಿ ಜನರಲ್ಲಿ ಸಾವಿನ ಅಪಾಯ ದ್ವಿಗುಣಗೊಂಡಿದೆ ಎಂದು ಹೇಳಿದೆ. ಕರೋನಾದಿಂದಾಗಿ, ಫ್ಲೂ ಲಸಿಕೆಗಳು ಮೊದಲಿಗಿಂತ  ಕಡಿಮೆ ಪರಿಣಾಮಕಾರಿ ಸಾಬೀತಾಗುತ್ತಿವೆ ಎಂದು ವಿಜ್ಞಾನಿಗಳು ಅನುಮಾನ ವ್ಯಕ್ತಪಡಿಸಿದ್ದಾರೆ. ಏಜ್ ಯುಕೆ ನಿರ್ದೇಶಕಿ ಕ್ಯಾರೋಲಿನ್ ಅಬ್ರಹಾಂ ಹೇಳುವ ಪ್ರಕಾರ, 'ಈ ವರ್ಷ ಫ್ಲೂ ಲಸಿಕೆ ಮತ್ತು ಕೋವಿಡ್ -19 ನ ಬೂಸ್ಟರ್ ಡೋಸ್ ಪಡೆಯುವುದು ಹೆಚ್ಚು ಮುಖ್ಯವಾಗಿದೆ' ಎಂದು ಹೇಳಿದ್ದಾರೆ. ತಜ್ಞರ ಪ್ರಕಾರ, ಎರಡೂ ರೋಗಗಳ ಏಕಕಾಲಿಕ ದಾಳಿಯು ಭಯಾನಕ ಪರಿಸ್ಥಿತಿಯನ್ನು ಸೃಷ್ಟಿಸಬಹುದು ಎನ್ನಲಾಗಿದೆ.

ಇದನ್ನೂ ಓದಿ-ಚೀನಾದೊಂದಿಗೆ 13 ನೇ ಸುತ್ತಿನ ಮಿಲಿಟರಿ ಮಾತುಕತೆ ನಡೆಸಿದ ಭಾರತ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News