Xi Jinping Third Term: ದಾಖಲೆಯ 3ನೇ ಅವಧಿಗೆ ಅಧ್ಯಕ್ಷರಾದ ಕ್ಸಿ ಜಿನ್‌ಪಿಂಗ್! ವಿಶ್ವಕ್ಕೆ ಕೊಟ್ರು ಕಠಿಣ ಸಂದೇಶ

Xi Jinping Chinese President : ಮಾವೊ ನಂತರ ಚೀನಾದ ಅಧ್ಯಕ್ಷರಾಗಿ ಮೂರನೇ ಬಾರಿಗೆ ಆಯ್ಕೆಯಾದ ಎರಡನೇ ನಾಯಕ ಕ್ಸಿ ಜಿನ್‌ಪಿಂಗ್ ಆಗಿದ್ದಾರೆ. ಚೀನಾದಲ್ಲಿ ಸರ್ವಾಧಿಕಾರದ ಹೊಸ ಯುಗ ಆರಂಭವಾಗಿದೆ.   

Written by - Chetana Devarmani | Last Updated : Oct 23, 2022, 12:04 PM IST
  • ದಾಖಲೆಯ 3ನೇ ಅವಧಿಗೆ ಅಧ್ಯಕ್ಷರಾದ ಕ್ಸಿ ಜಿನ್‌ಪಿಂಗ್
  • ಮಾವೊ ನಂತರ ಮೂರನೇ ಬಾರಿಗೆ ಚೀನಾ ಅಧ್ಯಕ್ಷರಾದ ಎರಡನೇ ನಾಯಕ
  • ಚೀನಾದಲ್ಲಿ ಸರ್ವಾಧಿಕಾರದ ಹೊಸ ಯುಗ ಆರಂಭ
Xi Jinping Third Term: ದಾಖಲೆಯ 3ನೇ ಅವಧಿಗೆ ಅಧ್ಯಕ್ಷರಾದ ಕ್ಸಿ ಜಿನ್‌ಪಿಂಗ್! ವಿಶ್ವಕ್ಕೆ ಕೊಟ್ರು ಕಠಿಣ ಸಂದೇಶ  title=
ಕ್ಸಿ ಜಿನ್‌ಪಿಂಗ್

Xi Jinping Chinese President : ಕ್ಸಿ ಜಿನ್‌ಪಿಂಗ್ ಅವರನ್ನು ಮತ್ತೊಮ್ಮೆ ಚೀನಾದ ಅಧ್ಯಕ್ಷರಗಿ ಅಧಿಕಾರವಹಿಸಿಕೊಂಡಿದ್ದಾರೆ. ಕಮ್ಯುನಿಸ್ಟ್ ಪಾರ್ಟಿ ಆಫ್ ಚೀನಾ (ಸಿಪಿಸಿ) ಸಭೆಯಲ್ಲಿ ಕ್ಸಿ ಜಿನ್‌ಪಿಂಗ್ ಅವರು ಚೀನಾದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಚೀನಾದ ಅಧ್ಯಕ್ಷರಾಗಿ ಕ್ಸಿ ಜಿನ್‌ಪಿಂಗ್ ಅವರ ಅವಧಿಯನ್ನು ಇನ್ನೂ 5 ವರ್ಷಗಳವರೆಗೆ ವಿಸ್ತರಿಸಲಾಗಿದೆ. ಜಿನ್‌ಪಿಂಗ್ ಮೂರನೇ ಬಾರಿಗೆ ಅಧ್ಯಕ್ಷರಾದ ನಂತರ ಚೀನಾದಲ್ಲಿ ಹೊಸ ಸರ್ವಾಧಿಕಾರಿ ಯುಗ ಪ್ರಾರಂಭವಾಗಿದೆ. ಅಧ್ಯಕ್ಷರಾದ ನಂತರ ಜಿನ್‌ಪಿಂಗ್ ಅವರು ಜಗತ್ತಿಗೆ ಚೀನಾದ ಅಗತ್ಯವಿದೆ ಎಂದು ಹೇಳಿದರು.

ಇದನ್ನೂ ಓದಿ : Rishi Sunak : ಬ್ರಿಟನ್ ಪ್ರಧಾನಿಯಾಗುತ್ತಾರೆ ಭಾರತ ಮೂಲದ ರಿಷಿ ಸುನಕ್!?

ಪಕ್ಷದ ಸಂಸ್ಥಾಪಕ ಮಾವೋ ಝೆಡಾಂಗ್ ನಂತರ ಮೂರನೇ ಅವಧಿಗೆ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾದ ಚೀನಾದ ಎರಡನೇ ನಾಯಕ ಕ್ಸಿ ಜಿನ್‌ಪಿಂಗ್ ಆಗಿದ್ದಾರೆ. ಚೀನಾದ ಕಮ್ಯುನಿಸ್ಟ್ ಪಕ್ಷದ ಎರಡನೇ ನಾಯಕ ಮತ್ತು ಪ್ರಧಾನ ಮಂತ್ರಿ ಲಿ ಕ್ವಿಂಗ್ ಸೇರಿದಂತೆ ಹೆಚ್ಚಿನ ಹಿರಿಯ ನಾಯಕರು ನಿವೃತ್ತರಾಗಿದ್ದಾರೆ ಅಥವಾ ಕೇಂದ್ರ ಸಮಿತಿಗೆ ಬರಲು ಸಾಧ್ಯವಾಗಿಲ್ಲ ಎಂಬುದನ್ನು ತಿಳಿದಿರಲಿ. ಈ ಕಾರಣದಿಂದಾಗಿ, ಚೀನಾದ ರಾಜಕೀಯ ಮತ್ತು ಸರ್ಕಾರದಲ್ಲಿ ದೊಡ್ಡ ಕೋಲಾಹಲ ಉಂಟಾಯಿತು.

ಗಮನಾರ್ಹವೆಂದರೆ, 5 ವರ್ಷಕ್ಕೊಮ್ಮೆ ನಡೆಯಲಿರುವ ಕೇಂದ್ರ ಸಮಿತಿಯ ಸಭೆಯಲ್ಲಿ, 25 ಸದಸ್ಯರ ರಾಜಕೀಯ ಬ್ಯೂರೋವನ್ನು ಭಾನುವಾರ ಆಯ್ಕೆ ಮಾಡಲಾಯಿತು, ಇದು ದೇಶವನ್ನು ಆಳುವ ಸ್ಥಾಯಿ ಸಮಿತಿ ಸದಸ್ಯರನ್ನು ಆಯ್ಕೆ ಮಾಡಿದೆ. ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾದ ತಕ್ಷಣವೇ ಹೊಸದಾಗಿ ಆಯ್ಕೆಯಾದ ಸ್ಥಾಯಿ ಸಮಿತಿಯೊಂದಿಗೆ ಕ್ಸಿ ಜಿನ್‌ಪಿಂಗ್ ಭಾನುವಾರ ಮಾಧ್ಯಮಗಳ ಮುಂದೆ ಕಾಣಿಸಿಕೊಂಡರು.

ಇದನ್ನೂ ಓದಿ : ಪ್ರಧಾನಿ ಲಿಸ್ ಟ್ರಸ್ ರಾಜೀನಾಮೆ ನಂತರ ಕುತೂಹಲ ಕೆರಳಿಸಿದ ಇಂಗ್ಲೆಂಡ್ ಪಾಲಿಟಿಕ್ಸ್

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News