"ನೀವು ಪ್ರಧಾನಿಯಾಗುವ ಮೊದಲು ಪಾಕಿಸ್ತಾನ ಚೆನ್ನಾಗಿತ್ತು...!"

ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅವರ ಮಾಜಿ ಪತ್ನಿ ರೆಹಮ್ ಖಾನ್ ಇಂದು ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ ಮತ್ತು ಇಮ್ರಾನ್ ಖಾನ್ ಸೃಷ್ಟಿಸಿರುವ ಅವ್ಯವಸ್ಥೆಯನ್ನು ಸ್ವಚ್ಛಗೊಳಿಸಲು ದೇಶದ ಜನರು ಒಟ್ಟಾಗಿ ನಿಲ್ಲುವತ್ತ ಗಮನ ಹರಿಸಬೇಕು ಎಂದು ಹೇಳಿದ್ದಾರೆ.

Written by - Zee Kannada News Desk | Last Updated : Apr 1, 2022, 05:38 PM IST
  • ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅವರ ಮಾಜಿ ಪತ್ನಿ ರೆಹಮ್ ಖಾನ್ ಇಂದು ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
  • ಇಮ್ರಾನ್ ಖಾನ್ ಸೃಷ್ಟಿಸಿರುವ ಅವ್ಯವಸ್ಥೆಯನ್ನು ಸ್ವಚ್ಛಗೊಳಿಸಲು ದೇಶದ ಜನರು ಒಟ್ಟಾಗಿ ನಿಲ್ಲುವತ್ತ ಗಮನ ಹರಿಸಬೇಕು ಎಂದು ಹೇಳಿದ್ದಾರೆ.
"ನೀವು ಪ್ರಧಾನಿಯಾಗುವ ಮೊದಲು ಪಾಕಿಸ್ತಾನ ಚೆನ್ನಾಗಿತ್ತು...!" title=

ನವದೆಹಲಿ: ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅವರ ಮಾಜಿ ಪತ್ನಿ ರೆಹಮ್ ಖಾನ್ ಇಂದು ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ ಮತ್ತು ಇಮ್ರಾನ್ ಖಾನ್ ಸೃಷ್ಟಿಸಿರುವ ಅವ್ಯವಸ್ಥೆಯನ್ನು ಸ್ವಚ್ಛಗೊಳಿಸಲು ದೇಶದ ಜನರು ಒಟ್ಟಾಗಿ ನಿಲ್ಲುವತ್ತ ಗಮನ ಹರಿಸಬೇಕು ಎಂದು ಹೇಳಿದ್ದಾರೆ.

ಇಮ್ರಾನ್ ಖಾನ್ ಅವರು "ನಯಾ ಪಾಕಿಸ್ತಾನ" ರಚಿಸುವ ಭರವಸೆಯೊಂದಿಗೆ 2018 ರಲ್ಲಿ ಅಧಿಕಾರಕ್ಕೆ ಬಂದರು.ಆದರೆ ಸರಕುಗಳ ಬೆಲೆಗಳನ್ನು ನಿಯಂತ್ರಿಸುವ ಮೂಲ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಸಂಪೂರ್ಣವಾಗಿ ವಿಫಲರಾದರು.ಆ ಮೂಲಕ ಅವರು ಪ್ರತಿಪಕ್ಷಗಳ ಟೀಕೆಗೆ ಗುರಿಯಾದರು ಎಂದು ರೆಹಂ ಖಾನ್ ಅವರು ಇಮ್ರಾನ್ ಖಾನ್ ವಿರುದ್ಧ ಕಿಡಿ ಕಾರಿದ್ದಾರೆ.

ಇದನ್ನೂ ಓದಿ: ನ್ಯಾಯಾಲಯ ತಲುಪಿದ ‘ಮೇಕೆ’ ಪ್ರಕರಣ!: ನ್ಯಾಯಾಧೀಶರ ತೀರ್ಪು ಏನು ಗೊತ್ತಾ?

ಈ ಕುರಿತಾಗಿ ಟ್ವೀಟ್ ಮಾಡಿರುವ ರೆಹಂ ಖಾನ್ (Reham Khan) ಅವರು"ಇಮ್ರಾನ್ ಇತಿಹಾಸ!! ನಯಾ ಪಾಕಿಸ್ತಾನದ ಅವ್ಯವಸ್ಥೆಯನ್ನು ಸ್ವಚ್ಛಗೊಳಿಸಲು ನಾವು ಒಟ್ಟಾಗಿ ನಿಲ್ಲುವತ್ತ ಗಮನಹರಿಸಬೇಕು ಎಂದು ನಾನು ಭಾವಿಸುತ್ತೇನೆ." ಎಂದು ಹೇಳಿದ್ದಾರೆ.

ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಿದ ಭಾಷಣದಲ್ಲಿ ಇಮ್ರಾನ್ ಖಾನ್ ಅವರು ದೇವರ ದಯೆಯಿಂದ ಅವರು ಜೀವನದಲ್ಲಿ ಎಲ್ಲವನ್ನೂ ಸಾಧಿಸಿರುವುದರಿಂದ ಅವರಿಗೆ ಬುದ್ದಿವಂತಿಕೆ ಮತ್ತು ಸಾಮರ್ಥ್ಯ ಇಲ್ಲ ಎಂದು ರೆಹಂಖಾನ್ ಅವರು ಹೇಳಿದ್ದಾರೆ. ಇನ್ನೂ ಮುಂದುವರೆದು ಬಾಲ್ಯದಲ್ಲಿ ಪಾಕಿಸ್ತಾನವು ಉನ್ನತ ಮಟ್ಟಕ್ಕೆ ಇರುವುದನ್ನು ನೋಡಿದ್ದೇನೆ ಎಂದು ಇಮ್ರಾನ್ ಖಾನ್ ಹೇಳಿರುವ ಮಾತಿಗೆ ಸಮ್ಮತಿ ವ್ಯಕ್ತಪಡಿಸಿದ ರೆಹಂಖಾನ್. "ಹೌದು, ನೀವು ಪ್ರಧಾನಿಯಾಗಿಲ್ಲದಿದ್ದಾಗ ಪಾಕಿಸ್ತಾನ ಅದ್ಭುತವಾಗಿತ್ತು " ಎಂದು ಇಮ್ರಾನ್ ಖಾನ್ ಅವರ ಭಾಷಣವನ್ನು ಟೀಕಿಸಿದ್ದಾರೆ.

ಇದನ್ನೂ ಓದಿ: ಆರ್ಥಿಕ ಬಿಕ್ಕಟ್ಟು : ರಾತ್ರೋರಾತ್ರಿ ಶ್ರೀಲಂಕಾ ಅಧ್ಯಕ್ಷರ ಮನೆ ಮುಂದೆ ಭಾರಿ ಪ್ರತಿಭಟನೆ

ಇನ್ನೊಂದೆಡೆಗೆ ಪ್ರಧಾನಿ ಇಮ್ರಾನ್ ಖಾನ್ ಅವರು ಕೊನೆಯ ಎಸೆತದವರೆಗೂ ಆಡುವುದಾಗಿ ಹೇಳುವ ಮೂಲಕ ಪ್ರಧಾನಿ ಹುದ್ದೆಯಿಂದ ನಿರ್ಗಮಿಸುವುದನ್ನು ನಿರಾಕರಿಸಿದ್ದಾರೆ.ಯಾರಾದರೂ ರಾಜೀನಾಮೆ ಕೇಳಿದರೆ ಅದಕ್ಕೆ ನಾನು ರಾಜೀನಾಮೆ ನೀಡಬೇಕೆ ? ನಾನು 20 ವರ್ಷಗಳಿಂದ ಕ್ರಿಕೆಟ್ ಆಡಿದ್ದೇನೆ ಮತ್ತು ಕೊನೆಯ ಎಸೆತದವರೆಗೂ ನಾನು ಆಡಿದ್ದೇನೆ.ನನ್ನ ಜೀವನದಲ್ಲಿ ನಾನು ಎಂದಿಗೂ ಬಿಟ್ಟುಕೊಟ್ಟಿಲ್ಲ.ಹಾಗಾಗಿ ನೀವು ನಾನು ಹಾಗೆಯೇ ಮಾಡುತ್ತೇನೆ ಎನ್ನುವುದನ್ನು ನೀವು ನೋಡಲಿದ್ದಿರಿ.ಅವಿಶ್ವಾಸಮತದ ಗೊತ್ತುವಳಿ ಏನೇ ಇರಲಿ, ಆದರೆ ಇದಾದ ಬಳಿಕ ನಾನು ಇನ್ನೂ ಶಕ್ತಿಶಾಲಿಯಾಗಿ ಹೊರಹೊಮ್ಮುತ್ತೇನೆ"ಎಂದು ಅವರು ಹೇಳಿದರು.

ನಿನ್ನೆ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಿದ ಭಾಷಣದಲ್ಲಿ ಇಮ್ರಾನ್ ಖಾನ್ ಕಳೆದುಹೋಗಿರುವ ಪಾಕಿಸ್ತಾನದ ಗತವೈಭವದ ಕುರಿತಾಗಿ ಮಾತನಾಡುತ್ತಿದ್ದರು.ಮಲೇಷಿಯಾದ ರಾಜಕುಮಾರರು ತಮ್ಮೊಂದಿಗೆ ಶಾಲೆಯಲ್ಲಿ ಓದುತ್ತಿದ್ದರು ಎಂದು ಅವರು ಭಾಷಣದಲ್ಲಿ ಪ್ರಸ್ತಾಪಿಸಿದರು.

"ನಾವು ಹೇಗೆ ಪ್ರಗತಿ ಸಾಧಿಸಿದ್ದೇವೆ ಎಂದು ತಿಳಿಯಲು ದಕ್ಷಿಣ ಕೊರಿಯಾ ಪಾಕಿಸ್ತಾನಕ್ಕೆ ಬಂದಿತ್ತು. ಮಧ್ಯಪ್ರಾಚ್ಯ ದೇಶಗಳು ನಮ್ಮ ವಿಶ್ವವಿದ್ಯಾಲಯಗಳಿಗೆ ಬರುತ್ತಿದ್ದವು. ಇದೆಲ್ಲವೂ ಮುಳುಗುವುದನ್ನು ನಾನು ನೋಡಿದ್ದೇನೆ, ನನ್ನ ದೇಶವನ್ನು ಅವಮಾನಿಸುವುದನ್ನು ನಾನು ನೋಡಿದ್ದೇನೆ" ಎಂದು ಅವರು ಹೇಳಿದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

 

 

Trending News