'Yoga Not Born In India': 'ಭಾರತದಲ್ಲಿ ಯೋಗದ ಉಗಮವಾಗಿಲ್ಲ', ನೇಪಾಳ ಪ್ರಧಾನಿ KP Sharma Oli ಗೂಗ್ಲಿ

'Yoga Not Born In India' - ಇದಕ್ಕೂ ಮೊದಲೂ ಕೂಡ ನೇಪಾಳದ ಪ್ರಧಾನಿ KP ಶರ್ಮಾ ಓಲಿ ವಿವಾದಾತ್ಮಕ ಟಿಪ್ಪಣಿಗಳನ್ನು ಮಾಡಿದ್ದಾರೆ. ಇದಕ್ಕೂ ಶ್ರೀರಾಮಚಂದ್ರ ಭಾರತದ ಅಯೋಧ್ಯೆಯಲ್ಲಿ ಅಲ್ಲ ನೇಪಾಳದ ಚಿತವನ್ ಜಿಲ್ಲೆಯ ಅಯೋಧ್ಯಾಪುರಿ ಹೆಸರಿನಿಂದ ಗುರುತಿಸಲಾಗುವ ಮಾಡಿ ಕ್ಷೇತ್ರದಲ್ಲಿ ಜನಿಸಿದ್ದಾನೆ ಎಂದು ಹೇಳಿ ಓಲಿ ವಿವಾದ ಸೃಷ್ಟಿಸಿದ್ದ.

Written by - Nitin Tabib | Last Updated : Jun 21, 2021, 10:14 PM IST
  • ಯೋಗ ಭಾರತದಲ್ಲಿ ಹುಟ್ಟಿಲ್ಲ.
  • ನೇಪಾಳ ಪ್ರಧಾನಿ ಕೆಪಿ ಶರ್ಮಾ ಓಲಿಯಿಂದ ಮತ್ತೊಂದು ವಿವಾದಾತ್ಮಕ ಟಿಪ್ಪಣಿ.
  • ಆಯುರ್ವೇದದ ಉಗಮ ಕೂಡ ಭಾರತದಲ್ಲಾಗಿಲ್ಲ ಎಂದ ಓಲಿ
'Yoga Not Born In India': 'ಭಾರತದಲ್ಲಿ ಯೋಗದ ಉಗಮವಾಗಿಲ್ಲ', ನೇಪಾಳ ಪ್ರಧಾನಿ KP Sharma Oli ಗೂಗ್ಲಿ title=
Yoga Not Born In India (File Photo)

ಕಾಟ್ಮಂಡು: 'Yoga Not Born In India' - ವಿಶ್ವಾದ್ಯಂತ ಇಂದು ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು (International Yoga Day 2021) ಆಚರಿಸಲಾಗಿದೆ. ಏತನ್ಮಧ್ಯೆ ನೇಪಾಳದ ಪ್ರಧಾನಿ ಕೆ.ಪಿ ಶರ್ಮಾ ಓಲಿ (Nepal CM KP Sharma Oli) ಮತ್ತೊಮ್ಮೆ ವಿವಾದಾತ್ಮಕ ಹೇಳಿಕೆಯೊಂದನ್ನು ನೀಡಿದ್ದಾರೆ. ಈ ವೇಳೆ ಅವರು ಯೋಗದ ಉಗಮ ಭಾರತದಲ್ಲಿ ಅಲ್ಲ ನೇಪಾಳದಲ್ಲಾಗಿದೆ ಎಂದು ಹೇಳಿದ್ದಾರೆ. ಇದಲ್ಲದೆ ಅವರು, ಶ್ರೀರಾಮ (Lord Ram) ಕೂಡ ನೇಪಾಳದಲ್ಲಿ ಜನಿಸಿದ್ದಾನೆ ಎಂಬ ತಮ್ಮ ವಿವಾದಾತ್ಮಕ ಹೇಳಿಕೆಯನ್ನು ಕೂಡ ಪುನರುಚ್ಚರಿಸಿದ್ದಾರೆ.

ಯೋಗದ ಉಗಮ ನೇಪಾಳ (Nepal) ಅಥವಾ ಉತ್ತರಾಖಂಡ್ (Uttarakhand) ಅಕ್ಕಪಕ್ಕದಲ್ಲಾಗಿದೆ
ನೇಪಾಳದ ಪ್ರಧಾನಿ ಕೆ. ಪಿ. ಶರ್ಮಾ ಒಲಿ ಅವರು ಅಂತರರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ(International Yoga Day 2021) ತಮ್ಮ ಭಾಷಣದಲ್ಲಿ, ಭಾರತವು ರಾಷ್ಟ್ರವಾಗಿ ಅಸ್ತಿತ್ವಕ್ಕೆ ಬರುವ  ಬಹಳ ಹಿಂದೆಯೇ, ನೇಪಾಳದಲ್ಲಿ ಯೋಗಾಭ್ಯಾಸ ನಡೆಸಲಾಗುತ್ತಿತ್ತು ಎಂದಿದ್ದಾರೆ. ಹೀಗಾಗಿ ಭಾರತದಲ್ಲಿ ಯೋಗ ಹುಟ್ಟಿಕೊಂಡಿಲ್ಲ ಎಂದು ಅವರು ತಮ್ಮ ವಾದ ಮಂಡಿಸಿದ್ದಾರೆ. ಯೋಗ ಹುಟ್ಟಿಕೊಂಡಾಗ ಭಾರತ ಇನ್ನೂ ರೂಪವೇ ತಳೆದಿರಲಿಲ್ಲ. ನೇಪಾಳದಲ್ಲಿ ಯೋಗ ಕಾರ್ಯರೂಪಕ್ಕೆ ಬರುವ ಸಮಯದಲ್ಲಿ ಅನೇಕ ಸೀಮಂತ  ರಾಜ್ಯಗಳು ಇದ್ದ ಕಾರಣ ಭಾರತದಂತಹ ದೇಶವೇ ಇರಲಿಲ್ಲ. ಆದ್ದರಿಂದ ಯೋಗವು ನೇಪಾಳ ಅಥವಾ ಉತ್ತರಾಖಂಡದ ಅಕ್ಕಪಕ್ಕದಲ್ಲಿ ಹುಟ್ಟಿಕೊಂಡಿದೆ ಎಂದು ಅವರು ವಾದಿಸಿದ್ದಾರೆ.

ಭಾರತದ ಪ್ರಧಾನಿಗಳು ಅದಕ್ಕೆ ಜಾಗತಿಕ ಪ್ರಸಿದ್ಧಿ ನೀಡಿದ್ದಾರೆ
ಯೋಗವನ್ನು ಕಂಡು ಹಿಡಿದ ಋಷಿಮುನಿಗಳಿಗೆ ನಾವು ಎಂದಿಗೂ ಮನ್ನಣೆ ನೀಡಿಲ್ಲ. ನಾವು ಯಾವಾಗಲು ಈ ಅಥವಾ ಆ ಪ್ರಾಧ್ಯಾಪಕರು ಅಥವಾ ಅವರ ಕೊಡುಗೆಯ ಕುರಿತು ಮಾತನಾಡುತ್ತೇವೆ. ನಾವು ನಮ್ಮ ವಾದವನ್ನು ಸರಿಯಾಗಿ ಮಂಡಿಸಿಲ್ಲ. ನಾವು ಅದನ್ನು ವಿಶ್ವಾದ್ಯಂತ ಕೊಂಡೊಯ್ಯಲು ವಿಫಲರಾಗಿದ್ದೇವೆ. ಆದರೆ, ಭಾರತೀಯ ಪ್ರಧಾನಿ ನರೇಂದ್ರ ಮೋದಿ ಅವರು ವರ್ಷದ ಅತಿ ದೊಡ್ಡ ದಿನವಾಗಿರುವ ಜೂನ್ 21 ರಂದು ಅಂತರರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಿಸುವ ಪ್ರಸ್ತಾವನೆಯನ್ನು ನೀಡಿ ಅದನ್ನು ಪ್ರಶಿದ್ಧಗೊಳಿಸಿದ್ದಾರೆ ಮತ್ತು ಆ ನಂತರ ಅದಕ್ಕೆ ಅಂತರಾಷ್ಟ್ರೀಯ ಮನ್ನಣೆ ದೊರೆತಿದೆ ಎಂದು ಒಲಿ ಹೇಳಿದ್ದಾರೆ.

ಈ ಮೊದಲು ಕೂಡ ವಿವಾದಾತ್ಮಕ ಹೇಳಿಕೆ ನೀಡಿದ್ದ ಒಲಿ
ಈ ಹಿಂದೆಯೂ ಕೂಡ ಓಲಿ ಭಾರತಕ್ಕೆ ಸಂಬಂಧಿಸಿದಂತೆ ವಿವಾದಾತ್ಮಕ ಹೇಳಿಕೆ ನೀಡಿ ವಿವಾದ ಸೃಷ್ಟಿಸಿದ್ದರು. ಈ ಮೊದಲು ಹೇಳಿಕೆ ನೀಡಿದ್ದ ಅವರು, ಶ್ರೀರಾಮ ಚಂದ್ರನ ಜನ್ಮ ಭಾರತದ ಅಯೋದ್ಯೆಯಲ್ಲಿ ಆಗಿಲ್ಲ ಮತ್ತು ಆತ ಜನಿಸಿದ್ದು ನೇಪಾಲದ ಅಯೋದ್ಯಾಪುರಿ ಎಂದು ಕರೆಯಲ್ಪಡುವ ಚಿತವನ್ ಜಿಲ್ಲೆಯ ಮಾಡಿ ಎಂಬ ಪ್ರದೇಶದಲ್ಲಿ ಎಂದು ಹೇಳುವ ಮೂಲಕ ವಿವಾದ ಹುಟ್ಟುಹಾಕಿದ್ದರು. ಈ ವೇಳೆ ಅವರು ಶ್ರೀರಾಮ, ಸೀತಾ ಮಾತೆ ಹಾಗೂ ಲಕ್ಷ್ಮಣ ಮತ್ತು ಇತರರ ಬೃಹತ್ ದೇವಾಲಯಗಳನ್ನು ಸಹ ನಿರ್ಮಿಸಲು ಆದೇಶಿಸಿ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದರು. ಅಯೋಧ್ಯಾಪುರಿ ನೇಪಾಳದಲ್ಲಿದೆ, ನೇಪಾಲದ ವಾಲ್ಮೀಕಿ ಆಶ್ರಮಕ್ಕೆ ಹತ್ತಿರವಿರುವ ದೇವ್ ಘಾಟ್ ನಲ್ಲಿ ಸೀತಾ ಮಾತೆ ನಿಧನರಾಗಿದ್ದರು ಎಂದು ಓಲಿ ತನ್ನ ವಿವಾದಾತ್ಮಕ ವಾದ ಮಂಡಿಸಿದ್ದರು.

ಇದನ್ನೂ ಓದಿ-China's Cyber Attack On India: ಭಾರತದ ವಿರುದ್ಧ ಚೀನಾ ಹೊಸ ಕುತಂತ್ರ, ಪ್ರಮುಖ ಸಂಸ್ಥೆಗಳ ಮೇಲೆ Cyber Attack!

'ಆಯುರ್ವೇದದ ಶೋಧ ನೇಪಾಳದಲ್ಲಾಗಿದೆ' (Ayurveda Developed In Nepal)
ನೇಪಾಳ ಪ್ರಸಿದ್ಧ ಸಂತರು ಹಾಗೂ ಪತಂಜಲಿ, ಕಪಿಲಮುನಿ, ಚರಕರಂತಹ ಮಹರ್ಷಿಗಳ ಭೂಮಿಯಾಗಿದೆ. ಅಷ್ಟೇ ಅಲ್ಲ ಇನ್ನೂ ಹಲವಾರು ಸಂತರು ನೇಪಾಳದಲ್ಲಿ ಹುಟ್ಟಿ, ಶತಮಾನಗಳ ಕಾಲ ಆಯುರ್ವೇದದ ಅಧ್ಯಯನ ನಡೆಸಿ, ಸಂಶೋಧನೆ ನಡೆಸಿದ್ದಾರೆ. ಹಿಮಾಲಯದ ಗಿಡಮೂಲಿಕೆಗಳ ಅಧ್ಯಯನ ಬನಾರಸ್ ನಿಂದ ನಡೆಸಲು ಸಾಧ್ಯವಿಲ್ಲ. ಹೀಗಾಗಿ ಹಿಮಾಲಯದಲ್ಲಿ ವಿಭಿನ್ನ ಪ್ರಕಾರದ ಗಿಡ-ಮೂಲಿಕೆಗಳ ಮೇಲೆ ಸಂಶೋಧನೆಯ ಬಳಿಕ ಅವುಗಳನ್ನು ವಾರಾಣಾಸಿಗೆ ಕೊಂಡೊಯ್ಯಲಾಗಿದೆ ಎಂದು ಓಲಿ ಹೇಳಿದ್ದಾರೆ.

ಇದನ್ನೂ ಓದಿ-Male Pregnancy: ಇನ್ಮುಂದೆ ಪುರುಷರೂ ಕೂಡ ಗರ್ಭಧರಿಸಬಹುದಂತೆ, ತಲೆಕೆಟ್ಟ ಚೀನಾ ವಿಜ್ಞಾನಿಗಳಿಂದ ವಿಲಕ್ಷಣ ಆವಿಷ್ಕಾರ

'ಮತ್ತೊಮ್ಮೆ ಹೊಸ ಇತಿಹಾಸವನ್ನು ಬರೆಯಬೇಕಿದೆ'
ವಿಶ್ವಾಮಿತ್ರರಂತಹ ಪ್ರಸಿದ್ಧ ಸಂತರು ನೇಪಾಳದಲ್ಲಿ ಹುಟ್ಟಿದ್ದಾರೆ (Vishwamitra Born In Nepal). ಅವರು ನೇಪಾಲದ ಭೂಮಿಯಲ್ಲೇ ಹಲವು ಮಂತ್ರಗಳನ್ನು ಅಭಿವೃದ್ಧಿಗೊಳಿಸಿದ್ದಾರೆ. ಪುರಾಣ ಕಾಲದಲ್ಲಿ ಶ್ರೀರಾಮ, ಲಕ್ಷ್ಮಣರಿಗೆ ವಿಭಿನ್ನ ರೀತಿಯ ಶಿಕ್ಷಣ ನೀಡಿರುವ ವಿಶ್ವಾಮಿತ್ರ ಮುನಿಗಳೇ ಅವರಾಗಿದ್ದಾರೆ. ಈ ಎಲ್ಲ ಐತಿಹಾಸಿಕ ಹಾಗೂ ಧಾರ್ಮಿಕ ತಥ್ಯಗಳನ್ನು ಇತಿಹಾಸದಲ್ಲಿಯೇ ತಿರುಚಲಾಗಿದೆ. ಆದರೆ, ಇದೀಗ ಅವುಗಳನ್ನು ಸರಿಪಡಿಸುವ ಕಾಲ ಬಂದಿದೆ. ನಾವು ಹೊಸ ಇತಿಹಾಸವನ್ನು ಪುನಃ ಬರೆಯಬೇಕಾಗಿದೆ. ಸತ್ಯವನ್ನು ಹೇಳಲು ನಾವು ಹಿಂಜರಿಯಬಾರದು ಏಕೆಂದರೆ, ನಮಗೆ ತಥ್ಯಗಳು ಹಾಗೂ ಇತಿಹಾಸ ಸರಿಯಾಗಿ ತಿಳಿದಿದೆ. ಇತಿಹಾಸವನ್ನು ತಿರುಚಿ ಅದನ್ನು ವಿಕೃತಗೊಳಿಸಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ-Coronasomia: Covid-19 ಮಹಾಮಾರಿಯ ನಡುವೆಯೇ ಹೆಚ್ಚಾಗುತ್ತಿದೆ ಈ ನಿಗೂಢ ಕಾಯಿಲೆಯ ಅಪಾಯ!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News