ಈಗ ಐದು ಅಂತರಾಷ್ಟ್ರೀಯ ಭಾಷೆಗಳಲ್ಲಿ ZEE5 ಗ್ಲೋಬಲ್ ಅನಾವರಣ

1994 ರಲ್ಲಿ ಝೀಇ ಎಂಟರ್ಟೈನ್ಮೆಂಟ್ ಎಂಟರ್ಪ್ರೈಸಸ್ ಲಿಮಿಟೆಡ್ ಅಂತರಾಷ್ಟ್ರೀಯ ಮಾರುಕಟ್ಟೆಗೆ ತೆರೆದುಕೊಂಡ ಮೊದಲ ಭಾರತೀಯ ಕಂಪನಿ ಎನ್ನುವ ಶ್ರೆಯವನ್ನು ತನ್ನದಾಗಿಸಿಕೊಂಡಿದೆ. ಈಗ 25 ವರ್ಷಗಳ ನಂತರ, ಇಂದಿನ ಡಿಜಿಟಲ್ ಎಂಟರ್ಟೈನ್ಮೆಂಟ್ ವೇದಿಕೆಯಾಗಿರುವ ZEE5 ಭಾರತಕ್ಕೆ ಸಂಬಂಧಿಸಿದ ಮನರಂಜನಾ ವಿಷಯಗಳನ್ನು ಒಟಿಟಿ ವೇದಿಕೆಯಡಿಯಲ್ಲಿ ವಿಸ್ತರಿಸಲು ಮುಂದಾಗಿದೆ. 

Last Updated : Apr 25, 2019, 04:08 PM IST
ಈಗ ಐದು ಅಂತರಾಷ್ಟ್ರೀಯ ಭಾಷೆಗಳಲ್ಲಿ  ZEE5 ಗ್ಲೋಬಲ್ ಅನಾವರಣ  title=

ನವದೆಹಲಿ: 1994 ರಲ್ಲಿ ಝೀಇ ಎಂಟರ್ಟೈನ್ಮೆಂಟ್ ಎಂಟರ್ಪ್ರೈಸಸ್ ಲಿಮಿಟೆಡ್ ಅಂತರಾಷ್ಟ್ರೀಯ ಮಾರುಕಟ್ಟೆಗೆ ತೆರೆದುಕೊಂಡ ಮೊದಲ ಭಾರತೀಯ ಕಂಪನಿ ಎನ್ನುವ ಶ್ರೆಯವನ್ನು ತನ್ನದಾಗಿಸಿಕೊಂಡಿದೆ. ಈಗ 25 ವರ್ಷಗಳ ನಂತರ, ಇಂದಿನ ಡಿಜಿಟಲ್ ಎಂಟರ್ಟೈನ್ಮೆಂಟ್ ವೇದಿಕೆಯಾಗಿರುವ ZEE5 ಭಾರತಕ್ಕೆ ಸಂಬಂಧಿಸಿದ ಮನರಂಜನಾ ವಿಷಯಗಳನ್ನು ಒಟಿಟಿ ವೇದಿಕೆಯಡಿಯಲ್ಲಿ ವಿಸ್ತರಿಸಲು ಮುಂದಾಗಿದೆ. 

ಆ ಮೂಲಕ ಬಾಲಿವುಡ್ ಮತ್ತು ಇಂಡಿಯನ್ ಟಿವಿ ಕಾರ್ಯಕ್ರಮಗಳು ಕೇವಲ ಭಾರತೀಯರಿಗೆ ಅಥವಾ ದಕ್ಷಿಣ ಏಷ್ಯನ್ನರಿಗೆ ಮಾತ್ರ ಸೀಮಿತವಾಗಿಲ್ಲ ಬದಲಾಗಿಗೆ ಜಾಗತಿಕ ಪ್ರೇಕ್ಷಕರಿಗೂ ತಲುಪುವ ಕಾರ್ಯವನ್ನು ಝೀ 5 ಗ್ಲೋಬಲ್ 17 ಭಾಷೆಗಳಲ್ಲಿ ಪ್ರಸ್ತುತಪಡಿಸುವ ಮೂಲಕ ಮಾಡುತ್ತಿದೆ.. ಇದರ ಜೊತೆಗೆ 5 ಅಂತರರಾಷ್ಟ್ರೀಯ ಭಾಷೆಗಳಾದ ಮಲಯ, ಥಾಯ್, ಬಹರೈನ್, ಜರ್ಮನ್ ಮತ್ತು ರಷ್ಯನ್ ಭಾಷೆಗಳಲ್ಲಿ ಮನರಂಜನೆಗೆ ಸಂಬಂಧಿಸಿದ ವಿಷಯಗಳನ್ನು ಅದು ವಿಸ್ತರಿಸಲಿದೆ. ಆ ಮೂಲಕ ಯಾವುದೇ ಭಾಷೆಯಲ್ಲಿಯೂ ಕೂಡ ಉತ್ತಮ ಗುಣಮಟ್ಟದ ವಸ್ತುವನ್ನು ಪರದೆ ಮೇಲೆ ತರಲು ಮುಂದಾಗಿದೆ.    

ಇಂಡೋನೇಷಿಯಾದ ಬಾಲಿಯಲ್ಲಿ ಎಪಿಒಎಸ್ 2019 (ಏಶಿಯಾ ಫೆಸಿಫಿಕ್ ವೀಡಿಯೊ ಆಪರೇಟರ್ಸ್ ಶೃಂಗಸಭೆ)ಯಲ್ಲಿ 'ಇಂಡಿಯಾ: ಓಟ್ ಡ್ರೈವ್ಸ್ ಬಾರ್ಡರ್ಲೆಸ್ ಅಮಬಿಶನ್' ಎಂಬ ಅಧಿವೇಶನದಲ್ಲಿ ಝೀ5 ಗ್ಲೋಬಲ್ ನ ಮುಖ್ಯ ವ್ಯವಹಾರ ಅಧಿಕಾರಿ ಅರ್ಚನಾ ಆನಂದ್ ಘೋಷಿಸಿದ್ದಾರೆ.

ಈಗ ಈ ಘೋಷಣೆ ಕುರಿತಾಗಿ ಪ್ರತಿಕ್ರಿಯಿಸಿರುವ ಝೀ ಇಂಟರ್ನ್ಯಾಷನಲ್ ಮತ್ತು ಝೀ 5 ಗ್ಲೋಬಲ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅಮಿತ್ ಗೋಯೆಂಕಾ " ಈ ಹೊಸ ಭಾಷೆಗಳ ಪರಿಚಯದೊಂದಿಗೆ ಝೀ 5 ಜಾಗತಿಕವಾಗಿ ತನ್ನ ಪ್ರಭಾವವನ್ನು ಹೆಚ್ಚಿಸಲು ಸಹಾಯವಾಗುತ್ತದೆ.ಈಗ ಜಾಗತಿಕ ವಿಸ್ತರಣೆ ಕಾರ್ಯದಲ್ಲಿ ನಾವು ಹೊಸ ವಿಷಯಗಳನ್ನು ವಿಸ್ತರಿಸುವುದು ಅಥವಾ ಬಲಪಡಿಸುವುದಲ್ಲದೆ, ಅದಕ್ಕೆ ಪೂರಕವಾಗಿ ಹೊಸ ಭಾಷೆಗಳನ್ನು ಸಹಿತ ಸೇರಿಸುತ್ತೇವೆ. ಆ ಮೂಲಕ ಮುಖ್ಯವಾಹಿನಿಯ ಪ್ರೇಕ್ಷಕರಿಗೆ ವೇದಿಕೆಯನ್ನು ರೂಪಿಸುವುದಲ್ಲದೆ ಜಾಗತೀಕವಾಗಿ ನಮ್ಮ ಪಾಲುದಾರಿಕೆಯನ್ನು ಜಗತ್ತಿನಾದ್ಯಂತ ತ್ವರಿತವಾಗಿ ವಿಸ್ತರಿಸಲು ಸಹಾಯವಾಗುತ್ತದೆ" ಎಂದರು.

ಇದೇ ವೇಳೆ ಮಾತನಾಡಿದ ಝೀ5 ಗ್ಲೋಬಲ್ ಮುಖ್ಯ ವ್ಯವಹಾರ ಅಧಿಕಾರಿ ಅರ್ಚನಾ ಆನಂದ್  "ಭಾರತವು ಅತ್ಯಂತ ರೋಮಾಂಚಕ ಮತ್ತು ವರ್ಣರಂಜಿತವಾಗಿದೆ. ಇಲ್ಲಿ, ಪ್ರತಿ ಭಾವನೆಯು ಪೂರ್ಣವಾಗಿ ವ್ಯಕ್ತವಾಗುತ್ತವೆ , ಅವುಗಳೆಲ್ಲವನ್ನು ನಮ್ಮ ಚಲನಚಿತ್ರಗಳು ಮತ್ತು ಕಥೆಗಳು ಈ ವೈಭವವನ್ನು ಪ್ರತಿಧ್ವನಿಸುತ್ತದೆ. ಈ ಸಿನಿಮಾ ಮತ್ತು ಕಥೆಗಳನ್ನು ನಾವು ಝೀ 5 ನಲ್ಲಿ ತರುತ್ತೇವೆ. ಕಥೆ ಹೇಳುವ ನಮ್ಮ ಕೆಲಸ ಕೇವಲ ಕಥೆ ಹೇಳುವುದಷ್ಟೇ ಅಲ್ಲದೆ ಪ್ರೇಕ್ಷಕರು ಯಾವ ಭಾಷೆಯಲ್ಲಿ ಮಾತನಾಡುತ್ತಾರೋ ಆ ಭಾಷೆಯಲ್ಲಿ ಅವರಿಗೆ ಮನರಂಜನೆಯನ್ನು ಲಭ್ಯವಾಗುವಂತೆ ಮಾಡುವುದಾಗಿದೆ.ಆದ್ದರಿಂದ ನಮ್ಮ ವಸ್ತು ವಿಷಯವು ಈಗ ನಮ್ಮ ಥಾಯ್, ಬಹಸಾ, ಮಲಯ, ರಷ್ಯನ್ ಮತ್ತು ಜರ್ಮನ್ ಭಾಷೆಗಳಲ್ಲಿಯೂ ಲಭ್ಯವಾಗುತ್ತಿದೆ.ಈ ಮಾರುಕಟ್ಟೆಗಳಲ್ಲಿ ನಮ್ಮ ಪ್ರೇಕ್ಷಕರೊಂದಿಗೆ ಇನ್ನಷ್ಟು ಹೆಚ್ಚಿನ ಸಂಪರ್ಕ ಕಲ್ಪಿಸುವುದನ್ನು ನಾವು ಎದುರು ನೋಡುತ್ತೇವೆ. " ಎಂದರು 

ಈ ಸಿನೆಮಾ ಮತ್ತು ಕಥೆಗಳೆಂದರೆ ನಾವು ಝೀಇ 5 ನಲ್ಲಿ ನಿಮಗೆ ತರಲು. ಕಥೆ ಹೇಳುವುದಾದರೆ, ದೊಡ್ಡ ಕಥೆಗಳನ್ನು ಹೇಳಲು ಮತ್ತು ಅವುಗಳನ್ನು ಅವರು ಎಲ್ಲಿ ಮಾತನಾಡುತ್ತಾರೆ ಅಥವಾ ಅವರು ಯಾವ ಭಾಷೆಯನ್ನು ಮಾತನಾಡುತ್ತಾರೋ ಆ ಭಾಷೆಗಳಲ್ಲಿ ಪ್ರೇಕ್ಷಕರೊಂದಿಗೆ ಹಂಚಿಕೊಳ್ಳುವುದು ನಮ್ಮ ಕೆಲಸವಾಗಿದೆ. ನಮ್ಮ ಮನರಂಜನಾ ವಸ್ತು ಥಾಯ್, ಬಸಾ, ಮಲಯ, ರಷ್ಯನ್ ಮತ್ತು ಜರ್ಮನ್ನಲ್ಲಿ ಲಭ್ಯವಾಗುತ್ತಿದ್ದು, ಈ ಮಾರುಕಟ್ಟೆಗಳಲ್ಲಿ ನಮ್ಮ ಪ್ರೇಕ್ಷಕರೊಂದಿಗೆ ಇನ್ನಷ್ಟು ಆಳವಾಗಿ ಸಂಪರ್ಕ ಕಲ್ಪಿಸುವುದನ್ನು ನಾವು ಎದುರು ನೋಡುತ್ತೇವೆ ಎಂದು ತಿಳಿಸಿದರು.

Trending News