ನವದೆಹಲಿ : ನಿಮಗೆ ಹಳೆಯ ನಾಣ್ಯ, ನೋಟುಗಳನ್ನ ಕೂಡಿಡುವ ಅಭ್ಯಾಸವಿದ್ಯಾ? ಹಾಗಾದ್ರೆ, ಈ ಅಭ್ಯಾಸವೇ ನಿಮ್ಮನ್ನ ಶ್ರೀಮಂತರನ್ನಾಗಿಸಬಹುದು. ಹೌದು, ಹಳೆಯ ನಾಣ್ಯಗಳಿದ ಸಧ್ಯ ಬಂಗಾರದ ಬೆಲೆ ಸಿಕ್ತಿದ್ದು, ಲಕ್ಷ, ಕೋಟಿಗಳಲ್ಲಿ ಖರೀದಿಸ್ತಿದ್ದಾರೆ. ಅದ್ರಂತೆ, ಸಧ್ಯ ಹಳೆಯ ಒಂದು ರೂಪಾಯಿ ನೋಟಿಗೆ ಬಂಪರ್ ಬೆಲೆ ಬಂದಿದೆ.
ಈ ಹಳೆಯ ಒಂದು ರೂಪಾಯಿ ನೋಟಿ(One Rupee Note)ನ ಬೆಲೆ ಸುಮಾರು 45,000 ರೂಪಾಯಿ ಆಗಿದ್ದು, ಆಸಕ್ತ ವ್ಯಕ್ತಿಗಳು ಆನ್ ಲೈನ್ ನಲ್ಲಿ ಖರೀದಿಸಬಹುದು. ನಮ್ಮಲ್ಲಿ ಅನೇಕರು ಹಳೆಯ ಕರೆನ್ಸಿ ನೋಟುಗಳು ಮತ್ತು ನಾಣ್ಯಗಳನ್ನು ಸಂಗ್ರಹಿಸುವ ಇಷ್ಟಪಡುತ್ತಾರೆ. ಆದಾಗ್ಯೂ, ಅಂತಹ ಹಳೆಯ ನೋಟುಗಳು ಮತ್ತು ನಾಣ್ಯಗಳನ್ನ ಪಡೆಯಲು ಕೆಲವರು ಭಾರಿ ಮೊತ್ತವನ್ನು ಪಾವತಿಸುತ್ತಿದ್ದಾರೆ.
ಇದನ್ನೂ ಓದಿ : Gold-Silver Rate : ಚಿನ್ನ-ಬೆಳ್ಳಿ ಬೆಲೆಯಲ್ಲಿ ಭಾರೀ ಏರಿಕೆ : ಒಂದೇ ದಿನದಲ್ಲಿ ಬಂಗಾರ ₹ 600 ಏರಿಕೆ!
1 ರೂಪಾಯಿ ನೋಟ್ ಮೌಲ್ಯ 45,000..!
ಹಳೆಯ ಒಂದು ರೂಪಾಯಿ ನೋಟು.. ಅಂದ್ರೆ, 1957ರ ಫ್ರಿಂಟ್ ಆದಾ, ಕೇಂದ್ರದ ಮಾಜಿ ಹಣಕಾಸು ಸಚಿವ ಹಿರುಭಾಯಿ ಎಂ. ಪಟೇಲ್(Hirubhai M. Patel) ಅವ್ರು ಸಹಿ ಮಾಡಿದ, 123456 ಸಂಖ್ಯೆಯ ನೋಟಿಗೆ ಭಾರೀ ಬೆಲೆ ಸಿಕ್ಕಿದೆ. ಇದು ಕಾಯಿನ್ ಬಾಜಾರ್ ಅನ್ನೋ ವೆಬ್ಸೈಟ್ʼನಲ್ಲಿ 44,999 ರೂಪಾಯಿಗೆ ಮಾರಾಟ ಮಾಡಲಾಗುತ್ತಿದೆ.
ಇದನ್ನೂ ಓದಿ : NPS ನಲ್ಲಿ ಪ್ರತಿದಿನ ₹ 50 ಹೂಡಿಕೆ ಮಾಡಿ ನಿವೃತ್ತಿಯ ನಂತ್ರ ಪಡೆಯಿರಿ ₹ 34 ಲಕ್ಷ : ಹೂಡಿಕೆ ಮಾಡುವುದು ಹೇಗೆ?
ಹಳೆಯ 1 ರೂಪಾಯಿ(Rupee) ಬಂಡಲ್ ಮೂಲ ಬೆಲೆ 49,999 ರೂ. ರಿಯಾಯಿತಿಯ ನಂತ್ರ, ವೆಬ್ ಸೈಟ್ ಬೆಲೆಯನ್ನ ರೂ 44,999 ಕ್ಕೆ ನಿಗದಿಪಡಿಸಿದೆ.
ನಿಮ್ಮಲ್ಲಿಯೂ ಈ ಒಂದು ರೂಪಾಯಿ ನೋಟಿದ್ರೆ ನೀವು ಮಾಡಬೇಕಿರೋದಯ ಇಷ್ಟೇ. ಕಾಯಿನ್ ಬಾಜಾರ್ ವೆಬ್ಸೈಟ್ʼ(Coinbazaar)ಗೆ ತೆರಳಿ, ಶಾಪಿಂಗ್ ವಿಭಾಗಕ್ಕೆ ಹೋಗಬೇಕು. ಅಂಗಡಿ ವಿಭಾಗಕ್ಕೆ ಭೇಟಿ ನೀಡಿದ ನಂತರ, ನೀವು 'ನೋಟ್ ಬಂಡಲ್ಸ್' ವರ್ಗಕ್ಕೆ ಹೋಗಬೇಕು. ನೀವು ವಿವರಗಳನ್ನು ನೋಡುತ್ತೀರಿ.
ಇದನ್ನೂ ಓದಿ : PM Kisan : Rft ಸಹಿ ಮಾಡಿದ ರಾಜ್ಯ ಸರ್ಕಾರಗಳು; ಶೀಘ್ರದಲ್ಲೇ ರೈತರ ಖಾತೆಗೆ ಹಣ
ಹಳೆಯ ನಾಣ್ಯಗಳು, ನೋಟುಗಳು ಲಭ್ಯ..!
ಖರೀದಿದಾರರು ವಿಶೇಷವಾಗಿ ದೇಶದ ಹಳೆಯ ಕರೆನ್ಸಿ(Old CuOld Currency)ಯನ್ನ ಇಟ್ಟುಕೊಳ್ಳಲು ಇಷ್ಟಪಡುವವರು, ರೂ 10, ರೂ 5 ರೂ 2,999, ರೂ 2 ರೂ 4,999 ಮತ್ತು ರೂ 100 ಹಳೆಯ ನೋಟುಗಳನ್ನ ಖರೀದಿಸಬಹುದು.
ಇದನ್ನೂ ಓದಿ : Provisional Pension: ಲಕ್ಷಾಂತರ ಪಿಂಚಣಿದಾರರಿಗೆ ಪರಿಹಾರ ಸುದ್ದಿ!
ನೀವು ವೆಬ್ ಸೈಟ್ ಮೂಲಕ ನಿಮ್ಮ ವಸ್ತುಗಳನ್ನ ಮಾರಾಟ ಮಾಡಬಹುದು ಮತ್ತು ಸ್ವಲ್ಪ ಹಣ(Money)ವನ್ನು ಗಳಿಸಬಹುದು. ನೀವು ಕಾಯಿನ್ ಬಾಜಾರ್ ವೆಬ್ ಸೈಟ್ ಗೆ ಹೋಗಬೇಕು ಮತ್ತು 'ನಮ್ಮೊಂದಿಗೆ ಮಾರಾಟ ಮಾಡಲು ಪ್ರಾರಂಭಿಸಬೇಕು' ವಿಭಾಗದಲ್ಲಿ ತೆರಳಿ, ನೀವು ಕೆಲವು ವಿವರಗಳನ್ನ ನಮೂದಿಸುವ ಮೂಲಕ ನೋಂದಣಿಯನ್ನು ಮಾಡಿಕೊಳ್ಳಿ.
ಇದನ್ನೂ ಓದಿ : SBI Alert: ಸ್ಟೇಟ್ ಬ್ಯಾಂಕಿನ ಡಿಜಿಟಲ್ ಸೇವೆಗಳಲ್ಲಿ ಅಡಚಣೆ! ನಿಮ್ಮ ಪ್ರಮುಖ ಕೆಲಸವನ್ನು ತಕ್ಷಣ ನಿರ್ವಹಿಸಿ
ಈ ವಿವರಗಳು ಬಳಕೆದಾರ ಹೆಸರು, ಇಮೇಲ್(E-mail), ಪರಿಶೀಲನೆ ಕೋಡ್, ಮೊದಲ ಹೆಸರು, ಕೊನೆಯ ಹೆಸರು, ಸ್ಟೋರ್ ಹೆಸರು, ವಿಳಾಸ 1, ವಿಳಾಸ 2, ದೇಶ, ನಗರ ಅಥವಾ ಪಟ್ಟಣ, ರಾಜ್ಯ, ಪಿನ್ ಕೋಡ್ ಮತ್ತು ಇತರ ವಿವರಗಳನ್ನ ಕೇಳಲಾಗುತ್ತೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.