Budget 2024: 40000 ರೈಲ್ವೆ ಕೋಚ್‌ಗಳು ವಂದೇ ಭಾರತ್ ರೂಪಕ್ಕೆ ಪರಿವರ್ತನೆ : ಮಧ್ಯಂತರ ಬಜೆಟ್ ನಲ್ಲಿ ರೈಲ್ವೆ ಝಲಕ್

Raliway Budget 2024 : ದೇಶದಲ್ಲಿ 3 ಪ್ರಮುಖ ಆರ್ಥಿಕ ರೈಲ್ವೆ ಕಾರಿಡಾರ್‌ಗಳನ್ನು ಜಾರಿಗೆ ತರುವುದಾಗಿಯೂ ಹೇಳಿದ್ದಾರೆ. ಅವುಗಳೆಂದರೆ ಇಂಧನ, ಖನಿಜ ಮತ್ತು ಸಿಮೆಂಟ್ ಕಾರಿಡಾರ್, ಪೋರ್ಟ್ ಕನೆಕ್ಟಿವಿಟಿ ಕಾರಿಡಾರ್ ಮತ್ತು ಹೈ ಟ್ರಾಫಿಕ್ ಡೆನ್ಸಿಟಿ ಕಾರಿಡಾರ್.

Written by - Ranjitha R K | Last Updated : Feb 1, 2024, 02:31 PM IST
  • ರೈಲ್ವೆ ಪ್ರಯಾಣಿಕರಿಗೆ ಆರಾಮದಾಯಕ ಪ್ರಯಾಣದ ಭರವಸೆ
  • 40 ಸಾವಿರ ಸಾಮಾನ್ಯ ರೈಲ್ವೆ ಬೋಗಿಗಳು ವಂದೇ ಭಾರತ್ ಮಾನದಂಡಕ್ಕೆ
  • ದೇಶಾದ್ಯಂತ ಮಲ್ಟಿಮೋಡಲ್ ಸಂಪರ್ಕ ಹೆಚ್ಚಳ
 Budget 2024: 40000 ರೈಲ್ವೆ ಕೋಚ್‌ಗಳು ವಂದೇ ಭಾರತ್ ರೂಪಕ್ಕೆ ಪರಿವರ್ತನೆ : ಮಧ್ಯಂತರ ಬಜೆಟ್ ನಲ್ಲಿ ರೈಲ್ವೆ ಝಲಕ್   title=

Raliway Budget 2024 : ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು ಮಂಡಿಸಿದ ಮಧ್ಯಂತರ ಬಜೆಟ್‌ನಲ್ಲಿ ರೈಲ್ವೆ ಪ್ರಯಾಣಿಕರಿಗೆ ಆರಾಮದಾಯಕ ಪ್ರಯಾಣದ ಭರವಸೆ ನೀಡಿದ್ದಾರೆ. ಸೀತಾರಾಮನ್ ತಮ್ಮ ಭಾಷಣದಲ್ಲಿ, 'ರೈಲ್ವೆ ಪ್ರಯಾಣಿಕರ ಸುರಕ್ಷತೆ, ಅನುಕೂಲತೆ ಮತ್ತು ಸೌಕರ್ಯಕ್ಕಾಗಿ ಸುಮಾರು 40 ಸಾವಿರ ಸಾಮಾನ್ಯ ರೈಲ್ವೆ ಬೋಗಿಗಳನ್ನು ವಂದೇ ಭಾರತ್ ಮಾನದಂಡಕ್ಕೆ ಪರಿವರ್ತಿಸುವುದಾಗಿ ಘೋಷಿಸಿದ್ದಾರೆ. ಇದರೊಂದಿಗೆ ದೇಶದಲ್ಲಿ 3 ಪ್ರಮುಖ ಆರ್ಥಿಕ ರೈಲ್ವೆ ಕಾರಿಡಾರ್‌ಗಳನ್ನು ಜಾರಿಗೆ ತರುವುದಾಗಿಯೂ ಹೇಳಿದ್ದಾರೆ. ಅವುಗಳೆಂದರೆ ಇಂಧನ, ಖನಿಜ ಮತ್ತು ಸಿಮೆಂಟ್ ಕಾರಿಡಾರ್, ಪೋರ್ಟ್ ಕನೆಕ್ಟಿವಿಟಿ ಕಾರಿಡಾರ್ ಮತ್ತು ಹೈ ಟ್ರಾಫಿಕ್ ಡೆನ್ಸಿಟಿ ಕಾರಿಡಾರ್.

ದೇಶಾದ್ಯಂತ ಮಲ್ಟಿಮೋಡಲ್ ಸಂಪರ್ಕ ಹೆಚ್ಚಳ : 
'ಬಹುತೇಕ ರೈಲ್ವೆ ಯೋಜನೆಗಳು ನಿಗದಿತ ವೇಳಾಪಟ್ಟಿಯಲ್ಲಿ ನಡೆಯುತ್ತಿವೆ. ಇಂತಹ ಪರಿಸ್ಥಿತಿಯಲ್ಲಿ, ಮಲ್ಟಿಮೋಡಲ್ ಸಂಪರ್ಕವನ್ನು ಸಕ್ರಿಯಗೊಳಿಸಲು, ಸರ್ಕಾರವು ಪ್ರಧಾನ ಮಂತ್ರಿ ಗತಿ ಶಕ್ತಿ ಅಡಿಯಲ್ಲಿ ಯೋಜನೆಗಳನ್ನು ಗುರುತಿಸಿದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್  ಹೇಳಿದ್ದಾರೆ. 

ಇದನ್ನೂ ಓದಿ : Budget 2024: ಈ ಬಾರಿಯ ಬಜೆಟ್ ನಲ್ಲಿ ಯಾವುದೂ ಅಗ್ಗವೂ ಅಲ್ಲ, ಯಾವುದೂ ದುಬಾರಿಯಲ್ಲ ! ಕಾರಣ ಇದೇ

ಮೆಟ್ರೋ ರೈಲು ಇತರ ನಗರಗಳಿಗೂ ವಿಸ್ತರಣೆ :
ಸಣ್ಣ ನಗರಗಳನ್ನು ಸಂಪರ್ಕಿಸಲು, 517 ಹೊಸ ಮಾರ್ಗಗಳಲ್ಲಿ 'UDAN' ಯೋಜನೆಗೆ  ಆಫ್ ಶೋರ್ ವಿಂಡ್ ಎನರ್ಜಿಗಾಗಿ VGF ನಿಂದ ಸಹಾಯವನ್ನು ಒದಗಿಸಲಾಗುವುದು ಎಂದು ಸೀತಾರಾಮನ್ ಹೇಳಿದರು. VGF (Viability Gap Funding ) 100 Lk Cr ಟನ್  ಕೋಲ್ ಗ್ಯಾಸಿಫಿಕೆಶನ್ ಗುರಿಯನ್ನು 2030ರ ವೇಳೆಗೆ ನಿಗದಿಪಡಿಸಲಾಗಿದೆ. ಮೆಟ್ರೋ ರೈಲುಗಳನ್ನು ಇತರ ನಗರಗಳಿಗೂ ವಿಸ್ತರಿಸಲಾಗುವುದು ಎಂದು ಹೇಳಿದ್ದಾರೆ.  

ಭಾರತೀಯ ರೈಲ್ವೇಗೆ 2023-24 ವರ್ಷವು ಬಹಳ ಮುಖ್ಯವಾಗಿತ್ತು.2023ರಲ್ಲಿ, ರೈಲ್ವೆ ಹಲವು ಮಾರ್ಗಗಳಲ್ಲಿ ಹೊಸ ವಂದೇ ಭಾರತ್ ರೈಲುಗಳನ್ನು ಪ್ರಾರಂಭಿಸಿತು. ಅಮೃತ್ ಭಾರತ್ ಎಕ್ಸ್‌ಪ್ರೆಸ್‌ಗೂ ಗ್ರೀನ್ ಸಿಗ್ನಲ್ ಸಿಕ್ಕಿದೆ. ರೈಲ್ವೇ ತನ್ನ ವ್ಯವಸ್ಥೆಯಲ್ಲಿ ನಿರಂತರವಾಗಿ ಆಮೂಲಾಗ್ರ ಸುಧಾರಣೆಗಳನ್ನು ಮತ್ತು ಬದಲಾವಣೆಗಳನ್ನು ಮಾಡುತ್ತಿದೆ. ಉತ್ತಮ ವ್ಯವಸ್ಥೆಗಳು ಮತ್ತು ಸೌಲಭ್ಯಗಳೊಂದಿಗೆ, ರೈಲ್ವೆ ತನ್ನ ಪ್ರಯಾಣಿಕರಿಗೆ ವಿಶ್ವದರ್ಜೆಯ ಸೌಲಭ್ಯಗಳನ್ನು ಒದಗಿಸುತ್ತಿದೆ. ಆ ಸೌಲಭ್ಯಗಳನ್ನು ಮತ್ತಷ್ಟು ಉನ್ನತೀಕರಿಸಲಾಗುತ್ತಿದೆ. ದೇಶದಲ್ಲಿ, ಹೊಸ ಹೈಸ್ಪೀಡ್ ರೈಲುಗಳು, ರೈಲು ನಿಲ್ದಾಣಗಳ ಪುನರ್ನಿರ್ಮಾಣ ಮತ್ತು ಉತ್ತಮ ಸುರಕ್ಷತಾ ವೈಶಿಷ್ಟ್ಯಗಳನ್ನು ಒದಗಿಸುವಲ್ಲಿ ನಿರಂತರ ಕೆಲಸ ಮಾಡಲಾಗುತ್ತಿದೆ. 

ಇದನ್ನೂ ಓದಿ : Union Budget 2024: ಎಲ್ಲಾ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರಿಗೆ ʼಆಯುಷ್ಮಾನ್ ಭಾರತ್ʼ ಸೌಲಭ್ಯ

ಮುಂಬರುವ ದಿನಗಳಲ್ಲಿ ಹೊಸ ರೈಲು :
ಮುಂಬರುವ ವರ್ಷಗಳಲ್ಲಿ 300-400 ಹೊಸ ವಂದೇ ಭಾರತ್ ರೈಲುಗಳನ್ನು ಓಡಿಸಲು ರೈಲ್ವೆ ಯೋಜಿಸಿದೆ. ಇದಲ್ಲದೆ, ವಂದೇ ಭಾರತ್ ರೈಲುಗಳಲ್ಲಿ ಸ್ಲೀಪರ್ ಕೋಚ್‌ಗಳನ್ನು ಅಳವಡಿಸುವ ಯೋಜನೆಯಲ್ಲಿಯೂ ಸರ್ಕಾರ ಕಾರ್ಯನಿರ್ವಹಿಸುತ್ತಿದೆ. ಪ್ರಸ್ತುತ 41 ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳು ಕಾರ್ಯನಿರ್ವಹಿಸುತ್ತಿವೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=xFI-KJNrEP8

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News