2,000 ರೂ. ಮುಖಬೆಲೆಯ ಶೇ.76ರಷ್ಟು ನೋಟುಗಳು ಬ್ಯಾಂಕ್‌ಗಳಿಗೆ ವಾಪಸ್: ಆರ್‌ಬಿಐ

ಮೇ 19ರಂದು ಆರ್‌ಬಿಐ ಚಲಾವಣೆಯಲ್ಲಿರುವ 2,000 ರೂ. ಮುಖಬೆಲೆಯ ನೋಟುಗಳನ್ನು ಹಿಂಪಡೆಯುವುದಾಗಿ ಘೋಷಿಸಿತು. ಕರೆನ್ಸಿ ನೋಟುಗಳನ್ನು ತಮ್ಮ ಬ್ಯಾಂಕ್ ಖಾತೆಗಳಲ್ಲಿ ಜಮಾ ಮಾಡಲು ಅಥವಾ ವಿನಿಮಯ ಮಾಡಿಕೊಳ್ಳಲು ಸೆಪ್ಟೆಂಬರ್ 30ರವರೆಗೆ ಜನರಿಗೆ ಸಮಯ ನೀಡಿದೆ.

Written by - Puttaraj K Alur | Last Updated : Jul 3, 2023, 11:04 PM IST
  • ಶೇ.76ರಷ್ಟು 2,000 ರೂ. ಮುಖಬೆಲೆಯ ನೋಟುಗಳು ಬ್ಯಾಂಕ್‌ಗಳಿಗೆ ವಾಪಸ್ ಆಗಿವೆ
  • 2,000 ರೂ. ಮುಖಬೆಲೆಯ ನೋಟು ಹಿಂಪಡೆಯುವುದಾಗಿ ಮೇ 19ರಂದು ಆರ್‌ಬಿಐ ಘೋಷಿಸಿತ್ತು
  • ಶೇ.87ರಷ್ಟು ಠೇವಣಿ ಮೂಲಕ ಹಾಗೂ ಶೇ.13ರಷ್ಟು ನೋಟುಗಳು ಬದಲಾವಣೆ ಮೂಲಕ ವಾಪಸ್ ಆಗಿವೆ
2,000 ರೂ. ಮುಖಬೆಲೆಯ ಶೇ.76ರಷ್ಟು ನೋಟುಗಳು ಬ್ಯಾಂಕ್‌ಗಳಿಗೆ ವಾಪಸ್: ಆರ್‌ಬಿಐ title=
2,000 ರೂ. ಮುಖಬೆಲೆಯ ನೋಟುಗಳು

ನವದೆಹಲಿ: 2023ರ ಮೇ 19ರಂತೆ ಚಲಾವಣೆಯಲ್ಲಿರುವ 2,72 ಲಕ್ಷ ಕೋಟಿ ರೂ. ಅಥವಾ ಶೇ.76ರಷ್ಟು 2,000 ರೂ. ಮುಖಬೆಲೆಯ ನೋಟುಗಳು ಬ್ಯಾಂಕ್‌ಗಳಿಗೆ ವಾಪಸ್ ಆಗಿವೆ ಎಂದು ಭಾರತೀಯ ರಿಸರ್ವ್‌ ಬ್ಯಾಂಕ್‌ (RBI)  ಸೋಮವಾರ ತಿಳಿಸಿದೆ.

2,000 ರೂ. ಮುಖಬೆಲೆಯ ನೋಟುಗಳನ್ನು ಹಿಂಪಡೆಯುವುದಾಗಿ ಮೇ 19ರಂದು ಆರ್‌ಬಿಐ ಘೋಷಿಸಿತ್ತು. ಉಳಿತಾಯ ಖಾತೆಗಳಲ್ಲಿ ಠೇವಣಿ ಇಡುವ ಮೂಲಕ ಅಥವಾ ಬದಲಾಯಿಸಿಕೊಳ್ಳುವ ಮೂಲಕ ಮೇ 19ರೊಳಗೆ ಬ್ಯಾಂಕ್‌ಗಳಿಗೆ ಈ ನೋಟುಗಳನ್ನು ಹಿಂತಿರುಗಿಸಬೇಕು ಎಂದು ಸೂಚನೆ ನೀಡಿತ್ತು.

ಇದನ್ನೂ ಓದಿ: Mahindra Best Selling Car: ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಮಹೀಂದ್ರಾ SUV

ವಿವಿಧ ಬ್ಯಾಂಕ್‌ಗಳಿಂದ ಕಲೆಹಾಕಿರುವ ಅಂಕಿ-ಅಂಶಗಳ ಪ್ರಕಾರ, ಮೇ 19ರಂದು 2,000 ರೂ. ಮುಖಬೆಲೆಯ ನೋಟುಗಳನ್ನು ಹಿಂಪಡೆಯುವುದಾಗಿ ಘೋಷಿಸಿದ ದಿನದಿಂದ ಜೂನ್ 30ರವರೆಗೆ 2.72 ಲಕ್ಷ ಕೋಟಿ ರೂ. ಮೌಲ್ಯದ ನೋಟುಗಳು ಬ್ಯಾಂಕ್‌ಗಳಿಗೆ ವಾಪಸ್‌ ಆಗಿವೆ. ಪರಿಣಾಮ ಜೂನ್ 30ರ ವಹಿವಾಟು ಅಂತ್ಯದ ವೇಳೆಗೆ  0.84 ಲಕ್ಷ ಕೋಟಿ ರೂ. ಮೌಲ್ಯದ ನೋಟುಗಳು ಚಲಾವಣೆಯಲ್ಲಿವೆ ಎಂದು ಆರ್‌ಬಿಐ ಮಾಹಿತಿ ನೀಡಿದೆ.

ಈವರೆಗೆ ಶೇ.76 ರಷ್ಟು ನೋಟುಗಳು ಬ್ಯಾಂಕ್‌ಗಳಿಗೆ ವಾಪಸ್ ಆಗಿವೆ. ಪ್ರಮುಖ ಬ್ಯಾಂಕ್‌ಗಳು ನೀಡಿರುವ ಮಾಹಿತಿ ಪ್ರಕಾರ, ಶೇ.87ರಷ್ಟು ನೋಟುಗಳು ಠೇವಣಿ ಮೂಲಕ ಹಾಗೂ ಉಳಿದ ಶೇ.13ರಷ್ಟು ನೋಟುಗಳು ಇತರ ನೋಟುಗಳೊಂದಿಗೆ ಬದಲಾವಣೆ ಮೂಲಕ ವಾಪಸ್‌ ಆಗಿವೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: Harley Davidson ಬೈಕ್ ಖರೀದಿಸುವ ನಿಮ್ಮ ಕನಸು ಶೀಘ್ರದಲ್ಲೇ ನನಸಾಗಲಿದೆ, ಇಂದು ಭಾರತದಲ್ಲಿ ಬಿಡುಗಡೆಯಾಗುತ್ತಿದೆ ಈ ಅಗ್ಗದ ಬೈಕ್!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News