PM Awas Yojanaಯ ಹೊಸ ನಿಯಮದ ಪ್ರಕಾರ ಹಂಚಿಕೆಯಾದ ಮನೆಯು ರದ್ದಾಗಬಹುದು..!

PM Awas Yojana: ಪ್ರಧಾನಮಂತ್ರಿ ಆವಾಸ್ ಯೋಜನೆಯ  ನಿಯಮಗಳಲ್ಲಿ ದೊಡ್ಡ ಬದಲಾವಣೆ ಮಾಡಲಾಗಿದೆ. ಈ ನಿಯಮವನ್ನು ಪಾಲಿಸದಿದ್ದರೆ, ಮಂಜೂರಾದ ಮನೆಯನ್ನು ಹಿಂಪಡೆಯಲಾಗುತ್ತದೆ.

Written by - Ranjitha R K | Last Updated : Feb 8, 2022, 01:58 PM IST
  • ಪ್ರಧಾನ ಮಂತ್ರಿ ಆವಾಸ್ ಅಡಿ ನಿಯಮಗಳಲ್ಲಿ ಬದಲಾವಣೆ
  • ಈಗ ಕಡ್ಡಾಯವಾಗಿ ಐದು ವರ್ಷ ಇರಲೇಬೇಕು ಈ ಮನೆಯಲ್ಲಿ
  • ಫ್ಲಾಟ್‌ಗಳು ಫ್ರೀ ಹೋಲ್ಡ್ ಆಗಿರುವುದಿಲ್ಲ
PM Awas Yojanaಯ ಹೊಸ ನಿಯಮದ ಪ್ರಕಾರ   ಹಂಚಿಕೆಯಾದ ಮನೆಯು ರದ್ದಾಗಬಹುದು..!  title=
ಪ್ರಧಾನ ಮಂತ್ರಿ ಆವಾಸ್ ಅಡಿ ನಿಯಮಗಳಲ್ಲಿ ಬದಲಾವಣೆ (file photo)

ನವದೆಹಲಿ : PM Awas Yojana: ಪ್ರಧಾನಮಂತ್ರಿ ಆವಾಸ್ ಯೋಜನೆಯ  ನಿಯಮಗಳಲ್ಲಿ ದೊಡ್ಡ ಬದಲಾವಣೆ ಮಾಡಲಾಗಿದೆ. ಈ ನಿಯಮವನ್ನು ಪಾಲಿಸದಿದ್ದರೆ, ಮಂಜೂರಾದ ಮನೆಯನ್ನು ಹಿಂಪಡೆಯಲಾಗುತ್ತದೆ. ಈ ನಿಯಮದ ಪ್ರಕಾರ (PM Awas Yojana Rules), ಮಂಜೂರಾದ ಮನೆಯಲ್ಲಿ  ಐದು ವರ್ಷಗಳ ಕಾಲ ಉಳಿಯುವುದು ಕಡ್ಡಾಯ. ಇಲ್ಲವಾದರೆ ಹಂಚಿಕೆ ರದ್ದುಗೊಳ್ಳುತ್ತದೆ.  ಮನೆ ಮಂಜೂರು ಮಾಡುವ ವೇಳೆ, ಮಾಡಿಸಲಾಗುವ ರಿಜಿಸ್ಟರ್ ಅಗ್ರಿಮೆಂಟ್ ಟು ಲೀಜ್   ಆ ಮನೆಯ ರಿಜಿಸ್ಟ್ರೆಶೇನ್ ಆಗಿರುವುದಿಲ್ಲ.   

ಪ್ರಧಾನ ಮಂತ್ರಿ ಆವಾಸ್ ಅಡಿಯಲ್ಲಿ ನಿಯಮಗಳಲ್ಲಿ ಬದಲಾವಣೆಗಳು :
ಪ್ರಧಾನಮಂತ್ರಿ ಆವಾಸ್ ಯೋಜನೆಯ (PM Awas Yojana) ಅಡಿಯಲ್ಲಿ ಹಂಚಿಕೆ ಮಾಡಲಾಗಿರುವ ಮನೆಯನ್ನು ಬಳಸಲಾಗಿದೆಯೇ ಎನ್ನುವುದನ್ನು ಐದು ವರ್ಷಗಳವರೆಗೆ ಸರ್ಕಾರ ನೋಡುತ್ತದೆ. ನೀವು ಆ ಮನೆಯಲ್ಲಿ ವಾಸಿಸುತ್ತಿದ್ದರೆ ಈ ಒಪ್ಪಂದವನ್ನು ಲೀಸ್ ಡೀಡ್ ಆಗಿ ಬದಲಾಯಿಸಲಾಗುತ್ತದೆ. ಇಲ್ಲದಿದ್ದರೆ ಅಭಿವೃದ್ಧಿ ಪ್ರಾಧಿಕಾರವು ನಿಮ್ಮೊಂದಿಗೆ ಮಾಡಿಕೊಂಡಿರುವ ಒಪ್ಪಂದವನ್ನು ರದ್ದುಪಡಿಸುತ್ತದೆ. ಮಾತ್ರವಲ್ಲ, ನೀವು ಠೇವಣಿ ಮಾಡಿದ ಮೊತ್ತವನ್ನು ಕೂಡಾ ಹಿಂತಿರುಗಿಸಲಾಗುವುದಿಲ್ಲ. 

ಇದನ್ನೂ ಓದಿ :  Retirement Planning : ನಿವೃತ್ತಿ ಹೂಡಿಕೆಗೆ PPF ಅಥವಾ NPS ಯಾವುದು ಉತ್ತಮ? ಲೆಕ್ಕಾಚಾರ ಇಲ್ಲಿದೆ

ಇದರ ಹೊರತಾಗಿ, ನಿಯಮಗಳು ಮತ್ತು ಷರತ್ತುಗಳ ಪ್ರಕಾರ, ಪ್ರಧಾನ ಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ (PM Awas Yojana Rules) ನಿರ್ಮಿಸಲಾದ ಫ್ಲಾಟ್‌ಗಳ ಮೇಲೆ ಫ್ರೀ ಹೋಲ್ಡ್ ಇರುವುದಿಲ್ಲ.  ಐದು ವರ್ಷಗಳ ನಂತರವೂ ಜನರು ಲೀಜ್ ಅಡಿಯಲ್ಲಿಯೇ ಉಳಿಯಬೇಕಾಗುತ್ತದೆ. ಈ ನೀತಿಯಿಂದಾಗಿ, ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ಮನೆಯನ್ನು ಪಡೆದು, ಬಾಡಿಗೆ ನೀಡುತ್ತಿದ್ದ ಕಾರ್ಯಕ್ಕೆ ತಡೆ ಹಾಕಿದಂತಾಗುತ್ತದೆ. 

ನಿಯಮಗಳೇನು ಹೇಳುತ್ತದೆ ?
ಇದರೊಂದಿಗೆ, ಯೋಜನೆಯಡಿ ಮನೆಯನ್ನು ಪಡೆದ ವ್ಯಕ್ತಿ ಮರಣಹೊಂದಿದರೆ, ನಿಯಮಗಳ ಪ್ರಕಾರ, ಗುತ್ತಿಗೆಯನ್ನು ಕುಟುಂಬದ ಸದಸ್ಯರಿಗೆ ಮಾತ್ರ ವರ್ಗಾಯಿಸಲಾಗುತ್ತದೆ. ಕೆಡಿಎ (KDA) ಬೇರೆ ಯಾವುದೇ ಕುಟುಂಬದೊಂದಿಗೆ ಒಪ್ಪಂದವನ್ನು ಮಾಡಿಕೊಳ್ಳುವುದಿಲ್ಲ. ಈ ಒಪ್ಪಂದದ ಪ್ರಕಾರ, ಹಂಚಿಕೆದಾರರು 5 ವರ್ಷಗಳವರೆಗೆ ಮನೆಗಳನ್ನು ಬಳಸಬೇಕಾಗುತ್ತದೆ. 

ಇದನ್ನೂ ಓದಿ :  ವೇತನ ಮತ್ತು ರಜಾ ನಿಯಮಗಳಿಗೆ ಸಂಬಂಧಿಸಿದಂತೆ ಭಾರೀ ಬದಲಾವಣೆ, ಏನು ಹೇಳುತ್ತದೆ New Wage Code

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News