ಕೇವಲ 20 ನೇ ವಯಸ್ಸಿನಲ್ಲಿ 7300 ಕೋಟಿ ರೂ ಒಡೆಯನಾದ ಆದಿತ್ ಪಲಿಚಾ

ಹೆಚ್ಚಿನ ಜನರು ತಮ್ಮ ವೃತ್ತಿಜೀವನದ ಬಗ್ಗೆ ಗೊಂದಲಕ್ಕೊಳಗಾದ ವಯಸ್ಸಿನಲ್ಲಿ ಆದಿತ್ ಪಲಿಚಾ ಎನ್ನುವ ಯುವಕನೊಬ್ಬ ಸ್ಟಾರ್ಟ್ ಅಪ್ ಆರಂಭಿಸುವ ಮೂಲಕ ಸಾವಿರಾರು ಕೋಟಿಯ ಒಡೆಯನಾಗಿದ್ದಾನೆ.

Last Updated : Apr 16, 2023, 03:49 PM IST
  • ಈ ಕಂಪನಿಯ ಪ್ರಾರಂಭದ ಐದು ತಿಂಗಳೊಳಗೆ 570 ಮಿಲಿಯನ್ ಡಾಲರ್ ಮೌಲ್ಯವನ್ನು ಹೊಂದಿದ್ದು.
  • ಕಳೆದ ವರ್ಷ, ಕಂಪನಿಯು 900 ಮಿಲಿಯನ್ ಡಾಲರ್ ಮೌಲ್ಯವನ್ನು ಗಳಿಸಿದೆ.
  • ಕಂಪನಿಯು ಈಗ ದೆಹಲಿ,ಚೆನ್ನೈ,ಗುರ್ಗಾಂವ್,ಬೆಂಗಳೂರು ಮತ್ತು ಮುಂಬೈನಲ್ಲಿ ವಿತರಿಸುತ್ತದೆ.
ಕೇವಲ 20 ನೇ ವಯಸ್ಸಿನಲ್ಲಿ 7300 ಕೋಟಿ ರೂ ಒಡೆಯನಾದ ಆದಿತ್ ಪಲಿಚಾ title=

ನವದೆಹಲಿ: ಹೆಚ್ಚಿನ ಜನರು ತಮ್ಮ ವೃತ್ತಿಜೀವನದ ಬಗ್ಗೆ ಗೊಂದಲಕ್ಕೊಳಗಾದ ವಯಸ್ಸಿನಲ್ಲಿ ಆದಿತ್ ಪಲಿಚಾ ಎನ್ನುವ ಯುವಕನೊಬ್ಬ ಸ್ಟಾರ್ಟ್ ಅಪ್ ಆರಂಭಿಸುವ ಮೂಲಕ ಸಾವಿರಾರು ಕೋಟಿಯ ಒಡೆಯನಾಗಿದ್ದಾನೆ.

ಹೌದು ಆದಿತ್ ಪಲಿಚಾ ಎನ್ನುವ ಯುವಕ ಕೇವಲ 17 ವರ್ಷದವರಾಗಿದ್ದಾಗ ಉದ್ಯಮಶೀಲತೆಯನ್ನು ಪ್ರಾರಂಭಿಸಿದರು. ಅವರು ಗೋಪೂಲ್ ಹೆಸರಿನ ಸ್ಟಾರ್ಟ್ಅಪ್ ಅನ್ನು ತೆರೆದಿದ್ದರು.ನಂತರ ಕೃತಕ ಬುದ್ದಿಮತ್ತೆ ಆಧಾರಿತ ಯೋಜನೆಯಾದ PryvaSee ಅನ್ನು ಸಹ ಸ್ಥಾಪಿಸಿದರು.ಇದರಲ್ಲಿಈಗ ಅವರು ಅಭೂತಪೂರ್ವ ಯಶಸ್ಸು ಕಂಡಿದ್ದು, ಈಗ ಅವರ ಮೌಲ್ಯಮಾಪನ ಶೂನ್ಯದಿಂದ ಆರಂಭವಾಗಿ ಬರೋಬ್ಬರಿ 7300 ಕೋಟಿ ರೂ ಗೆ ಏರಿಕೆಯಾಗಿದೆ.

ಇದನ್ನೂ ಓದಿ: ಮಾಜಿ ಸಿಎಂ ಜಗದೀಶ್ ಶೆಟ್ಟರ್ ಗಾಗಿ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಸೀಟು ಮೀಸಲಿಟ್ಟ ಕಾಂಗ್ರೆಸ್...!

ಅವರು ಕಂಪ್ಯೂಟರ್ ಇಂಜಿನಿಯರಿಂಗ್‌ನಲ್ಲಿ ತಮ್ಮ ಪದವಿಯನ್ನು ಪೂರ್ಣಗೊಳಿಸಲು ಅಮೆರಿಕಾದ ಸ್ಟ್ಯಾನ್‌ಫೋರ್ಡ್‌ಗೆ ಹೋದರು, ತದನಂತರ Zepto ಸ್ಟಾರ್ಟ್ ಅಪ್  ಕಂಪನಿಗೆ ಏಪ್ರಿಲ್ 2021 ರಲ್ಲಿ ಚಾಲನೆ ನೀಡಿದರು. ಅಚ್ಚರಿ ಎನ್ನುವಂತೆ ಇದು ಪ್ರಾರಂಭವಾದ ಒಂದು ತಿಂಗಳೊಳಗೆ, ಕಂಪನಿಯು 200 ಮಿಲಿಯನ್ ಡಾಲರ್‌ಗಳ ಮೌಲ್ಯವನ್ನು ಗಳಿಸಿತು. ವಿಶೇಷವೆಂದರೆ ಇದು 10 ನಿಮಿಷಗಳಲ್ಲಿ ದಿನಸಿ ಉತ್ಪನ್ನಗಳನ್ನು ತಲುಪಿಸುತ್ತದೆ.ಈಗ ಈ ಪರಿಕಲ್ಪನೆಯು ಭಾರೀ ಯಶಸ್ಸನ್ನು ಗಳಿಸಿದೆ.

ಇದನ್ನೂ ಓದಿ: ಟಿಕೆಟ್ ನೀಡದಿರುವ ಬೆನ್ನಲ್ಲೇ ಫೈಟರ್ ರವಿ ಬಿಜೆಪಿಗೆ ರಾಜೀನಾಮೆ

ಈ ಕಂಪನಿಯ ಪ್ರಾರಂಭದ ಐದು ತಿಂಗಳೊಳಗೆ,ಅವರು 570 ಮಿಲಿಯನ್ ಡಾಲರ್ ಮೌಲ್ಯವನ್ನು ಹೊಂದಿದ್ದು.ಕಳೆದ ವರ್ಷ, ಕಂಪನಿಯು 900 ಮಿಲಿಯನ್ ಡಾಲರ್ ಮೌಲ್ಯವನ್ನು ಗಳಿಸಿದೆ.ಕಂಪನಿಯು ಈಗ ದೆಹಲಿ,ಚೆನ್ನೈ,ಗುರ್ಗಾಂವ್,ಬೆಂಗಳೂರು ಮತ್ತು ಮುಂಬೈನಲ್ಲಿ ವಿತರಿಸುತ್ತದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News