ನವದೆಹಲಿ : Gold Price Today: ಚಿನ್ನ ಖರೀದಿಸಲು ಮುಂದಾಗಿರುವವರಿಗೆ ಸಂತಸದ ಸುದ್ದಿಯಿದೆ. ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಇಂದು ಮತ್ತೆ ಇಳಿಕೆ ಕಂಡು ಬಂದಿದೆ (Gold price today). MCXನಲ್ಲಿ, ಚಿನ್ನದ ಫ್ಯೂಚರ್ ಟ್ರೇಡಿಂಗ್ ನಲ್ಲಿ 10 ಗ್ರಾಂಗೆ ಚಿನ್ನದ ಬೆಲೆ 0.3% ರಷ್ಟು ಕುಸಿದು 52,712 ರೂ.ಗೆ ತಲುಪಿದೆ. ಬೆಳ್ಳಿ ಪ್ರತಿ ಕೆಜಿಗೆ 0.6% ಕುಸಿದು 69970 ರೂ. ಆಗಿದೆ (Silver rate today).
ಚಿನ್ನದ ಬೆಲೆಯಲ್ಲಿ ಕುಸಿತ :
ರಷ್ಯಾ-ಉಕ್ರೇನ್ ಯುದ್ಧದ (Russia Ukraine war) ಪರಿಣಾಮದಿಂದಾಗಿ ಹಲವು ದೇಶಗಳ ಆರ್ಥಿಕ ಸ್ಥಿತಿ ಹದಗೆಟ್ಟಿದೆ. ಜಾಗತಿಕ ಮಾರುಕಟ್ಟೆಗಳನ್ನು ಗಮನಿಸಿದರೆ, ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡು ಬಂದಿದೆ (Gold price).
ಇದನ್ನೂ ಓದಿ : RBI Update: RBI ನಿಂದ ನೂತನ ನಿಯಮ ಜಾರಿ, ನಿಮ್ಮ ಹಣಕಾಸಿನ ಮೇಲೂ ನೇರ ಪ್ರಭಾವ!
11 ತಿಂಗಳಲ್ಲಿ ಹೆಚ್ಚಾಗಿದೆ ಚಿನ್ನದ ಆಮದು :
ಗಮನಾರ್ಹವಾಗಿ, ಪ್ರಸಕ್ತ ಹಣಕಾಸು ವರ್ಷದ ಮೊದಲ 11 ತಿಂಗಳುಗಳಲ್ಲಿ ಅಂದರೆ ಏಪ್ರಿಲ್-ಫೆಬ್ರವರಿಯಲ್ಲಿ ಭಾರತದಲ್ಲಿ ಚಿನ್ನದ ಆಮದು ಶೇಕಡಾ 73 ರಷ್ಟು ಏರಿಕೆಯಾಗಿ 45.1 ಅರಬ್ ಡಾಲರ್ ತಲುಪಿದೆ. ಹೆಚ್ಚುತ್ತಿರುವ ಬೇಡಿಕೆಯಿಂದಾಗಿ ಚಿನ್ನದ ಆಮದು ಹೆಚ್ಚಾಗಿದೆ. ಇದರೊಂದಿಗೆ, ಹಿಂದಿನ ಹಣಕಾಸು ವರ್ಷ ಇದೇ ಅವಧಿಯಲ್ಲಿ ಚಿನ್ನದ ಆಮದು $26.11 ಬಿಲಿಯನ್ ಆಗಿತ್ತು.
3 ರಷ್ಟು ಜಿಎಸ್‌ಟಿಯನ್ನು ಪ್ರತ್ಯೇಕವಾಗಿ ವಿಧಿಸಲಾಗುತ್ತದೆ :
www.ibjarates.com ನಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಗಳನ್ನು ಬೆಳಿಗ್ಗೆ ಮತ್ತು ಸಂಜೆ ನೀಡಲಾಗುತ್ತದೆ (How to find gold rate). ಈ ವೆಬ್‌ಸೈಟ್ ನೀಡಿದ ದರಕ್ಕೆ 3 ಪ್ರತಿಶತ ಜಿಎಸ್‌ಟಿಯನ್ನು (GST)ಪ್ರತ್ಯೇಕವಾಗಿ ಸೇರಿಸಬೇಕಾಗುತ್ತದೆ.
ಇದನ್ನೂ ಓದಿ :Post Office: April ನಿಂದ ಬದಲಾಗುತ್ತಿವೆ ಈ ನಿಯಮಗಳು, ಗಮನಿಸದೆ ಹೋದರೆ ತೊಂದರೆ ತಪ್ಪಿದ್ದಲ್ಲ
ಚಿನ್ನ ಬೆಳ್ಳಿಯ ಬೆಲೆಯನ್ನು ಹೀಗೆ ತಿಳಿಯಿರಿ :
ನೀವು ಚಿನ್ನ ಅಥವಾ ಬೆಳ್ಳಿಯನ್ನು ಖರೀದಿಸಲು ಯೋಜಿಸುತ್ತಿದ್ದರೆ, ನೀವು ಒಮ್ಮೆ ಬೆಲೆಯನ್ನು ಪರಿಶೀಲಿಸುವುದು ಮುಖ್ಯ. ದರವನ್ನು ಕಂಡುಹಿಡಿಯಲು ನೀವು ಎಲ್ಲಿಯೂ ಹೋಗಬೇಕಾಗಿಲ್ಲ. ಮನೆಯಲ್ಲಿ ಕುಳಿತು ಸುಲಭವಾಗಿ ಚಿನ್ನದ ದರವನ್ನು ಕಂಡುಹಿಡಿಯಬಹುದು. ಇದಕ್ಕಾಗಿ 8955664433 ನಂಬರ್ ಗೆ ಮಿಸ್ಡ್ ಕಾಲ್ ನೀಡಬಹುದು. ಈ ನಂಬರ್ ಗೆ ಮಿಸ್ಡ್ ಕಾಲ್ ನೀಡಿದರೆ ನಿಮ್ಮ ಫೋನ್ ಗೆ ಮೆಸೇಜ್ ಬರುತ್ತದೆ. ಅದರಲ್ಲಿ ನೀವು ಇತ್ತೀಚಿನ ದರಗಳನ್ನು ಪರಿಶೀಲಿಸಬಹುದು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.