Eleksa CityBug: ಕೈಗೆಟುಕುವ ಬೆಲೆಯಲ್ಲಿ ಲಭ್ಯವಿರುವ ಈ ಕಾರ್ ಒಂದೇ ಚಾರ್ಜ್‌ನಲ್ಲಿ 200 ಕಿಮೀ ವರೆಗೆ ಚಲಿಸುತ್ತಂತೆ

Eleksa CityBug: ಚೀನಾದ ತಯಾರಕರಾದ ELEKSA ಸಿಟಿಬಗ್ ಎಲೆಕ್ಟ್ರಿಕ್ ಕಾರನ್ನು ದಕ್ಷಿಣ ಆಫ್ರಿಕಾದಲ್ಲಿ ಬಿಡುಗಡೆ ಮಾಡಿದೆ. ಇದು ದಕ್ಷಿಣ ಆಫ್ರಿಕಾದ ಅತ್ಯಂತ ಅಗ್ಗದ ಕಾರು.

Written by - Yashaswini V | Last Updated : Jan 27, 2022, 12:37 PM IST
  • ELEKSA ಸಿಟಿಬಗ್ ಎಲೆಕ್ಟ್ರಿಕ್ ಕಾರ್
  • ದಕ್ಷಿಣ ಆಫ್ರಿಕಾದ ಅಗ್ಗದ EV
  • ಕಾರು ಒಮ್ಮೆ ಚಾರ್ಜ್ ಮಾಡಿದರೆ 200 ಕಿ.ಮೀ ವರೆಗೆ ಚಲಿಸಲಿದೆ ಎಂದು ಕಂಪನಿ ಹೇಳಿಕೊಂಡಿದೆ
Eleksa CityBug:  ಕೈಗೆಟುಕುವ ಬೆಲೆಯಲ್ಲಿ ಲಭ್ಯವಿರುವ ಈ ಕಾರ್ ಒಂದೇ ಚಾರ್ಜ್‌ನಲ್ಲಿ 200 ಕಿಮೀ ವರೆಗೆ ಚಲಿಸುತ್ತಂತೆ  title=
Eleksa CityBug

Eleksa CityBug: ಚೀನಾದ EV ತಯಾರಕ ELEKSA ದಕ್ಷಿಣ ಆಫ್ರಿಕಾದ ಮಾರುಕಟ್ಟೆಯಲ್ಲಿ ಸಿಟಿಬಗ್ ಎಲೆಕ್ಟ್ರಿಕ್ ಕಾರನ್ನು ಪರಿಚಯಿಸಿದೆ. ಸಿಟಿಬಗ್ ಎಲೆಕ್ಟ್ರಿಕ್ ದಕ್ಷಿಣ ಆಫ್ರಿಕಾದ ಮಾರುಕಟ್ಟೆಯಲ್ಲಿ ಇದುವರೆಗೆ ಅಗ್ಗದ ಎಲೆಕ್ಟ್ರಿಕ್ ಕಾರ್ ಆಗಿದೆ, ಇದರ ಬೆಲೆ $ 14945 - ಸುಮಾರು ರೂ. 11.24 ಲಕ್ಷ. ಈ ಚಿಕ್ಕ ಗಾತ್ರದ ಕಾರು ಎರಡು ಡೋರ್ ಅನ್ನು ಹೊಂದಿದ್ದು, ಅದರಲ್ಲಿ 4 ಜನರಿಗೆ ಆಸನದ ವ್ಯವಸ್ಥೆಯನ್ನು ಮಾಡಲಾಗಿದೆ. ಇದರ ತೂಕ ಕೇವಲ 450 ಕೆಜಿ. ಸಿಟ್‌ಬಗ್‌ನೊಂದಿಗೆ, ಕಂಪನಿಯು ಬಹಳಷ್ಟು ವೈಶಿಷ್ಟ್ಯಗಳನ್ನು ನೀಡಿದೆ. ಈ ಕಾರಣದಿಂದಾಗಿ ಈ ಕಾರನ್ನು ಬಜೆಟ್ ಕಾರು ಎಂದು ಹೇಳಲಾಗುತ್ತಿದೆ.

200 ಕಿಮೀ ವರೆಗೆ ಮೈಲೇಜ್:
ಸಿಟಿಬಗ್ ಎಲೆಕ್ಟ್ರಿಕ್ ಕಾರನ್ನು  (Citybug Electric Car) ಯುರೋಪ್, ಯುನೈಟೆಡ್ ಕಿಂಗ್‌ಡಮ್ ಮತ್ತು ಪ್ರಪಂಚದಾದ್ಯಂತದ ಅನೇಕ ದೇಶಗಳಲ್ಲಿ ಬಿಡುಗಡೆ ಮಾಡಿದ ನಂತರ, ಇದನ್ನು ಈಗ ದಕ್ಷಿಣ ಆಫ್ರಿಕಾದಲ್ಲಿ ಪರಿಚಯಿಸಲಾಗಿದೆ. ಇದರ ಚಾಲನೆಗೆ ತಗಲುವ ವೆಚ್ಚ ತುಂಬಾ ಕಡಿಮೆ ಮತ್ತು ನಗರಗಳಲ್ಲಿ ಬಳಸಲು ತುಂಬಾ ಯೋಗ್ಯವಾದುದು ಎಂದು ಕಂಪನಿ ಹೇಳಿಕೊಂಡಿದೆ. ಕಾರು 9 kW-R ಬ್ಯಾಟರಿಯಿಂದ ಚಾಲಿತವಾಗಿದ್ದು, 4 kW ಎಲೆಕ್ಟ್ರಿಕ್ ಮೋಟರ್‌ಗೆ ಜೋಡಿಸಲಾಗಿದೆ. ಒಮ್ಮೆ ಸಂಪೂರ್ಣವಾಗಿ ಚಾರ್ಜ್ ಮಾಡಿದರೆ, ಈ ಕಾರನ್ನು 200 ಕಿಮೀ ವರೆಗೆ ಓಡಿಸಬಹುದು ಮತ್ತು ಅದರ ಗರಿಷ್ಠ ವೇಗ ಗಂಟೆಗೆ 60 ಕಿಮೀ ಎಂದು ಕಂಪನಿ ಹೇಳಿಕೊಂಡಿದೆ.

ಇದನ್ನೂ ಓದಿ- Komaki Venice: ಭಾರತದಲ್ಲಿ ಬಿಡುಗಡೆ ಆಗಿದೆ ಫುಲ್ ಚಾರ್ಜ್‌ನಲ್ಲಿ 120 ಕಿಮೀವರೆಗೆ ಚಲಿಸುವ ಎಲೆಕ್ಟ್ರಿಕ್ ಸ್ಕೂಟರ್

ಕಡಿಮೆ ಬಜೆಟ್ನಲ್ಲಿ ಉತ್ತಮ ವೈಶಿಷ್ಟ್ಯಗಳು ಲಭ್ಯ:
ಈ ಬಜೆಟ್ ಎಲೆಕ್ಟ್ರಿಕ್ ಕಾರಿನಲ್ಲಿ (Electric Car) ಕಿಟಕಿಗಳು, ಹವಾನಿಯಂತ್ರಣ ವ್ಯವಸ್ಥೆ, ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಮತ್ತು ಇನ್ಫೋಟೈನ್‌ಮೆಂಟ್ ಹಬ್‌ನೊಂದಿಗೆ ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಮ್ ಸೇರಿದಂತೆ ಅನೇಕ ವೈಶಿಷ್ಟ್ಯಗಳನ್ನು ಒದಗಿಸಲಾಗಿದೆ. ಇದಲ್ಲದೆ, ಕಾರಿಗೆ ELEKSA ಸಿಟಿಬಗ್‌ನೊಂದಿಗೆ ಸಂಯೋಜಿತ ನ್ಯಾವಿಗೇಷನ್ ಅನ್ನು ಸಹ ನೀಡಲಾಗಿದೆ.

ಇದನ್ನೂ ಓದಿ- 69 ವರ್ಷಗಳ ಮತ್ತೆ ಟಾಟಾ ತೆಕ್ಕೆಗೆ ಏರ್ ಇಂಡಿಯಾ, ಇಂದು ಪೂರ್ಣಗೊಳ್ಳಲಿದೆ ಹಸ್ತಾಂತರ ಪ್ರಕ್ರಿಯೆ

ಸಿಟಿಬಗ್ 300 ಕೆಜಿ ವರೆಗೆ ಭಾರ ಹೊರುವ ಸಾಮರ್ಥ್ಯ ಹೊಂದಿದೆ. ಈ ಎಲೆಕ್ಟ್ರಿಕ್ ಕಾರ್‌ನೊಂದಿಗೆ ನಗರಗಳಲ್ಲಿ ಅನೇಕ ದೂರದವರೆಗೆ ಸುಲಭವಾಗಿ ಕ್ರಮಿಸಬಹುದು ಎಂದು ಕಂಪನಿ ಹೇಳಿಕೊಂಡಿದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News