Filing Income Tax Return: ಡಿಸೆಂಬರ್ 31ರ ಮೊದಲು ಈ ಕೆಲಸಗಳನ್ನು ಪೂರ್ಣಗೊಳಿಸಿ, ಇಲ್ದಿದ್ರೆ ಜನವರಿ ನಂತರ ಪೆನಾಲ್ಟಿ ಗ್ಯಾರಂಟಿ

ITR Filing - ಒಂದು ವೇಳೆ ನೀವೂ ಕೂಡ ಆದಾಯ ತೆರಿಗೆಯ ವ್ಯಾಪ್ತಿಗೆ ಬರುತ್ತಿದ್ದರೆ, ಆದಾಯ ತೆರಿಗೆ ರಿಟರ್ನ್ ಸಲ್ಲಿಸಲು ಕೊನೆಯ ದಿನಾಂಕ ಸಮೀಪಿಸುತ್ತಿದೆ. ಡಿಸೆಂಬರ್ 31 ರೊಳಗೆ ನಿಮ್ಮ ಆದಾಯ ತೆರಿಗೆ ರಿಟರ್ನ್ ಅನ್ನು ಪಾವತಿಸದೇ ಹೋದರೆ ನೀವು ಭಾರೀ ದಂಡವನ್ನೇ ಪಾವತಿಸಬೇಕಾಗಲಿದೆ.

Written by - Nitin Tabib | Last Updated : Dec 5, 2021, 12:19 PM IST
  • ಆದಾಯ ತೆರಿಗೆ ರಿಟರ್ನ್ ಸಲ್ಲಿಸಲು ಕೊನೆಯ ದಿನಾಂಕ ಸಮೀಪಿಸುತ್ತಿದೆ.
  • ಡಿಸೆಂಬರ್ 31 ರೊಳಗೆ ನಿಮ್ಮ ಆದಾಯ ತೆರಿಗೆ ರಿಟರ್ನ್ ಪಾವತಿಸಿ.
  • ಪಾವತಿಸದೇ ಹೋದರೆ ನೀವು ಭಾರೀ ದಂಡವನ್ನೇ ಪಾವತಿಸಬೇಕಾಗಲಿದೆ.
Filing Income Tax Return: ಡಿಸೆಂಬರ್ 31ರ ಮೊದಲು ಈ ಕೆಲಸಗಳನ್ನು ಪೂರ್ಣಗೊಳಿಸಿ, ಇಲ್ದಿದ್ರೆ ಜನವರಿ ನಂತರ ಪೆನಾಲ್ಟಿ ಗ್ಯಾರಂಟಿ

ನವದೆಹಲಿ: Income Tax - ಆದಾಯ ತೆರಿಗೆ ರಿಟರ್ನ್ (Income tax return file) ಸಲ್ಲಿಸಲು ಕೊನೆಯ ದಿನಾಂಕ 31 ಡಿಸೆಂಬರ್ 2021. ನೀವು ಈ ಗಡುವನ್ನು ತಪ್ಪಿಸಿಕೊಂಡರೆ, ನೀವು ರೂ 5,000 ದಂಡವನ್ನು ಪಾವತಿಸಬೇಕಾಗಬಹುದು. ಆದರೆ, ಕೆಲವು ತೆರಿಗೆದಾರರು ತಮ್ಮ ITR ಅನ್ನು ಯಾವುದೇ ದಂಡವಿಲ್ಲದೆ ಗಡುವು ಮುಗಿದ ನಂತರವೂ ಸಲ್ಲಿಸಬಹುದು. ಯಾವ ತೆರಿಗೆದಾರರು ಈ ಗಡುವಿನಿಂದ ವಿನಾಯಿತಿ ಪಡೆಯಲಿದ್ದಾರೆ  ತಿಳಿಯೋಣ ಬನ್ನಿ.

ಕೇಂದ್ರೀಯ ನೇರ ತೆರಿಗೆಗಳ ಮಂಡಳಿ (CBDT) ಮತ್ತೊಮ್ಮೆ 2020-21 ರ ಹಣಕಾಸು ವರ್ಷಕ್ಕೆ ITR ಅನ್ನು ಸಲ್ಲಿಸುವ ಗಡುವನ್ನು 31 ಡಿಸೆಂಬರ್ 2021 ಕ್ಕೆ ವಿಸ್ತರಿಸಿದೆ. ಡಿಸೆಂಬರ್ 31 ರ ನಂತರ ಐಟಿಆರ್ ಸಲ್ಲಿಸಿದರೆ ರೂ 5,000 ದಂಡ ವಿಧಿಸಲಾಗುತ್ತದೆ.

5,000 ದಂಡ ತೆರಬೇಕಾಗುತ್ತದೆ
ಸರ್ಕಾರ ನೀಡಿದ ದಿನಾಂಕದ ನಂತರ ರಿಟರ್ನ್ ಸಲ್ಲಿಸಿದರೆ ರೂ 5,000 ದಂಡ ಪಾವತಿಸಬೇಕಾಗಲಿದೆ. ಇದನ್ನು ಆದಾಯ ತೆರಿಗೆಯ ಸೆಕ್ಷನ್ 234Fನಲ್ಲಿ ಉಲ್ಲೇಖಿಸಲಾಗಿದೆ. ಆದರೆ, ತೆರಿಗೆದಾರರ ಆದಾಯ 5 ಲಕ್ಷ ರೂ. ಒಳಗಿದ್ದರೆ, ಲೆಟ್ ಫೀ 1,000 ರೂಪಾಯಿ ಪಾವತಿಸುವ ನಿಯಮವಿದೆ . 5 ಲಕ್ಷಕ್ಕಿಂತ ಹೆಚ್ಚು ಗಳಿಸಿದರೆ ದಂಡದ ಮೊತ್ತ ಹೆಚ್ಚಾಗುತ್ತದೆ.

ಯಾರು ದಂಡವನ್ನು ಪಾವತಿಸಬೇಕಾಗಿಲ್ಲ
ಒಟ್ಟು ಆದಾಯವು ಮೂಲ ವಿನಾಯಿತಿಯ ಮಿತಿಯನ್ನು ಮೀರದಿದ್ದರೆ, ITR ಅನ್ನು ಸಲ್ಲಿಸುವಲ್ಲಿ ವಿಳಂಬಕ್ಕೆ ಯಾವುದೇ ದಂಡವಿರುವುದಿಲ್ಲ. ಒಟ್ಟು ಆದಾಯವು ವಿನಾಯಿತಿಯ ಮೂಲ ಮಿತಿಗಿಂತ ಕಡಿಮೆಯಿದ್ದರೆ, ನಂತರ ರಿಟರ್ನ್ ಅನ್ನು ತಡವಾಗಿ ಸಲ್ಲಿಸುವುದಕ್ಕಾಗಿ ಸೆಕ್ಷನ್ 234F ಅಡಿಯಲ್ಲಿ ಯಾವುದೇ ದಂಡವಿರುವುದಿಲ್ಲ.

ಇದನ್ನೂ ಓದಿ-ಜೆಎನ್‌ಯುನಲ್ಲಿ ಶ್ರೀರಾಮನಿಗೆ ಸಂಬಂಧಿಸಿದ ವಿವಾದಾತ್ಮಕ ಸಾಕ್ಷ್ಯಚಿತ್ರದ ಪ್ರದರ್ಶನ, ಗದ್ದಲ!

ಐಟಿಆರ್ ಅನ್ನು ಹೇಗೆ ಸಲ್ಲಿಸಬೇಕು  (e-filing portal)
ನೀವು ಇ-ಫೈಲಿಂಗ್ ಪೋರ್ಟಲ್‌ಗೆ ಭೇಟಿ ನೀಡುವ ಮೂಲಕ ನಿಮ್ಮ ತೆರಿಗೆ ರಿಟರ್ನ್ ಅನ್ನು ಸಲ್ಲಿಸಲು ಬಯಸಿದರೆ, ನೀವು ಈ ಹಂತಗಳನ್ನು ಅನುಸರಿಸುವ ಮೂಲಕ ಈ ಕೆಲಸವನ್ನು ಮಾಡಬಹುದು.

ಇದನ್ನೂ ಓದಿ-Corona Alert: ಮೂರು ಅಥವಾ ಹೆಚ್ಚು ಪ್ರಕರಣಗಳಿರುವ ಪ್ರದೇಶಗಳನ್ನು ಕ್ಲಸ್ಟರ್‌ಗಳಾಗಿ ವರ್ಗೀಕರಣ

>> ಮೊದಲಿಗೆ ಇ-ಫೈಲಿಂಗ್ ಪೋರ್ಟಲ್ incometax.gov.in ಗೆ ಹೋಗಿ ಮತ್ತು ಲಾಗಿನ್ ಬಟನ್ ಕ್ಲಿಕ್ ಮಾಡಿ.
>> ಈಗ ನೀವು ನಿಮ್ಮ ಬಳಕೆದಾರ ಹೆಸರನ್ನು ನಮೂದಿಸಬೇಕು ಮತ್ತು Continue ಬಟನ್ ಕ್ಲಿಕ್ ಮಾಡಬೇಕು.
>> ಈಗ ನೀವು ನಿಮ್ಮ password ನಮೂದಿಸಬೇಕು.
>> ಈಗ e-File ಟ್ಯಾಬ್ ಮೇಲೆ ಕ್ಲಿಕ್ ಮಾಡಿ ಮತ್ತು File Income Tax Return ಆಯ್ಕೆಯನ್ನು ಕ್ಲಿಕ್ ಮಾಡಿ.
>> ಮೌಲ್ಯಮಾಪನ ವರ್ಷ 2021-22 ಅನ್ನು ಆಯ್ಕೆಮಾಡಿ ಮತ್ತು ನಂತರ Continue ಆಯ್ಕೆಯನ್ನು ಕ್ಲಿಕ್ ಮಾಡಿ.
>> ನಂತರ 'ಆನ್‌ಲೈನ್' ಅಥವಾ 'ಆಫ್‌ಲೈನ್' ಆಯ್ಕೆಯನ್ನು ಆರಿಸಲು ನಿಮ್ಮನ್ನು ಕೇಳಲಾಗುತ್ತದೆ.
>> ಆನ್‌ಲೈನ್ ಆಯ್ಕೆಯನ್ನು ಆರಿಸಿ ಮತ್ತು Continue ಟ್ಯಾಬ್ ಕ್ಲಿಕ್ ಮಾಡಿ.
>> ಈಗ 'Personal' ಆಯ್ಕೆಯನ್ನು ಆರಿಸಿ.
>> ವೈಯಕ್ತಿಕ, ಹಿಂದೂ ಅವಿಭಜಿತ ಕುಟುಂಬ (HUF) ಅಥವಾ ಇತರೆ.
>> Continue ಟ್ಯಾಬ್ ಮೇಲೆ ಕ್ಲಿಕ್ ಮಾಡಿ.
>> ITR-1 ಅಥವಾ ITR-4 ಅನ್ನು ಆಯ್ಕೆ ಮಾಡಿ ಮತ್ತು ಮುಂದುವರಿಸಿ ಟ್ಯಾಬ್ ಅನ್ನು ಕ್ಲಿಕ್ ಮಾಡಿ.
>> ರಿಟರ್ನ್‌ಗೆ ಕಾರಣವನ್ನು ಸೆಕ್ಷನ್ 139(1) ಅಡಿಯಲ್ಲಿ 7 ನೇ ನಿಬಂಧನೆಯ ಅಡಿಯಲ್ಲಿ ಅಥವಾ ವಿನಾಯಿತಿ ಮಿತಿಗಿಂತ ಹೆಚ್ಚಿನದನ್ನು ಕೇಳಲಾಗುತ್ತದೆ.
>> ITR ಅನ್ನು ಆನ್‌ಲೈನ್‌ನಲ್ಲಿ ಸಲ್ಲಿಸುವಾಗ ಸರಿಯಾದ ಆಯ್ಕೆಯನ್ನು ಆರಿಸಿ.
>> ನಿಮ್ಮ ಬ್ಯಾಂಕ್ ಖಾತೆ ವಿವರಗಳನ್ನು ನಮೂದಿಸಿ.
>> ಈಗ ITR ಫೈಲ್ ಮಾಡಲು ಹೊಸ ಪುಟಕ್ಕೆ ರೀಡೈರೆಕ್ಟ್ ಮಾಡಲಾಗುತ್ತದೆ.
>> ನಿಮ್ಮ ITR ಅನ್ನು ಪರಿಶೀಲಿಸಿ ಮತ್ತು ಆದಾಯ ತೆರಿಗೆ ಇಲಾಖೆಗೆ ರಿಟರ್ನ್‌ನ ಹಾರ್ಡ್ ಪ್ರತಿಯನ್ನು ಕಳುಹಿಸಿ.

ಇದನ್ನೂ ಓದಿ-ಗ್ರಹಣ 2022: ಯಾವಾಗ ಗೋಚರಿಸುತ್ತದೆ ಮುಂದಿನ ಗ್ರಹಣ?, ಯಾವ ರಾಶಿಗಳಿಗೆ ಹೆಚ್ಚು ಪರಿಣಾಮ!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

More Stories

Trending News