ಮನೆಯಿಂದಲೇ ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಸಬಹುದು.. ಸುಲಭ ಮಾರ್ಗ.. ಸಂಪೂರ್ಣ ವಿವರ ಇಲ್ಲಿದೆ!!

Apply for passport from home: ಈಗ ನೀವು ಮನೆಯಲ್ಲಿ ಕುಳಿತು ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಸಬಹುದಾಗಿದೆ.. ಹೇಗೆ ಸಾಧ್ಯ ಅಂತೀರಾ..? ಇಲ್ಲಿದೆ ಕಂಪ್ಲೀಟ್‌ ಡಿಟೇಲ್ಸ್‌. 

Written by - Savita M B | Last Updated : Dec 16, 2023, 08:50 AM IST
  • ನೀವು ವಿದೇಶಕ್ಕೆ ಪ್ರಯಾಣಿಸಲು ಮೊದಲು ಬೇಕಿರುವುದು ನಿಮ್ಮ ಪಾಸ್ಪೋರ್ಟ್
  • ಅದನ್ನು ಪಡೆಯುವ ಪ್ರಕ್ರಿಯೆಯು ಈಗ ಹೆಚ್ಚು ಸುಲಭವಾಗಿದೆ
  • ಹೌದು ಮನೆಯಲ್ಲೇ ಕುಳಿತುಕೊಂಡು ಆನ್‌ಲೈನ್‌ನಲ್ಲಿ ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಸಬಹುದಾಗಿದೆ..
ಮನೆಯಿಂದಲೇ ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಸಬಹುದು.. ಸುಲಭ ಮಾರ್ಗ.. ಸಂಪೂರ್ಣ ವಿವರ ಇಲ್ಲಿದೆ!! title=

Passport from home: ನೀವು ವಿದೇಶಕ್ಕೆ ಪ್ರಯಾಣಿಸಲು ಮೊದಲು ಬೇಕಿರುವುದು ನಿಮ್ಮ ಪಾಸ್ಪೋರ್ಟ್. ಅದನ್ನು ಪಡೆಯುವ ಪ್ರಕ್ರಿಯೆಯು ಈಗ ಹೆಚ್ಚು ಸುಲಭವಾಗಿದೆ... ಹೌದು ಮನೆಯಲ್ಲೇ ಕುಳಿತುಕೊಂಡು ಆನ್‌ಲೈನ್‌ನಲ್ಲಿ ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಸಬಹುದಾಗಿದೆ.. 

ನೀವು ಮನೆಯಲ್ಲಿ ಕುಳಿತು ಪಾಸ್‌ಪೋರ್ಟ್ ಪಡೆಯಲು ಬಯಸಿದರೆ, ನೀವು ಎಂ-ಪಾಸ್‌ಪೋರ್ಟ್ ಸೇವಾ ಅಪ್ಲಿಕೇಶನ್ ಮೂಲಕ ಸುಲಭವಾಗಿ ಅರ್ಜಿ ಸಲ್ಲಿಸಬಹುದು.. ಈ ಅಪ್ಲಿಕೇಶನ್‌ನಲ್ಲಿ ನಿಮ್ಮ ಆಧಾರ್ ಕಾರ್ಡ್‌ನ ಸಹಾಯದಿಂದ ಮಾತ್ರ ನೀವು ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಸಬಹುದು. ಪಾಸ್ ಪೋರ್ಟ್ ಪಡೆಯಲು ರೂ.1500 ಶುಲ್ಕ ಪಾವತಿಸಬೇಕು.. ಅರ್ಜಿ ಸಲ್ಲಿಸಿದ ನಂತರ,  ಒಂದು ಬಾರಿ ಪೊಲೀಸ್ ಪರಿಶೀಲನೆ ಮಾಡಲಾಗುತ್ತದೆ.. ಅದರ ನಂತರ, ನಿಮ್ಮ ಪಾಸ್‌ಪೋರ್ಟ್ ಸ್ವಯಂಚಾಲಿತವಾಗಿ ರಚಿಸಲ್ಪಡುತ್ತದೆ ಮತ್ತು ನಿಮ್ಮ ವಿಳಾಸಕ್ಕೆ ಬಂದು ತಲುಪುತ್ತದೆ.

ಇದನ್ನೂ ಓದಿ-ಇನ್ನು ಮುಂದೆ ಟಿಕೆಟ್ ರದ್ದುಗೊಳಿಸಿದರೆ ಮರುಪಾವತಿಯಾಗುವುದೇ ? ಏನು ಹೇಳುತ್ತದೆ ರೈಲ್ವೆಯ ಹೊಸ ನಿಯಮ

ಮೊದಲು ನೀವು ನಿಮ್ಮ ಮೊಬೈಲ್‌ನಲ್ಲಿ mPassport ಸೇವಾ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿಕೊಂಡು.. ಈ ಅಪ್ಲಿಕೇಶನ್‌ನಲ್ಲಿ ನಿಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕು. ಇದನ್ನು ಮಾಡಲು, ನೀವು ಹೊಸ ಬಳಕೆದಾರರ ನೋಂದಣಿ ಲಿಂಕ್ ಅನ್ನು ಕ್ಲಿಕ್ ಮಾಡಿ.. ನಿಮ್ಮ ವಿಳಾಸವನ್ನು ಆಧರಿಸಿ ನಿಮ್ಮ ಹತ್ತಿರದ ಪಾಸ್ಪೋರ್ಟ್ ಕಚೇರಿಯನ್ನು ನೀವು ಆಯ್ಕೆ ಮಾಡಬೇಕಾಗುತ್ತದೆ.

ನಿಮ್ಮ ವಿಳಾಸ ಇರುವ ರಾಜ್ಯದ ಪಾಸ್‌ಪೋರ್ಟ್ ಕಚೇರಿಯನ್ನು ಆಯ್ಕೆಮಾಡಿದ ನಂತರ ಹೆಸರು, ಜನ್ಮ ದಿನಾಂಕ, ಇಮೇಲ್ ಐಡಿ ಮತ್ತು ಇತರ ವಿಷಯಗಳನ್ನು ನಮೂದಿಸಿದ ಮೇಲೆ.. ವೈಯಕ್ತಿಕ ಲಾಗಿನ್ ಐಡಿ-ಪಾಸ್‌ವರ್ಡ್, ಇತರ ವಿವರಗಳು ಮತ್ತು ಕ್ಯಾಪ್ಚಾ ಕೋಡ್ ಅನ್ನು ನಮೂದಿಸಿ ಮತ್ತು ಸಲ್ಲಿಸು ಬಟನ್ ಕ್ಲಿಕ್ ಮಾಡಿ. ಒಮ್ಮೆ ನೀವು ಈ ಪ್ರಕ್ರಿಯೆಯನ್ನು ಮಾಡಿದ ನಂತರ. ಪಾಸ್ಪೋರ್ಟ್ ಕಚೇರಿಯಿಂದ ನಿಮ್ಮ ಇಮೇಲ್‌ಗೆ ಪರಿಶೀಲನೆ ಲಿಂಕ್ ಕಳುಹಿಸಲಾಗುತ್ತದೆ.

ಇದನ್ನೂ ಓದಿ-ಸ್ವಂತ ಉದ್ಯಮ ಆರಂಭಿಸಬೇಕೆ? ಮೋದಿ ಸರ್ಕಾರ ನೀಡುತ್ತೇ 10 ಲಕ್ಷ ರೂ.ಗಳು, ಹೀಗೆ ಅರ್ಜಿ ಸಲ್ಲಿಸಿ!

ಆ ಲಿಂಕ್ ಅನ್ನು ಕ್ಲಿಕ್ ಮಾಡಿದ ನಂತರ, ಮತ್ತೊಂದು ಹೊಸ ವೆಬ್ ಪೇಜ್‌ ಓಪನ್‌ ಆಗುತ್ತದೆ.. ಮತ್ತು ಪರಿಶೀಲನೆಗಾಗಿ ಲಾಗಿನ್ ಐಡಿಯನ್ನು ನಮೂದಿಸಲು ಕೇಳಲಾಗುತ್ತದೆ. ಖಾತೆಯನ್ನು ಪರಿಶೀಲಿಸಿದ ಮೇಲೆ .. ನೀವು ಅಪ್ಲಿಕೇಶನ್ ಅನ್ನು ಕ್ಲೋಸ್‌ ಮಾಡಿ ಮತ್ತೆ ಲಾಗಿನ್ ಮಾಡಬೇಕಾಗುತ್ತದೆ.. ಮುಂದೆ ಬಳಕೆದಾರರ ಟ್ಯಾಬ್ ಲಿಂಕ್ ಅನ್ನು ಕ್ಲಿಕ್ ಮಾಡಿ.. ಲಾಗಿನ್ ಐಡಿ, ಪಾಸ್ವರ್ಡ್ ಮತ್ತು ಕ್ಯಾಪ್ಚಾ ಕೋಡ್ ಅನ್ನು ನಮೂದಿಸಿ.. ಹೊಸ ಪಾಸ್‌ಪೋರ್ಟ್‌ಗಾಗಿ ಅರ್ಜಿ ಬಟನ್ ಕ್ಲಿಕ್ ಮಾಡಿ.. ನಂತರ ಪ್ರಾದೇಶಿಕ ಪಾಸ್‌ಪೋರ್ಟ್ ಕಚೇರಿಯನ್ನು ಆರಿಸುವುದರ ಜೊತೆಗೆ ನಿಮ್ಮ ಪಾಸ್ಪೋರ್ಟ್ ಪ್ರಕಾರವನ್ನು ಆಯ್ಕೆ ಮಾಡಬೇಕು.

ಇದರ ನಂತರ, ನಿಮ್ಮ ಬಗ್ಗೆ ಕೇಳಲಾದ ಮಾಹಿತಿಯನ್ನು ಭರ್ತಿ ಮಾಡಿ ಮತ್ತು ಅಪ್ಲಿಕೇಶನ್‌ನಲ್ಲಿ ತಿಳಿಸಲಾದ ವಿಧಾನವನ್ನು ಅನುಸರಿಸಿ. ನಂತರ ನಿಮ್ಮ ವಿಳಾಸ ಮತ್ತು ಸಂಬಂಧಿತ ಮಾಹಿತಿಯನ್ನು ಭರ್ತಿ ಮಾಡಿ. ವಿಟ್‌ನೆಸ್‌ ಅಂದರೇ ತುರ್ತು ಪರಿಸ್ಥಿತಿಯಲ್ಲಿ ನಿಮಗೆ ಸಹಾಯ ಮಾಡುವ ವ್ಯಕ್ತಿಯ ವಿವರಗಳನ್ನು ನೀಡಿ. ಅಗತ್ಯವಿರುವ ಎಲ್ಲ ಮಾಹಿತಿಯನ್ನು ಒದಗಿಸಿ ಮತ್ತು ಅಂತಿಮವಾಗಿ ಶುಲ್ಕವನ್ನು ಪಾವತಿಸಿ... ನಂತರ, ಪಾಸ್ಪೋರ್ಟ್ ಕೇಂದ್ರಕ್ಕೆ ಭೇಟಿ ನೀಡಿ ಮತ್ತು ದಾಖಲೆಗಳನ್ನು ಪರಿಶೀಲಿಸಿ. 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News