ಬ್ಯಾಂಕ್ ಲಾಕರ್ ಹೊಸ ನಿಯಮಗಳು: ಗ್ರಾಹಕರಿಗೆ ಸಿಗುವ ಪ್ರಯೋಜನಗಳಿವು!

ಬ್ಯಾಂಕ್ ಲಾಕರ್ ಹೊಸ ನಿಯಮಗಳು:  ಬ್ಯಾಂಕ್ ಲಾಕರ್ ಬಗ್ಗೆ ಗ್ರಾಹಕರ ದೂರುಗಳ ಹಿನ್ನಲೆಯಲ್ಲಿ   ರಿಸರ್ವ್ ಬ್ಯಾಂಕ್ ಲಾಕರ್ ನಿಯಮಗಳಲ್ಲಿ ಪ್ರಮುಖ ಬದಲಾವಣೆಗಳನ್ನು ಜಾರಿಗೆ ತಂದಿದೆ. 

Written by - Yashaswini V | Last Updated : Apr 21, 2022, 12:36 PM IST
  • ಬ್ಯಾಂಕ್‌ನಲ್ಲಿ ಲಾಕರ್ ತೆಗೆದುಕೊಳ್ಳುವ ಗ್ರಾಹಕರ ದೂರುಗಳನ್ನು ಆಧರಿಸಿ ಹೊಸ ನಿಯಮಗಳನ್ನು ಜಾರಿಗೆ ತರಲಾಗಿದೆ.
  • ಈ ಹೊಸ ನಿಯಮಗಳ ಅನುಷ್ಠಾನದಿಂದ ಬ್ಯಾಂಕ್ ಗ್ರಾಹಕರಿಗೆ ನೇರ ಪ್ರಯೋಜನ.
  • ಗ್ರಾಹಕರಿಗೆ ಈ ರೀತಿ ಸಿಗಲಿದೆ ಎಚ್ಚರಿಕೆಯ ಸಂದೇಶ
ಬ್ಯಾಂಕ್ ಲಾಕರ್ ಹೊಸ ನಿಯಮಗಳು: ಗ್ರಾಹಕರಿಗೆ ಸಿಗುವ ಪ್ರಯೋಜನಗಳಿವು! title=
Bank locker new rules

ಬ್ಯಾಂಕ್ ಲಾಕರ್ ಹೊಸ ನಿಯಮಗಳು: ಬ್ಯಾಂಕ್ ಲಾಕರ್ ಬಗ್ಗೆ ಗ್ರಾಹಕರ ನಿರಂತರ ದೂರುಗಳನ್ನು ಗಮನದಲ್ಲಿಟ್ಟುಕೊಂಡು ಭಾರತೀಯ ರಿಸರ್ವ್ ಬ್ಯಾಂಕ್ ಬ್ಯಾಂಕ್ ಲಾಕರ್ ನಿಯಮಗಳಿಗೆ ಸಂಬಂಧಿಸಿದಂತೆ ಹೊಸ ನಿಯಮಗಳನ್ನು ಜಾರಿಗೆ ತಂದಿದೆ. ಇತ್ತೀಚೆಗಷ್ಟೇ ಕೇಂದ್ರ ಬ್ಯಾಂಕ್ ಲೋನ್ ನೀಡುವ ನಿಯಮಗಳಲ್ಲಿ ಬದಲಾವಣೆಗಳನ್ನು ಮಾಡಿದೆ. ಇದರ ಬೆನ್ನಲ್ಲೇ ಇದೀಗ ಆರ್‌ಬಿಐ ಬ್ಯಾಂಕ್ ಲಾಕರ್ ನಿಯಮಗಳನ್ನು ಬದಲಾಯಿಸಿದೆ. ನೀವು ಯಾವುದೇ ಬ್ಯಾಂಕಿನಲ್ಲಿ ಲಾಕರ್ ತೆರೆದಿದ್ದಾರೆ ಅಥವಾ ಹೊಸ ಬ್ಯಾಂಕ್ ಲಾಕರ್ ತೆರೆಯುವ ಬಗ್ಗೆ ಯೋಚಿಸುತ್ತಿದ್ದರೆ ಈ ಸುದ್ದಿ ನಿಮಗೆ ಸಹಾಯಕವಾಗಲಿದೆ. 

ಈ ಕುರಿತಂತೆ ಅಧಿಸೂಚನೆ ಹೊರಡಿಸಿರುವ ರಿಸರ್ವ್ ಬ್ಯಾಂಕ್, ಹೊಸ ಬ್ಯಾಂಕ್ ಲಾಕರ್ ನಿಯಮಗಳನ್ನು ಜನವರಿ 1, 2022 ರಿಂದ ಜಾರಿಗೆ ತರಲಾಗುವುದು ತಿಳಿಸಿದೆ. ಬ್ಯಾಂಕ್‌ನಲ್ಲಿ ಲಾಕರ್ ತೆಗೆದುಕೊಳ್ಳುವ ಗ್ರಾಹಕರ ದೂರುಗಳನ್ನು ಆಧರಿಸಿ ಹೊಸ ನಿಯಮಗಳನ್ನು ಜಾರಿಗೆ ತರಲಾಗಿದೆ. ಈ ಹೊಸ ನಿಯಮಗಳ ಅನುಷ್ಠಾನದಿಂದ ಬ್ಯಾಂಕ್ ಗ್ರಾಹಕರಿಗೆ ನೇರವಾಗಿ ಪ್ರಯೋಜನವಾಗಲಿದೆ ಎಂದು ಹೇಳಲಾಗಿದೆ.

ಬ್ಯಾಂಕ್ ಲಾಕರ್ ನಲ್ಲಿ ಕಳ್ಳತನವಾದರೆ ಶೇ.100 ರಷ್ಟು  ಪರಿಹಾರ:
ಗ್ರಾಹಕರು ಆಗಾಗ್ಗೆ ತಮ್ಮ ಬ್ಯಾಂಕ್ ಲಾಕರ್ ನಲ್ಲಿ ಕಳ್ಳತನವಾಗಿರುವ ಬಗ್ಗೆ ದೂರು ದಾಖಲಿಸಿದ್ದಾರೆ. ಆದರೆ ಈಗ ಈ ಬಗ್ಗೆ ಗ್ರಾಹಕರು ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ. ಬ್ಯಾಂಕ್ ಲಾಕರ್ ನಿಂದ ನಿಮ್ಮ ಯಾವುದಾದರೂ ವಸ್ತು ಕಳುವಾದರೆ ಸಂಬಂಧಪಟ್ಟ ಬ್ಯಾಂಕ್ ತನ್ನ ಗ್ರಾಹಕರಿಗೆ ಲಾಕರ್ ಬಾಡಿಗೆಯ ಶೇ. 100ರಷ್ಟು ಪರಿಹಾರ ನೀಡಬೇಕಾಗುತ್ತದೆ. ಗಮನಿಸಬೇಕಾದ ಸಂಗತಿ ಎಂದರೆ, ಇಲ್ಲಿಯವರೆಗೆ, ಬ್ಯಾಂಕ್‌ಗಳು ಕಳ್ಳತನದ ಘಟನೆಯನ್ನು ನಿರ್ಲಕ್ಷಿಸುತ್ತಿದ್ದವು ಮತ್ತು ಅದಕ್ಕೆ ನಾವು ಜವಾಬ್ದಾರರಲ್ಲ ಎಂದು ಹೇಳುತ್ತಿದ್ದವು. ಇದೀಗ ಈ ರೀತಿ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ.

ಇದನ್ನೂ ಓದಿ- Post Office ಈ ಯೋಜನೆಯಲ್ಲಿ ಹೂಡಿಕೆ ಮಾಡಿ, ಗ್ಯಾರಂಟಿಯೊಂದಿಗೆ ಡಬಲ್ ಆಗಲಿದೆ ನಿಮ್ಮ ಹಣ!

ಡಿಸ್‌ಪ್ಲೇಯಿಂದ ಖಾಲಿ ಲಾಕರ್‌ನ ಮಾಹಿತಿ:
ಇನ್ನು ಮುಂದೆ ಬ್ಯಾಂಕ್‌ಗಳು ಖಾಲಿ ಲಾಕರ್‌ಗಳ ಪಟ್ಟಿ ಹಾಗೂ ಲಾಕರ್‌ಗಾಗಿ ಕಾಯುವ ಪಟ್ಟಿ ಸಂಖ್ಯೆಯನ್ನು ಡಿಸ್‌ಪ್ಲೇಯಲ್ಲಿ  ಪ್ರದರ್ಶಿಸಬೇಕು ಎಂದು ಆರ್‌ಬಿಐ ತನ್ನ ಆದೇಶದಲ್ಲಿ ಸೂಚಿಸಿದೆ. ಇದು ಲಾಕರ್ ವ್ಯವಸ್ಥೆಯಲ್ಲಿ ಹೆಚ್ಚಿನ ಪಾರದರ್ಶಕತೆಯನ್ನು ತರುವ ಉದ್ದೇಶದಿಂದ ಈ ನಿಯಮವನ್ನು ಜಾರಿಗೆ ತರಲಾಗಿದೆ. ಇದರೊಂದಿಗೆ ಬ್ಯಾಂಕ್‌ಗಳು ಗ್ರಾಹಕರನ್ನು ಕತ್ತಲಲ್ಲಿಡಲು ಸಾಧ್ಯವಿಲ್ಲ ಎಂದು ಆರ್‌ಬಿಐ ವಿಶ್ವಾಸ ವ್ಯಕ್ತಪಡಿಸಿದೆ. 

ಗ್ರಾಹಕರಿಗೆ ಈ ರೀತಿ ಸಿಗಲಿದೆ ಎಚ್ಚರಿಕೆಯ ಸಂದೇಶ:
ಈಗ ಗ್ರಾಹಕರು  ಲಾಕರ್ ಅನ್ನು ಪ್ರವೇಶಿಸಿದಾಗಲೆಲ್ಲಾ, ಬ್ಯಾಂಕ್ ಮೂಲಕ ಇಮೇಲ್ ಮತ್ತು ಎಸ್ಎಂಎಸ್ ಮೂಲಕ ನಿಮಗೆ ಎಚ್ಚರಿಕೆಯ ಸಂದೇಶ್ ರವಾನಿಸಲಾಗುವುದು. ಈ ಕ್ರಮವು ಯಾವುದೇ ರೀತಿಯ ವಂಚನೆಯನ್ನು ತಡೆಯಲು ಸಹಕಾರಿಯಾಗಲಿದೆ ಎಂದು ಆರ್‌ಬಿಐ ನಂಬಿದೆ.

ಇದನ್ನೂ ಓದಿ- LIC ಯ ಈ ಯೋಜನೆಯಲ್ಲಿ ಹೂಡಿಕೆ ಮಾಡಿ, ₹75 ಸಾವಿರ ಪಿಂಚಣಿ ಪಡೆಯಿರಿ

ಬ್ಯಾಂಕುಗಳು ಗರಿಷ್ಠ ಮೂರು ವರ್ಷಗಳ ಅವಧಿಗೆ ಲಾಕರ್ ಬಾಡಿಗೆಯನ್ನು ತೆಗೆದುಕೊಳ್ಳಬಹುದು:
ಆರ್‌ಬಿಐ ಅನುಷ್ಠಾನಗೊಳಿಸಿರುವ ಹೊಸ ನಿಯಮಗಳ ಪ್ರಕಾರ, ಬ್ಯಾಂಕುಗಳು ಗರಿಷ್ಠ ಮೂರು ವರ್ಷಗಳವರೆಗೆ ಲಾಕರ್ ಬಾಡಿಗೆಯನ್ನು ತೆಗೆದುಕೊಳ್ಳುವ ಹಕ್ಕನ್ನು ಹೊಂದಿವೆ.  

ಸಿಸಿಟಿವಿ ಮೂಲಕ ನಿಗಾ:
ಈಗ ಲಾಕರ್ ಕೋಣೆಗೆ ಬರುವ ಮತ್ತು ಹೋಗುವವರ ಮೇಲೆ ಸಿಸಿಟಿವಿ ಮೂಲಕ ನಿಗಾ ಇಡುವುದು ಅಗತ್ಯವಾಗಿದೆ. ಅಲ್ಲದೆ, ಸಿಸಿಟಿವಿ ದೃಶ್ಯಗಳ ಡೇಟಾವನ್ನು 180 ದಿನಗಳವರೆಗೆ ಸಂಗ್ರಹಿಸಬೇಕಾಗುತ್ತದೆ. ಕಳ್ಳತನ ಅಥವಾ ಯಾವುದೇ ಭದ್ರತಾ ಲೋಪ ಕಂಡುಬಂದಲ್ಲಿ, ಈಗ ಪೊಲೀಸರು ಸಿಸಿಟಿವಿ ದೃಶ್ಯಗಳ ಮೂಲಕ ತನಿಖೆ ಮಾಡಲು ಸಾಧ್ಯವಾಗಲಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
 

Trending News