ಅಕ್ಷಯ ತೃತೀಯಕ್ಕೂ ಮುನ್ನ ಭಾರೀ ಕುಸಿತ ಕಂಡ ಬಂಗಾರದ ಬೆಲೆ !

Gold Price Today :ಶುಕ್ರವಾರ ಮಲ್ಟಿ-ಕಮೊಡಿಟಿ ಎಕ್ಸ್‌ಚೇಂಜ್‌ನಲ್ಲಿ ಚಿನ್ನ ಮತ್ತು ಬೆಳ್ಳಿ ದರಗಳಲ್ಲಿ ಕುಸಿತ ಕಂಡು ಬಂದಿದೆ. ಆದರೆ, ಮುಂದಿನ ದಿನಗಳಲ್ಲಿ ಚಿನ್ನ ಮತ್ತು ಬೆಳ್ಳಿಯ ದರ ಮತ್ತಷ್ಟು ಏರಿಕೆಯಾಗುವ ನಿರೀಕ್ಷೆಯಿದೆ.

Written by - Ranjitha R K | Last Updated : Apr 21, 2023, 04:28 PM IST
  • ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ಏರಿಳಿತ
  • ಇಂದು ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಭಾರೀ ಕುಸಿತ
  • ಇಂದಿನ ಬೆಲೆ ಎಷ್ಟು ತಿಳಿಯಿರಿ
ಅಕ್ಷಯ ತೃತೀಯಕ್ಕೂ  ಮುನ್ನ ಭಾರೀ ಕುಸಿತ ಕಂಡ ಬಂಗಾರದ ಬೆಲೆ ! title=

Gold Price Today : ಕಳೆದ ಕೆಲ ಸಮಯದಿಂದ ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ಏರಿಳಿತ ಕಾಣುತ್ತಲೇ ಇದೆ. ಆದರೆ ಇಂದು ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಭಾರೀ ಕುಸಿತ ಕಂಡಿದೆ. ಅಕ್ಷಯ ತೃತೀಯಕ್ಕೂ ಮುನ್ನ ಬುಲಿಯನ್ ಮಾರುಕಟ್ಟೆ, ಮಲ್ಟಿ-ಕಮೊಡಿಟಿ ಎಕ್ಸ್‌ಚೇಂಜ್‌ನಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಇಳಿಕೆ ದಾಖಲಾಗಿದೆ. ಆದರೆ, ಮುಂದಿನ ದಿನಗಳಲ್ಲಿ ಚಿನ್ನ ಮತ್ತು ಬೆಳ್ಳಿಯ ದರ ಮತ್ತಷ್ಟು ಏರಿಕೆಯಾಗುವ ನಿರೀಕ್ಷೆಯಿದೆ.

ಎಂಸಿಎಕ್ಸ್‌ನಲ್ಲಿ ಚಿನ್ನ ಮತ್ತು ಬೆಳ್ಳಿಯ ಕುಸಿತ : 
ಶುಕ್ರವಾರ ಮಲ್ಟಿ-ಕಮೊಡಿಟಿ ಎಕ್ಸ್‌ಚೇಂಜ್‌ನಲ್ಲಿ ಚಿನ್ನ ಮತ್ತು ಬೆಳ್ಳಿ ದರಗಳಲ್ಲಿ ಕುಸಿತ ಕಂಡು ಬಂದಿದೆ. ಎಂಸಿಎಕ್ಸ್‌ನಲ್ಲಿ ಶುಕ್ರವಾರ ಪ್ರತಿ 10 ಗ್ರಾಂ ಚಿನ್ನಕ್ಕೆ 495 ರೂಪಾಯಿ ಇಳಿಕೆಯಾಗಿ 60,008 ರೂಪಾಯಿ ತಲುಪಿದೆ. ಇನ್ನು ಬೆಳ್ಳಿ ಪ್ರತಿ ಕೆಜಿಗೆ  531 ರೂಪಾಯಿ ಇಳಿಕೆಯೊಂದಿಗೆ 74,970 ರೂಪಾಯಿಗಳಿಗೆ ಇಳಿದಿದೆ. 

ಇದನ್ನೂ ಓದಿ : Top Sporty Bikes: ಭಯಂಕರ ಸ್ಪೋರ್ಟಿ ವಿನ್ಯಾಸ ಹೊಂದಿರುವ ಭಾರತದ ಟಾಪ್ 5 125 ಸಿಸಿ ಬೈಕ್ ಗಳು ಇಲ್ಲಿವೆ!

ಹೊಸ ದಾಖಲೆಗಳನ್ನು ಸೃಷ್ಟಿಸಿದ ಬೆಲೆ ಏರಿಕೆ  : 
ಫೆಬ್ರುವರಿ ತಿಂಗಳಿನಲ್ಲಿಯೂ ಚಿನ್ನ ಮತ್ತು ಬೆಳ್ಳಿಯ ದರದಲ್ಲಿ ಇಳಿಕೆಯಾಗಿತ್ತು. ಆದರೆ ಇದಾದ ನಂತರ ಬೆಲೆ ಏರಿಕೆ ಹೊಸ ದಾಖಲೆಗಳನ್ನೇ ಸೃಷ್ಟಿಸಿತು. ಮುಂದಿನ ದಿನಗಳಲ್ಲಿ ಪ್ರತಿ 10 ಗ್ರಾಂ ಚಿನ್ನದ ಬೆಲೆ 65,000 ರೂ.ಗೆ ಮತ್ತು ಬೆಳ್ಳಿಯ  ಕೆ.ಜಿಗೆ  80,000 ರೂ.ಗೆ ಏರಲಿದೆ ಎಂದು ತಜ್ಞರು ನಿರೀಕ್ಷಿಸುತ್ತಿದ್ದಾರೆ. ಗುರುವಾರ ಚಿನ್ನ ಮತ್ತು ಬೆಳ್ಳಿ ಎರಡರಲ್ಲೂ ಏರಿಕೆ ಕಂಡುಬಂದಿದೆ. ಆದರೆ ಇಂದು ಎರಡೂ ಲೋಹಗಳ ಬೆಲೆಯಲ್ಲಿ ಇಳಿಕೆ ಕಂಡು ಬಂದಿದೆ. 

ಬುಲಿಯನ್ ಮಾರುಕಟ್ಟೆಯಲ್ಲೂ ಕುಸಿತ ಕಂಡುಬಂದಿದೆ.ಇಂಡಿಯಾ ಬುಲಿಯನ್ಸ್ ಅಸೋಸಿಯೇಷನ್ ​​( https://ibjarates.com) ನಿಂದ ಬುಲಿಯನ್ ಮಾರುಕಟ್ಟೆ ಬೆಲೆಗಳನ್ನು ಪ್ರತಿದಿನ ನೀಡಲಾಗುತ್ತದೆ . ಶುಕ್ರವಾರ 24 ಕ್ಯಾರೆಟ್ ಚಿನ್ನದ ಬೆಲೆ 60,446 ರೂ. 23 ಕ್ಯಾರೆಟ್ ಚಿನ್ನ 60204 ರೂ., 22 ಕ್ಯಾರೆಟ್ ಚಿನ್ನ 55369 ರೂ., 20 ಕ್ಯಾರೆಟ್ ಚಿನ್ನ 10 ಗ್ರಾಂಗೆ 45335 ರೂ. ಆಗಿದೆ. 

ಇದನ್ನೂ ಓದಿ : Cheapest Electric Cars: ಇವುಗಳೇ ನೋಡಿ ಭಾರತದ ಅತ್ಯಂತ ಅಗ್ಗದ 5 ಇಲೆಕ್ಟ್ರಿಕ್ ಕಾರುಗಳು!

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News