ನಿಮ್ಮ ಬಳಿಯೂ ಖಾಲಿ ನಿವೇಶನವಿದ್ದರೆ ಈ ವ್ಯಾಪಾರ ಆರಂಭಿಸಿ, ಉತ್ತಮ ಸಂಪಾದನೆ ನಿಮ್ಮದಾಗಿಸಬಹುದು

ಇತ್ತೀಚಿನ ದಿನಗಳಲ್ಲಿ, ನಿರ್ಮಾಣ ಕಾರ್ಯಗಳಿಗೆ ಕೆಂಪು ಇಟ್ಟಿಗೆಯ ಬದಲು ಉಷ್ಣ ವಿದ್ಯುತ್ ಸ್ಥಾವರಗಳ ಕಲ್ಲಿದ್ದಲು ಬೂದಿಯಿಂದ ಮಾಡಿದ ಇಟ್ಟಿಗೆಗಳನ್ನು ಬಳಸಲಾಗುತ್ತಿದೆ.

Written by - Ranjitha R K | Last Updated : Sep 24, 2021, 01:17 PM IST
  • ಖಾಲಿ ಜಾಗದಲ್ಲಿ ಆರಂಭಿಸಬಹುದು ಈ ವ್ಯಾಪಾರ
  • ವ್ಯಾಪಾರ ಆರಂಭಿಸಲು ಸರ್ಕಾರ ಕೂಡ ನೀಡಲಿದೆ ಸಹಾಯ
  • ಕಚ್ಚಾ ವಸ್ತುಗಳು ಸುಲಭವಾಗಿ ಲಭ್ಯವಿರುತ್ತವೆ
ನಿಮ್ಮ ಬಳಿಯೂ ಖಾಲಿ ನಿವೇಶನವಿದ್ದರೆ ಈ ವ್ಯಾಪಾರ ಆರಂಭಿಸಿ, ಉತ್ತಮ ಸಂಪಾದನೆ ನಿಮ್ಮದಾಗಿಸಬಹುದು

ನವದೆಹಲಿ: Best Business Plan: ವ್ಯಾಪಾರ ಮಾಡುವ ಯೋಚನೆ ಇದ್ದು, ಯಾವ ವ್ಯಾಪಾರ ನಡೆಸಬೇಕು ಎಂದು ಅವಕಾಶ ಹುಡುಕುತ್ತಿದ್ದರೆ, ಇಲ್ಲೊಂದು ಪ್ಲಾನ್ ಇದೆ. ಈ ವ್ಯಾಪಾರವನ್ನು ಆರಂಭಿಸಿದರೆ ಪ್ರತಿ ತಿಂಗಳು, ಲಕ್ಷ ರೂಪಾಯಿಗಳನ್ನು ಗಳಿಸಬಹುದು. ಈ ವ್ಯಾಪಾರವು ಫ್ಲೈಯಿಂಗ್ ಆಶ್ ಬ್ರಿಕ್ಸ್ (Fly Ash Bricks)ಅಂದರೆ ಇಟ್ಟಿಗೆ ವ್ಯಾಪಾರ. ಹಾಗಿದ್ದರೆ ಈ ವ್ಯವಹಾರದಲ್ಲಿ ಏನು ಮಾಡಬೇಕು . ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ. 

ಇತ್ತೀಚಿನ ದಿನಗಳಲ್ಲಿ, ನಿರ್ಮಾಣ ಕಾರ್ಯಗಳಿಗೆ ಕೆಂಪು ಇಟ್ಟಿಗೆಯ ಬದಲು ಉಷ್ಣ ವಿದ್ಯುತ್ ಸ್ಥಾವರಗಳ ಕಲ್ಲಿದ್ದಲು ಬೂದಿಯಿಂದ (Fly Ash) ಮಾಡಿದ ಇಟ್ಟಿಗೆಗಳನ್ನು ಬಳಸಲಾಗುತ್ತಿದೆ. ಈ ಇಟ್ಟಿಗೆಗಳ ಪ್ರವೃತ್ತಿ ಸಣ್ಣ ಪಟ್ಟಣಗಳು ಮತ್ತು ಹಳ್ಳಿಗಳಲ್ಲೂ ಆರಂಭವಾಯಿತು. ನಿಮ್ಮ ಬಳಿ ಖಾಲಿ ಜಾಗ ಅಥವಾ ಪ್ಲಾಟ್ ಇದ್ದರೆ ನೀವು ಬೂದಿಯಿಂದ ಇಟ್ಟಿಗೆಗಳನ್ನು ತಯಾರಿಸುವ ವ್ಯಾಪಾರವನ್ನು (Business plan) ಆರಂಭಿಸಬಹುದು. ಈ ವ್ಯವಹಾರವನ್ನು ಪ್ರಾರಂಭಿಸಲು, ಸರ್ಕಾರವು ನಿಮಗೆ ಮುದ್ರಾ ಯೋಜನೆಯಡಿ ಸಹಾಯ ಮಾಡುತ್ತದೆ.

ಇದನ್ನೂ ಓದಿ:  Post office ಈ ಯೋಜನೆಗಳಲ್ಲಿ ಹೂಡಿಕೆ ಮಾಡಿ ಆದಷ್ಟು ಬೇಗ ಶ್ರೀಮಂತರಾಗಿ : ಇಲ್ಲಿದೆ ಸಂಪೂರ್ಣ ಸಂಪೂರ್ಣ ಮಾಹಿತಿ!

ಎಷ್ಟು ವೆಚ್ಚವಾಗಲಿದೆ ?
ಖಾದಿ ಮತ್ತು ಗ್ರಾಮೋದ್ಯೋಗ ಆಯೋಗದ (KVIC)) ವರದಿಯಲ್ಲಿ, ಬೂದಿಯಿಂದ ಇಟ್ಟಿಗೆಗಳನ್ನು ತಯಾರಿಸುವ ವ್ಯವಹಾರದ ಸಂಪೂರ್ಣ ನೀಲನಕ್ಷೆಯನ್ನು ತಯಾರಿಸಲಾಗಿದೆ. ಈ ವರದಿಯ ಪ್ರಕಾರ, Fly Ash Bricks ವ್ಯವಹಾರ ಆರಂಭಿಸಲು 20 ಲಕ್ಷ ರೂಪಾಯಿ ವೆಚ್ಚವಾಗುತ್ತದೆ. ಈ ವ್ಯವಹಾರವನ್ನು ಪ್ರಾರಂಭಿಸಲು ನೀವು ಬ್ಯಾಂಕಿನಿಂದ ಸಾಲವನ್ನು ತೆಗೆದುಕೊಳ್ಳಬಹುದು. ಪ್ರಧಾನ ಮಂತ್ರಿ ಉದ್ಯೋಗ ಯೋಜನೆಯಡಿಯಲ್ಲಿ ಈ ವ್ಯವಹಾರಕ್ಕಾಗಿ ಸಾಲವನ್ನು ತೆಗೆದುಕೊಳ್ಳಬಹುದು. ಇದಲ್ಲದೇ, ಮುದ್ರಾ ಸಾಲ ಯೋಜನೆಯ (Mudra Scheme) ಸಹಾಯವನ್ನು ಕೂಡಾ ಪಡೆಯಬಹುದು.

ಬೂದಿ ಪಡೆಯುವುದು ಹೇಗೆ ? 
ಈ ವ್ಯವಹಾರದಲ್ಲಿ ಕಚ್ಚಾ ವಸ್ತುವಾಗಿ ವಿದ್ಯುತ್ ಸ್ಥಾವರದಿಂದ ಸಿಗುವ ಬೂದಿ ಅಗತ್ಯವಿದೆ. ವಿದ್ಯುತ್ ಸಚಿವಾಲಯವು (Power Ministry)  ಇದಕ್ಕಾಗಿ ಹರಾಜು ಪ್ರಕ್ರಿಯೆಯನ್ನು ಆರಂಭಿಸಿದೆ. ವಿದ್ಯುತ್ ಸಚಿವಾಲಯದ ಪ್ರಕಾರ, ಪಾರದರ್ಶಕ ಬಿಡ್ಡಿಂಗ್ ಪ್ರಕ್ರಿಯೆಯ ಮೂಲಕ ವಿದ್ಯುತ್ ಸ್ಥಾವರಗಳು (Power Plants)ಯಾವಾಗಲೂ ಹಾರುವ ಬೂದಿಯನ್ನು ಹರಾಜು ಮಾಡುತ್ತವೆ ಎಂದು ನಿರ್ದೇಶಿಸಲಾಗಿದೆ. ಬಿಡ್ ನಂತರವೂ ಬೂದಿ ವಿದ್ಯುತ್ ಸ್ಥಾವರದಲ್ಲಿ ಉಳಿದಿದ್ದರೆ, ನೀವು ಅದನ್ನು ಉಚಿತವಾಗಿಯೂ ಪಡೆದುಕೊಳ್ಳಬಹುದು. ಆದರೆ ಇದನ್ನು 'ಫಸ್ಟ್ ಕಮ್ ಫಸ್ಟ್ ಸರ್ವ್' ಆಧಾರದ ಮೇಲೆ ನೀಡಲಾಗುವುದು.

ಇದನ್ನೂ ಓದಿ:  PAN link with LIC policy : LIC ಪಾಲಿಸಿ ನಿಯಮಗಳಲ್ಲಿ ಬದಲಾವಣೆ ; ಈ ಕೆಲಸ ಈಗಲೇ ಮಾಡಿ ಇಲ್ಲದಿದ್ದರೆ ಸಮಸ್ಯೆ ತಪ್ಪಿದಲ್ಲ!

ಬೇಕಾಗುವ ದುಡ್ಡು ಎಷ್ಟು ? 
KVIC ವರದಿಯ ಯೋಜನಾ ವರದಿಯ ಪ್ರಕಾರ, ಈ ವ್ಯವಹಾರದ ಒಟ್ಟು ಯೋಜನಾ ವೆಚ್ಚ 20.30 ಲಕ್ಷ ರೂ.ಗಳು. ಇದರಲ್ಲಿ 8.55 ಲಕ್ಷ ರೂ.ಯನ್ನು ಉಪಕರಣಗಳಿಗಾಗಿ ಖರ್ಚು ಮಾಡಲಾಗುತ್ತದೆ. ವರ್ಕ್‌ಶೆಡ್ ನಿರ್ಮಿಸಲು 6 ಲಕ್ಷ ವೆಚ್ಚವಾಗುತ್ತದೆ. ಅಲ್ಲದೆ, 5.75 ಲಕ್ಷ ರೂ. ದುಡಿಯುವ ಬಂಡವಾಳವಾಗಿ ಅಗತ್ಯವಿರುತ್ತದೆ.  Fly Ash Bricks ಪ್ಲಾಂಟ್ ನಿಂದ ಪ್ರತಿ ವರ್ಷ 5 ಲಕ್ಷ ಇಟ್ಟಿಗೆಗಳನ್ನು ತಯಾರಿಸಬಹುದು.  

ಸಿಗಲಿದೆ ಭರ್ಜರಿ ಲಾಭ :
5 ಲಕ್ಷ ಇಟ್ಟಿಗೆಗಳನ್ನು 40 ಲಕ್ಷಕ್ಕೆ ಮಾರಾಟ ಮಾಡಬಹುದು ಎಂದು ಯೋಜನೆಯಲ್ಲಿ ಹೇಳಲಾಗಿದೆ. ಇದರಿಂದ ಎಲ್ಲಾ ಖರ್ಚುಗಳನ್ನು ಕಡಿತಗೊಳಿಸಿದ ನಂತರ, 4.90 ಲಕ್ಷ ರೂ.ಗಳ ಲಾಭ ಇರುತ್ತದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

More Stories

Trending News