ಜೇಬಲ್ಲಿ ದುಡ್ಡಿಲ್ಲದೇ ಇದ್ರೂ ಈ ಟಾಟಾ ಸಫಾರಿ ನಿಮ್ಮದಾಗಿಸಿಕೊಳ್ಳಬಹುದು..!

ಟಾಟಾ ಮೋಟಾರ್ಸ್‌ನ ಎಸ್ಯುವಿ ಶೀಘ್ರದಲ್ಲೇ ಹೊಸ ಲುಕ್ ನೊಂದಿಗೆ ರಸ್ತೆಗಿಳಿಯಲಿದೆ. ಟಾಟಾ ಮೋಟಾರ್ಸ್ ತನ್ನ ಪ್ರಸಿದ್ಧ ಎಸ್‌ಯುವಿ ಸಫಾರಿ ಅನ್ನು ಹೊಸ ರೂಪದಲ್ಲಿ ಲಾಂಚ್ ಮಾಡುತ್ತಿದೆ.

Written by - Ranjitha R K | Last Updated : Feb 8, 2021, 06:52 PM IST
  • ಶೀಘ್ರದಲ್ಲೇ ಹೊಸ ಲುಕ್ ನೊಂದಿಗೆ ರಸ್ತೆಗಿಳಿಯಲಿದೆ ಟಾಟಾ ಮೋಟಾರ್ಸ್‌ನ ಎಸ್ಯುವಿ
  • ಜೇಬಿನಲ್ಲಿ ಒಂದು ಪೈಸೆ ಇಲ್ಲದಿದ್ದರೂ ಈ ಕಾರು ಖರೀದಿಸಬಹುದು
  • ಫೆಬ್ರವರಿ 4 ರಿಂದ ಆರಂಭವಾಗಿದೆ ಪ್ರೀ ಬುಕ್ಕಿಂಗ್
ಜೇಬಲ್ಲಿ ದುಡ್ಡಿಲ್ಲದೇ ಇದ್ರೂ ಈ ಟಾಟಾ ಸಫಾರಿ ನಿಮ್ಮದಾಗಿಸಿಕೊಳ್ಳಬಹುದು..! title=
ಫೆಬ್ರವರಿ 4 ರಿಂದ ಆರಂಭವಾಗಿದೆ ಪ್ರೀ ಬುಕ್ಕಿಂಗ್ (file photo)

ನವದೆಹಲಿ : ಟಾಟಾ ಮೋಟಾರ್ಸ್‌ನ ಎಸ್ಯುವಿ ಶೀಘ್ರದಲ್ಲೇ ಹೊಸ ಲುಕ್ ನೊಂದಿಗೆ ರಸ್ತೆಗಿಳಿಯಲಿದೆ. ಟಾಟಾ ಮೋಟಾರ್ಸ್ (Tata Motors) ತನ್ನ ಪ್ರಸಿದ್ಧ ಎಸ್‌ಯುವಿ ಸಫಾರಿ ಅನ್ನು ಹೊಸ ರೂಪದಲ್ಲಿ ಲಾಂಚ್ ಮಾಡುತ್ತಿದೆ. ಜೇಬಿನಿಂದ ಒಂದು ಪೈಸೆಯನ್ನೂ ಖರ್ಚು ಮಾಡದೆ ಹೊಸ ಟಾಟಾ ಸಫಾರಿ ವಾಹನವನ್ನು ಖರೀದಿಸಬಹುದು.  ಇದರ ಪ್ರೀ ಬುಕ್ಕಿಂಗ್ (Pre Booking) ಫೆಬ್ರವರಿ 4 ರಿಂದ ಪ್ರಾರಂಭವಾಗಿದೆ.

SBI yono ಅಪ್ಲಿಕೇಶನ್‌ನ ಮೂಲಕ ಹೊಸ ಟಾಟಾ ಸಫಾರಿಯನ್ನು ಬುಕ್ ಮಾಡಿದರೆ, SBI ಕಾರಿಗೆ 100% ಹಣಕಾಸು ಒದಗಿಸುತ್ತಿದೆ. ಅಲ್ಲದೆ ಬಡ್ಡಿದರದ (Interest Rate) ಮೇಲೆ 0.25 ರಷ್ಟು ರಿಯಾಯಿತಿ ನೀಡುತ್ತದೆ. ಮಾತ್ರವಲ್ಲ ಯಾವುದೇ ಪ್ರೊಸೆಸಿಂಗ್ ಶುಲ್ಕವನ್ನು ಕೂಡಾ ಹಾಕುವುದಿಲ್ಲ.  

ಇದನ್ನೂ ಓದಿ : Ujjwala Yojana : ಯಾರಿಗುಂಟು ಯಾರಿಗಿಲ್ಲ ಈ ಭಾಗ್ಯ.! ಗ್ಯಾಸ್ ಜೊತೆಗೆ ಸಿಗುತ್ತೆ 1600 ರೂ. ಕ್ಯಾಶ್

ಹೊಸ ಕಾರಿನ ಬೆಲೆ ಎಷ್ಟು ಎನ್ನುವುದನ್ನು ಟಾಟಾ ಮೋಟಾರ್ಸ್ (Tata Motors) ಇನ್ನೂ ಘೋಷಣೆ ಮಾಡಿಲ್ಲ. ಫೆಬ್ರವರಿ 22 ರಂದು  ಕಾರಿನ ಬೆಲೆಯನ್ನು ಪೋಷಿಸುವ ಸಾಧ್ಯತೆ ಇದೆ. ತಜ್ಞರ ಪ್ರಕಾರ  ಕಾರಿನ ಬೆಲೆ ಸುಮಾರು 18 ರಿಂದ 20 ಲಕ್ಷ ರೂಪಾಯಿಗಳಷ್ಟು ಇರಬಹುದು ಎಂದು ಅಂದಾಜಿಸಲಾಗಿದೆ.  

ಹೊಸ ಟಾಟಾ ಸಫಾರಿ ಎಸ್‌ಯುವಿ 6 ಮತ್ತು 7 ಸೀಟರ್ ಗಳನ್ನು ಒಳಗೊಂಡಿದೆ. ಹೊಸ ಟಾಟಾ ಸಫಾರಿ 2.0 ಲೀಟರ್ ಕ್ರೈಟೆಕ್ ಡೀಸೆಲ್ (Diesel) ಎಂಜಿನ್ ಹೊಂದಿದೆ. ಈ ಎಂಜಿನ್ ಅನ್ನು ಟಾಟಾ ಸಫಾರಿಯಲ್ಲಿ 6-ಸ್ಪೀಡ್ ಮ್ಯಾನುವಲ್ ಅಥವಾ 6-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ಗೆ ಜೋಡಿಸಲಾಗಿದೆ. ಈ ಎಸ್ಯುವಿ ಗಂಟೆಗೆ 0-100 ಕಿಮೀ ವೇಗವನ್ನು ತಲುಪಲು 12.73 ಸೆಕೆಂಡುಗಳನ್ನು ತೆಗೆದುಕೊಳ್ಳುತ್ತದೆ. ಸಿಗ್ನೇಚರ್ ಸ್ಟೈಲ್ ಓಕ್ ಬ್ರೌನ್ ಡ್ಯುಯಲ್ ಟೋನ್ ಡ್ಯಾಶ್‌ಬೋರ್ಡ್ (dash board) ಹೊಂದಿದೆ. ಇನ್ನು 8.8-ಇಂಚಿನ ಫ್ಲೋಟಿಂಗ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, 7-ಇಂಚಿನ ಇನ್ಸ್ಟ್ರುಮೆಂಟ್ ಪ್ಯಾನಲ್, ಜಬರ್ದಸ್ತ್ ಸ್ಪೀಕರ್‌ಗಳು (Speakers) ಮತ್ತು ಪನೋರಮಿಕ್ ಸನ್‌ರೂಫ್‌ನಂತಹ ವೈಶಿಷ್ಟ್ಯಗಳನ್ನು ಸಹ ಹೊಂದಿದೆ.

ಇದನ್ನೂ ಓದಿ: Latest FD Interest Rate - FD ಮೇಲೆ ಇಂದಿನಿಂದ ಸಿಗುತ್ತಿದೆ ಹೆಚ್ಚುವರಿ ಬಡ್ಡಿ, 1 ವರ್ಷಕ್ಕಿಂತ ಕಡಿಮೆ ಅವಧಿಯ ಹೂಡಿಕೆ ಲಾಭದಾಯಕ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News