Budget 2023 : ಮಧ್ಯಮ ವರ್ಗದವರಿಗೆ ಬಜೆಟ್‌ನಲ್ಲಿ ಬಂಪರ್‌ ಗಿಫ್ಟ್‌.!

Budget 2023 Expectations : ಕೇಂದ್ರ ಬಜೆಟ್ ಮೊದಲು, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಧ್ಯಮ ವರ್ಗದ ಒತ್ತಡದ ಬಗ್ಗೆ ತಿಳಿದಿದ್ದೇನೆ ಎಂದು ಹೇಳಿದ್ದಾರೆ. ಆದರೆ ಅದೇ ಸಮಯದಲ್ಲಿ ಅವರು ಪ್ರಸ್ತುತ ಸರ್ಕಾರವು ಯಾವುದೇ ಹೊಸ ತೆರಿಗೆ ವಿಧಿಸಿಲ್ಲ ಎಂದು ಹೇಳಿದರು.

Written by - Chetana Devarmani | Last Updated : Jan 17, 2023, 02:52 PM IST
  • ಫೆಬ್ರವರಿ 1 ರಂದು ಯೂನಿಯನ್ ಬಜೆಟ್
  • ಮಧ್ಯಮ ವರ್ಗದವರಿಗೆ ಬಜೆಟ್‌ನಲ್ಲಿ ಬಂಪರ್‌ ಗಿಫ್ಟ್‌.!
  • ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್
Budget 2023 : ಮಧ್ಯಮ ವರ್ಗದವರಿಗೆ ಬಜೆಟ್‌ನಲ್ಲಿ ಬಂಪರ್‌ ಗಿಫ್ಟ್‌.!  title=
ಯೂನಿಯನ್ ಬಜೆಟ್ 

Budget 2023 : ಕೇಂದ್ರ ಬಜೆಟ್ ಮೊದಲು, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಧ್ಯಮ ವರ್ಗದ ಒತ್ತಡದ ಬಗ್ಗೆ ತಿಳಿದಿದ್ದೇನೆ ಎಂದು ಹೇಳಿದ್ದಾರೆ. ಆದರೆ ಅದೇ ಸಮಯದಲ್ಲಿ ಅವರು ಪ್ರಸ್ತುತ ಸರ್ಕಾರವು ಯಾವುದೇ ಹೊಸ ತೆರಿಗೆ ವಿಧಿಸಿಲ್ಲ ಎಂದು ಹೇಳಿದರು. ನಿರ್ಮಲಾ ಸೀತಾರಾಮನ್ ಫೆಬ್ರವರಿ 1 ರಂದು ಲೋಕಸಭೆಯಲ್ಲಿ 2023-24ರ ಯೂನಿಯನ್ ಬಜೆಟ್ ಅನ್ನು ಮಂಡಿಸಲಿದ್ದಾರೆ. ಸರ್ಕಾರವು ಆದಾಯ ತೆರಿಗೆ ಮಿತಿಯನ್ನು ಹೆಚ್ಚಿಸುತ್ತದೆ ಮತ್ತು ಮಧ್ಯಮ ವರ್ಗದ ತೆರಿಗೆದಾರರಿಗೆ ಪರಿಹಾರ ನೀಡುತ್ತದೆ ಎಂದು ನಿರೀಕ್ಷಿಸಲಾಗಿದೆ. ಇದು ನಿರ್ಮಲಾ ಸೀತಾರಾಮನ್‌ ಮಂಡಿಸುವ ಐದನೇ ಬಜೆಟ್ ಆಗಿದೆ.

ಆರ್‌ಎಸ್‌ಎಸ್ ಮೌತ್‌ಪೀಸ್ ಪಂಚಜನ್ಯ ನಿಯತಕಾಲಿಕದ ಸಮಾರಂಭದಲ್ಲಿ, "ನಾನು ಸಹ ಮಧ್ಯಮ ವರ್ಗಕ್ಕೆ ಸೇರಿದವಳು. ಆದ್ದರಿಂದ ನಾನು ಮಧ್ಯಮ ವರ್ಗದ ಒತ್ತಡಗಳನ್ನು ಅರ್ಥಮಾಡಿಕೊಳ್ಳಬಲ್ಲೆ. ನಾನು ಮಧ್ಯಮ ವರ್ಗದಿಂದ ನನ್ನನ್ನು ಗುರುತಿಸುತ್ತೇನೆ. ಆದ್ದರಿಂದ ನನಗೆ ತಿಳಿದಿದೆ. ಪ್ರಸ್ತುತ ಸರ್ಕಾರವು ಮಧ್ಯಮ ವರ್ಗದ ಮೇಲೆ ಯಾವುದೇ ಹೊಸ ತೆರಿಗೆ ವಿಧಿಸಿಲ್ಲ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು. 5 ಲಕ್ಷ ರೂ.ಗಳವರೆಗೆ ಆದಾಯವು ತೆರಿಗೆಯಿಂದ ಮುಕ್ತವಾಗಿದೆ ಎಂದು ಅವರು ಹೇಳಿದರು.

ಇದನ್ನೂ ಓದಿ : ಈ ಆದಾಯದ ಮೇಲೆ ಕೇವಲ ಶೇ.10ರಷ್ಟು ತೆರಿಗೆ ಅನ್ವಯ .! ಬಜೆಟ್‌ಗೂ ಮುನ್ನ ಹೊರ ಬಿತ್ತು ಮಾಹಿತಿ

27 ನಗರಗಳಲ್ಲಿ ಮೆಟ್ರೋ ರೈಲು ಜಾಲವನ್ನು ಅಭಿವೃದ್ಧಿಪಡಿಸುವುದು ಮತ್ತು 100 ಸ್ಮಾರ್ಟ್ ನಗರಗಳನ್ನು ರಚಿಸುವುದು ಮುಂತಾದ ಹಲವಾರು ಕ್ರಮಗಳನ್ನು ಸರ್ಕಾರ ಕೈಗೊಂಡಿದೆ ಎಂದು ಅವರು ಹೇಳಿದರು. ಸರ್ಕಾರವು ಮಧ್ಯಮ ವರ್ಗಕ್ಕಾಗಿ ಹೆಚ್ಚಿನ ಕೊಡುಗೆ ನೀಡಬಹುದೆಂದು ಹಣಕಾಸು ಸಚಿವರು ಭರವಸೆ ನೀಡಿದರು. ಏಕೆಂದರೆ ಮಧ್ಯಮ ವರ್ಗದ ಜನಸಂಖ್ಯೆಯು ಹೆಚ್ಚುತ್ತಿದೆ ಮತ್ತು ಈಗ ಈ ವರ್ಗವು ಸಾಕಷ್ಟು ದೊಡ್ಡದಾಗಿದೆ.  

ತೆರಿಗೆ ವ್ಯವಸ್ಥೆಯಲ್ಲಿನ ಬದಲಾವಣೆ ಏನು?

2024 ರ ಸಾರ್ವತ್ರಿಕ ಚುನಾವಣೆಯ ಮೊದಲು ಇದು ಕೊನೆಯ ಪೂರ್ಣ ಬಜೆಟ್ ಆಗಿರುತ್ತದೆ. ಇದರ ನಂತರ, ಸರ್ಕಾರವು ಫೆಬ್ರವರಿ 2024 ರಲ್ಲಿ ಬಜೆಟ್ ಅನ್ನು ಪ್ರಸ್ತುತಪಡಿಸುತ್ತದೆ. ಆದರೆ ಇದು ಮಧ್ಯಂತರ ಬಜೆಟ್ ಆಗಿರುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಚುನಾವಣೆಗೆ ಮುಂಚಿತವಾಗಿ, ಸರ್ಕಾರವು ಜನರಿಗೆ ಅನೇಕ ರೀತಿಯ ರಿಯಾಯಿತಿಗಳನ್ನು ನೀಡುತ್ತದೆ ಎಂದು ನಿರೀಕ್ಷಿಸಲಾಗಿದೆ.  

ಇದನ್ನೂ ಓದಿ : PM Kisan : ಪಿಎಂ ಕಿಸಾನ್‌ 4 ನಿಯಮಗಳಲ್ಲಿ ಬದಲಾವಣೆ, 13 ನೇ ಕಂತು ಈ ದಿನ ಜಮೆ ಆಗಲಿದೆ!

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News