Budget 2022 : ಬಜೆಟ್ ನತ್ತ ಎಲ್ಲರ ಚಿತ್ತ, ಬಜೆಟ್ ನಂತರ ಯಾವ ವಸ್ತುಗಳು ಆಗಲಿವೆ ಅಗ್ಗ

Budget 2022 : ಇನ್ನೇನು ಕೆಲವೇ ಹೊತ್ತಿನಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಸಂಸತ್ತಿನಲ್ಲಿ  ಬಜೆಟ್ ಮಂಡಿಸಲಿದ್ದಾರೆ. ಬಜೆಟ್ ಭಾಷಣ ಮುಗಿದ ನಂತರ ಪ್ರತಿ ಬಾರಿಯಂತೆ ಕೆಲವು ವಸ್ತುಗಳು ದುಬಾರಿಯಾಗುತ್ತವೆ. 

Written by - Ranjitha R K | Last Updated : Feb 1, 2022, 08:54 AM IST
  • Budget 2022ರ ಮೇಲೆ ಎಲ್ಲರ ದೃಷ್ಟಿ
  • ಯಾವುದು ಆಗಲಿದೆ ಅಗ್ಗ, ಯಾವುದು ದುಬಾರಿ
  • ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ಪರಿಹಾರದ ನಿರೀಕ್ಷೆ
Budget 2022 : ಬಜೆಟ್ ನತ್ತ ಎಲ್ಲರ ಚಿತ್ತ, ಬಜೆಟ್ ನಂತರ ಯಾವ ವಸ್ತುಗಳು ಆಗಲಿವೆ ಅಗ್ಗ  title=
Budget 2022ರ ಮೇಲೆ ಎಲ್ಲರ ದೃಷ್ಟಿ (file photo)

ನವದೆಹಲಿ : Budget 2022 : ಇನ್ನೇನು ಕೆಲವೇ ಹೊತ್ತಿನಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಸಂಸತ್ತಿನಲ್ಲಿ  ಬಜೆಟ್ ಮಂಡಿಸಲಿದ್ದಾರೆ. ಬಜೆಟ್ ಭಾಷಣ ಮುಗಿದ ನಂತರ ಪ್ರತಿ ಬಾರಿಯಂತೆ ಕೆಲವು ವಸ್ತುಗಳು ದುಬಾರಿಯಾಗುತ್ತವೆ. ಇನ್ನು ಕೆಲವು ಅಗ್ಗವಾಗುತ್ತವೆ. ಕರೋನಾ ಸಾಂಕ್ರಾಮಿಕದ (Coronavcirus) ಮಧ್ಯೆಯೂ,  ಸರ್ಕಾರವು ಆರ್ಥಿಕತೆಯನ್ನು ಬಲಪಡಿಸಲು ಪ್ರಯತ್ನಿಸುತ್ತದೆ.  ಯುಪಿ ಸೇರಿದಂತೆ 5 ರಾಜ್ಯಗಳ ಚುನಾವಣೆಯ (Five state election) ಕಾರಣ, ಸಾಮಾನ್ಯ ಜನರ ಬಗ್ಗೆ ಗರಿಷ್ಠ ಕಾಳಜಿ ವಹಿಸಬಹುದು. 

ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ಪರಿಹಾರದ ನಿರೀಕ್ಷೆ :
ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯ ನಡುವೆ, ತೈಲ ಬೆಲೆಗಳ ಮೇಲೆ ಕೆಲವು ಘೋಷಣೆಗಳನ್ನು ಬಜೆಟ್‌ನಲ್ಲಿ (Budget 2022) ನಿರೀಕ್ಷಿಸಲಾಗಿದೆ. ಅಬಕಾರಿ ಸುಂಕವನ್ನು ಕಡಿತಗೊಳಿಸಿ ಸರ್ಕಾರ ಜನರಿಗೆ ಪರಿಹಾರ ನೀಡಬಹುದು ಎಂಬ ಭರವಸೆ ಹೆಚ್ಚಿದೆ. ಸರ್ಕಾರದ ಪರವಾಗಿ ಹೊಸ ಸೆಸ್ ವಿಧಿಸುವ ಮೂಲಕ ಮತ್ತೊಂದು ರೀತಿಯಲ್ಲಿ ಬೆಲೆಗಳನ್ನು ಹೆಚ್ಚಿಸುವ ಸಾಧ್ಯತೆಯೂ ಇದೆ.

ಇದನ್ನೂ ಓದಿ : Pension New Rule: ಬಿಗ್ ನ್ಯೂಸ್ ! ಫ್ಯಾಮಿಲಿ ಪೆನ್ಷನ್ ಗೆ ಸಂಬಂಧಿಸಿದಂತೆ ಹೊಸ ನಿಯಮ ಜಾರಿಗೊಳಿಸಿದ ಸರ್ಕಾರ

ಆರೋಗ್ಯ ವಿಮೆ ಅಗ್ಗವಾಗಬಹುದು :
ಆರೋಗ್ಯ ವಿಮೆ (Health Insurance) ಮೇಲಿನ ಜಿಎಸ್‌ಟಿಯನ್ನು ಕಡಿತಗೊಳಿಸಬೇಕು ಎಂದು ವಿಮಾ ಕಂಪನಿಗಳು (insurance company) ಬಹಳ ದಿನಗಳಿಂದ ಒತ್ತಾಯಿಸುತ್ತಿವೆ. ಹೆಚ್ಚಿನ ಪ್ರೀಮಿಯಂನಿಂದಾಗಿ ಅನೇಕ ಜನರು ಆರೋಗ್ಯ ವಿಮೆಯನ್ನು ತೆಗೆದುಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಸಮೀಕ್ಷೆಯೊಂದು ಬಹಿರಂಗಪಡಿಸಿದೆ. ಈ ಹಿನ್ನೆಲೆಯಲ್ಲಿ, ಆರೋಗ್ಯ ವಿಮೆಯ ಮೇಲಿನ ಜಿಎಸ್‌ಟಿಯನ್ನು (GST) ಶೇಕಡಾ 18 ರಿಂದ ಶೇಕಡಾ 5 ಕ್ಕೆ ಇಳಿಸಿದರೆ, ಅದು ಅಗ್ಗವಾಗಲಿದೆ.

LPG ಸಿಲಿಂಡರ್ ಬಗ್ಗೆ ಸರ್ಕಾರದ ನಿಲುವು :
ಬಜೆಟ್‌ನಲ್ಲಿ ದುಬಾರಿ ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ಗಳಿಗೆ (LPG) ಪರಿಹಾರ ನೀಡುವ ಸರ್ಕಾರದ ನಿಲುವಿನತ್ತ ಎಲ್ಲರ ಕಣ್ಣು ನೆಟ್ಟಿದೆ. ಕೊರೊನಾ ಸಾಂಕ್ರಾಮಿಕದ (Coronavirus) ನಂತರ, ಎಲ್‌ಪಿಜಿ ಸಿಲಿಂಡರ್‌ಗಳ ಮೇಲಿನ ಸಬ್ಸಿಡಿಯನ್ನು ಸಾಕಷ್ಟು ಕಡಿಮೆ ಮಾಡಲಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಸಿಲಿಂಡರ್ ಬೆಲೆ ಸುಮಾರು 1000 ರೂ.ಯಷ್ಟಾಗಿದೆ. 

ಇದನ್ನೂ ಓದಿ : Budgetಗೆ 'ಬಜೆಟ್' ಅಂತಾನೆ ಏಕೆ ಕರೆಯುತ್ತಾರೆ? ಯಾರು ಅದನ್ನು ಆರಂಭಿಸಿದರು, 289 ವರ್ಷಗಳ ಹಿಂದಿನ ಕಥೆ ಇಲ್ಲಿದೆ

2021 ರಲ್ಲಿ ಯಾವುದು ಅಗ್ಗ ಯಾವುದು ದುಬಾರಿ ? 
2021ರ ಬಜೆಟ್‌ನಲ್ಲಿ ಹಣಕಾಸು ಸಚಿವರು ನೇರ ತೆರಿಗೆದಾರರಿಗೆ ಯಾವುದೇ ಪರಿಹಾರ ನೀಡಿಲ್ಲ. ಮದ್ಯ, ಕಡಲೆ, ಬಟಾಣಿ, ಉದ್ದು ಸೇರಿದಂತೆ ಹಲವು ಉತ್ಪನ್ನಗಳ ಮೇಲೆ ಕೃಷಿ ಮೂಲಸೌಕರ್ಯ ಸೆಸ್ ವಿಧಿಸುವುದಾಗಿ ಸರ್ಕಾರದ ಪರವಾಗಿ ಘೋಷಿಸಲಾಗಿತ್ತು. ಅನೇಕ ವಿಧದ ಕಚ್ಚಾ ವಸ್ತುಗಳ ಮೇಲೆ ಕಸ್ಟಮ್ ಸುಂಕವನ್ನು ಹೆಚ್ಚಿಸಲಾಯಿತು ಮತ್ತು ಕೆಲವು ಉಕ್ಕಿನ ಉತ್ಪನ್ನಗಳ ಮೇಲಿನ ಸುಂಕವನ್ನು ತೆಗೆದುಹಾಕಲಾಯಿತು. ತಾಮ್ರದ ಸ್ಕ್ರ್ಯಾಪ್ ಮೇಲಿನ ಸುಂಕವನ್ನು 5% ರಿಂದ 2.5% ಕ್ಕೆ ಇಳಿಸಲಾಗಿದೆ. ಮೊಬೈಲ್‌ಗಳ ಕೆಲವು ಭಾಗಗಳಿಗೆ 2.5% ಸುಂಕ ವಿಧಿಸಲಾಗಿದೆ.

ಹತ್ತಿ, ರೇಷ್ಮೆ, ಪ್ಲಾಸ್ಟಿಕ್, ಚರ್ಮ, ಎಲೆಕ್ಟ್ರಾನಿಕ್ಸ್ ವಸ್ತುಗಳು , ವಾಹನ ಬಿಡಿಭಾಗಗಳು, ಸೌರ ಉತ್ಪನ್ನಗಳು, ಮೊಬೈಲ್‌ಗಳು, ಚಾರ್ಜರ್‌ಗಳು, ಆಮದು ಬಟ್ಟೆಗಳು, ರತ್ನಗಳು, ಎಲ್‌ಇಡಿ ಬಲ್ಬ್‌ಗಳು, ಫ್ರಿಜ್, ಎಸಿ ಮತ್ತು ಮದ್ಯವು ಬಜೆಟ್‌ನಲ್ಲಿ ದುಬಾರಿಯಾಗಿತ್ತು. ನೈಲಾನ್ ಬಟ್ಟೆ, ಕಬ್ಬಿಣ, ಉಕ್ಕು, ತಾಮ್ರದ ವಸ್ತುಗಳು, ಚಿನ್ನ, ಬೆಳ್ಳಿ ಮತ್ತು ಪ್ಲಾಟಿನಂ ಮುಂತಾದ ವಸ್ತುಗಳು ಅಗ್ಗವಾಗಿತ್ತು. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News