ಬೆಂಗಳೂರು : ಆದಾಯ ತೆರಿಗೆ ಇಲಾಖೆಯು ತೆರಿಗೆ ಪಾವತಿದಾರರಿಗೆ ತೆರಿಗೆಯನ್ನು ಲೆಕ್ಕಹಾಕಲು ಮತ್ತು ಯಾವ ತೆರಿಗೆ ಪದ್ಧತಿ ಅನುಸರಿಸಿದರೆ ಒಳಿತು ಎನ್ನುವುದನ್ನು ನಿರ್ಧರಿಸಲು ಸಹಾಯವಾಗುವಂತೆ ತೆರಿಗೆ ಕ್ಯಾಲ್ಕುಲೇಟರ್ ಅನ್ನು ಬಿಡುಗಡೆ ಮಾಡಿದೆ. ಈ ಬಾರಿಯ ಆದಾಯ ತೆರಿಗೆ ರಿಟರ್ನ್ ಸಲ್ಲಿಕೆ ಪ್ರಕ್ರಿಯೆ ಕೆಲವೇ ದಿನಗಳಲ್ಲಿ ಆರಂಭವಾಗಲಿದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 2023 ರ ಬಜೆಟ್‌ನಲ್ಲಿ ಹೊಸ ತೆರಿಗೆ ಸ್ಲ್ಯಾಬ್ ಅನ್ನು ಪ್ರಸ್ತಾಪಿಸಿದ್ದಾರೆ. ಇದರೊಂದಿಗೆ ಈ ಬಾರಿ ಎಷ್ಟು ಆದಾಯ ತೆರಿಗೆಯನ್ನು ಕಡಿತಗೊಳಿಸಲಾಗುತ್ತದೆ ಎನ್ನುವುದನ್ನು ತಿಳಿದುಕೊಳ್ಳುವುದು ಕೂಡಾ ಮುಖ್ಯವಾಗುತ್ತದೆ.
ತೆರಿಗೆ ಕ್ಯಾಲ್ಕುಲೇಟರ್ :
ಸೆಕ್ಷನ್ 115 ಬಿಎಸಿ ಪ್ರಕಾರ ಹಳೆಯ ಮತ್ತು ಹೊಸ ತೆರಿಗೆ ಪದ್ಧತಿಗಳನ್ನು ಹೋಲಿಸಲು ಆದಾಯ ತೆರಿಗೆ ವೆಬ್‌ಸೈಟ್‌ನಲ್ಲಿ ತೆರಿಗೆ ಕ್ಯಾಲ್ಕುಲೇಟರ್ ಅನ್ನು ನೀಡಲಾಗಿದೆ. ತೆರಿಗೆ ಲೆಕ್ಕಾಚಾರ ಮಾಡಲು ಜನರು ಈ ತೆರಿಗೆ ಕ್ಯಾಲ್ಕುಲೇಟರ್ ಅನ್ನು ಬಳಸಬಹುದು. ವ್ಯಕ್ತಿಯ ಆದಾಯದ ಆಧಾರದ ಮೇಲೆ, ಆದಾಯ ತೆರಿಗೆ ಕ್ಯಾಲ್ಕುಲೇಟರ್ ಮೂಲಕ ತೆರಿಗೆಯನ್ನು ಲೆಕ್ಕ ಹಾಕಬಹುದಾಗಿದೆ.
ಇದನ್ನೂ ಓದಿ : UPI ಬಳಕೆದಾರರಿಗೆ RBI ನೀಡಿದೆ ಬಿಗ್ ಅಪ್ಡೇಟ್ !
ತೆರಿಗೆ ಕ್ಯಾಲ್ಕುಲೇಟರ್ ಪ್ರಯೋಜನಗಳು :
*ಆದಾಯ ತೆರಿಗೆಯನ್ನು ಲೆಕ್ಕಾಚಾರ ಮಾಡುವ ಮೂಲಕ ಬಜೆಟ್ ಹಾಕಿಕೊಳ್ಳಬಹುದು.
*ಪಾವತಿಸಬೇಕಾದ ತೆರಿಗೆ ಎಷ್ಟು ಎನ್ನುವುದನ್ನು ತಿಳಿಯುವ ಮೂಲಕ ಉಳಿತಾಯದ ನಿರ್ಧಾರಗಳನ್ನು ತೆಗೆದುಕೊಳ್ಳಬಹುದು.
*ಹೀಗೆ ಮಾಡುವುದರಿಂದ ಸಾಲದ ಮೊರೆ ಹೋಗುವುದು ತಪ್ಪುತ್ತದೆ.
ತೆರಿಗೆ ವಿನಾಯಿತಿ :
ಪ್ರಸ್ತುತ, ಜನರು ಎರಡು ತೆರಿಗೆ ವ್ಯವಸ್ಥೆಗಳ ಪ್ರಕಾರ ತೆರಿಗೆ ಸಲ್ಲಿಸಬಹುದು. ಹೊಸ ತೆರಿಗೆ ಪದ್ಧತಿಯ ಪ್ರಕಾರ ತೆರಿಗೆಗಳನ್ನು ಸಲ್ಲಿಸಿದರೆ, ಅವರು ಸ್ಟಾಂಡರ್ಡ್ ಡಿಡೆಕ್ಷನ್ ಹೊರತುಪಡಿಸಿ ಯಾವುದೇ ವಿನಾಯಿತಿ ಸಿಗಿವುದಿಲ್ಲ. ಹಳೆಯ ತೆರಿಗೆ ಪದ್ಧತಿ ಮೂಲಕ ತೆರಿಗೆಗಳನ್ನು ಸಲ್ಲಿಸಿದರೆ, ಅನೇಕ ರೀತಿಯ ತೆರಿಗೆ ವಿನಾಯಿತಿಗಳ ಲಾಭವನ್ನು ಪಡೆಯಬಹುದಾಗಿದೆ.
ಇದನ್ನೂ ಓದಿ : ಇಪಿಎಫ್‌ಒ ಪೋರ್ಟಲ್‌ನಲ್ಲಿ ಹೆಚ್ಚಿನ ಪಿಂಚಣಿಗಾಗಿ ಅರ್ಜಿ ಸಲ್ಲಿಸುವುದು ಹೇಗೆ? ಇಲ್ಲಿದೆ ಹಂತ ಹಂತದ ಪ್ರಕ್ರಿಯೆ
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.