ಬೆಂಗಳೂರು : ಇನ್ನು ಮುಂದೆ ಬ್ಯಾಂಕ್ ತೆರೆಯುವ ಮತ್ತು ಕ್ಲೋಸ್ ಆಗುವ ಸಮಯದಲ್ಲಿ ಬದಲಾವಣೆಯಾಗಲಿದೆ. ವರದಿಯ ಪ್ರಕಾರ, ಇನ್ನು ಮುಂದೆ ಪ್ರತಿದಿನ ಬೆಳಿಗ್ಗೆ 9.45 ರಿಂದ ಸಂಜೆ 5.ರವರೆಗೆ ಬ್ಯಾಂಕ್ ಕಾರ್ಯ ನಿರ್ವಹಿಸಲಿದೆ. ಅಂದರೆ ಬ್ಯಾಂಕ್ ನೌಕರರು ಇನ್ನು ಮುಂದೆ 40 ನಿಮಿಷಗಳವರೆಗೆ ಹೆಚ್ಚು ಕೆಲಸ ಮಾಡಬೇಕಾಗುತ್ತದೆ. ಇದಕ್ಕೆ ಬದಲಾಗಿ ಬ್ಯಾಂಕ್ ನೌಕರರಿಗೆ ವಾರಕ್ಕೆ ಎರಡು ದಿನಗಳ ರಜೆ ಸಿಗಲಿದೆ. ಅಂದರೆ ಇನ್ನು ಮುಂದೆ ಪ್ರತಿ ಭಾನುವಾರದಂತೆ ಶನಿವಾರ ಕೂಡಾ ಬ್ಯಾಂಕ್ ಮುಚ್ಚಿರಲಿದೆ. ಈ ಬಗ್ಗೆ ಶೀಘ್ರವೇ ಘೋಷಣೆ ಹೊರ ಬೀಳಲಿದೆ.
ಈಡೇರಲಿದೆ ಬಹುದಿನಗಳ ಬೇಡಿಕೆ :
ಬ್ಯಾಂಕ್ ಉದ್ಯೋಗಿಗಳ ಬಹುದಿನಗಳ ಬೇಡಿಕೆ ಈಗ ಈಡೇರಲಿದೆ. ಬ್ಯಾಂಕ್ ಉದ್ಯೋಗಿಗಳಿಗೆ ವಾರದ ಐದು ದಿನಗಳ ಸೌಲಭ್ಯ ಶೀಘ್ರದಲ್ಲೇ ಜಾರಿಯಾಗಬಹುದು. ಈ ಬಗ್ಗೆ ಇಂಡಿಯನ್ ಬ್ಯಾಂಕ್ಸ್ ಅಸೋಸಿಯೇಷನ್ (ಐಬಿಎ) ಮತ್ತು ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಎಂಪ್ಲಾಯೀಸ್ ನಡುವೆ ಒಪ್ಪಂದ ಮಾಡಿಕೊಳ್ಳಲಾಗಿದೆ. ತಿಂಗಳಿಗೆ ಎರಡು ರಜೆ ಹೆಚ್ಚಿರುವುದರಿಂದ ಬ್ಯಾಂಕ್ ನೌಕರರ ಕೆಲಸದ ಅವಧಿ ಕೂಡಾ ಹೆಚ್ಚಾಗಲಿದೆ.
ಇದನ್ನೂ ಓದಿ : Cheap And Best Mileage Car: ಪ್ರತಿ ಕಿ.ಮೀಗೆ ಕೇವಲ 2 ರೂ. ವೆಚ್ಚ, ಇದುವೇ ನೋಡಿ ಅತ್ಯುತ್ತಮ ಮೈಲೇಜ್ ನೀಡುವ ಅಗ್ಗದ ಕಾರ್!
ಪ್ರತಿದಿನ 40 ನಿಮಿಷ ಹೆಚ್ಚು ಕೆಲಸ ಮಾಡಬೇಕಾಗುತ್ತದೆ :
ಹೊಸ ಒಪ್ಪಂದದ ಪ್ರಕಾರ, ಬ್ಯಾಂಕ್ ಉದ್ಯೋಗಿಗಳು ಪ್ರತಿದಿನ 40 ನಿಮಿಷ ಹೆಚ್ಚು ಕೆಲಸ ಮಾಡಬೇಕಾಗುತ್ತದೆ. ಪ್ರಸ್ತುತ ಭಾನುವಾರದ ಹೊರತಾಗಿ, ತಿಂಗಳ ಎರಡನೇ ಮತ್ತು ನಾಲ್ಕನೇ ಶನಿವಾರದಂದು ಬ್ಯಾಂಕ್‌ಗಳಿಗೆ ರಜೆ ಇರುತ್ತದೆ. ಆದರೆ ಮುಂಬರುವ ದಿನಗಳಲ್ಲಿ, ಪ್ರತಿ ಶನಿವಾರ ಮತ್ತು ಭಾನುವಾರದಂದು ಬ್ಯಾಂಕ್‌ಗಳು ಮುಚ್ಚಲ್ಪಡುತ್ತವೆ. ಈ ಬಗ್ಗೆ ಶೀಘ್ರದಲ್ಲೇ ಹೊಸ ವ್ಯವಸ್ಥೆ ಪ್ರಾರಂಭವಾಗಬಹುದು. ಈ ನಿಟ್ಟಿನಲ್ಲಿ ಸಂಘದಿಂದ ಒಪ್ಪಿಗೆ ಕೂಡಾ ನೀಡಲಾಗಿದೆ. ಬ್ಯಾಂಕ್ ಯೂನಿಯನ್‌ಗಳು ಐದು ದಿನ ಕೆಲಸ ಮಾಡುವಂತೆ ಬಹಳ ದಿನಗಳಿಂದ ಒತ್ತಾಯಿಸುತ್ತಲೇ ಬಂದಿವೆ.
ಕಳೆದ ವರ್ಷದಿಂದ ಎಲ್‌ಐಸಿಯಲ್ಲಿ ಐದು ದಿನಗಳ ಕೆಲಸ :
2022 ರಲ್ಲಿ ಎಲ್‌ಐಸಿಯಲ್ಲಿ ಫೈವ್ ಡೇಸ್ ವರ್ಕಿಂಗ್ ಎಂದು ಮಾಡಲಾಗಿದೆ. ಇದಾದ ಬಳಿಕ ಬ್ಯಾಂಕ್ ಯೂನಿಯನ್‌ಗಳಿಂದ ವಾರಕ್ಕೆ ಐದು ದಿನಗಳ ಕೆಲಸದ ಬೇಡಿಕೆ ತೀವ್ರಗೊಂಡಿತ್ತು. ಈ ಬಗ್ಗೆ ಮಾತನಾಡಿದ ಅಖಿಲ ಭಾರತ ಬ್ಯಾಂಕ್ ಅಧಿಕಾರಿಗಳ ಪ್ರಧಾನ ಕಾರ್ಯದರ್ಶಿ ಎಸ್ ನಾಗರಾಜನ್ , ನೆಗೋಷಿಯೇಬಲ್ ಇನ್ಸ್ಟ್ರುಮೆಂಟ್ ಆಕ್ಟ್ ಸೆಕ್ಷನ್ 25 ರ ಅಡಿಯಲ್ಲಿ ಸರ್ಕಾರವು ಎಲ್ಲಾ ಶನಿವಾರದಂದು ರಜೆ ಎಂದು ಘೋಷಿಸಬೇಕಾಗುತ್ತದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ : DA Hike Gift: ಸರ್ಕಾರಿ ನೌಕರರಿಗೆ ಭಾರಿ ಉಡುಗೊರೆ ನೀಡಿದ ಮೋದಿ ಸರ್ಕಾರ! ವೇತನದಲ್ಲಿ ಎಷ್ಟು ಹೆಚ್ಚಳ?
ವರದಿಯ ಪ್ರಕಾರ, ನೌಕರರು ಪ್ರತಿದಿನ ಬೆಳಿಗ್ಗೆ 9.45 ರಿಂದ ಸಂಜೆ 5.30 ರವರೆಗೆ 40 ನಿಮಿಷ ಹೆಚ್ಚು ಕೆಲಸ ಮಾಡಬೇಕಾಗುತ್ತದೆ. ಈ ಪ್ರಸ್ತಾವನೆಗೆ ಐಬಿಎ ಒಪ್ಪಿಗೆ ನೀಡಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.