DA Hike Gift: ಸರ್ಕಾರಿ ನೌಕರರಿಗೆ ಭಾರಿ ಉಡುಗೊರೆ ನೀಡಿದ ಮೋದಿ ಸರ್ಕಾರ! ವೇತನದಲ್ಲಿ ಎಷ್ಟು ಹೆಚ್ಚಳ?

7th Pay Commission: ಮೋದಿ ಸರ್ಕಾರ ಜನವರಿ 1 ರಿಂದ ಜಾರಿಗೆ ಬರುವಂತೆ ತುಟ್ಟಿಭತ್ಯೆಯನ್ನು ಶೇಕಡಾ 4 ರಷ್ಟು ಹೆಚ್ಚಿಸಲು ನಿರ್ಧರಿಸಿದೆ. ಇದರಿಂದ ಪ್ರಸ್ತುತ ಇರುವ ತುತ್ತಿಭತ್ಯೆಯು ಶೇ.38ರಿಂದ ಶೇ.42ಕ್ಕೆ ಏರಿಕೆಯಾಗಿದೆ.  

Written by - Nitin Tabib | Last Updated : Mar 1, 2023, 02:24 PM IST
  • ತುಟ್ಟಿಭತ್ಯೆಯನ್ನು ಸರ್ಕಾರ ವತಿಯಿಂದ ವರ್ಷಕ್ಕೆ ಎರಡು ಬಾರಿ ಹೆಚ್ಚಿಸಲಾಗುತ್ತದೆ.
  • ಇದನ್ನು ಜನವರಿ ಮತ್ತು ಜುಲೈನಲ್ಲಿ ಜಾರಿಗೆ ತರಲಾಗುತ್ತದೆ.
  • ಆದಾಗ್ಯೂ, ಈ ಘೋಷಣೆ ಪ್ರತಿ ವರ್ಷ ತಡವಾಗಿ ಸಂಭವಿಸುತ್ತದೆ.
DA Hike Gift: ಸರ್ಕಾರಿ ನೌಕರರಿಗೆ ಭಾರಿ ಉಡುಗೊರೆ ನೀಡಿದ ಮೋದಿ ಸರ್ಕಾರ! ವೇತನದಲ್ಲಿ ಎಷ್ಟು ಹೆಚ್ಚಳ? title=
ಟುಟ್ಟಿಭತ್ಯೆ ಹೆಚ್ಚಳ

DA Hike: ಕೇಂದ್ರ ನೌಕರರ ಡಿಎ ಹೆಚ್ಚಳ ಕುರಿತು ಸರ್ಕಾರ ನಿರ್ಧಾರ ಕೈಗೊಂಡಿದೆ. ಡಿಎ ಹೆಚ್ಚಳಕ್ಕೆ ಮೋದಿ ಸಂಪುಟ ಒಪ್ಪಿಗೆ ನೀಡಿದೆ. ಈ ಬಗ್ಗೆ ಅಧಿಕೃತ ಪ್ರಕಟಣೆ ಹೊರಬಂದಿಲ್ಲ. ಆದರೆ, ಬುಧವಾರ ನಡೆಯಲಿರುವ ಸಚಿವ ಸಂಪುಟ ಸಭೆಯ ಮಾಹಿತಿಯನ್ನು ಪತ್ರಿಕಾಗೋಷ್ಠಿ ಮೂಲಕ ನೀಡುವುದಿಲ್ಲ, ಈ ಬಗ್ಗೆ ಯಾವುದೇ ಪತ್ರಿಕಾ ಪ್ರಕಟಣೆ ನೀಡುವುದಿಲ್ಲ ಎಂದು ಹೇಳಲಾಗುತ್ತಿದೆ.

ಎಐಸಿಪಿಐ ಸೂಚ್ಯಂಕದ ಆಧಾರದ ಮೇಲೆ ತುಟ್ಟಿಭತ್ಯೆಯ ನಿರ್ಧಾರ
ಮೋದಿ ಸರ್ಕಾರವು ಜನವರಿ 1 ರಿಂದ ಜಾರಿಗೆ ಬರುವಂತೆ ಡಿಎ ಅನ್ನು ಶೇಕಡಾ 4 ರಷ್ಟು ಹೆಚ್ಚಿಸಲು ನಿರ್ಧರಿಸಿದೆ. ಪ್ರಸ್ತುತ ಇರುವ ತುಟ್ಟಿಭತ್ಯೆಯನ್ನು ಶೇ.38 ರಿಂದ ಶೇ.42ಕ್ಕೆ ಹೆಚ್ಚಿಸಲಾಗಿದೆ. AICPI-IW ಆಧಾರದ ಮೇಲೆ ತುಟ್ಟಿಭತ್ಯೆಯನ್ನು ಲೆಕ್ಕಹಾಕಲಾಗುತ್ತದೆ. ತುಟ್ಟಿಭತ್ಯೆಯನ್ನು ಸರ್ಕಾರ ವತಿಯಿಂದ ವರ್ಷಕ್ಕೆ ಎರಡು ಬಾರಿ ಹೆಚ್ಚಿಸಲಾಗುತ್ತದೆ. ಇದನ್ನು ಜನವರಿ ಮತ್ತು ಜುಲೈನಲ್ಲಿ ಜಾರಿಗೆ ತರಲಾಗುತ್ತದೆ. ಆದಾಗ್ಯೂ, ಈ ಘೋಷಣೆ ಪ್ರತಿ ವರ್ಷ ತಡವಾಗಿ ಸಂಭವಿಸುತ್ತದೆ. ಈ ಬಾರಿ ಜನವರಿ ತಿಂಗಳ ತುಟ್ಟಿಭತ್ಯೆಯ ನಿರ್ಧಾರವನ್ನು ಮಾರ್ಚ್‌ನಲ್ಲಿ ತೆಗೆದುಕೊಳ್ಳಲಾಗಿದೆ. ಅಂತೆಯೇ, ಜುಲೈ ನಿರ್ಧಾರವನ್ನು ಸೆಪ್ಟೆಂಬರ್-ಅಕ್ಟೋಬರ್ನಲ್ಲಿ ಹೊರಬೀಳುವ ಸಾಧ್ಯತೆ ಇದೆ.

ಇದನ್ನೂ ಓದಿ-7th Pay Commission: ರಾಜ್ಯ ಸರ್ಕಾರಿ ನೌಕರರಿಗೆ ಭಾರಿ ಸಂತಸದ ಸುದ್ದಿ ಪ್ರಕಟಿಸಿದ ಸಿಎಂ ಬೊಮ್ಮಾಯಿ

ಹೋಳಿ ಹಬ್ಬಕ್ಕೂ ಮುನ್ನ ಘೋಷಣೆ ಸಾಧ್ಯತೆ
ಮೋದಿ ಸಂಪುಟವು ಬುಧವಾರ ತುಟ್ಟಿಭತ್ಯೆಯ ಅಂಕಿಅಂಶಗಳನ್ನು ಪರಿಶೀಲಿಸಿದೆ. ಆದರೆ ಈ ಬಗ್ಗೆ ಔಪಚಾರಿಕ ಅನುಮೋದನೆ ಇನ್ನೂ ಪ್ರಕಟವಾಗಿಲ್ಲ. ಝೀ ಬ್ಯುಸಿನೆಸ್ ನಲ್ಲಿ ಪ್ರಕಟವಾಗಿರುವ ಸುದ್ದಿ ಪ್ರಕಾರ ಡಿಎಯನ್ನು ಶೇ.42ಕ್ಕೆ ಹೆಚ್ಚಿಸಲು ಒಪ್ಪಿಗೆ ಸೂಚಿಸಲಾಗಿದೆ ಎನ್ನಲಾಗಿದೆ. ಪ್ರಧಾನಿ ಮೋದಿ ಹೋಳಿ ಹಬ್ಬಕ್ಕೂ ಮುನ್ನ ಈ ಕುರಿತು ಘೋಷಣೆ ಮಾಡಬಹುದು ಎಂದು ಮೂಲಗಳು ಹೇಳಿವೆ. ಹೋಳಿ ನಂತರ, ಹಣಕಾಸು ಸಚಿವಾಲಯ ತನ್ನ ಅಧಿಸೂಚನೆಯನ್ನು ಹೊರಡಿಸುತ್ತದೆ. ಮಾರ್ಚ್ ತಿಂಗಳ ಸಂಬಳದ ಜೊತೆಗೆ ಹೆಚ್ಚಿದ ತುಟ್ಟಿಭತ್ಯೆಯನ್ನು ನೀಡಬೇಕು. ಇದರೊಂದಿಗೆ ನೌಕರರಿಗೆ ಜನವರಿ ಮತ್ತು ಫೆಬ್ರುವರಿ 2023 ಎರಡು ತಿಂಗಳ ಬಾಕಿಯೂ ಕೂಡ ಸಿಗಲಿದೆ.

ಇದನ್ನೂ ಓದಿ-Gold Rate: ಇಂದೂ ಕೂಡ ಚಿನ್ನ ಬೆಳ್ಳಿ ಬೆಲೆಯಲ್ಲಿ ಭಾರಿ ಕುಸಿತ, ಹೊಸ ದರಗಳು ಇಂತಿವೆ!

ಶೇ.4ರಷ್ಟು ಹೆಚ್ಚಳದಿಂದ ಡಿಎ ಶೇ.42ಕ್ಕೆ ಏರಿಕೆಯಾಗಲಿದೆ. ಇದು ಜನವರಿ 2023 ರಿಂದ ಅನ್ವಯವಾಗುತ್ತದೆ. ಈ ಮೂಲಕ ನೌಕರರಿಗೆ ಮಾರ್ಚ್ ತಿಂಗಳ ವೇತನದ ಜತೆಗೆ ಎರಡು ತಿಂಗಳ ಬಾಕಿ ಸಿಗಲಿದೆ. 18,000 ಮೂಲ ವೇತನದಲ್ಲಿ ತಿಂಗಳಿಗೆ 720 ರೂಪಾಯಿ ಹೆಚ್ಚಳವಾಗಲಿದೆ. ಅಂದರೆ, ಎರಡು ತಿಂಗಳಿಗೆ 1440 ರೂ. ಲಕ್ಷಾಂತರ ಪಿಂಚಣಿದಾರರಿಗೂ ಹೋಳಿ ಉಡುಗೊರೆ ನೀಡಲಾಗಿದೆ. ಡಿಯರ್‌ನೆಸ್ ರಿಲೀಫ್  ಅನ್ನು 4% ಹೆಚ್ಚಿಸಲು ಸರ್ಕಾರ ನಿರ್ಧರಿಸಿದೆ. ಅಂದರೆ, ಈಗ ಪಿಂಚಣಿದಾರರಿಗೆ 42% ದರದಲ್ಲಿ ತುಟ್ಟಿಭತ್ಯೆ ರಿಲೀಫ್ ಸಿಗಲಿದೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News