PPF Account: ಪಿಪಿಎಫ್ ಯೋಜನೆಯಿಂದ ಯಾವಾಗ ಮತ್ತು ಹೇಗೆ ಹಣ ಹಿಂಪಡೆಯಬಹುದು?

PPF Scheme: PPF 15 ವರ್ಷಗಳ ಲಾಕ್-ಇನ್ ಅವಧಿಯನ್ನು ಹೊಂದಿದೆ, ಅಂದರೆ ಹೂಡಿಕೆದಾರರು ಅವಧಿಯ ಅಂತ್ಯದ ಮೊದಲು ಹಣ ಹಿಂಪಡೆಯಲು ಸಾಧ್ಯವಿಲ್ಲ. ಈ ಯೋಜನೆಯಲ್ಲಿ ಮೆಚ್ಯೂರಿಟಿ ಮೊತ್ತವು 15 ವರ್ಷಗಳ ನಂತರ ಮಾತ್ರ ಲಭ್ಯವಿರುತ್ತದೆ. ಆದಾಗ್ಯೂ ಭಾಗಶಃ ಹಣ ಹಿಂತೆಗೆದುಕೊಳ್ಳುವಿಕೆಗೆ ಕೆಲವು ವಿನಾಯಿತಿಗಳಿವೆ.

Written by - Puttaraj K Alur | Last Updated : Mar 1, 2023, 01:04 PM IST
  • ಸಾರ್ವಜನಿಕ ಭವಿಷ್ಯ ನಿಧಿ ಅಂದರೆ PPF 15 ವರ್ಷಗಳ ಲಾಕ್-ಇನ್ ಅವಧಿಯನ್ನು ಹೊಂದಿದೆ
  • ಹೂಡಿಕೆದಾರರು 15 ವರ್ಷಗಳ ಅವಧಿಯ ಅಂತ್ಯದ ಮೊದಲು ಹಣ ಹಿಂಪಡೆಯಲು ಸಾಧ್ಯವಿಲ್ಲ
  • ಕೆಲವು ಸಂದರ್ಭಗಳಲ್ಲಿ ಮಾತ್ರ ಹೂಡಿಕೆದಾರರು PPF ಯೋಜನೆಯಿಂದ ಭಾಗಶಃ ಹಣ ಹಿಂಪಡೆಯಬಹುದು
PPF Account: ಪಿಪಿಎಫ್ ಯೋಜನೆಯಿಂದ ಯಾವಾಗ ಮತ್ತು ಹೇಗೆ ಹಣ ಹಿಂಪಡೆಯಬಹುದು?  title=
ಸಾರ್ವಜನಿಕ ಭವಿಷ್ಯ ನಿಧಿ ಯೋಜನೆ

ನವದೆಹಲಿ: ಸಾರ್ವಜನಿಕ ಭವಿಷ್ಯ ನಿಧಿ ಅಂದರೆ PPF ಭಾರತದಲ್ಲಿ ಜನಪ್ರಿಯ ದೀರ್ಘಾವಧಿಯ ಹೂಡಿಕೆ ಯೋಜನೆಯಾಗಿದೆ. ಪಿಪಿಎಫ್ ಯೋಜನೆಯು ಹೂಡಿಕೆದಾರರಿಗೆ 15 ವರ್ಷಗಳ ಅವಧಿಗೆ ವರ್ಷಕ್ಕೆ ಕನಿಷ್ಠ 500 ಮತ್ತು ಗರಿಷ್ಠ 1.5 ಲಕ್ಷ ರೂ. ಹೂಡಿಕೆಗೆ ಅವಕಾಶ ನೀಡುತ್ತದೆ. ಕೇಂದ್ರ ಸರ್ಕಾರವು PPF ಮೇಲಿನ ಬಡ್ಡಿದರವನ್ನು ಪ್ರಸ್ತುತ ವಾರ್ಷಿಕ ಶೇ.7.1ರಷ್ಟು ನಿಗದಿಪಡಿಸಿದೆ.

PPF 15 ವರ್ಷಗಳ ಲಾಕ್-ಇನ್ ಅವಧಿಯನ್ನು ಹೊಂದಿದೆ, ಅಂದರೆ ಹೂಡಿಕೆದಾರರು ಅವಧಿಯ ಅಂತ್ಯದ ಮೊದಲು ಹಣ ಹಿಂಪಡೆಯಲು ಸಾಧ್ಯವಿಲ್ಲ. ಈ ಯೋಜನೆಯಲ್ಲಿ ಮೆಚ್ಯೂರಿಟಿ ಮೊತ್ತವು 15 ವರ್ಷಗಳ ನಂತರವೇ ಲಭ್ಯವಿರುತ್ತದೆ. ಆದರೆ ಭಾಗಶಃ ಹಿಂತೆಗೆದುಕೊಳ್ಳುವಿಕೆಯಲ್ಲಿ ಕೆಲವು ವಿನಾಯಿತಿಗಳಿವೆ. ಇದರ ಮಾಹಿತಿ ಇಲ್ಲಿದೆ ನೋಡಿ.

ಇದನ್ನೂ ಓದಿ: ತಿಂಗಳ ಮೊದಲ ದಿನವೇ ಗ್ರಾಹಕರಿಗೆ ಶಾಕ್: ಗ್ಯಾಸ್ ಸಿಲಿಂಡರ್ ಮತ್ತೆ ದುಬಾರಿ

5 ವರ್ಷಗಳು ಪೂರ್ಣಗೊಂಡ ನಂತರ: PPF ಖಾತೆಯನ್ನು ತೆರೆಯುವ ದಿನಾಂಕದಿಂದ 5 ವರ್ಷಗಳು ಪೂರ್ಣಗೊಂಡ ನಂತರ, ಹೂಡಿಕೆದಾರರು PPF ಖಾತೆಯಿಂದ ಭಾಗಶಃ ಹಣ ಹಿಂಪಡೆಯಬಹುದು. ಹಿಂಪಡೆಯಬಹುದಾದ ಗರಿಷ್ಠ ಮೊತ್ತವು 4ನೇ ವರ್ಷದ ಅಂತ್ಯದ ಬಾಕಿಯ ಶೇ.50ರಷ್ಟು ಅಥವಾ ಹಿಂದಿನ ವರ್ಷದ ಅಂತ್ಯದ ಬಾಕಿ ಯಾವುದು ಕಡಿಮೆಯೋ ಅದು ಆಗಿರುತ್ತದೆ.

ವೈದ್ಯಕೀಯ ಚಿಕಿತ್ಸೆಗೆ: ಯಾವುದೇ ಒಬ್ಬ ವ್ಯಕ್ತಿಯು ತನಗೆ ಅಥವಾ ಕುಟುಂಬದ ಸದಸ್ಯರಿಗೆ ವೈದ್ಯಕೀಯ ತುರ್ತು ಸಂದರ್ಭದಲ್ಲಿ PPF ಖಾತೆಯಿಂದ ಹಣ ಹಿಂಪಡೆಯಬಹುದು. ಹಿಂಪಡೆಯಬಹುದಾದ ಗರಿಷ್ಠ ಮೊತ್ತವು 4ನೇ ವರ್ಷದ ಅಂತ್ಯದ ಬಾಕಿಯ ಶೇ50ರಷ್ಟು ಅಥವಾ ಹಿಂದಿನ ವರ್ಷದ ಅಂತ್ಯದ ಬಾಕಿ - ಯಾವುದು ಕಡಿಮೆಯೋ ಅದು ಆಗಿರುತ್ತದೆ.

ಉನ್ನತ ಶಿಕ್ಷಣದ ವೆಚ್ಚಕ್ಕೆ: PPF ಖಾತೆದಾರನು ತನ್ನ ಅಥವಾ ತನ್ನ ಯಾವುದೇ ಮಕ್ಕಳ ಶಿಕ್ಷಣದ ವೆಚ್ಚವನ್ನು ಪೂರೈಸಲು PPF ಖಾತೆಯಿಂದ ಹಣ ಹಿಂಪಡೆಯಬಹುದು. ಹಿಂಪಡೆಯಬಹುದಾದ ಗರಿಷ್ಠ ಮೊತ್ತವು 4ನೇ ವರ್ಷದ ಅಂತ್ಯದ ಬಾಕಿಯ ಶೇ.50ರಷ್ಟು ಅಥವಾ ಹಿಂದಿನ ವರ್ಷದ ಅಂತ್ಯದ ಬಾಕಿ - ಯಾವುದು ಕಡಿಮೆಯೋ ಅದು ಆಗಿರುತ್ತದೆ.

ಇದನ್ನೂ ಓದಿ: Petrol-diesel prices today: ಪೆಟ್ರೋಲ್- ಡೀಸೆಲ್ ದರದ ಮೇಲೆ ರಿಲೀಫ್ ನೀಡಿದ ತೈಲ ಕಂಪನಿಗಳು!

ಹೂಡಿಕೆದಾರರ ಮರಣದ ಸಂದರ್ಭದಲ್ಲಿ: ಇಂತಹ ಸಂದರ್ಭಗಳಲ್ಲಿ ನಾಮಿನಿಯು PPF ಖಾತೆಯಿಂದ ಸಂಪೂರ್ಣ ಮೊತ್ತ ಹಿಂಪಡೆಯಬಹುದು.

ನಿಮ್ಮ PPF ಮೊತ್ತವನ್ನು ಆನ್‌ಲೈನ್‌ನಲ್ಲಿ ಹಿಂಪಡೆಯುವುದು ಹೇಗೆ?

ಆನ್‌ಲೈನ್‌ನಲ್ಲಿ PPF ಹಿಂಪಡೆಯಲು ಈ ಕೆಳಗಿನ ಹಂತ ಅನುಸರಿಸಿ

  1. ನೀವು ಖಾತೆ ತೆರೆದಿರುವ ಬ್ಯಾಂಕ್ ಅಥವಾ ಪೋಸ್ಟ್ ಆಫೀಸ್‌ನ ವೆಬ್‌ಸೈಟ್‌ನಲ್ಲಿ ನಿಮ್ಮ PPF ಖಾತೆಗೆ ಲಾಗ್ ಇನ್ ಮಾಡಿ.
  2. ಲಾಗ್ ಇನ್ ಮಾಡಿದ ನಂತರ ‘ಹಿಂತೆಗೆದುಕೊಳ್ಳುವಿಕೆ" ಅಥವಾ "ಭಾಗಶಃ ಹಿಂತೆಗೆದುಕೊಳ್ಳುವಿಕೆ" ವಿಭಾಗಕ್ಕೆ ಹೋಗಿ ಮತ್ತು ನೀವು ಹಿಂಪಡೆಯಲು ಬಯಸುವ ಮೊತ್ತವನ್ನು ಆಯ್ಕೆ ಮಾಡಿ.
  3. ನೀವು ಹಿಂಪಡೆದ ಮೊತ್ತವನ್ನು ಕ್ರೆಡಿಟ್ ಮಾಡಬಯಸುವ ಖಾತೆ ಸಂಖ್ಯೆ ಮತ್ತು IFSC ಕೋಡ್ ಸೇರಿದಂತೆ ನಿಮ್ಮ ಬ್ಯಾಂಕ್ ಖಾತೆಯ ವಿವರಗಳನ್ನು ನಮೂದಿಸಿ.
  4. ವಾಪಸಾತಿ ವಿನಂತಿಯನ್ನು ಸಲ್ಲಿಸಿ ಮತ್ತು ದೃಢೀಕರಣಕ್ಕಾಗಿ ನಿರೀಕ್ಷಿಸಿ.
  5. ಹಿಂಪಡೆಯುವ ಪ್ರಕ್ರಿಯೆಯು ಪೂರ್ಣಗೊಂಡ ನಂತರ ಮೊತ್ತವನ್ನು ನಿಮ್ಮ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ.
  6. ಕೆಲವು ಬ್ಯಾಂಕ್‌ಗಳು ಅಥವಾ ಅಂಚೆ ಕಚೇರಿಗಲ್ಲಿ ಹಿಂಪಡೆಯುವ ವಿನಂತಿ ಮಾಡುವ ಮೊದಲು ಹೆಚ್ಚುವರಿ ದಾಖಲೆಗಳು ಅಥವಾ ಪರಿಶೀಲನೆಯ ಅಗತ್ಯವಿರಬಹುದು. ಇದರ ಬಗ್ಗೆ ನೀವು ವಿಚಾರಿಸಿ ಮಾಹಿತಿ ಪಡೆಯಬಹುದು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News