Bank Union Strike: ಇಂದಿನಿಂದ ಎರಡು ದಿನ ಬ್ಯಾಂಕ್ ನೌಕರರ ಮುಷ್ಕರ, ನಡೆಯುವುದಿಲ್ಲ ಬ್ಯಾಂಕ್ ಕೆಲಸ

ಸರ್ಕಾರಿ ಸ್ವಾಮ್ಯದ ಎರಡು ಬ್ಯಾಂಕ್‌ಗಳನ್ನು ಖಾಸಗೀಕರಣಗೊಳಿಸುವ ಸರ್ಕಾರದ ಪ್ರಯತ್ನದ ವಿರುದ್ಧ ಈ ಮುಷ್ಕರಕ್ಕೆ ಕರೆ ನೀಡಲಾಗಿದೆ ಎಂದು ಬ್ಯಾಂಕ್ ಯೂನಿಯನ್ ಮುಖಂಡರು ತಿಳಿಸಿದ್ದಾರೆ.

Written by - Ranjitha R K | Last Updated : Dec 16, 2021, 12:01 PM IST
  • ಸಾರ್ವಜನಿಕ ವಲಯದ ಬ್ಯಾಂಕ್‌ಗಳ ನೌಕರರ ಮುಷ್ಕರ
  • 9 ಲಕ್ಷ ಬ್ಯಾಂಕ್ ನೌಕರರು 2 ದಿನಗಳ ಕಾಲ ಮುಷ್ಕರದಲ್ಲಿ ಭಾಗಿ
  • ಚೆಕ್ ಕ್ಲಿಯರೆನ್ಸ್ ಮತ್ತು ಹಣ ವರ್ಗಾವಣೆ ಇರುವುದಿಲ್ಲ
Bank Union Strike: ಇಂದಿನಿಂದ ಎರಡು ದಿನ ಬ್ಯಾಂಕ್ ನೌಕರರ ಮುಷ್ಕರ, ನಡೆಯುವುದಿಲ್ಲ ಬ್ಯಾಂಕ್ ಕೆಲಸ title=
ಸಾರ್ವಜನಿಕ ವಲಯದ ಬ್ಯಾಂಕ್‌ಗಳ ನೌಕರರ ಮುಷ್ಕರ (file photo)

ನವದೆಹಲಿ : ಸಾರ್ವಜನಿಕ ವಲಯದ ಬ್ಯಾಂಕ್‌ಗಳ ಸುಮಾರು ಒಂಬತ್ತು ಲಕ್ಷ ಉದ್ಯೋಗಿಗಳು ಇಂದಿನಿಂದ ಎರಡು ದಿನಗಳ ಮುಷ್ಕರವನ್ನು (Bank Union Strike) ಕೈಗೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಸಾಮಾನ್ಯ ಜನರು ಬ್ಯಾಂಕ್‌ಗೆ ಸಂಬಂಧಿಸಿದ ವ್ಯವಹಾರವನ್ನು ನಿಭಾಯಿಸಲು ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಎರಡು ದಿನಗಳ  ಅಂದರೆ ಡಿಸೆಂಬರ್ 16 ಮತ್ತು 17 ಮುಷ್ಕರಕ್ಕೆ ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯೂನಿಯನ್ಸ್ (UFBU-United Forum of Bank Unions) ಕರೆ ನೀಡಿದೆ.

ಬ್ಯಾಂಕ್ ನೌಕರರ ಮುಷ್ಕರಕ್ಕೆ ಕಾರಣ ? 
ಸರ್ಕಾರಿ ಸ್ವಾಮ್ಯದ ಎರಡು ಬ್ಯಾಂಕ್‌ಗಳನ್ನು ಖಾಸಗೀಕರಣಗೊಳಿಸುವ (bank privatization) ಸರ್ಕಾರದ ಪ್ರಯತ್ನದ ವಿರುದ್ಧ ಈ ಮುಷ್ಕರಕ್ಕೆ (Bank Union Strike) ಕರೆ ನೀಡಲಾಗಿದೆ ಎಂದು ಬ್ಯಾಂಕ್ ಯೂನಿಯನ್ ಮುಖಂಡರು ತಿಳಿಸಿದ್ದಾರೆ. ಅಖಿಲ ಭಾರತ ಬ್ಯಾಂಕ್ ಅಧಿಕಾರಿಗಳ ಒಕ್ಕೂಟದ (AIBOC) ಪ್ರಧಾನ ಕಾರ್ಯದರ್ಶಿ ಸೌಮ್ಯಾ ದತ್ತಾ ಅವರು, ಹೆಚ್ಚುವರಿ ಮುಖ್ಯ ಕಾರ್ಮಿಕ ಆಯುಕ್ತರ ಮುಂದೆ ನಡೆದ ಸಂಧಾನ ಸಭೆ ವಿಫಲವಾಗಿದ್ದು, ಮುಷ್ಕರ ನಡೆಸುವ ನಿರ್ಧಾರವನ್ನು ಒಕ್ಕೂಟಗಳು ಎತ್ತಿ ಹಿಡಿದಿವೆ ಎಂದು ಹೇಳಿದ್ದಾರೆ.

ಇದನ್ನೂ ಓದಿ : Voter List: ಈಗ ಕುಳಿತಲ್ಲಿಯೇ ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ಸುಲಭವಾಗಿ ಪರಿಶೀಲಿಸಿ

ಸಾರ್ವಜನಿಕ ವಲಯದ ಬ್ಯಾಂಕುಗಳಲ್ಲಿ ನಡೆಯುವುದಿಲ್ಲ ಕೆಲಸ : 
ಚೆಕ್ ಕ್ಲಿಯರೆನ್ಸ್ (Cheque clearence) ಮತ್ತು ಹಣ ವರ್ಗಾವಣೆಯಂತಹ ಬ್ಯಾಂಕಿಂಗ್ ಸೇವೆಗಳ ಮೇಲೆ ಪರಿಣಾಮ ಬೀರಬಹುದು ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಸೇರಿದಂತೆ ಹೆಚ್ಚಿನ ಬ್ಯಾಂಕ್‌ಗಳು ಈಗಾಗಲೇ ತಮ್ಮ ಗ್ರಾಹಕರಿಗೆ ತಿಳಿಸಿವೆ. ಎರಡು ದಿನಗಳ ಮುಷ್ಕರದ ನಂತರ ಭಾನುವಾರ ವಾರದ ರಜೆಯ ಕಾರಣ ಬ್ಯಾಂಕುಗಳು (Bank) ಮುಚ್ಚಲ್ಪಡುತ್ತವೆ. ಹೀಗಿರುವಾಗ ಬ್ಯಾಂಕ್ ಗ್ರಾಹಕರು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.

ಬಜೆಟ್‌ನಲ್ಲಿಯೇ  ಪ್ರಸ್ತಾವನೆ ಸಲ್ಲಿಸಿತ್ತು ಕೇಂದ್ರ ಸರ್ಕಾರ :
2021-22 ರ ಬಜೆಟ್‌ನಲ್ಲಿ ಕೇಂದ್ರ ಸರ್ಕಾರವು ಈ ವರ್ಷದಲ್ಲಿ ಎರಡು ಸಾರ್ವಜನಿಕ ವಲಯದ ಬ್ಯಾಂಕ್‌ಗಳ ಖಾಸಗೀಕರಣವನ್ನು ಪ್ರಸ್ತಾಪಿಸಿದೆ. ಅಲ್ಲದೆ ಈ ಪ್ರಕ್ರಿಯೆಯ ತಯಾರಿಯನ್ನೂ ಸರ್ಕಾರ ಆರಂಭಿಸಿದೆ. ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಬ್ಯಾಂಕಿಂಗ್ ಕಾನೂನು (ತಿದ್ದುಪಡಿ) ಮಸೂದೆ 2021 (Banking Laws (Amendment) Bill 2021) ಅನ್ನು ಪರಿಚಯಿಸಲು ಸರ್ಕಾರ ಸಿದ್ಧತೆ ನಡೆಸುತ್ತಿದೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ : Aadhaar Card Update: ಕೇವಲ ಒಂದು ಲಿಂಕ್‌ನಲ್ಲಿ ನಿಮ್ಮ DOB ಬದಲಾಯಿಸಿ, ಇಲ್ಲಿದೆ ಸುಲಭ ಮಾರ್ಗ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News