CNG-PNG Price Hike: ಮತ್ತೆ ಏರಿಕೆ ಕಂಡ CNG ಬೆಲೆ, ಹೊಸ ದರ ಇಲ್ಲಿದೆ

CNG-PNG Price Hike: ದೇಶದಲ್ಲಿ ಹಣದುಬ್ಬರ ನಿರಂತರವಾಗಿ ಹೆಚ್ಚುತ್ತಿದೆ. ಪೆಟ್ರೋಲ್, ಡೀಸೆಲ್ ಜತೆಗೆ ತರಕಾರಿ ಬೆಲೆಯೂ ಗಗನ ಮುಟ್ಟುತ್ತಿದೆ. ಈ ಅನುಕ್ರಮದಲ್ಲಿ, ಮುಂಬೈ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಿಎನ್‌ಜಿ ಅನಿಲವನ್ನು ಪೂರೈಸುವ ಮಹಾನಗರ ಗ್ಯಾಸ್ ಲಿಮಿಟೆಡ್ ಮತ್ತೊಮ್ಮೆ ಸಿಎನ್‌ಜಿ ಮತ್ತು ಪಿಎನ್‌ಜಿ ಬೆಲೆಯನ್ನು ಹೆಚ್ಚಿಸಿದೆ.

Written by - Nitin Tabib | Last Updated : Dec 18, 2021, 06:43 PM IST
  • ದೇಶದಲ್ಲಿ ಹಣದುಬ್ಬರ ನಿರಂತರವಾಗಿ ಹೆಚ್ಚುತ್ತಿದೆ. ಪೆಟ್ರೋಲ್,
  • ಡೀಸೆಲ್ ಜತೆಗೆ ತರಕಾರಿ ಬೆಲೆಯೂ ಗಗನ ಮುಟ್ಟುತ್ತಿದೆ.
  • ಈ ಅನುಕ್ರಮದಲ್ಲಿ, ಮುಂಬೈ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಿಎನ್‌ಜಿ ಅನಿಲವನ್ನು ಪೂರೈಸುವ ಮಹಾನಗರ ಗ್ಯಾಸ್ ಲಿಮಿಟೆಡ್ ಮತ್ತೊಮ್ಮೆ ಸಿಎನ್‌ಜಿ ಮತ್ತು ಪಿಎನ್‌ಜಿ ಬೆಲೆಯನ್ನು ಹೆಚ್ಚಿಸಿದೆ.
CNG-PNG Price Hike: ಮತ್ತೆ ಏರಿಕೆ ಕಂಡ CNG ಬೆಲೆ, ಹೊಸ ದರ ಇಲ್ಲಿದೆ title=
CNG-PNG Price Hike

CNG Price Hike: CNG ಮತ್ತು PNG ಬೆಲೆಗಳು ಮತ್ತೊಮ್ಮೆ ಏರಿಕೆ ಕಂಡಿವೆ. ಈ ಬಾರಿ ಮಹಾನಗರ ಗ್ಯಾಸ್ ಲಿಮಿಟೆಡ್ (ಎಂಜಿಎಲ್) ಬೆಲೆ ಏರಿಕೆ ಮಾಡಿದೆ. ಮುಂಬೈ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಇತ್ತೀಚಿನ ಸಿಎನ್‌ಜಿ ಬೆಲೆಗಳು ಕೆಜಿಗೆ 63.50 ರೂ.ಗೆ ಏರಿಕೆಯಾಗಿದೆ ಎಂದು ಎಂಜಿಎಲ್ ಟ್ವೀಟ್ ಮಾಡುವ ಮೂಲಕ ಮಾಹಿತಿ ನೀಡಿದೆ. ಇದೇ ವೇಳೆ, ಪಿಎನ್‌ಜಿ ಪ್ರತಿ ಯೂನಿಟ್‌ಗೆ 38 ರೂ.ಗೆ ತಲುಪಿದೆ.

ಬೆಲೆಯಲ್ಲಿ ಎಷ್ಟು ಹೆಚ್ಚಳ
ಡಿಸೆಂಬರ್ 17 ರಂದು, ಮಹಾನಗರ ಗ್ಯಾಸ್ ಲಿಮಿಟೆಡ್‌ ತನ್ನ ಅಧಿಕೃತ ಟ್ವಿಟರ್ ಹ್ಯಾಂಡಲ್‌ನಿಂದ ಟ್ವೀಟ್ ಮಾಡುವ ಮೂಲಕ ಬೆಲೆ ಏರಿಕೆ ಕುರಿತು ಈ ಮಾಹಿತಿಯನ್ನು ನೀಡಿದೆ.  ಸಿಎನ್‌ಜಿ ಬೆಲೆ ಪ್ರತಿ ಕೆಜಿಗೆ 2 ರೂ ಮತ್ತು ಪಿಎನ್‌ಜಿಯ ಬೆಲೆ ಪ್ರತಿ ಯೂನಿಟ್‌ಗೆ ರೂ 1.5 ಹೆಚ್ಚಾಗಿದೆ. ಟೈಮ್ಸ್ ಆಫ್ ಇಂಡಿಯಾದ ವರದಿಯ ಪ್ರಕಾರ, ಬೆಲೆ ಏರಿಕೆಯ ನಂತರ, ಕಪ್ಪು-ಹಳದಿ ಟ್ಯಾಕ್ಸಿ ಮತ್ತು ಆಟೋರಿಕ್ಷಾ ಒಕ್ಕೂಟವು ಪ್ರಯಾಣ ದರದಲ್ಲಿ ಹೆಚ್ಚಳಕ್ಕೆ ಒತ್ತಾಯಿಸಿದೆ.

ದೇಶದ ಪ್ರಮುಖ ನಗರಗಳಲ್ಲಿನ ಇತ್ತೀಚಿನ CNG ಬೆಲೆಗಳು

ಮುಂಬೈನಲ್ಲಿ ಇತ್ತೀಚಿನ CNG ಬೆಲೆ - ಪ್ರತಿ ಕೆಜಿಗೆ 63.50 ರೂ .

ದೆಹಲಿಯಲ್ಲಿ ಇತ್ತೀಚಿನ CNG ಬೆಲೆ - ಪ್ರತಿ ಕೆಜಿಗೆ 53.05 ರೂ.

ಕೋಲ್ಕತ್ತಾದಲ್ಲಿ ಇತ್ತೀಚಿನ CNG ಬೆಲೆ ಪ್ರತಿ ಕೆಜಿಗೆ 35.71 ರೂ. 

ಚೆನ್ನೈನಲ್ಲಿ ಇತ್ತೀಚಿನ ಸಿಎನ್‌ಜಿ ಬೆಲೆ ಕೆಜಿಗೆ 35.44 ರೂ. ಆಗಿದೆ.

ಬೆಂಗಳೂರಿನಲ್ಲಿ ಸಿಎನ್‌ಜಿಯ ಇತ್ತೀಚಿನ ಬೆಲೆ ಕೆಜಿಗೆ ರೂ.55.00 ಆಗಿದೆ.

ಗುರುಗ್ರಾಮ್‌ನಲ್ಲಿ ಸಿಎನ್‌ಜಿಯ ಇತ್ತೀಚಿನ ಬೆಲೆ - ಪ್ರತಿ ಕೆಜಿಗೆ 61.10 ರೂ.

ಅಜ್ಮೇರ್ ನಲ್ಲಿ ಇತ್ತೀಚಿನ CNG ಬೆಲೆ - ಪ್ರತಿ ಕೆಜಿಗೆ 63.50 ರೂ.

ಇದನ್ನೂ ಓದಿ-HRA Exemption on Income Tax : ಬಾಡಿಗೆದಾರರಿಗೆ ಗುಡ್ ನ್ಯೂಸ್ : HRA ಯಿಂದ ನಿಮ್ಮ ತೆರಿಗೆ ಕಡಿತದ, ಹೇಗೆ ಈ ಲೆಕ್ಕಾಚಾರ ನೋಡಿ

ಕಳೆದ ಮೂರು ತಿಂಗಳಲ್ಲಿ ಸಿಎನ್‌ಜಿ ಬೆಲೆ ನಾಲ್ಕನೇ ಬಾರಿಗೆ ಏರಿಕೆಯಾಗಿದೆ. ಕಳೆದ 11 ತಿಂಗಳುಗಳಲ್ಲಿ, ಮುಂಬೈ ಮಹಾನಗರ ಪ್ರದೇಶದಲ್ಲಿ ಸಿಎನ್‌ಜಿ ಬೆಲೆಗಳು ಕೆಜಿಗೆ 16 ರೂಪಾಯಿಗಳಷ್ಟು ಹೆಚ್ಚಾಗಿದೆ ಎಂಬುದು ಇಲ್ಲಿ ಗಮನಾರ್ಹ.

ಇದನ್ನೂ ಓದಿ-7th Pay Commission : ಕೇಂದ್ರ ನೌಕರರಿಗೆ ಸಿಹಿ ಸುದ್ದಿ! ಪಿಂಚಣಿ ನಿಯಮಗಳಲ್ಲಿ ಪರಿಷ್ಕರಣೆ, ಯಾರಿಗೆ ಲಾಭ?

ದೇಶದ ರಾಜಧಾನಿಗೆ ಹೋಲಿಸಿದರೆ, ಮುಂಬೈನಲ್ಲಿ ಎಲ್ಲಾ ಮೂರು ಪ್ರಮುಖ ಇಂಧನಗಳಾದ (Puel Prices) ಪೆಟ್ರೋಲ್, ಡೀಸೆಲ್ ಮತ್ತು ಸಿಎನ್‌ಜಿ ಬೆಲೆಗಳು ತುಂಬಾ ಹೆಚ್ಚಾಗಿದೆ. ಇಂದು ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ 95.41 ರೂ ಮತ್ತು ಡೀಸೆಲ್ ಬೆಲೆ ಲೀಟರ್‌ಗೆ 86.67 ರೂ ಆಗಿದೆ. ಅದೇ ಸಮಯದಲ್ಲಿ, ಒಂದು ಕೆಜಿ ಸಿಎನ್‌ಜಿ ಗ್ಯಾಸ್‌ನ ಬೆಲೆ 53.04 ರೂ. ಇದೆ.

ಇದನ್ನೂ ಓದಿ-Royal Enflied Super Meteor 650: ಮೈ ನವಿರೇಳಿಸುವ Royal Enfield ಕಂಪನಿಯ ಹೊಸ ಬೈಕ್ ಝಲಕ್ ಇಲ್ಲಿದೆ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News