ಫ್ಯಾಮಿಲಿಗೊಂದು ಸೂಪರ್ ಕಾರು, ಇಲ್ಲಿ ಸಿಗಲಿದೆ 45 ಸಾವಿರದಷ್ಟು ಡಿಸ್ಕೌಂಟ್

ಇದು 7 ಸೀಟರ್ ಫ್ಯಾಮಿಲಿ ಕಾರು. ನಾಲ್ಕು ವೇರಿಯಂಟ್ ಗಳಲ್ಲಿ ಲಭ್ಯವಿದೆ. ಇದರಲ್ಲಿ RXE, RXL, RXT ಮತ್ತು RXZ ವೆರಿಯೆಂಟ್ಸ್ ಒಳಗೊಂಡಿದೆ.  ಇದರಲ್ಲಿ 1.0 ಕ್ಷಮತೆಯ ಪೆಟ್ರೋಲ್ ಇಂಜಿನ್ ಇದೆ.  

Written by - Ranjitha R K | Last Updated : Apr 30, 2021, 12:01 PM IST
  • ನಿಮ್ಮ ಫ್ಯಾಮಿಲಿಗೊಂದು ಒಳ್ಳೆಯ ಕಡಿಮೆಬೆಲೆಯ ಕಾರು ಬೇಕಿದ್ದರೆ ಇಲ್ಲಿದೆ ಆಯ್ಕೆ
  • Datsun Go Plus ಮತ್ತು Renault Triber ಭರ್ಜರಿ ಡಿಸ್ಕೌಂಟ್ ಘೋಷಣೆ ಮಾಡಿದೆ
  • ಇಲ್ಲಿ ನಿಮಗೆ ಸುಮಾರು 45 ಸಾವಿರದ ತನಕ ರಿಯಾಯಿತಿ ಸಿಗಲಿದೆ
ಫ್ಯಾಮಿಲಿಗೊಂದು ಸೂಪರ್ ಕಾರು, ಇಲ್ಲಿ ಸಿಗಲಿದೆ 45 ಸಾವಿರದಷ್ಟು ಡಿಸ್ಕೌಂಟ್ title=
ನಿಮ್ಮ ಫ್ಯಾಮಿಲಿಗೊಂದು ಒಳ್ಳೆಯ ಕಡಿಮೆಬೆಲೆಯ ಕಾರು ಬೇಕಿದ್ದರೆ ಇಲ್ಲಿದೆ ಆಯ್ಕೆ (file photo)

ನವದೆಹಲಿ : ಸಸ್ತಾ ಬೆಲೆಯಲ್ಲಿ ಕುಟುಂಬಕ್ಕೊಂದು ಕಾರು ಖರೀದಿಸುವ ಮನಸ್ಸಿದ್ದರೆ ನಿಮಗೆ ಇಲ್ಲೊಂದು ಅತ್ಯುತ್ತಮ ಆಯ್ಕೆ ಇದೆ.  ಫ್ಯಾಮಿಲಿ ಕಾರು ಸೆಗ್ಮೆಂಟ್ ನಲ್ಲಿ ನಿಮಗೆ ಒಳ್ಳೆಯ ಡಿಸ್ಕೌಂಟ್ ಕೂಡಾ ಸಿಗುತ್ತಿದೆ. ನಾವು ಹೇಳುತ್ತಿರುವುದು Datsun Go Plus  ಮತ್ತು  Renault Triber ಕಾರುಗಳ ಬಗ್ಗೆ.  ಇದರಲ್ಲಿ ಗ್ರಾಹಕರಿಗೆ ಹೆಚ್ಚು ಕಡಿಮೆ 45 ಸಾವಿರ ರೂಪಾಯಿ ತನಕ  ಉಳಿತಾಯ  ಆಗಲಿದೆ. 

Renault Triber :
ಇದು 7 ಸೀಟರ್ ಫ್ಯಾಮಿಲಿ ಕಾರು. ನಾಲ್ಕು ವೇರಿಯಂಟ್ ಗಳಲ್ಲಿ ಲಭ್ಯವಿದೆ. ಇದರಲ್ಲಿ RXE, RXL, RXT ಮತ್ತು RXZ ವೆರಿಯೆಂಟ್ಸ್ ಒಳಗೊಂಡಿದೆ.  ಇದರಲ್ಲಿ 1.0 ಕ್ಷಮತೆಯ ಪೆಟ್ರೋಲ್ ಇಂಜಿನ್ ಇದೆ.  ಇದು 72PS ಪವರ್ ಮತ್ತು 96Nm ಟಾರ್ಕ್ ಜನರೇಟ್ ಮಾಡುತ್ತದೆ.  ಇದರಲ್ಲಿ 5 ಸ್ಪೀಡ್ ಮಾನ್ಯುವಲ್ ಮತ್ತು ಅಟೋಮ್ಯಾಟಿಕ್ ಗೇರ್ ಬಾಕ್ಸ್ ಇದೆ.  ಇನ್ನೊಂದು ವೇರಿಯಂಟ್ ನಲ್ಲಿ ಕಂಪನಿಯು 1.0 ಲೀಟರ್  ಕ್ಷಮತೆಯ ಟರ್ಬೋ ಪೆಟ್ರೋಲ್ (Petrol) ಇಂಜಿನ್ ಬಳಸಿದೆ. ಇದು 100 PS ಪವರ್ ಮತ್ತು 160 Nm ಟಾರ್ಕ್ ಜನರೇಟ್ ಮಾಡುತ್ತದೆ. Renault Triber  ತನ್ನ ಗ್ರಾಹಕರಿಗೆ (Customer) ಒಟ್ಟು 45 ಸಾವಿರ ರೂಪಾಯಿ ತನಕ ಭಾರೀ ರಿಯಾಯಿತಿ ಘೋಷಣೆ ಮಾಡಿದೆ.  ಜೊತೆಗೆ 10000 ತನಕ  ಕಾರ್ಪೋರೇಟ್ ಡಿಸ್ಕೌಂಟ್ ಕೂಡಾ ಸಿಗಲಿದೆ. 

ಇದನ್ನೂ ಓದಿ : Gold-Silver Price : ಚಿನ್ನ ಖರೀದಿದಾರರಿಗೆ ಕಹಿ ಸುದ್ದಿ : ಬಂಗಾರ -ಬೆಳ್ಳಿಯ ಬೆಲೆಯಲ್ಲಿ ಮತ್ತೆ ಏರಿಕೆ!

ಬೆಲೆ : 
2021 Renault Triber ಬೆಲೆ ದೆಹಲಿಯಲ್ಲಿ ಎಕ್ಸ್ ಶೋರೂಮ್ ಬೆಲೆ 5.30 ಲಕ್ಷ ರೂಪಾಯಿ. ಆದರ ಟಾಪ್ ಎಂಡ್ ವೇರಿಯೆಂಟ್ 7.65 ಲಕ್ಷವಾಗಿದೆ.  ಈ ಕಾರಿನ (Car) ಬೆಲೆಯಲ್ಲಿ ಕಂಪನಿಯು ಯಾವುದೇ ಏರಿಕೆ ಮಾಡಿಲ್ಲ.

Datsun Go Plus 
ಇದು ಕೂಡಾ 7 ಸೀಟರ್ ಕಾರು. ಇದು 5 ವೇರಿಯಂಟ್ ನಲ್ಲಿ ಲಭ್ಯವಿದೆ. ಇದರಲ್ಲಿ 1.2 ಲೀಟರಿನ 3 ಸಿಲಿಂಡರ್ ಇರುವ ಪೆಟ್ರೋಲ್ ಇಂಜಿನ್ ಬಳಸಿದೆ. 68PS ರಿಂದ 77PS ತನಕ ಪವರ್ ಜನರೇಟ್ ಮಾಡುತ್ತದೆ. Datsun Go Plus  ತನ್ನ ಗ್ರಾಹಕರಿಗೆ 40 ಸಾವಿರದಷ್ಟು ಭಾರೀ ರಿಯಾಯಿತಿ ಘೋಷಣೆ ಮಾಡಿದೆ. ಹಳೆಯ ಕಾರನ್ನು ಬದಲಾಯಿಸುವುದಾದರೆ ಮತ್ತೆ 20000 ರೂಪಾಯಿ ಉಳಿತಾಯವಾಗುತ್ತದೆ. 

ಇದನ್ನೂ ಓದಿ : Banking Alert: SBI, PNB, ICICI ಬ್ಯಾಂಕ್ ಗ್ರಾಹಕರೇ ಗಮನಿಸಿ, ಅಪ್ಪಿ-ತಪ್ಪಿಯೂ ಕೂಡ ಈ ತಪ್ಪು ಮಾಡಬೇಡಿ

ಬೆಲೆ :
ದೆಹಲಿಯಲ್ಲಿ Datsun Go Plus ಕಾರಿನ ಎಕ್ಸ್ ಶೋರೂಮ್ ಬೆಲೆ 4.25 ಲಕ್ಷ ರೂಪಾಯಿ. ಇದರ ಟಾಪ್ ಎಂಡ್ ವೇರಿಯಂಟ್ ಬೆಲೆ 6.99 ಲಕ್ಷವಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News