ಸರ್ಕಾರಿ ನೌಕರರಿಗೆ ದೀಪಾವಳಿ ಗಿಫ್ಟ್ ! ಡಿಎ ಅರಿಯರ್ಸ್ ನೊಂದಿಗೆ ಖಾತೆ ಸೇರಲಿದೆ ಇಷ್ಟು ದೊಡ್ಡ ಮೊತ್ತ

ಕೇಂದ್ರ ನೌಕರರ ತುಟ್ಟಿಭತ್ಯೆಯನ್ನು ಸರ್ಕಾರ ಶೀಘ್ರದಲ್ಲೇ ಹೆಚ್ಚಿಸಲಿದೆ. ಇದಲ್ಲದೇ ಬಾಕಿ ಇರುವ ಡಿಎ ಹಣವೂ ಈ ಬಾರಿ ನೌಕರರ ಖಾತೆ ಸೇರುವ ನಿರೀಕ್ಷೆ ಇದೆ.   

Written by - Ranjitha R K | Last Updated : Sep 29, 2023, 02:23 PM IST
  • ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ಸಿಹಿ ಸುದ್ದಿ.
  • ಈ ವರ್ಷ ನೌಕರರು ಮತ್ತು ಪಿಂಚಣಿದಾರರಿಗೆ ಬಹಳ ಮುಖ್ಯವಾದ ವರ್ಷವಾಗಿದೆ.
  • ಒಂದೇ ಬಾರಿಗೆ ಎರಡು ದೊಡ್ಡ ಗಿಫ್ಟ್ ಸಿಗಲಿದೆ.
ಸರ್ಕಾರಿ ನೌಕರರಿಗೆ ದೀಪಾವಳಿ ಗಿಫ್ಟ್ !  ಡಿಎ ಅರಿಯರ್ಸ್ ನೊಂದಿಗೆ ಖಾತೆ ಸೇರಲಿದೆ ಇಷ್ಟು ದೊಡ್ಡ ಮೊತ್ತ   title=

ಬೆಂಗಳೂರು : ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ಸಿಹಿ ಸುದ್ದಿ. ಈ ವರ್ಷ ನೌಕರರು ಮತ್ತು ಪಿಂಚಣಿದಾರರಿಗೆ ಬಹಳ ಮುಖ್ಯವಾದ ವರ್ಷವಾಗಿದೆ. ಏಕೆಂದರೆ ಸರ್ಕಾರ ಒಂದೇ ಬಾರಿಗೆ ಎರಡು ದೊಡ್ಡ  ಗಿಫ್ಟ್ ಸಿಗಲಿದೆ. ಕೇಂದ್ರ ನೌಕರರ ತುಟ್ಟಿಭತ್ಯೆಯನ್ನು ಸರ್ಕಾರ ಶೀಘ್ರದಲ್ಲೇ ಹೆಚ್ಚಿಸಲಿದೆ. ಇದಲ್ಲದೇ ಬಾಕಿ ಇರುವ ಡಿಎ ಹಣವೂ ಈ ಬಾರಿ ನೌಕರರಖಾತೆ ಸೇರುವ ನಿರೀಕ್ಷೆ ಇದೆ. 

ತುಟ್ಟಿಭತ್ಯೆಯಲ್ಲಿ ಹೆಚ್ಚಳ  - 1 ಕೋಟಿ ಕುಟುಂಬಗಳಿಗೆ ಲಾಭ : 
ತುಟ್ಟಿ ಭತ್ಯೆ ಹೆಚ್ಚಳವಾದಾಗ ಉದ್ಯೋಗಿಗಳ ಮೂಲ ವೇತನದಲ್ಲಿ ಗಣನೀಯ ಹೆಚ್ಚಳವಾಗುವುದು. ಡಿಎ ಹೆಚ್ಚಳವನ್ನು ಸರ್ಕಾರ ಇನ್ನೂ ಅಧಿಕೃತವಾಗಿ ಪ್ರಕಟಿಸಿಲ್ಲ. ಆದರೆ ಮುಂದಿನ ತಿಂಗಳ ಆರಂಭದಲ್ಲಿ ಈ ಬಗ್ಗೆ ಖಂಡಿತವಾಗಿಯೂ ಘೋಷಣೆ ಮಾಡಬಹುದು ಎಂದೇ ನಿರೀಕ್ಷಿಸಲಾಗಿದೆ. 

ಇದನ್ನೂ ಓದಿ : ಹಿರಿಯ ನಾಗರಿಕರಿಗೆ ಪ್ರತಿ ತಿಂಗಳು 25,000 ರೂ. ಪಿಂಚಣಿ ! ನೆಮ್ಮದಿಯಿಂದ ಸಾಗುವುದು ವೃದ್ದಾಪ್ಯ ಜೀವನ

ಡಿಎ ಹೆಚ್ಚಳ: ಶೀಘ್ರದಲ್ಲೇ  ಹೊರ ಬೀಳಲಿದೆ ಶುಭ ಸುದ್ದಿ : 
ಕೇಂದ್ರ ಸರ್ಕಾರಿ ನೌಕರರ ತುಟ್ಟಿ ಭತ್ಯೆಯಲ್ಲಿ ಮೋದಿ ಸರ್ಕಾರ ಆದಷ್ಟು ಬೇಗ ಭಾರಿ ಏರಿಕೆ ಮಾಡಲಿದೆ. ಈ ಮೂಲಕ ನೌಕರರ ವೇತನದಲ್ಲಿಯೂ  ಉತ್ತಮ ಏರಿಕೆಯಾಗಲಿದೆ. AICPI ದತ್ತಾಂಶದ ಆಧಾರದ ಮೇಲೆ, ಈ ಬಾರಿಯೂ DA ಸುಮಾರು 4 ಪ್ರತಿಶತದಷ್ಟು ಹೆಚ್ಚಾಗುವ ನಿರೀಕ್ಷೆಯಿದೆ. ಆದರೆ, ಒಂದು ಮೂಲದ ಪ್ರಕಾರ ಡಿಎ ಶೇಕಡಾ 3 ರಷ್ಟು ಮಾತ್ರ ಹೆಚ್ಚಳವಾಗುತ್ತದೆ ಎಂದು ಕೂಡಾ ಹೇಳಲಾಗುತ್ತದೆ. ಸರ್ಕಾರದ ಅಧಿಸೂಚನೆಯ ನಂತರವೇ ಈ ಬಗ್ಗೆ ಸ್ಪಷ್ಟನೆ ಹೊರ ಬೀಳಲಿದೆ.  

7ನೇ ವೇತನ ಆಯೋಗ: ಹಬ್ಬದ ಸಮಯದಲ್ಲಿ ಒಳ್ಳೆಯ ಸುದ್ದಿ : 
ಹಬ್ಬ ಹರಿದಿನಗಳಿಗೆ ಮುನ್ನ ಅಂದರೆ ನವರಾತ್ರಿ ಆರಂಭಕ್ಕೂ ಮುನ್ನ ಸರ್ಕಾರ ಡಿಎ ಹೆಚ್ಚಳವನ್ನು ಘೋಷಿಸಬಹುದು ಎಂದು ಮೂಲಗಳು ಸೂಚಿಸಿವೆ. ಈ ಹೆಚ್ಚಳವು ಜುಲೈ 1, 2023 ರಿಂದ ಜಾರಿಗೆ ಬರಲಿದೆ.   ಸಾಮಾನ್ಯವಾಗಿ ಸರ್ಕಾರವು ಪ್ರತಿ ವರ್ಷ ಎರಡು ಬಾರಿ ತುಟ್ಟಿಭತ್ಯೆ ಹೆಚ್ಚಿಸುತ್ತದೆ. ಈ ಹೆಚ್ಚಳ ಜನವರಿ 1 ಮತ್ತು ಜುಲೈ 1 ರಿಂದ ಜಾರಿಗೆ ಬರುತ್ತವೆ.

ಇದನ್ನೂ ಓದಿ : ವಾರ ಪೂರ್ತಿ ಇಳಿಕೆ ಕಂಡ ನಂತರ ಇಂದು ಎಷ್ಟಿದೆ 10 ಗ್ರಾಂ ಚಿನ್ನದ ಬೆಲೆ ?

 ಖಾತೆ ಸೇರುವುದು ಬಾಕಿ ಡಿಎ :  
ಕರೋನಾ ಸಾಂಕ್ರಾಮಿಕ ಸಮಯದಲ್ಲಿ ಕೇಂದ್ರ ಸರ್ಕಾರವು ನೌಕರರ ಮೂಲ ವೇತನ ಹೆಚ್ಚಳವನ್ನು ಸ್ಥಗಿತಗೊಳಿಸಿತ್ತು. ಈ ಅವಧಿಯ  ತುಟ್ಟಿಭತ್ಯೆಯ ಅರಿಯರ್ಸ್ ಮೊತ್ತ ಇನ್ನು ಕೂಡಾ ಪಾವತಿಯಾಗಿಲ್ಲ. ಇದನ್ನು ನೀಡುವಂತೆ ಕೇಂದ್ರ ಸರ್ಕಾರಿ ನೌಕರರು ನಿರಂತರವಾಗಿ ಒತ್ತಾಯಿಸುತ್ತಿದ್ದಾರೆ. ಈಗ ಕೇಂದ್ರ ಸರ್ಕಾರ ಈ ಬೇಡಿಕೆಯನ್ನು ಈಡೇರಿಸಬಹುದು ಎನ್ನಲಾಗಿದೆ. 

ಈಗ ಜುಲೈ 2023 ಕ್ಕೆ ತುಟ್ಟಿಭತ್ಯೆ ಹೆಚ್ಚಳವನ್ನು ಘೋಷಿಸಿದರೆ, ನೌಕರರು ತಮ್ಮ ವೇತನದೊಂದಿಗೆ ಜುಲೈ 1 ರಿಂದ ಬಾಕಿ ಇರುವ ಮೊತ್ತವನ್ನು ಪಡೆಯುತ್ತಾರೆ. 

ಕನಿಷ್ಠ ಮೂಲ ವೇತನ 18,000 ಮೇಲೆ ಡಿಎ ಹೆಚ್ಚಳ  ಲೆಕ್ಕಾಚಾರ :
ನೌಕರರ ಮೂಲ ವೇತನ - ತಿಂಗಳಿಗೆ 18,000 ರೂ
ಹೊಸ  ತುಟ್ಟಿಭತ್ಯೆ    (46%) - ತಿಂಗಳಿಗೆ ರೂ 8280
ಹಿಂದಿನ ತುಟ್ಟಿಭತ್ಯೆ   (42%) - ರೂ. 7560
ತುಟ್ಟಿಭತ್ಯೆ  ಹೆಚ್ಚಳ - 8280-7560 = ರೂ. 720
ವಾರ್ಷಿಕ ವೇತನ ಹೆಚ್ಚಳ 720X12 = ರೂ.8640

ಇದನ್ನೂ ಓದಿ : ಇನ್ನು ಎನ್ ಪಿಎಸ್ ನಲ್ಲೂ ಸಿಗುವುದು ಈ ಲಾಭ ! ಪಿಂಚಣಿದಾರರಲ್ಲಿ ಸಂತಸ

56,900 ರೂ.ಗಳ ಗರಿಷ್ಠ ಮೂಲ ವೇತನದಲ್ಲಿ ಡಿಎ ಹೆಚ್ಚಳ ಲೆಕ್ಕಾಚಾರ :
ನೌಕರರ ಮೂಲ ವೇತನ = ತಿಂಗಳಿಗೆ 56,900 ರೂ
ಹೊಸ  ತುಟ್ಟಿಭತ್ಯೆ   (46%) = ತಿಂಗಳಿಗೆ ರೂ 26,174
ಹೊಸ  ತುಟ್ಟಿಭತ್ಯೆ   (42%) = ರೂ. 23,898 
ತುಟ್ಟಿಭತ್ಯೆ  ಹೆಚ್ಚಳ - 26,174-23,898 = ರೂ. 2,276 
ವರ್ಷಕ್ಕೆ ಹೆಚ್ಚಳ = 2276X12= ರೂ. 27,312

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News