ನವದೆಹಲಿ : ನೀವು ಹಳೆಯ ನಾಣ್ಯಗಳು ಅಥವಾ ನೋಟುಗಳನ್ನು ಸಂಗ್ರಹಿಸುವ ಹವ್ಯಾಸ ಹೊಂದಿದ್ದರೆ, ಕೆಲ ಷರತ್ತುಗಳ ಜೊತೆಗೆ ತ್ವರಿತಗತಿಯಲ್ಲಿ ಹಣವನ್ನು ಗಳಿಸುವ ಅವಕಾಶ ಇಲ್ಲಿದೆ. ನಿಮ್ಮ ಬಳಿ ಏನಾದ್ರು ಈ 1 ರೂ. ಹಳೆಯ ನೋಟು ಇದ್ದರೆ, ಅದನ್ನು ಆನ್‌ಲೈನ್‌ನಲ್ಲಿ ಮಾರಾಟ ಮಾಡುವ ಮೂಲಕ ಉತ್ತಮ ಹಣವನ್ನು ಗಳಿಸಲು ನಿಮಗೆ ಉತ್ತಮ ಅವಕಾಶವಿದೆ. ಹೌದು! ನೀವು ಕೇಳಿದ್ದು ಸರಿ.
ಆದರೆ 1 ರೂಪಾಯಿ ನೋಟು(Rs 1 Note) ಕೆಲವು ಷರತ್ತುಗಳನ್ನು ಪೂರೈಸಬೇಕು. 1 ರೂಪಾಯಿಯ ನೋಟು 1957 ರಲ್ಲಿ ಹಣಕಾಸು ಸಚಿವಾಲಯದಲ್ಲಿ ಪ್ರಧಾನ ಕಾರ್ಯದರ್ಶಿಯಾಗಿದ್ದ ಎಚ್‌ಎಂ ಪಟೇಲ್ ಅವರ ಸಹಿಯನ್ನು ಹೊಂದಿರಬೇಕು. ಅಲ್ಲದೆ ಅದರ ಸೀರಿಯಲ್ ಸಂಖ್ಯೆ 126345 ಅನ್ನು ಹೊಂದಿರುವುದು ಕಡ್ಡಾಯವಾಗಿದೆ. ನಿಮ್ಮಲ್ಲಿ ಅಂತಹ ಒಂದು ರೂಪಾಯಿ ನೋಟು ಇದ್ದರೆ, ವಿಳಂಬ ಮಾಡಬೇಡಿ.
ಇದನ್ನೂ ಓದಿ : 7th Pay Commission: ಪಿಂಚಣಿ ನಿಯಮಗಳನ್ನು ಬದಲಿಸಿದ ಸರ್ಕಾರ, ಈಗ ಸಿಗಲಿದೆ 1.25 ಲಕ್ಷ ಮಾಸಿಕ ಪಿಂಚಣಿ
ನೀವು ಹಳೆಯ ನಾಣ್ಯಗಳು ಮತ್ತು ನೋಟುಗಳನ್ನು(Old Coins and Notes) ಮಾರಾಟ ಮಾಡುವ ಇನ್ನೊಂದು ವೆಬ್‌ಸೈಟ್ IndiaMART.com ಅಲ್ಲಿ ಹರಾಜು ನಡೆಯುತ್ತದೆ ಮತ್ತು ಗರಿಷ್ಠ ಬಿಡ್ ಮಾಡಿದ ವ್ಯಕ್ತಿ ನಾಣ್ಯವನ್ನು ತೆಗೆದುಕೊಳ್ಳುತ್ತಾನೆ. ಖರೀದಿದಾರರೊಂದಿಗೆ ಮಾತುಕತೆ ನಡೆಸಲು ನಿಮಗೆ ಅವಕಾಶವಿದೆ.
ಹಳೆಯ 1 ರೂಪಾಯಿ ನೋಟು(Old Rs 1 Note) ಅಥವಾ 2 ರೂ., 5 ರೂ. ನೋಟುಗಳು ಕೆಲವು ಷರತ್ತುಗಳೊಂದಿಗೆ ಮಾರಾಟ ಮಾಡುವ ಮೂಲಕ ನೀವು ಲಕ್ಷ, ಲಕ್ಷ ಹಣ ಗಳಿಸಬಹುದು.
ಅತ್ಯಂತ ಜನಪ್ರಿಯವಾಗಿರುವ ಮತ್ತೊಂದು ಸರಣಿ '786'. ಈ ಸರಣಿಗೆ ಮುಸ್ಲಿಮರಲ್ಲಿ(Muslims) ಹೆಚ್ಚಿನ ಬೇಡಿಕೆಯಿದೆ. '786' ಸರಣಿಯ ಕರೆನ್ಸಿ ನೋಟುಗಳನ್ನು ಮಂಗಳಕರವೆಂದು ಪರಿಗಣಿಸಲಾಗುತ್ತದೆ ಮತ್ತು ಒಂದನ್ನು ಹೊಂದಿರುವುದು ಸಮೃದ್ಧಿಯ ಸಂಕೇತವಾಗಿದೆ.
ಇದನ್ನೂ ಓದಿ : ಎಸ್‌ಬಿಐ ಕಾರ್ಡ್ ಇದ್ದರೆ ಬಂಪರ್ , ಅಕ್ಟೋಬರ್ 3 ರಿಂದ ಹಬ್ಬದ ಆಫರ್ , ಆನ್‌ಲೈನ್ ಶಾಪಿಂಗ್‌ನಲ್ಲಿ ಸಿಗಲಿದೆ ಕ್ಯಾಶ್‌ಬ್ಯಾಕ್
ಮಾಧ್ಯಮ ವರದಿಗಳ ಪ್ರಕಾರ, ನೀವು ಮಾತೆ ವೈಷ್ಣೋ ದೇವಿ(Mata Vaishno Devi) ಕೆತ್ತಿದ 5 ಮತ್ತು 10 ರೂ. ಮುಖಬೆಲೆಯ ನಾಣ್ಯಗಳನ್ನು ಹೊಂದಿದ್ದರೆ, ಅವುಗಳನ್ನು ಹರಾಜಿಗೆ ಹಾಕುವ ಮೂಲಕ ನೀವು ಲಕ್ಷ ರೂಪಾಯಿಗಳನ್ನು ಗಳಿಸಬಹುದು. ಈ ನಾಣ್ಯಗಳನ್ನು ಸರ್ಕಾರ 2002 ರಲ್ಲಿ ಬಿಡುಗಡೆ ಮಾಡಿತು ಮತ್ತು ಹೆಚ್ಚಿನ ಬೇಡಿಕೆಯಲ್ಲಿವೆ. ಹಿಂದುಗಳು ಮಾತಾ ವೈಷ್ಣೋ ದೇವಿಯನ್ನು ಬಹಳವಾಗಿ ಗೌರವಿಸುತ್ತಿದ್ದರಿಂದ ಅಂತಹ ಒಂದು ನಾಣ್ಯವನ್ನು ಹೊಂದಲು ಲಕ್ಷಗಟ್ಟಲೆ ಹಣ ನೀಡಿ ಖರೀದಿಸಲು ಜನ ಸಿದ್ಧರಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.