7th Pay Commission: ಪಿಂಚಣಿ ನಿಯಮಗಳನ್ನು ಬದಲಿಸಿದ ಸರ್ಕಾರ, ಈಗ ಸಿಗಲಿದೆ 1.25 ಲಕ್ಷ ಮಾಸಿಕ ಪಿಂಚಣಿ

 ಕುಟುಂಬ ಪಿಂಚಣಿಯ ಗರಿಷ್ಠ ಮಿತಿ 1.25 ಲಕ್ಷದವರೆಗೆ ಇರಬಹುದು. ಆದರೆ, ಇದಕ್ಕಾಗಿ ಕೆಲವು ನಿಯಮಗಳು ಮತ್ತು ಷರತ್ತುಗಳನ್ನು ನೀಡಲಾಗಿದೆ

Written by - Ranjitha R K | Last Updated : Sep 29, 2021, 08:07 PM IST
  • ಸರ್ಕಾರವು ಕುಟುಂಬ ಪಿಂಚಣಿಯ ಮಿತಿಯನ್ನು ಹೆಚ್ಚಿಸಿದೆ
  • 45,000 ಬದಲು ಸಿಗಲಿದೆ 1.25 ಲಕ್ಷ ಪಿಂಚಣಿ
  • ಈ ಪಿಂಚಣಿಗೆ ಕೆಲವು ವಿಶೇಷ ನಿಯಮಗಳೂ ಇವೆ.
7th Pay Commission: ಪಿಂಚಣಿ ನಿಯಮಗಳನ್ನು ಬದಲಿಸಿದ ಸರ್ಕಾರ, ಈಗ ಸಿಗಲಿದೆ  1.25 ಲಕ್ಷ ಮಾಸಿಕ ಪಿಂಚಣಿ  title=
ಸರ್ಕಾರವು ಕುಟುಂಬ ಪಿಂಚಣಿಯ ಮಿತಿಯನ್ನು ಹೆಚ್ಚಿಸಿದೆ (file photo)

ನವದೆಹಲಿ : 7th Pay Commission : ಸರ್ಕಾರಿ ಉದ್ಯೋಗಿಗಳಿಗೆ ಒಂದು ದೊಡ್ಡ ಸುದ್ದಿ ಇದೆ.  ಸರ್ಕಾರ ಪಿಂಚಣಿ ನಿಯಮಗಳನ್ನು ಬದಲಾಯಿಸಿದೆ.  ಹೊಸ ನಿಯಮದ ಪ್ರಕಾರ, ಗಂಡ ಮತ್ತು ಹೆಂಡತಿ ಇಬ್ಬರೂ ಕೇಂದ್ರ ಸರ್ಕಾರಿ ಉದ್ಯೋಗಿಗಳಾಗಿದ್ದರೆ (Central Government Employee) ಮತ್ತು ಕೇಂದ್ರೀಯ ನಾಗರಿಕ ಸೇವೆಗಳ (CCS-pension), 1972 ನಿಯಮಗಳ ವ್ಯಾಪ್ತಿಗೆ ಒಳಪಟ್ಟಿದ್ದರೆ, ಸಾವಿನ ನಂತರ ಅವರ ಮಕ್ಕಳು ಎರಡು ಕುಟುಂಬಗಳ  ಪಿಂಚಣಿ ಪಡೆಯಬಹುದು.

ಈ ಕುಟುಂಬ ಪಿಂಚಣಿಯ ಗರಿಷ್ಠ ಮಿತಿ 1.25 ಲಕ್ಷದವರೆಗೆ ಇರಬಹುದು. ಆದರೆ, ಇದಕ್ಕಾಗಿ ಕೆಲವು ನಿಯಮಗಳು ಮತ್ತು ಷರತ್ತುಗಳನ್ನು ನೀಡಲಾಗಿದೆ. 

ಇದನ್ನೂ ಓದಿ : ಎಸ್‌ಬಿಐ ಕಾರ್ಡ್ ಇದ್ದರೆ ಬಂಪರ್ , ಅಕ್ಟೋಬರ್ 3 ರಿಂದ ಹಬ್ಬದ ಆಫರ್ , ಆನ್‌ಲೈನ್ ಶಾಪಿಂಗ್‌ನಲ್ಲಿ ಸಿಗಲಿದೆ ಕ್ಯಾಶ್‌ಬ್ಯಾಕ್

ಕೇಂದ್ರ ನೌಕರರ ಪಿಂಚಣಿ ಕುರಿತು ಹೊಸ ನಿಯಮಗಳು :
ಕೇಂದ್ರ ಸರ್ಕಾರವು ತನ್ನ ಉದ್ಯೋಗಿಗಳಿಗೆ ಹಾಗೂ ಅವರ ಕುಟುಂಬಗಳಿಗೆ ಸಾಮಾಜಿಕ ಭದ್ರತೆಯನ್ನು ಒದಗಿಸುತ್ತದೆ. ಕೇಂದ್ರ ನಾಗರಿಕ ಸೇವೆಗಳ ನಿಯಮ 54 ರ ಉಪ-ನಿಯಮ (11) ರ ಅಡಿಯಲ್ಲಿ (Central Civil Services 1972), ಗಂಡ ಮತ್ತು ಹೆಂಡತಿ ಇಬ್ಬರೂ ಸರ್ಕಾರಿ ಉದ್ಯೋಗಿಗಳಾಗಿದ್ದು, ಅವರ ಮರಣದ ನಂತರ ಮಕ್ಕಳು ಇಬ್ಬರೂ ಪೋಷಕರ ಪಿಂಚಣಿಗೆ (Pension) ಅರ್ಹರಾಗಿರುತ್ತಾರೆ.

ನಿಯಮಗಳ ಪ್ರಕಾರ, ಸೇವೆಯ ಸಮಯದಲ್ಲಿ ಅಥವಾ ನಿವೃತ್ತಿಯ ನಂತರ ಪೋಷಕರಲ್ಲಿ ಒಬ್ಬರು ಮೃತಪಟ್ಟರೆ,  ಉಳಿದಿರುವ ಪೋಷಕರು ಅಂದರೆ ಸಂಗಾತಿಯು ಪಿಂಚಣಿ ಪಡೆಯುತ್ತಾರೆ. ಇಬ್ಬರ ಸಾವಿನ ನಂತರ, ಅವರ ಮಕ್ಕಳು ಎರಡು ಕುಟುಂಬ ಪಿಂಚಣಿಗಳನ್ನು (Family pension) ಪಡೆಯುತ್ತಾರೆ.

ಇದನ್ನೂ ಓದಿ : SBI Alert! QR ಕೋಡ್‌ನೊಂದಿಗೆ ಆನ್‌ಲೈನ್‌ನಲ್ಲಿ Payment ಮಾಡುವ ಮುನ್ನ ಎಚ್ಚರ

ಮೊದಲು ಇದ್ದ ನಿಯಮ ಇದು : 
ಹಿಂದೆ, ಇಬ್ಬರೂ ಪಿಂಚಣಿದಾರರು ಸತ್ತಿದ್ದರೆ, ನಿಯಮ 54 ರ ಉಪ ನಿಯಮ (3) ರ ಪ್ರಕಾರ, ಮಗು ಅಥವಾ ಮಕ್ಕಳಿಗೆ ಎರಡು ಪಿಂಚಣಿಗಳ ಮಿತಿ 45,೦೦೦ ರೂ. ಆಗಿತ್ತು.   5,000 ಮತ್ತು 27,000 ಪಿಂಚಣಿ ಮಿತಿ,  ಆರನೇ ವೇತನ ಆಯೋಗದ (6th pay commission) ಪ್ರಕಾರ,  ಸಿಸಿಎಸ್ ನಿಯಮಗಳ ನಿಯಮ 54 (11) ರ ಅಡಿಯಲ್ಲಿ, ಗರಿಷ್ಠ 90,000 ಪಿಂಚಣಿ ಪ್ರತಿ ತಿಂಗಳು 50 % ಮತ್ತು 30 %  ದಂತೆ ಸಿಗುತ್ತಿತ್ತು. 

ಪಿಂಚಣಿ ಕುರಿತು ಹೊಸ ನಿಯಮ ಏನು ಹೇಳುತ್ತದೆ ?
7 ನೇ ವೇತನ ಆಯೋಗದ (7th pay commission) ನಂತರ, ಸರ್ಕಾರಿ ಉದ್ಯೋಗಗಳಲ್ಲಿ ಪಾವತಿಯನ್ನು ತಿಂಗಳಿಗೆ 2.5 ಲಕ್ಷಕ್ಕೆ ಪರಿಷ್ಕರಿಸಲಾಗಿದೆ. ಅಂದಿನಿಂದ ಮಕ್ಕಳಿಗೆ ನೀಡುವ ಪಿಂಚಣಿಯಲ್ಲಿ ಬದಲಾವಣೆಯಾಗಿದೆ. ಪಿಂಚಣಿ ಮತ್ತು ಪಿಂಚಣಿದಾರರ ಕಲ್ಯಾಣ ಇಲಾಖೆ (DoPPW) ಅಧಿಸೂಚನೆಯ ಪ್ರಕಾರ, ಎರಡು ಮಿತಿಗಳನ್ನು ತಿಂಗಳಿಗೆ ರೂ 1.25 ಲಕ್ಷ ಮತ್ತು ತಿಂಗಳಿಗೆ ರೂ 75,000 ಕ್ಕೆ ಬದಲಾಯಿಸಲಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News