ಉಚಿತವಾಗಿ ತಯಾರಿಸಿ ನಿಮ್ಮ PAN Card! ಕೇವಲ ಒಂದು ಕ್ಲಿಕ್ ಹಾಗೂ 10 ನಿಮಿಷ ಸಾಕು

ಆದಾಯ ತೆರಿಗೆ ಇಲಾಖೆಯ ಪ್ರಕಾರ, ಈ ಸೌಲಭ್ಯದ ಮೂಲಕ ಪ್ಯಾನ್ ಕಾರ್ಡ್ ಜಾರಿಗೊಳಿಸಲು ಕೆಲವೇ ನಿಮಿಷಗಳು ಬೇಕಾಗುತ್ತವೆ. ಆದರೆ ಇದು ಎಲೆಕ್ಟ್ರಾನಿಕ್ ಪ್ಯಾನ್ ಕಾರ್ಡ್ ಆಗಿರಲಿದೆ.

Last Updated : Nov 10, 2020, 11:34 AM IST
  • ಕೋರೋನಾ ಬಿಕ್ಕಟ್ಟಿನ ನಡುವೆ.ಕೇಂದ್ರ ಸರ್ಕಾರವು ಪ್ಯಾನ್ ಕಾರ್ಡ್ ಅನ್ನು ತಯಾರಿಸುವ ನಿಯಮಗಳನ್ನು ಇನ್ನಷ್ಟು ಸುಲಭಗೊಳಿಸಿದೆ.
  • ಈಗ ಆನ್‌ಲೈನ್ ಅರ್ಜಿಯೊಂದಿಗೆ ಪ್ಯಾನ್ ಸಂಖ್ಯೆಯನ್ನು ಬಿಡುಗಡೆ ಮಾಡಲಾಗುತ್ತದೆ.
  • ಇದಕ್ಕಾಗಿ ಕೇವಲ 10 ನಿಮಿಷಗಳು ಮಾತ್ರ ಬೇಕಾಗುತ್ತದೆ.
ಉಚಿತವಾಗಿ ತಯಾರಿಸಿ ನಿಮ್ಮ PAN Card! ಕೇವಲ ಒಂದು ಕ್ಲಿಕ್ ಹಾಗೂ 10 ನಿಮಿಷ ಸಾಕು title=

ನವದೆಹಲಿ: ಕರೋನಾ ಬಿಕ್ಕಟ್ಟಿನ ನಡುವೆ.ಕೇಂದ್ರ ಸರ್ಕಾರವು ಪ್ಯಾನ್ ಕಾರ್ಡ್ (PAN Card) ಅನ್ನು ತಯಾರಿಸುವ ನಿಯಮಗಳನ್ನು ಇನ್ನಷ್ಟು ಸುಲಭಗೊಳಿಸಿದೆ.  ಈಗ ಆನ್‌ಲೈನ್ ಅರ್ಜಿಯೊಂದಿಗೆ ಪ್ಯಾನ್ ಸಂಖ್ಯೆಯನ್ನು ಬಿಡುಗಡೆ ಮಾಡಲಾಗುತ್ತದೆ. ಇದು ಕೇವಲ 10 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ. ಕೇವಲ ಒಂದು ಕ್ಲಿಕ್‌ನಲ್ಲಿ ಪ್ಯಾನ್ ಸಂಖ್ಯೆಯನ್ನು ನಿಮಗೆ ನೀಡಲಾಗುತ್ತದೆ. ಪ್ಯಾನ್ ಸಂಖ್ಯೆಯನ್ನು ಸಂಗ್ರಹಿಸಲು ಆಧಾರ್ ಮಾತ್ರ ಅಗತ್ಯವಿದೆ. ಆಧಾರ್ ಸಂಖ್ಯೆ ಮತ್ತು ಆಧಾರ್‌ಗೆ ಸಂಬಂಧಿಸಿದ ಮೊಬೈಲ್ ಸಂಖ್ಯೆಯನ್ನು ಹೊಂದಿರುವವರಿಗೆ ತಕ್ಷಣವೇ ಸಂಖ್ಯೆಯನ್ನು ನೀಡಲಾಗುತ್ತದೆ. ಮೊಬೈಲ್ ಒಟಿಪಿ ಮೂಲಕ ಅಪ್ಲಿಕೇಶನ್ ಅನ್ನು ಪರಿಶೀಲಿಸಲಾಗುತ್ತದೆ.

ಇದನ್ನು ಓದಿ- ನಿಮ್ಮ ಬಳಿ ಇರುವ Pan Card ಅಸಲಿಯೇ? ಅದನ್ನು ಹೀಗಿ ಪರಿಶೀಲಿಸಿ

ರಿಯಲಿ ಟೈಮ್ ಸೌಲಭ್ಯ
ಪ್ಯಾನ್ ಕಾರ್ಡ್ ತಯಾರಿಸಲು ಕಾಗದರಹಿತ ಮತ್ತು ರಿಯಲ್ ಟೈಮ್ ಆಧಾರಿತ ಸೌಲಭ್ಯವಿದೆ. ಇದಕ್ಕೆ ಇ-ಪ್ಯಾನ್ ಎಂದು ಹೆಸರಿಡಲಾಗಿದೆ. ಆದಾಯ ತೆರಿಗೆ ಇಲಾಖೆಯ ಪ್ರಕಾರ, ಈ ಸೌಲಭ್ಯದ ಮೂಲಕ ಪ್ಯಾನ್ ಕಾರ್ಡ್ ನೀಡಲು ಕೆಲವೇ ನಿಮಿಷಗಳು ಬೇಕಾಗುತ್ತವೆ. ಆದರೆ ಇದು ಎಲೆಕ್ಟ್ರಾನಿಕ್ ಪ್ಯಾನ್ ಆಗಿರಲಿದೆ. ಅದನ್ನು ಬಿಡುಗಡೆ ಮಾಡುವಾಗ ಯಾವುದೇ ರೀತಿಯ ಶುಲ್ಕ ವಿಧಿಸಲಾಗುವುದಿಲ್ಲ. ನಿಮ್ಮ ಪ್ಯಾನ್ ಕಾರ್ಡ್ ಅನ್ನು ಸಂಪೂರ್ಣವಾಗಿ ಉಚಿತ ನೀಡಲಾಗುತ್ತದೆ.

ಇದನ್ನು ಓದಿ- ಪ್ಯಾನ್ ಕಾರ್ಡ್ ಕಳೆದುಹೋಗಿದೆಯೇ? ಚಿಂತೆಬಿಡಿ, ಈ ನಿಯಮ ಅನುಸರಿಸಿ ನಿಮ್ಮ PAN Card ಪಡೆಯಿರಿ

ಇದಕ್ಕಾಗಿ ಯಾರು ಅರ್ಜಿ ಸಲ್ಲಿಸಬಹುದು?
ಆಧಾರ್ ಸಂಖ್ಯೆ ಹೊಂದಿರುವವರು ಆದಾಯ ತೆರಿಗೆ ಇಲಾಖೆಯ ವೆಬ್‌ಸೈಟ್‌ಗೆ ಭೇಟಿ ನೀಡಿ ಇ-ಪ್ಯಾನ್‌ಗೆ ಅರ್ಜಿ ಸಲ್ಲಿಸಬಹುದು. ಶೀಘ್ರದಲ್ಲೇ, ಅವರಿಗೆ ಪ್ಯಾನ್ ಸಂಖ್ಯೆಯನ್ನು ನೀಡಲಾಗುವುದು.ಈ ಹಂಚಿಕೆ ರಿಯಲ್ ಟೈಮ್ ಆಧಾರದ ಮೇಲೆ ಇರಲಿದೆ. ಇ-ಪ್ಯಾನ್‌ಗಾಗಿ ನೀವು ಆಧಾರ್ ಆಧಾರಿತ ಕೆವೈಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು. ಕೆವೈಸಿ ಪೂರ್ಣಗೊಂಡ ಕೂಡಲೇ ಅರ್ಜಿದಾರರಿಗೆ ಪ್ಯಾನ್ ನೀಡಲಾಗುತ್ತದೆ.

ಇದನ್ನು ಓದಿ-ಅಂಚೆ ಕಚೇರಿಯಲ್ಲಿ ಡಿಎಲ್‌ನಿಂದ ಪ್ಯಾನ್ ಕಾರ್ಡ್‌ವರೆಗೆ ಅರ್ಜಿ ಸಲ್ಲಿಸಲು ಇದು ಸುಲಭ ವಿಧಾನ

e-PAN ಹೇಗೆ ತಯಾರಿಸಬೇಕು?
ಇದಕ್ಕಾಗಿ ಆದಾಯ ತೆರಿಗೆ ಇಲಾಖೆಯ ಅಧಿಕೃತ ವೆಬ್ ಸೈಟ್ ಆಗಿರುವ incometaxindiaefiling.gov.inಗೆ ಭೇಟಿ ನೀಡಿ. ಅಲ್ಲಿ Instant PAN through Aadhaar ಸೆಕ್ಷನ್ ಮೇಲೆ ಕ್ಲಿಕ್ಕಿಸಿ. ಹೊಸ ಪುಟವೊಂದು ತೆರೆದುಕೊಳ್ಳಲಿದೆ. ಆ ಪುಟದಲ್ಲಿ ನೀವು  "Get New PAN" ಮೇಲೆ ಕ್ಲಿಕ್ಕ ಮಾಡಿ. ಮತ್ತೊಂದು ಹೊಸ ಪುಟ ತೆರೆದುಕೊಳ್ಳಲಿದೆ. ಆ ಪುಟದಲ್ಲಿ ಆಧಾರ್ ಗೆ ಸಂಬಂಧಿಸಿದ ಮಾಹಿತಿ ಭರ್ತಿ ಮಾಡಿ. Captcha Code ನಮೂದಿಸಬೇಕು.

ಇದನ್ನು ಓದಿ- PAN-Aadhaar ಲಿಂಕ್ ಮಾಡಿಲ್ಲವೇ? 10 ಸಾವಿರ ದಂಡದ ಜೊತೆಗೆ ಈ ಕಷ್ಟವೂ ಎದುರಾಗಬಹುದು

OTP ಅವಶ್ಯವಾಗಿ ನಮೂದಿಸಿ
ಇದಕ್ಕಾಗಿ ನಿಮ್ಮ ಮೊಬೈಲ್‌ ಸಂಖ್ಯೆಗೆ  ಆಧಾರ್ ಲಿಂಕ್ ಆಗಿರುವುದು ಮುಖ್ಯ. ಆಗ ಮಾತ್ರ ನೀವು ಒಟಿಪಿ ಉತ್ಪಾದಿಸಲು ಸಾಧ್ಯವಾಗುತ್ತದೆ. ಇದರ ನಂತರ, ಒಟಿಪಿಯನ್ನು ಇಲ್ಲಿ ನಮೂದಿಸಬೇಕು ಮತ್ತು ಆಧಾರ್ ವಿವರಗಳನ್ನು ಮೌಲ್ಯೀಕರಿಸಬೇಕಾಗಿದೆ. ಪ್ಯಾನ್ ಕಾರ್ಡ್‌ಗಾಗಿ ಇಮೇಲ್ ಐಡಿ ನಮೂದಿಸಿ. ಆಧಾರ್‌ನ ಇ-ಕೆವೈಸಿ ಡೇಟಾವನ್ನು ಇ-ಪ್ಯಾನ್‌ಗೆ ವರ್ಗಾಯಿಸಲಾಗುತ್ತದೆ. ಪ್ರಕ್ರಿಯೆಯು ಪೂರ್ಣಗೊಂಡ ನಂತರ, ಇ-ಪ್ಯಾನ್ ಪಿಡಿಎಫ್ ರೂಪದಲ್ಲಿ ಕಂಡುಬರುತ್ತದೆ. ಅದನ್ನು ಡೌನ್‌ಲೋಡ್ ಮಾಡಲು ಆಧಾರ್ ಸಂಖ್ಯೆಯನ್ನು ನಮೂದಿಸಬೇಕು.

ಇದನ್ನು ಓದಿ- ಪ್ಯಾನ್ ಕಾರ್ಡ್ ಇಲ್ಲವೇ? ಚಿಂತೆಬಿಡಿ ಆಧಾರ್ ಸಂಖ್ಯೆಯೊಂದಿಗೆ ಐಟಿ ರಿಟರ್ನ್ ಸಲ್ಲಿಸಿ, ಪಡೆಯಿರಿ ಡಬಲ್ ಲಾಭ

ಪ್ಯಾನ್ ಕಾರ್ಡ್ ಎಲ್ಲಿ ಬಳಕೆಯಾಗುತ್ತದೆ?
ಪ್ಯಾನ್ ಕಾರ್ಡ್ ಅನ್ನು ಹಣಕಾಸಿನ ವ್ಯವಹಾರಗಳಿಗೆ ಬಳಸಲಾಗುತ್ತದೆ. ಬ್ಯಾಂಕ್ ಖಾತೆ ತೆರೆಯಲು ಮತ್ತು ಸಾಲ ತೆಗೆದುಕೊಳ್ಳಲು ಪ್ಯಾನ್ ಅಗತ್ಯವಿದೆ. ಪ್ರಸ್ತುತ  ಕಚೇರಿಯ ಮೂಲಕ  ಪ್ಯಾನ್ ಕಾರ್ಡ್ ಮಾಡುವ ಮೂಲಕ ಮನೆಗೆ ತಲುಪಲು 15 ದಿನಗಳಿಂದ ಒಂದು ತಿಂಗಳವರೆಗೆ ಸಮಯಾವಕಾಶ ಬೇಕಾಗುತ್ತದೆ. ಆದರೆ, ಈಗ ಅರ್ಜಿದಾರನು ತನ್ನ ಪ್ಯಾನ್ ಸಂಖ್ಯೆಯನ್ನು ತಕ್ಷಣ ಪಡೆಯಬಹುದು. ಪ್ಯಾನ್ ಕಾರ್ಡ್‌ನಲ್ಲಿ 10 ಅಂಕಿಯ ಸಂಖ್ಯೆಯ ಡಿಜಿಟಲ್ ನಂಬರ್ ಇರುತ್ತದೆ.

Trending News