PF Interest Rate: ಕೇಂದ್ರ ಸರ್ಕಾರ ಶೀಘ್ರದಲ್ಲೇ ವೇತನ ಪಡೆಯುವವರಿಗೆ ದೊಡ್ಡ ಕೊಡುಗೆ ನೀಡುವ ಸಾಧ್ಯತೆ ಇದೆ. ಹೌದು, ದೀಪಾವಳಿ ಹಬ್ಬಕ್ಕೂ ಮುನ್ನವೇ ದೇಶದ 6 ಕೋಟಿ ಜನರ ಖಾತೆಗೆ ಹಣ ಬರುವ ಸಾಧ್ಯತೆ ಇದೆ. ವಾಸ್ತವದಲ್ಲಿ ಪಿಎಫ್ ಬಡ್ಡಿಯ ಹಣ ನೌಕರರ ಖಾತೆಗೆ ಬರುವ ಸಾಧತೆ ಇದೆ. ಆದರೆ, ಹಣ ವರ್ಗಾವಣೆ ಯಾವ ದಿನಾಂಕಕ್ಕೆ ಬರಲಿದೆ ಎಂಬುದನ್ನು ಇಪಿಎಫ್ಒ ಪ್ರಕಟಿಸಿಲ್ಲ.
ಶೇ.8.1 ರ ದರದಲ್ಲಿ ಬಡ್ಡಿ ಸಿಗಲಿದೆ
ಪ್ರಸ್ತುತ, ವೇತನ ಪಡೆಯುವ ನೌಕರರು ಅಥವಾ ಪಿಎಫ್ ಚಂದಾದಾರರು ಶೇ. 8.1 ರ ದರದಲ್ಲಿ ಬಡ್ಡಿಯ ಪ್ರಯೋಜನವನ್ನು ಪಡೆಯುತ್ತಿದ್ದಾರೆ. ಇದು ಕಳೆದ 40 ವರ್ಷಗಳಲ್ಲೇ ಕನಿಷ್ಠ ಬಡ್ಡಿದರವಾಗಿದೆ. ಇದೇ ವೇಳೆ, ಈ ಹಿಂದೆ ಸರ್ಕಾರವು ಉದ್ಯೋಗಿಗಳಿಗೆ ಶೇ. 8.5 ರ ದರದಲ್ಲಿ ಬಡ್ಡಿಯ ಲಾಭವನ್ನು ನೀಡುತ್ತಿತ್ತು ಎಂಬುದು ಇಲ್ಲಿ ಗಮನಾರ್ಹ.
ಯಾರ ಖಾತೆಗೆ ಎಷ್ಟು ಹಣ ಬರಲಿದೆ?
>> ನಿಮ್ಮ ಭವಿಷ್ಯ ನಿಧಿ ಖಾತೆಯಲ್ಲಿ 10 ಲಕ್ಷ ರೂಪಾಯಿ ಇದ್ದರೆ ನೀವು 81000 ರೂಪಾಯಿಗಳನ್ನು ಬಡ್ಡಿಯ ರೂಪದಲ್ಲಿ ಪಡೆಯುವಿರಿ.
>> ನಿಮ್ಮ ಖಾತೆಯಲ್ಲಿ 7 ಲಕ್ಷ ರೂಪಾಯಿ ಇದ್ದರೆ ಬಡ್ಡಿಯಾಗಿ 56700 ರೂಪಾಯಿ ಸಿಗಲಿದೆ.
>> ನಿಮ್ಮ ಪಿಎಫ್ ಖಾತೆಯಲ್ಲಿ 5 ಲಕ್ಷ ರೂಪಾಯಿ ಇದ್ದರೆ ನೀವು 40500 ರೂಪಾಯಿಗಳನ್ನು ಬಡ್ಡಿಯ ರೂಪದಲ್ಲಿ ಪಡೆಯುವಿರಿ.
>> ನಿಮ್ಮ ಖಾತೆಯಲ್ಲಿ 1 ಲಕ್ಷ ರೂಪಾಯಿ ಇದ್ದರೆ, ನೀವು 8100 ರೂಪಾಯಿಗಳನ್ನು ಬಡ್ಡಿಯ ರೂಪದಲ್ಲಿ ಪಡೆಯುವಿರಿ.
ಈ ರೀತಿ ನಿಮ್ಮ ಬ್ಯಾಲೆನ್ಸ್ ಪರಿಶೀಲಿಸಿ
1. ಮಿಸ್ಡ್ ಕಾಲ್ ಮೂಲಕ ಈ ರೀತಿ ಬ್ಯಾಲೆನ್ಸ್ ಪರಿಶೀಲಿಸಿ
ನಿಮ್ಮ ಪಿಎಫ್ ಖಾತೆಯಲ್ಲಿ ಬಾಕಿ ಇರುವ ಹಣವನ್ನು ಪರಿಶೀಲಿಸಲು, ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯಿಂದ 011-22901406 ಗೆ ಮಿಸ್ಡ್ ಕಾಲ್ ನೀಡಬೇಕು. ಇದರಿಂದ ನೀವು ಇಪಿಎಫ್ಒ ಸಂದೇಶದ ಮೂಲಕ ಪಿಎಫ್ನ ವಿವರಗಳನ್ನು ಪಡೆಯುವಿರಿ. ಇಲ್ಲಿಯೂ ನಿಮ್ಮ ಯುಎಎನ್, ಪ್ಯಾನ್ ಮತ್ತು ಆಧಾರ್ ಲಿಂಕ್ ಮಾಡುವುದು ಅವಶ್ಯಕ.
2. ಈ ರೀತಿ ಆನ್ಲೈನ್ ನಲ್ಲಿ ಬ್ಯಾಲೆನ್ಸ್ ಅನ್ನು ಪರಿಶೀಲಿಸಿ
>> ಆನ್ಲೈನ್ ಬ್ಯಾಲೆನ್ಸ್ ಚೆಕ್ ಮಾಡಲು, EPFO ವೆಬ್ಸೈಟ್ಗೆ ಲಾಗ್ ಇನ್ ಮಾಡಿ, epfindia.gov.in ನಲ್ಲಿ ಇ-ಪಾಸ್ಬುಕ್ ಕ್ಲಿಕ್ ಮಾಡಿ.
>> ಈಗ ನಿಮ್ಮ ಇ-ಪಾಸ್ಬುಕ್ ಅನ್ನು ಕ್ಲಿಕ್ ಮಾಡಿದಾಗ, passbook.epfindia.gov.in ಗೆ ಹೊಸ ಪುಟ ತೆರೆದುಕೊಳ್ಳಲಿದೆ.
>> ಈಗ ಅಲ್ಲಿ ನೀವು ನಿಮ್ಮ ಬಳಕೆದಾರ ಹೆಸರು (UAN ಸಂಖ್ಯೆ), ಪಾಸ್ವರ್ಡ್ ಮತ್ತು ಕ್ಯಾಪ್ಚಾವನ್ನು ಭರ್ತಿ ಮಾಡಿ
>> ಎಲ್ಲಾ ವಿವರಗಳನ್ನು ಭರ್ತಿ ಮಾಡಿದ ನಂತರ, ಮತ್ತೊಂದು ಹೊಸ ಪುಟ ತೆರೆದುಕೊಳ್ಳಲಿದೆ ಮತ್ತು ಅಲ್ಲಿ ನೀವು ಸದಸ್ಯ ID ಅನ್ನು ಆಯ್ಕೆ ಮಾಡಬೇಕಾಗುತ್ತದೆ.
>> ನಂತರ ನಿಮಗೆ ಅಲ್ಲಿ ಇ-ಪಾಸ್ಬುಕ್ನಲ್ಲಿ ನಿಮ್ಮ ಇಪಿಎಫ್ ಬ್ಯಾಲೆನ್ಸ್ ಪ್ರಕಟಗೊಳ್ಳಲಿದೆ.
ಇದನ್ನೂ ಓದಿ-FD Rules: ಸ್ಥಿರ ಠೇವಣಿಗಳಿಗೆ ಸಂಬಂಧಿಸಿದ ಈ ನಿಯಮದಲ್ಲಾದ ದೊಡ್ಡ ಬದಲಾವಣೆ ನಿಮಗೆ ತಿಳಿದಿರಲಿ.. ಇಲ್ದಿದ್ರೆ?
3. UMANG ಅಪ್ಲಿಕೇಶನ್ನಲ್ಲಿ ಈ ರೀತಿ ಬ್ಯಾಲೆನ್ಸ್ ಪರಿಶೀಲಿಸಬಹುದು
>> ಇದಕ್ಕಾಗಿ, ನೀವು ನಿಮ್ಮ UMANG ಅಪ್ಲಿಕೇಶನ್ ಅನ್ನು ತೆರೆಯಿರಿ (ಹೊಸ-ಯುಗದ ಆಡಳಿತಕ್ಕಾಗಿ ಏಕೀಕೃತ ಮೊಬೈಲ್ ಅಪ್ಲಿಕೇಶನ್) ಮತ್ತು EPFO ಮೇಲೆ ಕ್ಲಿಕ್ ಮಾಡಿ.
>> ಈಗ ಮತ್ತೊಂದು ಪುಟದಲ್ಲಿ, ಉದ್ಯೋಗಿ ಕೇಂದ್ರಿತ ಸೇವೆಗಳ ಮೇಲೆ ಕ್ಲಿಕ್ ಮಾಡಿ.
>> ಇಲ್ಲಿ ನೀವು 'ಪಾಸ್ಬುಕ್ ವೀಕ್ಷಿಸಿ' ಅನ್ನು ಕ್ಲಿಕ್ ಮಾಡಿ. ಇದರೊಂದಿಗೆ, ನೀವು ನಿಮ್ಮ UAN ಸಂಖ್ಯೆ ಮತ್ತು ಪಾಸ್ವರ್ಡ್ (OTP) ಸಂಖ್ಯೆಯನ್ನು ಭರ್ತಿ ಮಾಡಿ.
>> ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ OTP ಬರುತ್ತದೆ. ಇದರ ನಂತರ ನೀವು ನಿಮ್ಮ ಪಿಎಫ್ ಬ್ಯಾಲೆನ್ಸ್ ಅನ್ನು ಪರಿಶೀಲಿಸಬಹುದು.
ಇದನ್ನೂ ಓದಿ-Best Selling Scooter: Hero-TVS ಅಲ್ಲ, ಈ ಕಂಪನಿಯ ಸ್ಕೂಟರ್ ಗೆ ಗ್ರಾಹಕರ ಬೇಡಿಕೆ ಹೆಚ್ಚಾಗಿದೆ
4. SMS ಮೂಲಕ ಬ್ಯಾಲೆನ್ಸ್ ಪರಿಶೀಲಿಸಲು ಈ ಕೆಲಸ ಮಾಡಿ
ನಿಮ್ಮ UAN ಸಂಖ್ಯೆಯನ್ನು EPFO ನಲ್ಲಿ ನೋಂದಾಯಿಸಿದ್ದರೆ, ನಂತರ ನೀವು ಸಂದೇಶದ ಮೂಲಕ ನಿಮ್ಮ PF ಬ್ಯಾಲೆನ್ಸ್ ಕುರಿತು ಮಾಹಿತಿಯನ್ನು ಪಡೆಯಬಹುದು. ಇದಕ್ಕಾಗಿ ನೀವು EPFOHO ಟೈಪ್ ಮಾಡಿ 7738299899 ಗೆ ಕಳುಹಿಸಬೇಕು. ಇದರ ನಂತರ ನೀವು ಸಂದೇಶದ ಮೂಲಕ ಪಿಎಫ್ ಮಾಹಿತಿಯನ್ನು ಪಡೆಯುವಿರಿ. ನಿಮಗೆ ಹಿಂದಿ ಭಾಷೆಯಲ್ಲಿ ಮಾಹಿತಿ ಬೇಕಾದರೆ, ನೀವು ಅದನ್ನು EPFOHO UAN ಬರೆಯುವ ಮೂಲಕ ಕಳುಹಿಸಬೇಕು. PF ಬ್ಯಾಲೆನ್ಸ್ ತಿಳಿಯಲು ಈ ಸೇವೆ ಇಂಗ್ಲಿಷ್, ಪಂಜಾಬಿ, ಮರಾಠಿ, ಹಿಂದಿ, ಕನ್ನಡ, ತೆಲುಗು, ತಮಿಳು, ಮಲಯಾಳಂ ಮತ್ತು ಬೆಂಗಾಲಿ ಭಾಷೆಗಳಲ್ಲಿ ಲಭ್ಯವಿದೆ. PF ಬ್ಯಾಲೆನ್ಸ್ಗಾಗಿ, ನಿಮ್ಮ UAN, ಬ್ಯಾಂಕ್ ಖಾತೆ, PAN ಮತ್ತು ಆಧಾರ್ (AADHAR) ಅನ್ನು ಲಿಂಕ್ ಮಾಡುವುದು ಅವಶ್ಯಕ.
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.