FD Interest Rates : ಬ್ಯಾಂಕ್ ಎಫ್ ಡಿ ಮೇಲಿನ ಬಡ್ಡಿ ದರ ಹೆಚ್ಚಳ, ಯಾವ ಬ್ಯಾಂಕ್ ನೀಡುತ್ತಿದೆ ಅತಿ ಹೆಚ್ಚು ರಿಟರ್ನ್

HDFC ಮತ್ತು ICICI ಪ್ರಮುಖ ಖಾಸಗಿ ವಲಯದ ಬ್ಯಾಂಕ್‌ಗಳಾಗಿವೆ. ಈ ಬ್ಯಾಂಕುಗಳ ಪೈಪೋಟಿ ಈಗ ನೇರವಾಗಿ ಸಾರ್ವಜನಿಕ ವಲಯದ ಅತಿದೊಡ್ಡ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದೊಂದಿಗಿದೆ. 

Written by - Ranjitha R K | Last Updated : Dec 7, 2021, 01:51 PM IST
  • ಖಾಸಗಿ ವಲಯದ ದೊಡ್ಡ ಬ್ಯಾಂಕ್‌ಗಳು ಎಫ್‌ಡಿ ಮೇಲಿನ ಬಡ್ಡಿ ದರ ಹೆಚ್ಚಿಸಿವೆ
  • ಹಿರಿಯ ನಾಗರಿಕರಿಗೆ ವಿಶೇಷ ಸವಲತ್ತುಗಳನ್ನು ನೀಡಲಾಗುತ್ತಿದೆ.
  • ಎಲ್ಲಿ ಹೆಚ್ಚಿನ ಆದಾಯವನ್ನು ಸಿಗಲಿದೆ ತಿಳಿಯಿರಿ
FD Interest Rates : ಬ್ಯಾಂಕ್ ಎಫ್ ಡಿ ಮೇಲಿನ ಬಡ್ಡಿ ದರ ಹೆಚ್ಚಳ,  ಯಾವ ಬ್ಯಾಂಕ್ ನೀಡುತ್ತಿದೆ ಅತಿ ಹೆಚ್ಚು ರಿಟರ್ನ್  title=
ಬ್ಯಾಂಕ್ ಎಫ್ ಡಿ ಮೇಲಿನ ಬಡ್ಡಿ ದರ ಹೆಚ್ಚಳ..! (file photo)

ನವದೆಹಲಿ : ಎರಡು ದೊಡ್ಡ ಖಾಸಗಿ ವಲಯದ ಬ್ಯಾಂಕ್‌ಗಳಾದ ಎಚ್‌ಡಿಎಫ್‌ಸಿ ಬ್ಯಾಂಕ್ (HDFC) ಮತ್ತು ಐಸಿಐಸಿಐ ಬ್ಯಾಂಕ್ (ICICI Bank) ತಮ್ಮ ಸ್ಥಿರ ಠೇವಣಿಗಳ ಮೇಲಿನ ಬಡ್ಡಿದರವನ್ನು ಹೆಚ್ಚಿಸಿವೆ. ಅಂದರೆ, ಈ ಎರಡು ಬ್ಯಾಂಕ್‌ಗಳಲ್ಲಿ ಎಫ್‌ಡಿ (FD) ಮಾಡಿದ್ದರೆ, ಎಫ್‌ಡಿ ಮೆಚ್ಯೂರ್ ವೇಳೆಗೆ ಈಗ ಹೆಚ್ಚಿನ ಆದಾಯ ಸಿಗಲಿದೆ. 

HDFC ಮತ್ತು ICICI ಪ್ರಮುಖ ಖಾಸಗಿ ವಲಯದ ಬ್ಯಾಂಕ್‌ಗಳಾಗಿವೆ. ಈ ಬ್ಯಾಂಕುಗಳ ಪೈಪೋಟಿ ಈಗ ನೇರವಾಗಿ ಸಾರ್ವಜನಿಕ ವಲಯದ ಅತಿದೊಡ್ಡ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ದೊಂದಿಗಿದೆ. ಈಗ ಈ ಎರಡೂ ಬ್ಯಾಂಕ್‌ಗಳು ಕೂಡ ಗ್ರಾಹಕರಿಗೆ ಅಪಾರ ಲಾಭವನ್ನು ನೀಡುತ್ತಿವೆ.  

ಇದನ್ನೂ ಓದಿ : PMSBY Scheme: ಸರ್ಕಾರದ ಈ ಸೂಪರ್‌ಹಿಟ್ ಯೋಜನೆಯಲ್ಲಿ 1 ರೂ. ಹೂಡಿಕೆ ಮಾಡಿ, 2 ಲಕ್ಷ ರೂ.ಗಳ ಲಾಭ ಗಳಿಸಿ

ಯಾರಿಗೆ ಎಷ್ಟು ರಿಟರ್ನ್ ಸಿಗುತ್ತಿದೆ ?  
ಬಡ್ಡಿದರಗಳನ್ನು ಪರಿಷ್ಕರಿಸಿದ ನಂತರ, ಎಚ್‌ಡಿಎಫ್‌ಸಿ ಬ್ಯಾಂಕ್ (HDFC Bank)  7 ದಿನಗಳಿಂದ 10 ವರ್ಷಗಳವರೆಗಿನ ಅವಧಿಗೆ ಶೇಕಡಾ 2.50 ರಿಂದ 5.50 ರವರೆಗೆ ಬಡ್ಡಿಯನ್ನು ನೀಡುತ್ತಿದೆ. ಹಿರಿಯ ನಾಗರಿಕರ FD ಗಳ ಮೇಲಿನ ಬಡ್ಡಿಯು 7 ದಿನಗಳಿಂದ 10 ವರ್ಷಗಳವರೆಗಿನ ಅವಧಿಗೆ 3% ರಿಂದ 6.25 ಪ್ರತಿಶತದವರೆಗೆ ಇರುತ್ತದೆ. ಈ ಹೊಸ ದರಗಳು (Interest) ಡಿಸೆಂಬರ್ 1, 2021 ರಿಂದ ಜಾರಿಗೆ ಬಂದಿವೆ.

ಇದರೊಂದಿಗೆ ಐಸಿಐಸಿಐ ಬ್ಯಾಂಕ್ (ICICI bank) ಕೂಡ ತನ್ನ ಬಡ್ಡಿದರವನ್ನು ಬದಲಾಯಿಸಿದೆ. ಐಸಿಐಸಿಐ ಬ್ಯಾಂಕ್ 7 ದಿನಗಳಿಂದ 10 ವರ್ಷಗಳವರೆಗೆ ಶೇಕಡಾ 2.5 ರಿಂದ 5.5 ರಷ್ಟು ಬಡ್ಡಿಯನ್ನು (Interest rate) ನೀಡುತ್ತಿದೆ. ಆದರೆ, ಹಿರಿಯ ನಾಗರಿಕರಿಗೆ 50  ಹೆಚ್ಚುವರಿ ಬೇಸಿಕ್ ಪಾಯಿಂಟ್ ನೀಡಲಾಗುತ್ತಿದೆ. 

ಇದನ್ನೂ  ಓದಿ :  Reserve Bank Of India: ಮತ್ತೊಂದು ಬ್ಯಾಂಕಿನ ಗ್ರಾಹಕರ ಖಾತೆಗಳ ಹಣ ಹಿಂಪಡೆತದ ಮೇಲೆ ನಿರ್ಬಂಧ ವಿಧಿಸಿದ RBI

HDFC ಬ್ಯಾಂಕ್ FD ದರಗಳು :
- HDFC ಬ್ಯಾಂಕ್ 2 ಕೋಟಿಗಿಂತ ಕಡಿಮೆ FD ಗಳ ಮೇಲಿನ ಬಡ್ಡಿಯನ್ನು ಈ ಕೆಳಗಿನಂತೆ ನೀಡುತ್ತದೆ :
- 7 ರಿಂದ 14 ದಿನಗಳವರೆಗೆ 2.50% ಮತ್ತು ಹಿರಿಯ ನಾಗರಿಕರಿಗೆ 3.00%.
– 15 – 29 ದಿನಗಳವರೆಗೆ 2.50% ಮತ್ತು 3.00%,
-  30 – 45 ದಿನಗಳವರೆಗೆ – 3% ಮತ್ತು 3.50 %
– 46 –60 ದಿನಗಳವರೆಗೆ  3% ಮತ್ತು 3.50% 
– 61 – 90 ದಿನಗಳವರೆಗೆ  3% ಮತ್ತು 3.50 %
 -91 ದಿನಗಳಿಂದ 6 ತಿಂಗಳವರೆಗೆ 3.50% ಮತ್ತು 4%,
- 6 ತಿಂಗಳುಗಳು 1 ದಿನದಿಂದ 9 ತಿಂಗಳವರೆಗೆ 4.40% ಮತ್ತು 4.90%,
- 9 ತಿಂಗಳು 1 ದಿನದಿಂದ 1 ವರ್ಷಕ್ಕಿಂತ ಕಡಿಮೆ  - 4.40% ಮತ್ತು 4.90%,
- ಒಂದು ವರ್ಷಕ್ಕೆ - 4.90% ಮತ್ತು 5.40%
- 1 ವರ್ಷ ಒಂದು ದಿನದಿಂದ 2 ವರ್ಷಗಳವರೆಗೆ 5.15% ಮತ್ತು 5.65%,
-  2 ವರ್ಷ ಒಂದು ದಿನದಿಂದ 3 ವರ್ಷಗಳವರೆಗೆ 5.65% ಮತ್ತು 4.75%
- 3 ವರ್ಷ ಒಂದು ದಿನದಿಂದ 5 ವರ್ಷಗಳವರೆಗೆ 3 5.35% ಮತ್ತು 4.85% 
- 5 ವರ್ಷ ಒಂದು ದಿನದಿಂದ 10 ವರ್ಷಗಳವರೆಗೆ  5.50% ಮತ್ತು ಹಿರಿಯ ನಾಗರಿಕರಿಗೆ 6.25%. 

ಇದನ್ನೂ ಓದಿ :   Income Tax Return Filing:75 ವರ್ಷಕ್ಕಿಂತ ಮೇಲ್ಪಟ್ಟ ಹಿರಿಯ ನಾಗರಿಕರು ITR ದಾಖಲಿಸಬೇಕಿಲ್ಲ, ಇಲ್ಲಿದೆ ವಿವರ

ICICI ಬ್ಯಾಂಕಿನ ಸ್ಥಿರ ಠೇವಣಿ ದರಗಳು :
ICICI ಬ್ಯಾಂಕ್ 2 ಕೋಟಿಗಿಂತ ಕಡಿಮೆ FD ಗಳ ಮೇಲಿನ ಬಡ್ಡಿಯನ್ನು ಈ ಕೆಳಗಿನಂತೆ ನೀಡುತ್ತದೆ:
7 ರಿಂದ 14 ದಿನಗಳು = 2.50% - 3.00%
15 ರಿಂದ 29 ದಿನಗಳು = 2.50% - 3.00%
30 ದಿನಗಳಿಂದ 45 ದಿನಗಳವರೆಗೆ = 3.00% - 3.50%
46 ದಿನಗಳಿಂದ 60 ದಿನಗಳು = 3.00% - 3.50%
61 ದಿನಗಳಿಂದ 90 ದಿನಗಳವರೆಗೆ = 3.00% - 3.50%
91 ದಿನಗಳಿಂದ 120 ದಿನಗಳವರೆಗೆ = 3.50% - 4.00%
121 ದಿನಗಳವರೆಗೆ 150 ದಿನಗಳವರೆಗೆ = 3.50% - 4.00%
151 ರಿಂದ 184 ದಿನಗಳವರೆಗೆ = 3.50% - 4.00%
185 ದಿನಗಳಿಂದ 210 ದಿನಗಳವರೆಗೆ = 4.40% - 4.90%
211 ದಿನಗಳಿಂದ 270 ದಿನಗಳವರೆಗೆ = 4.40 % - 4.90%
271 ದಿನಗಳಿಂದ 289 ದಿನಗಳವರೆಗೆ = 4.40% - 4.90%
290 ದಿನಗಳಿಂದ ಓದು ವರ್ಷಕ್ಕಿಂತ ಕಡಿಮೆ ಅವಧಿಗೆ = 4.40% - 4.90%
ಒಂದು ವರ್ಷದಿಂದ 389 ದಿನಗಳವರೆಗೆ  = 4.90% - 5,40%
390 ದಿನಗಳಿಂದ 15 ತಿಂಗಳವರೆಗೆ  = 4.90%   5,40%
15 ತಿಂಗಳಿಂದ 18 ತಿಂಗಳಿಗಿಂತ ಕಡಿಮೆ ಅವಧಿಗೆ  = 4.90% ಗೆ - 5.40%
18 ತಿಂಗಳಿಂದ  2 ವರ್ಷಗಳವರೆಗೆ =5.00% -5.50% 
2 ವರ್ಷ 1 ದಿನದಿಂದ 3 ವರ್ಷಗಳವರೆಗೆ = 5.20% - 5.70%
3 ವರ್ಷ 1 ದಿನದಿಂದ 5 ವರ್ಷಗಳು = 5.40% - 5.90%
5 ವರ್ಷ 1 ದಿನದಿಂದ 10 ವರ್ಷಗಳು = 5.60% - 6.30%
5 ವರ್ಷಗಳು (80C FD) – ಗರಿಷ್ಠ 1.50 ಲಕ್ಷ = 5.40% ಮತ್ತು 5.90%

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News