PMSBY Scheme: ಸರ್ಕಾರದ ಈ ಸೂಪರ್‌ಹಿಟ್ ಯೋಜನೆಯಲ್ಲಿ 1 ರೂ. ಹೂಡಿಕೆ ಮಾಡಿ, 2 ಲಕ್ಷ ರೂ.ಗಳ ಲಾಭ ಗಳಿಸಿ

PMSBY Scheme: ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆಯು ಅಂತಹ ಒಂದು ಯೋಜನೆಯಾಗಿದ್ದು, ಇದರಲ್ಲಿ ನೀವು ಪ್ರತಿ ತಿಂಗಳು ಕೇವಲ ಒಂದು ರೂಪಾಯಿ ಅಥವಾ ವರ್ಷದಲ್ಲಿ ಕೇವಲ 12 ರೂಪಾಯಿಗಳನ್ನು ಠೇವಣಿ ಮಾಡುವ ಮೂಲಕ 2 ಲಕ್ಷ ರೂಪಾಯಿಗಳ ಅಪಘಾತ ವಿಮೆಯ ಲಾಭವನ್ನು ಪಡೆಯಬಹುದು.

Written by - Yashaswini V | Last Updated : Dec 7, 2021, 12:27 PM IST
  • ಕೇಂದ್ರ ಸರ್ಕಾರದ ಪ್ರಯೋಜನಕಾರಿ ಯೋಜನೆ
  • ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆಯು ಪರಿಣಾಮಕಾರಿ ಯೋಜನೆಯಾಗಿದೆ
  • ಈ ಯೋಜನೆಯು ಅತ್ಯಂತ ಕಡಿಮೆ ಪ್ರೀಮಿಯಂನಲ್ಲಿ ಜೀವ ವಿಮೆಯನ್ನು ನೀಡುತ್ತದೆ
PMSBY Scheme: ಸರ್ಕಾರದ ಈ ಸೂಪರ್‌ಹಿಟ್ ಯೋಜನೆಯಲ್ಲಿ 1 ರೂ. ಹೂಡಿಕೆ ಮಾಡಿ, 2 ಲಕ್ಷ ರೂ.ಗಳ ಲಾಭ ಗಳಿಸಿ title=
Pradhan Mantri Suraksha Bima Yojana benefits

PMSBY Scheme: ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ:  ಕೇಂದ್ರ ಸರ್ಕಾರವು ಸಾಮಾನ್ಯ ಜನರ ಹಿತಾಸಕ್ತಿಗಳನ್ನು ಗಮನದಲ್ಲಿಟ್ಟುಕೊಂಡು ಅನೇಕ ಯೋಜನೆಗಳನ್ನು ನಡೆಸುತ್ತಿದೆ. ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆಯು ಸಹ ಅಂತಹ ಒಂದು ಪರಿಣಾಮಕಾರಿ ಯೋಜನೆಯಾಗಿದೆ, ಇದರ ಅಡಿಯಲ್ಲಿ ನೀವು ಪ್ರತಿ ತಿಂಗಳು ಕೇವಲ ಒಂದು ರೂಪಾಯಿ ಅಥವಾ ವರ್ಷದಲ್ಲಿ ಕೇವಲ 12 ರೂಪಾಯಿಗಳನ್ನು ಠೇವಣಿ ಮಾಡುವ ಮೂಲಕ 2 ಲಕ್ಷ ರೂಪಾಯಿಗಳ ಅಪಘಾತ ವಿಮೆಯನ್ನು ಪಡೆಯಬಹುದು. ಈ ಯೋಜನೆಯು ಅತ್ಯಂತ ಕಡಿಮೆ ಪ್ರೀಮಿಯಂನಲ್ಲಿ ಜೀವ ವಿಮೆಯನ್ನು ಒದಗಿಸುತ್ತದೆ. 

ಮೇ ತಿಂಗಳಲ್ಲಿ ಪ್ರೀಮಿಯಂ:
ಕೆಲವು ವರ್ಷಗಳ ಹಿಂದೆ ಕೇಂದ್ರ ಸರ್ಕಾರವು ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆಯನ್ನು (Pradhan Mantri Suraksha Bima Yojana) ಅತ್ಯಂತ ಕಡಿಮೆ ಪ್ರೀಮಿಯಂನಲ್ಲಿ ಪ್ರಾರಂಭಿಸಿತ್ತು ಎಂಬುದು ಗಮನಿಸಬೇಕಾದ ಸಂಗತಿ. PMSBY ಯ ವಾರ್ಷಿಕ ಪ್ರೀಮಿಯಂ ಕೇವಲ 12 ರೂ. ಇದರ ಪ್ರೀಮಿಯಂ ಅನ್ನು ಮೇ ತಿಂಗಳ ಕೊನೆಯಲ್ಲಿ ಠೇವಣಿ ಮಾಡಲಾಗುತ್ತದೆ. ಪ್ರಮುಖ ವಿಷಯವೆಂದರೆ ಈ ಮೊತ್ತವು ಮೇ 31 ರಂದು ನಿಮ್ಮ ಬ್ಯಾಂಕ್ ಖಾತೆಯಿಂದ ಸ್ವಯಂಚಾಲಿತವಾಗಿ ಕಡಿತಗೊಳ್ಳುತ್ತದೆ. ಆದ್ದರಿಂದ ನೀವು PMSBY ತೆಗೆದುಕೊಂಡಿದ್ದರೆ ನಿಮ್ಮ ಬ್ಯಾಂಕ್ ಖಾತೆಯಲ್ಲಿ  ಮೇ ಅಂತ್ಯದ ವೇಳೆಗೆ ನಿಗದಿತ ಮೊತ್ತವನ್ನು  ಠೇವಣಿ ಇಡುವುದನ್ನು ಮರೆಯಬೇಡಿ. 

ಇದನ್ನೂ ಓದಿ-  Reserve Bank Of India: ಮತ್ತೊಂದು ಬ್ಯಾಂಕಿನ ಗ್ರಾಹಕರ ಖಾತೆಗಳ ಹಣ ಹಿಂಪಡೆತದ ಮೇಲೆ ನಿರ್ಬಂಧ ವಿಧಿಸಿದ RBI

PMSBY ನ ನಿಯಮಗಳು ಮತ್ತು ಷರತ್ತುಗಳು:
PMSBY ಯೋಜನೆಯ ಪ್ರಯೋಜನಗಳಿಗಾಗಿ ಕೆಲವು ಷರತ್ತುಗಳನ್ನು ನೀಡಲಾಗಿದೆ. ಇದರ ಲಾಭ ಪಡೆಯಲು ಅರ್ಜಿದಾರರ ವಯಸ್ಸನ್ನು 18-70 ವರ್ಷಕ್ಕೆ ನಿಗದಿಪಡಿಸಲಾಗಿದೆ. ಈ ಯೋಜನೆಯ ವಾರ್ಷಿಕ ಪ್ರೀಮಿಯಂ ಕೇವಲ 12 ರೂ. ಅಂದರೆ ತಿಂಗಳಿಗೆ ಕೇವಲ 1 ರೂ. PMSBY ಪಾಲಿಸಿಯ ಪ್ರೀಮಿಯಂ ಅನ್ನು ನೇರವಾಗಿ ಬ್ಯಾಂಕ್ ಖಾತೆಯಿಂದ ಕಡಿತಗೊಳಿಸಲಾಗುತ್ತದೆ, ಆದ್ದರಿಂದ ಬ್ಯಾಂಕಿನಲ್ಲಿ ಬ್ಯಾಲೆನ್ಸ್ ಇರಿಸಿ. ಇದಲ್ಲದೇ, ಪಾಲಿಸಿಯನ್ನು ಖರೀದಿಸುವ ಸಮಯದಲ್ಲಿ ಬ್ಯಾಂಕ್ ಖಾತೆಯನ್ನು PMSBY ಯೊಂದಿಗೆ ಲಿಂಕ್ ಮಾಡಲಾಗುವುದು. ಈ ಯೋಜನೆಯಡಿ, ಅಪಘಾತದಲ್ಲಿ ಮರಣ ಅಥವಾ ಅಂಗವೈಕಲ್ಯ ಸಂದರ್ಭದಲ್ಲಿ ವಿಮೆಯನ್ನು ಖರೀದಿಸುವ ಗ್ರಾಹಕರ ಅವಲಂಬಿತರಿಗೆ 2 ಲಕ್ಷ ರೂ.ವರೆಗೆ ವಿಮಾ ಪ್ರಯೋಜನವನ್ನು ನೀಡಲಾಗುವುದು.

ಇದನ್ನೂ ಓದಿ- Small Business Idea: 25 ಸಾವಿರ ಹೂಡಿಕೆ ಮಾಡಿ, ಪ್ರತಿ ತಿಂಗಳು 2 ಲಕ್ಷ ಗಳಿಸಿ!

ನೋಂದಣಿ ಪ್ರಕ್ರಿಯೆ :
ಈ ಯೋಜನೆಯ ಲಾಭ ಪಡೆಯಲು, ನೀವು ಯಾವುದೇ ಬ್ಯಾಂಕ್ ಶಾಖೆಗೆ ಭೇಟಿ ನೀಡುವ ಮೂಲಕ ಈ ಪಾಲಿಸಿಗೆ ಅರ್ಜಿ ಸಲ್ಲಿಸಬಹುದು. ಇದಲ್ಲದೆ ಬ್ಯಾಂಕ್ ಮಿತ್ರರೂ PMSBY ಯೋಜನೆಯನ್ನು ಮನೆ ಮನೆಗೆ ತೆಗೆದುಕೊಂಡು ಹೋಗುತ್ತಿದ್ದಾರೆ. ಇದಕ್ಕಾಗಿ ನೀವು ವಿಮಾ ಏಜೆಂಟ್ ಅನ್ನು ಸಹ ಸಂಪರ್ಕಿಸಬಹುದು. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News