Digital Suraksha: ಸೈಬರ್ ವಂಚನೆಯಿಂದಾದ ಹಾನಿಯಿಂದ ಮುಕ್ತಿನೀಡಲಿದೆ ಸೈಬರ್ ಇನ್ಸೂರೆನ್ಸ್

ಸೈಬರ್ ದಾಳಿ, ಫಿಶಿಂಗ್, ವಂಚನೆ ಮತ್ತು ಸಿಮ್-ಜಾಕಿಂಗ್‌ನಿಂದಾಗಿ ನಷ್ಟಗಳಿಗೆ ಡಿಜಿಟಲ್ ಸೆಕ್ಯುರಿಟಿ ಗ್ರೂಪ್ ವಿಮೆ ಪರಿಹಾರ ನೀಡಲಿದೆ.

Last Updated : Sep 29, 2020, 09:55 PM IST
  • ಡಿಜಿಟಲ್ ಜಗತ್ತಿನ ವ್ಯಾಪ್ತಿ ಹೆಚ್ಚಾಗುತ್ತಿದ್ದಂತೆ ಆನ್ಲೈನ್ ವಂಚನೆ ಪ್ರಕರಣಗಳು ಕೂಡ ಹೆಚ್ಚಾಗಿವೆ.
  • ಇದಕ್ಕೆ ಪರಿಹಾರ ನೀಡಲು Flipkart ಹಾಗೂ ಬಜಾಜ್ ಅಲಿಯಾನ್ಸ್ ಜಂಟಿಯಾಗಿ ಮುಂದಾಗಿವೆ.
  • ಇದಕ್ಕಾಗಿ ಡಿಜಿಟಲ್ ಸುರಕ್ಷಾ ಗುಂಪು ವಿಮಾ ಯೋಜನೆ ಆರಂಭಿಸಲು ಈ ಕಂಪನಿಗಳು ಮುಂದಾಗಿವೆ.
Digital Suraksha: ಸೈಬರ್ ವಂಚನೆಯಿಂದಾದ ಹಾನಿಯಿಂದ ಮುಕ್ತಿನೀಡಲಿದೆ ಸೈಬರ್ ಇನ್ಸೂರೆನ್ಸ್ title=

ನವದೆಹಲಿ: ಡಿಜಿಟಲ್ ಜಗತ್ತಿನ ವ್ಯಾಪ್ತಿ ಹೆಚ್ಚಾಗುತ್ತಿದ್ದಂತೆ ಆನ್ಲೈನ್ ಫ್ರಾಡ್ (Cyber Crime) ಪ್ರಕರಣಗಳಲ್ಲಿಯೂ ಕೂಡ ಏರಿಕೆಯಾಗುತ್ತಿದೆ. ಕೆಲವೊಮ್ಮೆ ಬ್ಯಾಂಕ್ ಹೆಸರಿನಲ್ಲಿ ಮತ್ತು ಕೆಲವೊಮ್ಮೆ ಕೆವೈಸಿ ಹೆಸರಲ್ಲಿ ಮತ್ತೊಂದೆಡೆ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಹೆಸರಿನಲ್ಲಿ ಜನರ ಖಾತೆಯಿಂದ ಹಣ ಲಪಟಾಯಿಸುವ ಸುದ್ದಿಗಳನ್ನು ನೀವು ದಿನನಿತ್ಯ ಇರುತ್ತೀರಿ.

ಇಂತಹುದೇ ಹಾನಿಗಳಿಗೆ ಪರಿಹಾರ ಅಥವಾ ಕೇವಲ ಮುನ್ನೆಚ್ಚರಿಕೆ ವಹಿಸುವ ಮೂಲಕ ಇಂತಹ ಹಾನಿಗಳಿಂದ ಪಾರಾಗಬಹುದು. ಆದರೆ, ಇದೀಗ ಸೈಬರ್ ಫ್ರಾಡ್ ನಿಂದಾಗುವ ಹಾನಿಗಳಿಗೆ ಪರಿಹಾರ ನೀಡಲು ವಿಮಾ ಕಂಪನಿಗಳು ಮುಂದಕ್ಕೆ ಬಂದಿವೆ.

ಭಾರತದ ಪ್ರಮುಖ ಇ-ಕಾಮರ್ಸ್ ಕಂಪನಿಗಳಲ್ಲಿ ಒಂದಾಗಿರುವ ಫ್ಲಿಪ್ಕಾರ್ಟ್ ಹಾಗೂ ಖಾಸಗಿ ವಲಯದ ಜನರಲ್ ಇನ್ಸೂರೆನ್ಸ್ ಕಂಪನಿ ಬಜಾಜ್ ಅಲಿಯಾನ್ಸ್ ಜಂಟಿಯಾಗಿ ಡಿಜಿಟಲ್ ಸುರಕ್ಷಾ ಗ್ರೂಪ್ ಇನ್ಸೂರೆನ್ಸ್ ಸೇವೆಯನ್ನು ಆರಂಭಿಸಲು ಮುಂದಾಗಿವೆ.

ಡಿಜಿಟಲ್ ಸುರಕ್ಷಾ ಗುಂಪು ವಿಮೆ, ಜನರಿಗೆ ಸೈಬರ್ ದಾಳಿ, ಫಿಶಿಂಗ್, ಸ್ಕೂಪಿಂಗ್ ಹಾಗೂ ಸಿಮ್ ಜ್ಯಾಕಿಂಗ್ ನಿಂದಾಗುವ ಹಾನಿಗೆ ಪರಿಹಾರ ನೀಡಲಿದೆ. ಈ ಇನ್ಸೂರೆನ್ಸ್ ಅನ್ನು ನೀವು ಕನ್ಸಿಷ್ಟ ಅಂದರೆ ಒಂದು ವರ್ಷದ ಅವಧಿಗಾಗಿ ಪಡೆದುಕೊಳ್ಳಬಹುದು. ಡಿಜಿಟಲ್ ಸುರಕ್ಷಾ ಗುಂಪು ವಿಮಾ ಪ್ರಿಮಿಯಂ 183 ರೂ.ಗಳಿಂದ 50 ಸಾವಿರ ವಾರ್ಷಿಕ ಇರಲಿದೆ.

ಇದನ್ನು ಓದಿ- ಎಸ್‌ಬಿಐನ ಈ ಸಲಹೆಗಳನ್ನು ಅನುಸರಿಸಿದರೆ ಸದಾ ಸುರಕ್ಷಿತವಾಗಿರುತ್ತೆ ನಿಮ್ಮ ಹಣ

ದೇಶಾದ್ಯಂತ ದಿನದಿಂದ ದಿನಕ್ಕೆ ಸೈಬರ್ ದಾಳಿಯ ಅಪಾಯ ನಿರಂತರವಾಗಿ ಹೆಚ್ಚುತ್ತಿದೆ ಎಂದು ಬಜಾಜ್ ಅಲಿಯಾನ್ಸ್ ಜನರಲ್ ಇನ್ಶುರೆನ್ಸ್ ಎಂಡಿ ಮತ್ತು ಸಿಇಒ ತಪನ್ ಸಿಂಘಾಲ್ ಹೇಳಿದ್ದಾರೆ. ಇದರಿಂದ ನಿಮ್ಮ ಹಣ, ಖ್ಯಾತಿ ಮತ್ತು ವೈಯಕ್ತಿಕ ಮಾಹಿತಿಯು ಅಪಾಯದಲ್ಲಿದೆ.

ಫ್ಲಿಪ್‌ಕಾರ್ಟ್‌ನ ಪ್ಲಾಟ್‌ಫಾರ್ಮ್‌ನಲ್ಲಿ ಪರಿಚಯಿಸಲಾದ ಈ ಡಿಜಿಟಲ್ ಸೆಕ್ಯುರಿಟಿ ಗ್ರೂಪ್ ವಿಮೆಯೊಂದಿಗೆ, ನೀವು 50 ಪೈಸೆಗಳಿಗಿಂತ ಕಡಿಮೆ ದರದಲ್ಲಿ ಆನ್‌ಲೈನ್ ಮೋಸ (ಸೈಬರ್ ಅಟ್ಯಾಕ್) ಅಪಾಯದಿಂದ ನಿಮ್ಮನ್ನು ನೀವು ರಕ್ಷಿಸಿಕೊಳ್ಳಬಹುದು. ಈ ವಿಮೆಯನ್ನು ಫ್ಲಿಪ್‌ಕಾರ್ಟ್‌ನಿಂದ ಕೂಡ ನೀವು ಖರೀದಿಸಬಹುದು.

ಇದನ್ನು ಓದಿ- ಸೈಬರ್ ದೋಸ್ತ್ ಅಲರ್ಟ್: ಸಾಮಾಜಿಕ ಮಾಧ್ಯಮಗಳನ್ನು ಬಳಸುವಾಗ ಇರಲಿ ಎಚ್ಚರ

ಈ ವಿಮೆ ಆನ್‌ಲೈನ್‌ನಲ್ಲಿ ಶಾಪಿಂಗ್ ಮಾಡುವಾಗ ಎಲ್ಲಾ ರೀತಿಯ ಸೈಬರ್ ಬೆದರಿಕೆಗಳ ವಿರುದ್ಧ ಕವರೇಜ್ ಒದಗಿಸುತ್ತದೆ ಮತ್ತು ನಿಮ್ಮನ್ನು ಟೆನ್ಶನ್ ಫ್ರೀ ಆಗಿಡುತ್ತದೆ ಎಂದು ಅವರು ಹೇಳಿದ್ದಾರೆ.

ಆನ್‌ಲೈನ್ ಶಾಪಿಂಗ್ ಅನ್ನು ಸುರಕ್ಷಿತವಾಗಿಸಲು ಮತ್ತು ಗ್ರಾಹಕರಿಗೆ ಡಿಜಿಟಲ್ ವಹಿವಾಟು ನಡೆಸಲು ಇದು ಹೆಚ್ಚು ಅನುಕೂಲಕರವಾಗಿಸುವ ಫ್ಲಿಪ್ ಕಾರ್ಟ್ ನ ಹೊಸ ಪ್ರಯತ್ನ ಇದಾಗಿದೆ ಎಂದು ಫ್ಲಿಪ್ ಕಾರಟ್ ಮುಖ್ಯಸ್ಥ ರಂಜೀತ್ ಬಾಯ್ಪಾಲಿ ತಿಳಿಸಿದ್ದಾರೆ.

ಇದನ್ನು ಓದಿ- ಎಚ್ಚರಿಕೆ..! ಈ ವಿಧಾನಗಳ ಮೂಲಕ ನಿಮ್ಮ ಬ್ಯಾಂಕ್ ಖಾತೆ ಖಾಲಿಯಾಗುವ ಸಾಧ್ಯತೆ

ಬಜಾಜ್ ಅಲಿಯಾನ್ಸ್ ಸಹಭಾಗಿತ್ವದಲ್ಲಿ ಸೈಬರ್ ವಿಮೆಯ ಪರಿಚಯವು ಈ ದಿಕ್ಕಿನಲ್ಲಿ ಒಂದು ಹೆಜ್ಜೆಯಾಗಿದೆ. ಹಬ್ಬದ ಋತು ಹತ್ತಿರದಲ್ಲಿಯೇ ಇರುವುದರಿಂದ ಆನ್ಲೈನ್ ನಲ್ಲಿ ಖರೀದಿಗೆ ಮುಂದಾಗುವ ಗ್ರಾಹಕರ ಆನ್ಲೈನ್ ವ್ಯವಹಾರದ ಸುರಕ್ಷತೆಯನ್ನು ಸುನಿಶ್ಚಿತಗೊಳಿಸುವುದು ಇದರ ಹಿಂದಿನ ಉದ್ದೇಶವಾಗಿದೆ ಎಂದು ಅವರು ಹೇಳಿದ್ದಾರೆ.

Trending News