India's most expensive Bungalow:ದೇಶದ ಅತ್ಯಂತ ದುಬಾರಿ Bungalow 1001 ಕೋಟಿ ರೂ.ಗೆ ಮಾರಾಟ, ಖರೀದಿಸಿದ್ದು ಯಾರು?

India's most expensive Bungalow:ಈ ಆಸ್ತಿ ದಕ್ಷಿಣ ಮುಂಬೈನ ಮಲಬಾರ್ ಹಿಲ್ಸ್ ನ ಮಧುಕುಂಜ್ ನಾರಾಯಣ್ ದಾಭೋಲ್ಕರ್ ಮಾರ್ಗದಲ್ಲಿದೆ. ರಾಧಾಕಿಶನ್ ದಮಾನಿ ತಮ್ಮ ಕಿರಿಯ ಸಹೋದರ ಗೋಪಿಕಿಶನ್ ದಮಾನಿ ಜೊತೆ ಸೇರಿ ಖರೀದಿಸಿದ್ದಾರೆ.

Written by - Nitin Tabib | Last Updated : Apr 4, 2021, 07:21 PM IST
  • ದೇಶದಲ್ಲಿರುವ ಅತ್ಯಂತ ದುಬಾರಿ ಬಂಗಲೆಗಳ ಕುರಿತು ನಿಮ್ಮ ಅಭಿಪ್ರಾಯ ಏನು?
  • ಈ ದೇಶದ ಅತ್ಯಂತ ದುಬಾರಿ ಕಟ್ಟಡ 1001 ಕೋಟಿ ರೂ.ಗೆ ಮಾರಾಟವಾಗಿದೆ.
  • D-Mart ಸಂಸ್ಥಾಪಕ ರಾಧಾಕಿಶನ್ ದಮಾನಿ ಅವರಿಂದ ಬಂಗಲೆ ಖರೀದಿ.
India's most expensive Bungalow:ದೇಶದ ಅತ್ಯಂತ ದುಬಾರಿ Bungalow 1001 ಕೋಟಿ ರೂ.ಗೆ ಮಾರಾಟ, ಖರೀದಿಸಿದ್ದು ಯಾರು? title=
India's most expensive Bungalow (File Photo)

India's most expensive Bungalow: ದೇಶದಲ್ಲಿರುವ ಅತ್ಯಂತ ದುಬಾರಿ ಬಂಗಲೆಗಳ ಕುರಿತು ನಿಮ್ಮ ಅಭಿಪ್ರಾಯ ಏನು? 10 ಕೋಟಿ, 50 ಕೋಟಿ, 100 ಕೋಟಿ, 200 ಕೋಟಿ ರೂ. .... ಎಷ್ಟಾಗಿರಬಹುದು? ಈ ದೇಶದ ಅತ್ಯಂತ ದುಬಾರಿ ಕಟ್ಟಡ 1001 ಕೋಟಿ ರೂ.ಗೆ ಮಾರಾಟವಾಗಿದೆ ಎಂದು ನಿಮಗೆ ಹೇಳಿದರೆ ನೀವೂ ಕೂಡ ನಿಬ್ಬೇರಗಾಗುವಿರಿ. D-Mart ಸಂಸ್ಥಾಪಕರಾಗಿರುವ ಹಾಗೂ ದೇಶದ ದಿಗ್ಗಜ ಉದ್ಯಮಿಗಳಲ್ಲಿ ಒಬ್ಬರಾಗಿರುವ ರಾಶಾಕಿಶನ್ ದಮಾನಿ (Radhakishan Damani) ತಮ್ಮ ಕಿರಿಯ ಸಹೋದರ ಗೋಪಿಕಿಶನ್ ದಮಾನಿ (Gopikishan Damani) ಜೊತೆಗೆ ಸೇರಿ ಖರೀದಿಸಿದ್ದಾರೆ. ಈ ಬಂಗಲೆ ದಕ್ಷಿಣ ಮುಂಬೈನ ಮಲಬಾರ್ ಹಿಲ್ ನಲ್ಲಿರುವ ಮಧುಕುಂಜ್ ನಾರಾಯಣ್ ದಾಭೋಲ್ಕರ್ ಮಾರ್ಗದಲ್ಲಿದೆ. ET ನಲ್ಲಿ ಪ್ರಕಟಗೊಂಡ ವರದಿಯೊಂದರ ಪ್ರಕಾರ, ರೆಡಿ ರೆಕಾನರ್ ರೇಟ್ ಆಧಾರದ ಮೇಲೆ ಹೇಳುವುದಾದರೆ ಈ ಆಸ್ತಿಯ ಮಾರುಕಟ್ಟೆಯ ಮೌಲ್ಯ ರೂ.724 ಕೋಟಿಗಳಷ್ಟಾಗಿದೆ.

1.5 ಎಕರೆಗೂ ಅಧಿಕ ಪ್ರದೇಶದ ವ್ಯಾಪ್ತಿಯಲ್ಲಿ ಈ ಬಂಗಲೆ ಹರಡಿದೆ (The bungalow is spread over an area of 1.5 acres)
ವರದಿಗಳ ಪ್ರಕಾರ ಈ ಬಂಗಲೆ ತುಂಬಾ ವಿಶೇಷತೆಯಿಂದ ಕೂಡಿದೆ. ಗ್ರೌಂಡ್ ಫ್ಲೋರ್ ಜೊತೆಗೆ ಎರಡು ಅಂತಸ್ತುಗಳನ್ನು ಹೊಂದಿರುವ ಈ ಬಂಗಲೆ ಸುಮಾರು 1.5 ಎಕರೆ ವ್ಯಾಪ್ತಿಯಲ್ಲಿ ಹರಡಿದೆ. ಈ ಬಂಗಲೆಯ ಒಟ್ಟು ಬಿಲ್ಡ್ ಅಪ್ ಏರಿಯಾ 60,000 ಚದರ ಅಡಿ ಆಗಿದೆ. ET ವರದಿಯ ಪ್ರಕಾರ, ಈ ಬಂಗಲೆಯ ಡೀಲ್ ಇದೆ ವಾರ ಪೂರ್ಣಗೊಂಡಿದೆ. ಈ ಡೀಲ್ ಗಾಗಿ ದಮಾನಿವತಿಯಿಂದ 30ಕೋಟಿ ರೂ ಸ್ಟಾಂಪ್ ಡ್ಯೂಟಿ ಕೂಡ ಪೇಮೆಂಟ್ ಮಾಡಲಾಗಿದೆ. ಕಳೆದ ಎರಡು ತಿಂಗಳಲ್ಲಿ ದಮಾನಿ ಖರೀದಿಸಿರುವ ಮೂರನೇ ಅತಿ ದೊಡ್ಡ ಆಸ್ತಿ ಇದಾಗಿದೆ. ಇವುಗಳಲ್ಲಿ ಮೊದಲನೆಯದಾಗಿ ದಮಾನಿ ಕುಟುಂಬ ಆಫೀಸ್ ಠಾಣೆಯಲ್ಲಿ ಮೊಂಡಲೀಸ್ ಇಂಡಿಯಾ ವತಿಯಿಂದ 8 ಎಕರೆ ಭೂಮಿಯನ್ನು ಸುಮಾರು 250 ಕೋಟಿ ರೂ.ಗಳಿಗೆ ಖರೀದಿಸಿದೆ. ಎರಡನೇ ಆಸ್ತಿಯನ್ನು ಚೆಂಬೂರ್ ನಲ್ಲಿ ವಾಧ್ವಾ ಗ್ರೂಪ್ ನ ಪ್ರಾಜೆಕ್ಟ್ ದಿ ಎಪಿಸೆಂಟರ್ ನಲ್ಲಿ 113ಕೋಟಿ ರೂ.ಗಳಿಗೆ ಎರಡು ಫ್ಲೋರ್ ಖರೀದಿಸಿದೆ. ಈ ಪ್ರಾಪರ್ಟಿ 39 ಸಾವಿರ ಚದರ ಅಡಿ ವಿಸ್ತೀರ್ಣದಲ್ಲಿ ಹರಡಿದೆ.

ಇದನ್ನೂ ಓದಿ- Auto-Debit Payments: ದೇಶದ ಕೋಟ್ಯಾಂತರ ಗ್ರಾಹಕರಿಗೆ ಭಾರಿ ನೆಮ್ಮದಿಯ ಸುದ್ದಿ ಪ್ರಕಟಿಸಿದ RBI

ಇದಕ್ಕೂ ಮೊದಲು ಮಾರಾಟವಾದ ದುಬಾರಿ ಬಂಗಲೆಗಳು (Expensive bungalows sold in the country)
ರಾಧಾಕಿಶನ್ ದಮಾನಿ ರೂ.1001 ಕೋಟಿ ರೂ. ಈ ಮನೆಯನ್ನು  ಖರೀದಿಸಿ, ಪೂನಾವಾಲಾ ಗ್ರೂಪ್ ನ ಚೇರ್ಮನ್ ಆಗಿರುವ ಸೈರಸ್ ಪೂನಾವಾಲಾ ಅವರನ್ನು ಹಿಂದಿಕ್ಕಿದ್ದಾರೆ. ವರದಿಗಳ ಪ್ರಕಾರ ಪೂನಾವಾಲಾ ಬ್ರೀಚ್ ಕ್ಯಾಂಡಿಯಲ್ಲಿ ಅಮೇರಿಕನ್ ಕಾನ್ಸುಲೇಟ್ ನ ಲಿಂಕನ್ ಹೌಸ್ ಗಾಗಿ 750 ಕೋಟಿ ರೂ. ಘೋಷಣೆ ಕೂಗಿದ್ದರು. ಇದೆ ರೀತಿ 2021ರಲ್ಲಿ ಗೋದ್ರೆಜ್ ಕುಟುಂಬ ದೇಶದ ನ್ಯೂಕ್ಲಿಯರ್ ಪ್ರೊಗ್ರಾಮ್ ಜನಕರಾಗಿರುವ ಹೋಮಿ ಭಾಭಾ ಅವರ ಕಟ್ಟಡವಾಗಿರುವ ಮೆಹರಾನಗಿರ್ ಅನ್ನು 372 ಕೋಟಿ ರೂ.ಗೆ ಖರೀದಿಸಿತ್ತು.

ಇದನ್ನೂ ಓದಿ- TRAI ನಿಂದ ಕಂಪ್ಲೈನ್ಸ್ ಪೂರ್ಣಗೊಳಿಸದ 40 ಪ್ರಮುಖ ವ್ಯಾಪಾರಿ ಸಂಘಟನೆಗಳ ಪಟ್ಟಿ ಬಿಡುಗಡೆ

ಸ್ಟಾಕ್ ಮಾರ್ಕೆಟ್ ದಿಗ್ಗಜ ಹೂಡಿಕೆದಾರ (The stock investor is a big investor)
ರಾಧಾಕಿಶನ್ ದಮಾನಿ ಷೇರು ಮಾರುಕಟ್ಟೆಯಲ್ಲಿ 1980ರಿಂದ ಹೂಡಿಕೆ ಮಾಡಿದ್ದರು. ಆದರೆ, 2017ರಲ್ಲಿ ಅವರ D-Mart ಕಂಪನಿಯ IPO ಮಾರುಕಟ್ಟೆಗೆ ಎಂಟ್ರಿ ನೀಡಿದೆ. ಆ ಅವಧಿಯಲ್ಲಿ ಡಿ-ಮಾರ್ಟ್ ಷೇರುಗಳ ಬೆಲೆ 604.40 ರೂ./ಷೇರು ಲಿಸ್ಟ್ ಆಗಿತ್ತು. ಕಂಪನಿಯ ಷೇರುಗಳ ಇಶ್ಯೂ ಪ್ರೈಸ್ ರೂ.299 ರಷ್ಟಿತ್ತು. ಷೇರು ಮಾರುಕಟ್ಟೆಯ ದಿಗ್ಗಜರಲ್ಲಿ ದಮಾನಿ ಮಿಸ್ಟರ್ ವೈಟ್ ಅಂಡ್ ವೈಟ್ ಹೆಸರಿನಿಂದ ಚಿರಪರಿಚಿತರಾಗಿದ್ದಾರೆ ಎಂಬುದು ಇಲ್ಲಿ ಉಲ್ಲೇಖನೀಯ.

ಇದನ್ನೂ ಓದಿ- New PPF Investment Rule - PPF ಸೇರಿದಂತೆ ಈ ಯೋಜನೆಗಳಿಂದ ಹಣ ಹಿಂಪಡೆದರೆ, TDS ನಿಂದ ಶೇ.5 ರಷ್ಟು ಕಡಿತವಾಗಲಿದೆ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News