Gold Price Today : ಇಳಿಕೆಯಾಯಿತು ಚಿನ್ನ ಬೆಳ್ಳಿ ದರ .! ಇಂದಿನ ದರ ಎಷ್ಟು ತಿಳಿಯಿರಿ

Gold Price Today : ಚಿನ್ನದ ಬೆಲೆಯಲ್ಲಿ ಮತ್ತೆ ಇಳಿಕೆ ಕಂಡು ಬಂದಿದೆ. ಬೆಳ್ಳಿ ಬೆಲೆಯಲ್ಲಿ 500 ರೂಪಾಯಿಗಳಷ್ಟು ಇಳಿಕೆ ಕಂಡು ಬಂದಿದೆ.

Written by - Ranjitha R K | Last Updated : Dec 7, 2022, 10:39 AM IST
  • ಇಳಿಕೆಯಾಯಿತು ಚಿನ್ನದ ಬೆಲೆ
  • ಬೆಳ್ಳಿ ಕೂಡಾ ಅಗ್ಗ
  • ಇಂದಿನ ದರ ಎಷ್ಟು ತಿಳಿಯಿರಿ
Gold Price Today : ಇಳಿಕೆಯಾಯಿತು ಚಿನ್ನ ಬೆಳ್ಳಿ ದರ .! ಇಂದಿನ ದರ ಎಷ್ಟು ತಿಳಿಯಿರಿ  title=
gold silver price

ಬೆಂಗಳೂರು : Gold Price Today : ಚಿನ್ನದ ಬೆಲೆಯಲ್ಲಿ ಮತ್ತೆ ಇಳಿಕೆ ಕಂಡು ಬಂದಿದೆ. ಹಳದಿ ಲೋಹದ ಬೆಲೆಯಲ್ಲಿ 330 ರೂಪಾಯಿಗಳಷ್ಟು ಇಳಿಕೆಯಾಗಿದೆ. ಈ ಇಳಿಕೆಯೊಂದಿಗೆ 24 ಕ್ಯಾರೆಟ್ ಚಿನ್ನದ ಬೆಲೆ 53,780 ರೂ. ಆಗಿದ್ದರೆ, 22 ಕ್ಯಾರೆಟ್ ಬಂಗಾರದ ಬೆಲೆ  49,300 ರೂ. ಆಗಿದೆ.

ಗುಡ್ ರಿಟರ್ನ್ ಮಾಹಿತಿ ಪ್ರಕಾರ ದೇಶದ ಪ್ರಮುಖ ನಗರಗಳಲ್ಲಿ 24 ಕ್ಯಾರೆಟ್  ಚಿನ್ನದ ಬೆಲೆ ಹೀಗಿದೆ.

ಚೆನ್ನೈಯಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ 54,650 ರೂಪಾಯಿ ಆಗಿದ್ದು, ಮುಂಬಯಿಯಲ್ಲಿ 53,780  ದೆಹಲಿಯಲ್ಲಿ 53,930 ರೂ., ಕೋಲ್ಕತ್ತಾದಲ್ಲಿ  53,780  ರೂಪಾಯಿ ಆಗಿದೆ. ಇನ್ನು ಬೆಂಗಳೂರಿನಲ್ಲಿ 53,830 ರೂಪಾಯಿ ಆಗಿದ್ದರೆ,  ಹೈದರಾಬಾದ್ ನಲ್ಲಿ  53,830  ರೂಪಾಯಿ ಆಗಿದೆ. ಕೇರಳದಲ್ಲಿಯೂ 10 ಗ್ರಾಂ ಚಿನ್ನದ ಬೆಲೆ  53,830  ರೂಪಾಯಿ ಆಗಿದೆ. 

ಇದನ್ನೂ ಓದಿ : ಅಂಚೆ ಕಚೇರಿಯ ಈ ಯೋಜನೆಯ ಮೂಲಕ ವಿವಾಹಿತರ ಖಾತೆಗೆ ಬರುವುದು 59,400 ರೂಪಾಯಿ.!

ಬೆಳ್ಳಿ ಬೆಲೆಯಲ್ಲಿ ಕೂಡಾ ಇಳಿಕೆ ಕಂಡು ಬಂದಿದೆ. ಬೆಳ್ಳಿ ಬೆಲೆಯಲ್ಲಿ 500 ರೂಪಾಯಿಗಳಷ್ಟು ಇಳಿಕೆ ಕಂಡು ಬಂದಿದೆ. ಈ ಲೇಖನ ಬರೆಯುವ ಹೊತ್ತಿಗೆ ಗುಡ್ ರಿಟರ್ನ್ ಮಾಹಿತಿ ಪ್ರಕಾರ ಬೆಳ್ಳಿ ಬೆಲೆ ಎಷ್ಟಿತ್ತು ನೋಡೋಣ.

ಚೆನ್ನೈಯಲ್ಲಿ 70,800 ರೂಪಾಯಿ ಆಗಿದ್ದರೆ,  ಮುಂಬಯಿಯಲ್ಲಿ 66,000 ರೂಪಾಯಿ ಆಗಿದೆ. ಇನ್ನು ದೆಹಲಿಯಲ್ಲಿ 66,000 ರೂಪಾಯಿ, ಕೋಲ್ಕತ್ತಾದಲ್ಲಿಯೂ 66,000 ರೂಪಾಯಿ ಆಗಿದೆ. ಬೆಂಗಳೂರಿನ ಬೆಲೆ ನೋಡುವುದಾದರೆ 70,800 ರೂಪಾಯಿ, ಹೈದರಾಬಾದ್ ನಲ್ಲಿ  70,800 ರೂಪಾಯಿ, ಕೇರಳದಲ್ಲಿಯೂ 70,800 ರೂಪಾಯಿ ಆಗಿದೆ. 

ಇದನ್ನೂ ಓದಿ : 7th Pay Commission : ಕೇಂದ್ರ ನೌಕರರ ಖಾತೆಗೆ ಬರಲಿದೆ ₹2 ಲಕ್ಷ : ಬಾಕಿ ಡಿಎ ಬಿಡುಗಡೆಗೆ ಡೇಟ್ಸ್ ಫಿಕ್ಸ್!

ಚಿನ್ನ ಮತ್ತು ಬೆಳ್ಳಿಯ ದರವನ್ನು ಪರಿಶೀಲಿಸುವುದು  ಹೇಗೆ ? :
ನೀವು ಚಿನ್ನ ಮತ್ತು ಬೆಳ್ಳಿಯ ದರವನ್ನು ಪರಿಶೀಲಿಸಬೇಕಾದರೆ 8955664433 ಮೊಬೈಲ್ ಸಂಖ್ಯೆ ಗೆ ಮಿಸ್ಡ್ ಕಾಲ್ ನೀಡಿ. ಮಿಸ್ಡ್ ಕಾಲ್ ನೀಡಿದ ಕೂಡಲೇ ಇತ್ತೀಚಿನ ದರಗಳನ್ನು  ಸಂದೇಶ ರೂಪದಲ್ಲಿ ಸ್ವೀಕರಿಸುವುದು ಸಾಧ್ಯವಾಗುತ್ತದೆ ಆದರೆ ನೆನಪಿರಲಿ, ಇಲ್ಲಿ ನೀಡಲಾದ ದರವನ್ನು ಹೊರತುಪಡಿಸಿ, ಗ್ರಾಹಕರು GSTಯನ್ನು ಸಹ ಪಾವತಿಸಬೇಕಾಗುತ್ತದೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News